'

ಭ್ರಂಗರಾಜ

ಬದಲಾಯಿಸಿ
   ಭ್ರಂಗರಾಜವು ಸುಮಾರು ಒಂದು ಅಡಿಯಷ್ಟು ಎತ್ತರಕ್ಕೆ ಬೆಳೆಯುವ ಸಸ್ಯ್ಸ. ಕಹಿಬೇವಿನ್ ಎಲೆಗಳನ್ನು ಕಡು ಹಸಿರು ಬಣ್ಣ ಹೊಂದಿರುತ್ತವೆ.ಸೂರ್ಯಕಾಂತಿ ಹೂಗಳನ್ನು ಹೋಲುವ ಬಿಳಿಬಣ್ಣದ ಹೂಗಳನ್ನು ಬಿಡುತ್ತವೆ. ತೋಟದ ಬದುಗಳಲ್ಲಿ, ಗದ್ದೆ, ನದಿ, ಕಾಲುವೆ ಬದಿಗಳಲ್ಲಿ ಹೆಚ್ಚಾಗಿ ಕಾಣಬರುವ ಈ ಸಸ್ಯವು ತೇವಾಂಶವಿರುವ ಪ್ರದೇಶಗಳಲ್ಲಿ ವರ್ಷವಿಡೀ ಬೆಳೆಯುತ್ತದೆ. ಬೇರೊ ಸಮೇತ ಗಿಡದ ಸಂಪೂರ್ಣ ಭಾಗಗಳು ಔಷಧವಾಗಿ ಬಳಕೆಯಾಗುತ್ತವೆ. ಕನ್ನಡದಲ್ಲಿ ಗರುಗ ಅಥವಾ ಕಾಡಿಗ್ಗರ ಎಂದು ಕರೆಯಲಾಗುವ ಈ ಗಿಡವನ್ನು ಸಂಸ್ಕ್ರತದಲ್ಲಿ ಭ್ರಂಗರಾಜ ಎಂದು ಗುರುತಿಸುತ್ತಾರೆ. ಇದರ ವೈಜ್ ನಿಕ ಹೆಸರು ಎಕ್ಲಿಟ್ಟಾ ಆಲ್ಪಾ 
      ಹಲವಾರು ಔಷಧೀಯ ಗುಣಗಳನ್ನು ಒಳಗೊಂಡಿರುವ ಭ್ರಂಗರಾಜವು ತಲೆಗೂದಲಿನ ಬೆಳವಣ್ಣಿಗೆಯಲ್ಲಿ ಮಹತ್ತರ ಪಾತ್ರ ವಹಿಸುತ್ತದೆ. ಇದರ ಸೊಪ್ಪುಗಳನ್ನು ರುಬ್ಬಿ ಪೇಸ್ಟ್ ತಯಾರಿಸಿಕೊಂಡು ನೆಲ್ಲಿಕಾಯಿಯೊಂದಿಗೆ ಎಳ್ಳೆಣ್ಣೆ ಅಥವಾ ಕೊಬ್ಬರಿ ಎಣ್ನಣೆಗೆ ಹಾಕಿ ಕುದಿಸಬೇಕು. ಅದು ಆರಿದ ನಂತರ ಶೋಧಿಸಿಕೊಂಡು ತುಸು ಕರ್ಪೂರದ ಪುಡಿ ಬೆರೆಸಿಕೊಂಡು ವಾರಕ್ಕೆರಡು ಬಾರಿ ಕೂದಲ ಬುಡಕ್ಕೆ ಹಚ್ಚಿ ಮಸಾಜ್ ಮಾಡಬೇಕು. ಹೀಗೆ ಮಾಡಿದರೆ ತಲೆಗೂದಲು ಕಪ್ಪಾಗಿ, ಸೊಂಪಾಗಿ ಬೆಳೆಯುತ್ತದೆ.

ಇದರ ಸೊಪ್ಪುಗಳು ರಸವನ್ನು ಸ್ನಾನಕ್ಕೆ ಅರ್ಧ ಗಂಟೆ ಮುನ್ನ ಮೈಗೆ ನಿವಾರಣೆಯಾಗುವುದಲ್ಲದೆ ಚರ್ಮವು ಕಾಂತಿಯುಕ್ತವಾಗಿರುವುದು. ಭ್ರಂಗರಾಜ ತೈಲವನ್ನು ಆಗಾಗ ತಲೆಗೆ ಹಚ್ಚಿಕೊಳ್ಳುವುದರಿಂದ ತಲೆಶೂಲೆ ಕಣ್ಣುರಿ ಇತ್ಯದಿ ತೊಂದರೆಗಳು ಶಮನವಗುವುದು. ಗರುಗದ ಸೊಪ್ಪುಗಳ ರಸ ಸೇವನೆಯಿಂದ ಮಕ್ಕಳ ಗ್ರಹಣಶಕ್ತಿಯೂ ವೃಧಿಸುತ್ತದೆ.