ಯಾವುದೇ ಆಕಸ್ಣೆ ಇಲ್ಲದೇ, ಇಂದೂ-ನಾಳೆಯೋ ಸಾಯುವಂತೆ ಕಾಣ್ಣುವ ಈ ಗಿಡ ಹಿಂದೊಮ್ಮೆ ಸುಂದರವಾಗಿತ್ತೆ ಎಂಬ ಅನುಮಾನ ಹುಟ್ಟಿಸಬಹುದು. ಆದರೆ ಇದೊಂದು ವೈಜ್ನಾನಿಕ ವಿಚಿತ್ರ ಸತ್ಯಗಳನ್ನು ತೆರೆದಿಡಬಲ್ಲ ಏಕೈಕ ಸಸ್ಯ ಎನ್ನಬಹುದು.ಭೂಮಿಯಿಂದ ಕೇವಲ ಅರ್ಧ ಮೀಟರ್ ಎತ್ತರಕ್ಕೆ ಬೆಳೆಯುವ ಇದು ಆಫ್ರಿಕಾ ಖಂಡದ ನೈಋತ್ಯಕ್ಕಿರುವ ಕರಾವಳಿ ಸಮೀಪದ ನಮೀಬ್ ಮರುಭುಮಿಯಲ್ಲಿ ಮಾತ್ರ ಕಾಣಸಿಗುತ್ತದೆ.ಬಂಜರು ಮತ್ತು ಶುಷ್ಕ ಹವೆಗೆ ಹೆಸರಾದ ಈ ಮರುಭೂಮಿಯಲ್ಲಿ ಹಗಲಿನ ಉಷ್ಣತೆ «೪೦»; ಕೇವಲ ೨೫ ಸೆಂ.ಮೀ. ನಷ್ಟು ವಾರ್ಷಿಕ ಮಳೆ ಬೀಳಬಹುದು. ಅದೂ ಅನಿಯಮಿತವಾಗಿದ್ದು ಕೆಲವು ವರ್ಷಗಳು ಮಳೆಯೇ ಇಲ್ಲದಿರಬಹುದು. ಆದರೆ ಮಂಜು ಮುಸುಕಿದ ವಾತಾವರಣದಿಂದ ಸುಮಾರು ೫೦ ಮಿ.ಮೀ. ಮಳೆಯಿಂದ ಲಭ್ಯವಾಗಬಲ್ಲ ನೀರು ಒದುಗುತ್ತದೆ.ಇಂತಹ ವೈಪರೀತ್ಯಗಳ ವಾತಾವರಣಕ್ಕೆ ಹೊಂದಿಕೊಂಡು ಕನಿಷ್ಟ ನೂರು ವರ್ಷಗಳು ಬದುಕಬಲ್ಲ ಈ ಸಸ್ಯ , ಜೀವಜಗತ್ತಿಗೇ ಸವಾಲೆಸೆದಿದೆ. ಕಾರ್ಬನ ಕಾಲನಿರ್ಣಯದಿಂದ ೧೦೦೦ದಿಂದ ವರ್ಷಗಳಷ್ಟು ಹಳೆಯದಾದ, ೧.೫ ಮೀಟರ್ ಎತ್ತರ ಬೆಳೆದ ಹಾಗೂ ೮.೭ ಮೀಟರ್ ಗಳಷ್ಟು ಅಗಲವಾದ ಸಸ್ಯಗಳನ್ನು ಈ ಮರುಭೂಮಿಯಲ್ಲಿ ಪತ್ತೆಚ್ಚಲಾಗಿದೆ.ಮಿರಾಬಿಲಿಸನಲ್ಲಿ ಸುತ್ತಿಕೊಂಡ ನೀಳವಾದ ಎಲೆಗಳು, ಮಧ್ಯಭಾಗ ಹಸಿರಾಗಿದ್ದು ತುದಿ ಬಣ್ನದ್ದಾಗಿರುತ್ತವೆ ಭೂಮಿಗೇ ಅಂಟಿಕೊಂಡಂತಹ ಕಾಂಡ ಭಾಗ. ಬೀಜ ಮೊಳೆತು ಚಿಗುರಿದ ಮೊದಲೆರಡು ಎಲೆಗಳೇ ಜೀವನ ಪರ್ಯಂತ ಕಾರ್ಯ ನಿರ್ವಹಿಸುವುವು.ಅಗಲವಾಗಿ ಹರಡಿದ ಈ ಎರಡೇ ಎಲೆಗಳು ಗಾಳಿಯ ಹೊಡೆತಕ್ಕೆ ಸಿಲುಕಿ ಉದ್ದುದ್ದವಾಗಿ ಸೀಳುವುದರಿಂದ ಅನೇಕ ಎಲೆಗಳಿರಬಹುದೆಂಬ ಭ್ರಮೆ ಹುತಟ್ಟಿಸುತ್ತವೆ.ಸಾಧಾರಣವಾಗಿ ಶುಷ್ಕ ಸಸ್ಯಗಳು ರಸಭರಿತ ದಪ್ಪ ಎಲೆಗಳನ್ನು ಹೊಂದಿರುತ್ತವೆ. ನೀರಿನ ಅಭಾವವಿರುವುದರಿಂದ ಬಾಷ್ಪವಿಸರ್ಜನೆ ಪ್ರಮಾಣವನ್ನು ಕಡಿತಗೊಳಿಸಲು ಪತ್ರರಂಧ್ರಗಳು ಎಲೆಯ ಆಳಭಾಗದಲ್ಲಿ ಹುದುಗಿರುತ್ತವೆ