ಸದಸ್ಯ:Kanbail/ನನ್ನ ಪ್ರಯೋಗಪುಟ

ಹಲಸಿನ ಬೀಜದ ಹಲ್ವಾವು ಹೆಚ್ಚಾಗಿ ಮಲೆನಾಡಿನ ಪ್ರದೇಶದಲ್ಲಿ ತಯಾರಿಸಿ ಉಪಯೋಗಿಸುವ ಒಂದು ಜನಪ್ರಿಯ ಸಿಹಿ ತಿಂಡಿಯಾಗಿದೆ. ಹಲಸಿನ ಬೀಜಗಳನ್ನು ಅದರಲ್ಲೂ ಬೆಳವಹಣ್ಣಿನ ಬೀಜಗಳಿಂದ ತಯಾರಿಸಿದ ಹಲ್ವಾವು ಬಹಳ ರುಚಿಯಾಗಿರುತ್ತದೆ. ಮೇ, ಜೂನ್ ಮತ್ತು ಜುಲೈ ತಿಂಗಳಲ್ಲಿ ಹೆಚ್ಚಾಗಿ ಮಲೆನಾಡಿನ ಭಾಗದಲ್ಲಿ ಸಾಮಾನ್ಯವಾಗಿ ಮಾಡುತ್ತಾರೆ. ಕಾರಣ ಆ ದಿನಗಳಲ್ಲಿ ಅಲ್ಲಿ ಹಲಸಿನ ಹಣ್ಣಿನ ಸುಗ್ಗಿಯಾಗಿರುತ್ತದೆ. ಇದನ್ನು ಮೂರ್ನಾಲ್ಕು ದಿನಗಳವರೆಗೂ ಕೆಡದಂತೆ ಇಟ್ಟು ಉಪಯೋಗಿಸಬಹುದಾಗಿದೆ.


ತಯಾರಿಸುವುದು

ಚನ್ನಾಗಿ ಕಳಿತಿರುವ ಹಲಸಿನ ಹಣ್ಣಿನಿಂದ ತೆಗೆದ ಹಲಸಿನ ಬೀಜಗಳನ್ನು ತೆಗೆದುಕೊಳ್ಳಬೇಕು. ಆ ಬೀಜಗಳ ಮೇಲಿನ ಸಿಪ್ಪೆಗಳನ್ನು ತೆಗೆಯಬೇಕು. ನಂತರ ಅವುಗಳನ್ನು ನೀರಿನಲ್ಲಿ ಹಾಕಿ ಚನ್ನಾಗಿ ಬೇಯಿಸಬೇಕು. ನಂತರ ನೀರನ್ನು ಬಸಿದು ತೆಗೆಯಬೇಕು. ಚೆನ್ನಾಗಿ ಬೆಂದಾಗ ಆ ಬೀಜಗಳಿಗೆ ಪಿನ್ನಿನಿಂದ ಚುಚ್ಚಿದರೆ, ಪಿನ್ನು ಸರಾಗವಾಗಿ ತೂರಿ ಹೋಗುತ್ತದೆ. ಅಥವಾ ಕೈಯಲ್ಲಿ ಹಿಸುಕಿದರೆ ಸುಲಭವಾಗಿ ಪುಡಿಪುಡಿಯಾಗುತ್ತದೆ. ನಂತರ ಆ ಬೀಜಗಳನ್ನು ನುಣ್ಣಗೆ ರುಬ್ಬಬೇಕು. ಆಗ ಅದು ಹೋಳಿಗೆ ಮಾಡುವ ಹೂರ್ಣದಂತಾಗುತ್ತದೆ. ನಂತರ ಅದನ್ನು ಬಾಣಲೆಯಲ್ಲಿ ತೆಗೆದುಕೊಂಡಿರುವ ಸಕ್ಕರೆಗೆ [ರುಚಿಗೆ ತಕ್ಕಂತೆ] ಹಾಕಿ ಒಲೆಯ ಮೇಲಿಟ್ಟು ನೀರಿನ ಅಂಶವನ್ನು ಸಣ್ಣನೆಯ ಉರಿಯಿಂದ ಆರಿಸಬೇಕು. ನೀರು ಪೂರ್ತಿ ಆರಿದ ನಂತರ ಏಲಕ್ಕಿಯ ಪುಡಿ, ಲವಂಗ, ಒಣ ದ್ರಾಕ್ಷಿಗಳನ್ನು ತುಪ್ಪದೊಂದಿಗೆ ಹಾಕಿ ಚಮಚದಿಂದ ಮಿಶ್ರ ಮಾಡಬೇಕು. ಆ ನಂತರ ಒಲೆಯ ಮೇಲಿಂದ ಇಳಿಸಿದರೆ ಹಲಸಿನ ಬೀಜದ ಹಲ್ವಾ ತಯಾರಾಗುತ್ತದೆ. ನಂತರ ಅದನ್ನು ಸವಿದರೆ ರುಚಿ ರುಚಿಯಾಗಿರುತ್ತದೆ. ಇದನ್ನು ಅಕ್ಕಿಯ ರೊಟ್ಟಿ, ದೋಸೆ ಮತ್ತು ಚಪಾತಿಯೊಂದಿಗೂ ಸವಿಯಬಹುದು.


Collect seeds from ripened jack fruits. Remove the seed cover. Cook the seeds well till a pick can be easily pierced through. Grind the cooked seeds into a smooth paste with minimum water. Roast the paste dry on a hot pan in low flame. Add sugar to taste. Finally add ghee, cardamom powder, clove and raisins and mix well