ಕ್ರೆಡಿಟ್ ಸೃಷ್ಟಿ

ಬದಲಾಯಿಸಿ

      ಪತ್ತು ನಿರ್ಮಾಣವು ಆಧುನಿಕ ಬ್ಯಾಂಕುಗಳಲ್ಲಿ ನಿರ್ವಹಿಸುವ ಅತ್ಯಂತ ಮಹತ್ವವಾದ ಕಾರ್ಯವಾಗಿದೆ. ಪತ್ತು ನಿರ್ಮಾಣವೆಂದರೆ ಸಾಲ ಹಣದ ನಿರ್ಮಾಣ.ಸಾಲ ಹಣಧ ನಿರ್ಮಾಣವೆಂದರೆ ಬ್ಯಾಂಕಿನ ಠೇವಣಿಗಳ ನಿರ್ಮಾಣ. ಇದರಿಂದ ಬ್ಯಾಂಕಿನ ಹೊಣೆ ಅಧಿಕವಾಗುತ್ತದೆ. ಬ್ಯಾಂಕು ನಿರ್ಮಿಸುವ ಇಂತಹ ಠೇವಣಿಗಳಿಂದ ಹಣದ ಪೂರೈಕೆಯು ಅಧಿಕವಾಗುವದರಿಂದ ಬೆಲೆಗಳ ಮೇಲೆ ತೀವ್ರವಾದ ಪರಿಣಾಮವಾಗುವುದುಂಟು. ಆದುದರಿಂದ ಬ್ಯಾಂಕುಗಳಲ್ಲಿ 'ಪತ್ತು ನಿರ್ಮಾಣ ಅಥವಾ ಸಾಲ ಹಣ ಸೃಷ್ಟಿಸುವ ಕಾರ್ಖಾನೆ' ಗಳೆಂದು ಕರೆಯುತ್ತಾರೆ.ನಿಜವಾದ ಹಣವನ್ನು ಸೃಷ್ಟಿಸುವುದು ಕೇಂದ್ರ ಬ್ಯಾಂಕಿನ ಕೆಲಸವಾಗಿದ್ದರೆ, ಸಾಲದ ಹಣವನ್ನು ಸೃಷ್ಟಿಸುವುದು ವಾಣಿಜ್ಯ ಬ್ಯಾಂಕಿನ ಕೆಲಸವಾಗಿದೆ. 
ಪತ್ತು ನಿರ್ಮಾಣವೆಂದರೇನು? ಬ್ಯಾಂಕು ತನ್ನ ಗ್ರಾಹಕರಿಗೆ ಸಾಲ ನೀಡಿದಾಗ ಇಂತಹ ಪತ್ತು ನಿರ್ಮಾಣವಾಗುತ್ತದೆ. ಸಾಲ ಮಂಜೂರಿ ಮಾಡಿದ ಕೂಡಲೆ ಬ್ಯಾಂಕು ತನ್ನ ಗ್ರಾಹಕನ ಖಾತೆಯ ಜಮ ಬರೆಯುತ್ತದೆ. ಆಗ ಠೇವಣಿಯನ್ನು ನಿರ್ಮಿಸಿದಂತಾಗುತ್ತದೆ. ಠೇವಣಿಯು ಬ್ಯಾಂಕಿನ ಸಾಲದ ಹೊರೆಯನ್ನು ಸೂಚಿಸುವುದರಿಂದ, ಬ್ಯಾಂಕು ತನ್ನ ಸಾಲದ ಭಾರವನ್ನು ಹೆಚ್ಚಿಸುತ್ತದೆ. ಬ್ಯಾಂಕು ಸಾಲ ನೀಡಿದಾಗ ನಗದು ಹಣವನ್ನು ಗ್ರಾಹಕರಿಗೆ ನೀಡುವುದಿಲ್ಲ. ಅವನ ಹೆಸರಿನಲ್ಲಿ ಖಾತೆಯೊಂದನ್ನು ತೆರೆದು ಖಾತೆಗೆ ಆ ಸಾಲದ ಹಣವನ್ನು ಜಮ ಬರೆಯುತ್ತದೆ. ಗ್ರಾಹಕನಿಗೆ ಚೆಕ್ ಪುಸ್ತಕವನ್ನು ನೀಡಿ,ಆ ಖಾತೆಯಿಂದ ಹಣವನ್ನು ಪಡೆಯಲು ವ್ಯವಸ್ಥೆ ಮಾಡುತ್ತದೆ. ಹೀಗೆ ಅನೇಕ ಗ್ರಾಹಕರಿಗೆ ಸಾಲಗಳನ್ನು ನೀಡಿ, ಬ್ಯಾಂಕು ತನ್ನ ಠೇವಣಿಗಳನ್ನು ಹೆಚ್ಚಿಸಿ, ಹಣದ ಪೂರೈಕೆಯನ್ನು ಹೆಚ್ಚಿಸಬಹುದಾಗಿದೆ. ಆದುದರಿಂದ 'ಪ್ರತಿಯೊಂದು ಸಾಲವೂ ಠೇವಣಿಯನ್ನು ಸೃಷ್ಟಿಸಿರುತ್ತದೆ'. ಆದರೆ ಬ್ಯಾಂಕು ಕೇವಲ ಗಾಳಿಯಿಂದ ಹಣವನ್ನು ಸೃಷ್ಟಿಸಲಾರದು. ಸಾಲ ನೀಡುವಾಗ ಗ್ರಾಹಕರಿಂದ ವಾಗ್ದಾನ ಪತ್ರ, ಹುಂಡಿ, ಸಾಲಪತ್ರ, ಷೇರು, ವಿಮಾಪಾಲಿಸಿ, ಆಸ್ತಿ ಹಕ್ಕುಪತ್ರ, ಮೊದಲಾದವುಗಳನ್ನು ಆಧಾರವಾಗಿಟ್ಟುಕೊಳ್ಳುತ್ತದೆ. ಅಥವಾ ಆಸ್ತಿ-ಪಾಸ್ತಿಗಳನ್ನು ಕೊಳ್ಳುತ್ತದೆ. ಪ್ರತಿಯಾಗಿ ಅಷ್ಟೇ ಮೌಲ್ಯದ ಸಾಲವನ್ನು ಗ್ರಾಹಕರ ಖಾತೆಗೆ ಜಮ ಬರೆದು ಠೇವಣಿಗಳನ್ನು ಸೃಷ್ಟಿಸುತ್ತದೆ.ಬ್ಯಾಂಕು ನೀಡುವ ಪ್ರತಿಯೊಂದು ಸಾಲವೂ ಒಂದು ನಿರ್ದಿಷ್ಟ ಆಸ್ತಿಯ ಆಧಾರದ ಮೇಲೆಯೇ ಎಂಬುದನ್ನು ಗಮನಿಸಬೇಕು. ಕೆಲವು ಸಲ ಸಾಲಕ್ಕೆ ವಾಸ್ತವವಾದ ಆಧಾರವಿಲ್ಲದೆ ಇರಬಹುದು. ಆಗಬ್ಯಾಂಕು ಸಾಲಗಾರನ ವೈಯಕ್ತಿಯ ಸಂಪಾದನಾ ಶಕ್ತಿಯ ಒಂದು ಆಧಾರವೇನೆಂದು ಪರಿಗಣಿಸಬಹುದು. ಹೀಗೆ ಬ್ಯಾಂಕರನು ಸಾಲ ನೀಡುವಾಗ ಬೆಲೆಯುಳ್ಳ ಆಸ್ತಿಗಳನ್ನು ಆಧಾರವಾಗಿಟ್ಟುಕೋಳ್ಳುತ್ತಾನೆ. ಅಂದರೆ ಬ್ಯಾಂಕರನು ಬೆಲೆಯಿಲ್ಲದ ವಸ್ತುವನ್ನು ಬೆಲೆಯುಳ್ಳದ್ದಾಗಿ ಪರಿವರ್ತಿಸಲಾರನು. ಚಲನಶಕ್ತಿರಹಿತ ಸಂಪತ್ತನ್ನು ಚಲನಶಕ್ತಿಯುಳ್ಳ ಅಥವಾ ದ್ರವತ್ವವನ್ನು ಹೊಂದಿದ ಸಂಪತ್ತನ್ನಾಗಿ ಪರಿವರ್ತಿಸುತ್ತಾನೆ. ಅಂದರೆ ಸಾರ್ವಜನಿಕರು ಹಣಕ್ಕೆ ಸಮಾನವೆಂದು ಪರಿಗಣಿಸಲಾಗದ ವಸ್ತುವನ್ನು ಹಣವನ್ನಾಗಿ ಮಾಡುವ ಶಕ್ತಿಯನ್ನು ಬ್ಯಾಂಕರನು ಹೊಂದಿರುತ್ತಾನೆ. 
      ಪತ್ತು ನಿಯಂತ್ರಣವೆಂದರೆ ವಾಣಿಜ್ಯ ಬ್ಯಾಂಕುಗಳು ಸೃಷ್ಟಿಸುವ ಸಾಲದ ಮೇಲಿನ ನಿಯಂತ್ರಣ. ಅಂದರೆ ವಾಣಿಜ್ಯ ಬ್ಯಾಂಕುಗಳು ನೀಡುವ ಸಾಲಗಳ ಪ್ರಮಾಣವನ್ನು ನಿಯಂತ್ರಿಸುವುದು. ಇಂದಿನ ಆಧುನಿಕ ಆರ್ಥಿಕ ವ್ಯವಸ್ಥೆಯಲ್ಲಿ ಬ್ಯಾಂಕು ಸಾಲದ ಚಲಾವಣೆಯು, ನಗದ ಹಣದ ಚಲಾವಣೆಗಿಂತಲೂ ಅತ್ಯಧಿಕ ಪ್ರಮಾಣದಲ್ಲಿದೆ. ಮುಂದುವರಿದ ಶೇಕಡಾ 80 ರಿಂದ 85 ರವರಗೆ ವ್ಯವಹಾರಗಳು ಚೆಕ್ಕುಗಳ ಮೂಲಕವೇ ನಡೆಯುತ್ತವೆ.

ಪತ್ತು ನಿಯಂತ್ರಣದ ವಿದಾನಗಳು

ಬದಲಾಯಿಸಿ
         ವಾಣಿಜ್ಯ ಬಾಂಕುಗಳು ನಿರ್ಮಿಸುವ ಸಾಲದ ಪ್ರಮಾಣವನ್ನು ನಿಯಂತ್ರಿಸಲು ಕೆಂದ್ರ ಬ್ಯಾಂಕು ಉಪಯೋಗಿಸುವ ವಿದಾನಗಳು ಮುಖ್ಯವಾಗಿ ಎರಡು ಪ್ರಕಾರವಾಗಿ ವಿಂಗಡಿಸಬಹುದು: (ಅ) ಗಾತ್ರ ಅಥವಾ ಪರಿವಾಣ ನಿಯಂತ್ರಣದ ವಿದಾನಗಳು ಮತ್ತು (ಬ) ಗುಣಾತ್ಮಕ ಅಥವಾ ಆಪರಿವಾಣ ನಿಯಂತ್ರಣದ ವಿದಾನಗಳು. 

ಗಾತ್ರ ಅಥವಾ ಪರಿವಾಣ ನಿಯಂತ್ರಣದ ವಿದಾನಗಳು

ಬದಲಾಯಿಸಿ

   ಈ ವಿದಾನಗಳು ಮುಕ್ಯವಾಗಿ ಮೂರು: (೧) ಬ್ಯಾಂಕದರ ಬದಲಾವಣೆ ಮಾಡುವುದು. (೨) ಮುಕ್ತ ಪೇಟೆಯ ವ್ಯವಹಾರ ಕೈಗೊಳ್ಳುವದು. (೩) ಕಾಯ್ದಿಟ್ಟ ಹಣದ ಪ್ರಮಾಣ ಬದಲಿಸುವುದು. 

ಬ್ಯಾಂಕದರ ಬದಲಾವಣೆ ಮಾಡುವುದು

ಬದಲಾಯಿಸಿ

 
Bank Rate2
     ಈ ವಿದಾನವನ್ನು ಪ್ರಥಮ ಬಾರಿಗೆ ಬ್ಯಾಂಕ್ ಆಫ ಇಂಗ್ಲೆಂಡ್ ಉಪಯೋಗಿಸಿತು. 'ಬಾಂಕ್ ದರ' ಎಂದರೆ ವಾಣಿಜ್ಯ ಬ್ಯಾಂಕುಗಳು ಪಟ್ಟಕಿಡಲು ತಂದ ಪ್ರಥಮ ದರ್ಜೆಯ

ಹುಂಡಿಗಳಿಗೆ ಕೆಂದ್ರ ಬ್ಯಾಂಕು ವಿದಿಸುವ ಬಡ್ಡಿದರ, ಅಥವ ವಾಣಿಜ್ಯ ಬ್ಯಾಂಕುಗಳು ಸರ್ಕಾರಿ ಮತ್ತು ಇತರ ಸಾಲಪತ್ರಗಳನ್ನು ಅಡವಿಟ್ಟು ತೆಗೆದುಕೋಳ್ಳುವ ಸಾಲದ ಮೇಲೆ ಕೆಂದ್ರ ಬ್ಯಾಂಕು ವಿಧಿಸುವ ಬಡ್ಡಿದರ. ಕೆಲವು ರಾಷ್ಟ್ರಗಳಲ್ಲಿ ಬ್ಯಾಂಕ್ ದರಕ್ಕೆ 'ಪಟ್ಟದ ದರ' ಎಂದೂ ಕರೆಯುತ್ತಾರೆ. ವಾಣಿಜ್ಯ ಬ್ಯಾಂಕುಗಳು ತಮ್ಮ ಗ್ರಾಹಕರಿಗೆ ನೀಡುವ ವಿವಿದ ಪ್ರಕಾರದ ಸಾಲಗಳ ಮೇಲೆ ವಿದಿಸುವ ಬಡ್ಡಿ ದರಗಳಿಗೆ 'ಪೇಟೆಯ ಬಡ್ಡಿದರ'ಗಳೆಂದು ಕರೆಯುತ್ತಾರೆ. ಸುಪ್ಯಪಸ್ಥಿತವಾದ ಹಣದ ಪಟ್ಟಿಯಲ್ಲಿ ಬ್ಯಾಂಕ್ ದರಕ್ಕೂ ಪೇಟೆಯ ಬಡ್ಡಿ ದರಗಳಿಗು ನಿಕಟ ಸಂಬಂಧ ವಿರುತ್ತದೆ. ಬ್ಯಾಂಕ್ ದರ ಏರಿದರೆ ಪೇಟ್ಟೆಯ ಬಡ್ಡಿ ದರಗಳು ಏರುತ್ತದೆ. ಬ್ಯಾಂಕ್ ದರ ಇಳಿದರೆ ಪೇಟ್ಟಿಯಬಡ್ಡಿದರಗಳು ಇಳಿಯುತ್ತವೆ. ಇಂಗ್ಲಂಡ್, ಅಮೆರಿಕದ ಸಂಯುಕ್ತ ಸಂಸ್ಥಾನ ಮೊದಲಾದ ಮುಂದುವರೆದ ರಾಷ್ಟ್ರಗಳಲ್ಲಿ ಬ್ಯಾಂಕ್ ದರಕ್ಕೂ ಹಣದ ಪಟ್ಟೆಯ ಬಡ್ಡಿ ದರಗಳಿಗೋ ಇಂತಹ ನಿಕಟ ಸಂಬಂದವಿರುತ್ತದೆ.

ಮುಕ್ತ ಪೇಟೆ ವ್ಯವಹಾರಗಳು

ಬದಲಾಯಿಸಿ

      ವಾಣಿಜ್ಯ ಬ್ಯಾಂಕುಗಳು ಪತ್ತು ನಿರ್ಮಿಸುವ ಸಾಮರ್ಥ್ಯವನ್ನು ಕಡಿಮೆ ಇಲ್ಲವೆ ಹೆಚ್ಚು ಮಾಡುವುದಕ್ಕಾಗಿ ಕೇಂದ್ರ ಬ್ಯಾಂಕು ಹಣದ ಪೇಟೇಯಲ್ಲಿ ಸರ್ಕಾರಿ ಸಾಲ ಪತ್ರಗಳನ್ನು ಮಾರುವ ಅಥವಾ ಕೊಳ್ಳುವ ವ್ಯವಹಾರಗಳಿಗೆ "ಮುಕ್ತ ಪೇಟೆ ವ್ಯವಹಾರ" ಗಳೆಂದು ಕರೆಯುತ್ತಾರೆ.

ವಾಣಿಜ್ಯ ಬ್ಯಾಂಕುಗಳು ಪತ್ತಿನ ಮೂಲಕ ಅತಿಪ್ರಸರಮ ವುಂಟಾಗಿ ಬೆಲೆಗಳು ತೀವ್ರಗತಿಯಿಂದ ಏರುತ್ತಿದ್ದಾಗ, ಕೇಂದ್ರ ಬ್ಯಾಂಕು ಪೇಟೆಯಲ್ಲಿ ಸರ್ಕಾರಿ ಸಾಲ ಪತ್ರಗಳನ್ನು ಮಾರಾಟ ಮಾಡುತ್ತದೆ ಇವುಗಳನ್ನು ಕೊಳ್ಳವವರು ಕೇಂದ್ರ ಬ್ಯಾಂಕಿಗೆ ಹಣವನ್ನು ಕೊಡಬೇಕಾಗುತ್ತದೆ.ಕೇಂದ್ರ ಬ್ಯಾಂಕಿಗೆ ಹೋಗಿದ ಹಣವು ತಿರುಗಿ ಚಲಾವಣೆಗೆ ಬರುವುದಿಲ್ಲವಾದ್ದರಿಂದ, ರಾಷ್ಟ್ರದಲ್ಲಿ ಚಲಾವಣೆಯ ಹಣದ ಪ್ರಮಾಣ ಕಡಿಮೆಯಾಗಿ ಬೆಲೆಗಳು ಇಳಿಯುತ್ತವೆ.

         ಸರಕಾರಿ ಸಾಲಪತ್ರಗಳನ್ನು ಕೊಂಡ ಸಾರ್ವಜನಿಕರಿಂದ ಮತ್ತು ವಾಣಿಜ್ಯ ಬ್ಯಾಂಕುಗಳಿಂದ ಹಣವು ಕೇಂದ್ರ ಬ್ಯಾಂಕಿಗೆ ಹೋಗುತ್ತದೆ. ಆಗ ಸಾರ್ವಜನಿಕರು ಕೊಳ್ಳುವ ಶಕ್ತಿ ಮತ್ತು ವಾಣಿಜ್ಯ ಬ್ಯಾಂಕುಗಳ ಸಾಲ ನಿರ್ಮಾಣ ಕಡಿಮೆಯಾಗಿ, ಬೇಡಿಕೆ ಇಳಿದು ಬೆಲೆಗಳು ಇಳಿಯಲಾರಂಭಿಸುತ್ತವೆ. 

ಇದಕ್ಕೆ ವಿರುಧ್ಧವಾಗಿ ಹಣ ಕುಗ್ಗುವಿಕೆಯಿಂದ ಆರ್ಥಿಕ ಮುಗ್ಗಟ್ಟು ತಲೆದೋರಿ, ಬೆಲೆಗಳು ಇಳಿಯುತ್ತಿದ್ದರೆ, ಅದನ್ನು ನಿವಾರಿಸಲು, ಕೇಂದ್ರ ಬ್ಯಾಂಕು ಮುಕ್ತ ಪೇಟೆಯಲ್ಲಿ ಸರಕಾರಿ ಸಾಲಪತ್ರಗಳನ್ನು ಕೊಂಡುಕೊಳ್ಲುತ್ತದೆ ಅವುಗಳನ್ನು ಮಾರಿದ ಸಾರ್ವಜನಿಕರಿಗೆ ಮತ್ತು ವಾಣಿಜ್ಯ ಬ್ಯಾಂಕುಗಳಿಗೆ ಕೇಂದ್ರ ಬ್ಯಾಂಕು ಹಣ ಕೊಡುತ್ತದೆ. ಹೀಗೆ ಕೇಂದ್ರ ಬ್ಯಾಂಕಿನಿಂದ ಸಾರ್ವಜನಿಕರಿಗೆ ಮತ್ತು ಬ್ಯಾಂಕುಗಳಿಗೆ ಹಣವು ಬರುವುದರಿಂದ ಸಾರ್ವಜನಿಕ ಕೊಳ್ಳುವಶಕ್ತಿ ಮತ್ತು ಬ್ಯಾಂಕುಗಳ ಸಾಲ-ನಿರ್ಮಾಣ ಶಕ್ತಿ ಅಧಿಕವಾಗುತ್ತದೆ. ಆಗ ಬೇಡಿಕೆ ಅಧಿಕವಾಗಿ ಆಗ ಬೆಲೆಗಳು ಏರುತ್ತವೆ. ಇದರಿಂದ ಉತ್ಪಾದನೆ, ಉದ್ಯೋಗಾವಕಾಶ ಮತ್ತು ವರಮಾನಗಳು ಹಾಗೂ ಬಂಡವಾಳ ಹೂಡುವಿಕೆ ಅಧಿಕವಾಗುತ್ತವೆ. ಬ್ಯಾಂಕುಗಳ ಪತ್ತಿನ ಪ್ರಮಾಣವೂ ಅಧಿಕವಾಗುತ್ತದೆ.

ಬ್ಯಾಂಕು ದರಕ್ಕಿಂತಲೂ ಮುಕ್ತ ಪೇಟೆಯ ವ್ಯವಹಾರವು ಹೆಚ್ಚು ಪರಿಣಾಮಕಾರಿಯಾಗಿದೆ. ಬ್ಯಾಂಕು ದರ ಬದಲಾವಣೆಯಿಂದ ನಿರೀಕ್ಷಿಸಿದ ಫಲ ದೊರೆಯಬೇಕಾದರೆ ವಾಣಿಜ್ಯ ಬ್ಯಾಂಕುಗಳು ಕೇಂದ್ರ ಬ್ಯಾಂಕಿನೊಡನೆ ಸಹಕರಿಸಬೇಕಾಗುತ್ತದೆ. ಆದರೆ ಮುಕ್ತ ಪೇಟೆಯ ವ್ಯವಹಾರದಲ್ಲಿ ವಾಣಿಜ್ಯ ಬ್ಯಾಂಕುಳ ಸಹಕಾರದ ಅವಶ್ಯಕತೆ ಇರುವುದಿಲ್ಲ.

ಕಾಯ್ದಿಟ್ಟ ಹಣದಪ್ರಮಾಣದಲ್ಲಿ ಬದಲಾವಣೆ

ಬದಲಾಯಿಸಿ

ರಾಷ್ಟ್ರದಲ್ಲಿರುವ ಎಲ್ಲ ವಾಣಿಜ್ಯ ಬ್ಯಾಂಕುಗಳು ತಮ್ಮ ಠೇವಣೆಯ ಹಣದ ಒಂದು ನಿರ್ದಿಷ್ಟ ಭಾಗವನ್ನು ನಗದು ರೂಪದಲ್ಲಿ ಕೇಂದ್ರ ಬ್ಯಾಂಕಿಗೆ ಮತ್ತು ಪೇಟೆಯ ವ್ಯವಹಾರಗಳನ್ನು ಕೈಗೋಳ್ಳಳು ಸಾಧ್ಯವಾಗುವುದ್ದಿಲ್ಲ. ಕೆಲವು ಸಾಲ ಸರ್ಕಾರಿ ಸಾಲಪತ್ರಗಳನ್ನು ಅಧಿಕ ಬೆಲೆಗೆ ಕೊಂಡು ಕಡಿಮೆ ಬೆಲೆಗೆ ಮಾರಾಟ ಮಾಡುವದರಿಂದಾಗುವ ನಷ್ಟದ ಪ್ರಮಾಣವು ಬಹಳಷ್ಟಾಗುತ್ತದೆ. ಅಂಥ ಸಮಯದಲ್ಲಿ ಕೆಂದ್ರ ಬ್ಯಾಂಕು ವಾಣಿಜ್ಯ ಬ್ಯಾಂಕುಗಳು ಕೆಂದ್ರ ಬ್ಯಾಂಕಿನಲ್ಲಿಡಬವುದಾದ ಕಾಯ್ದಿಟ್ಟ ಹಣದ ಪ್ರಮಾಣವನ್ನು ಬದಲಾಯಿಸುವುದು.

ಉಲ್ಲೇಖಗಳು

ಬದಲಾಯಿಸಿ

[] [] [] []

ಬಾಹ್ಯ ಕೊಂಡಿಗಳು

ಬದಲಾಯಿಸಿ

RBI home page

  1. "Priority Sector Lending – FAQs". Retrieved 30 September 2011.
  2. Haider, Mohammed Julfekar. "Credit Control Functions of RBI". Retrieved 30 September 2011.
  3. Nanda, Sachin. "Role of RBI in Indian Economy". Retrieved 30 September 2011.
  4. "Chronology of Bankrate". Retrieved 12 October 2011