ಸದಸ್ಯ:KARTIK53/ನನ್ನ ಪ್ರಯೋಗಪುಟ

ಓ ರೈತ,

ನೀ ಹಿಡಿದು ಜೋಡಿ ಎತ್ತ

ಹಗಲೆಲ್ಲ ಉತ್ತಿ ಬಿತ್ತ

ಬೆಳೆಯದಿದ್ದರೆ ಜೋಳ-ಭತ್ತ

ಸಿಗುವುದೇ ನಮಗೆ ಅನ್ನದ ತುತ್ತ.


ಓ ಅನ್ನದಾತ,

ನಿನ್ನ ಕೈಯಾದರೆ ಕೆಸರು

ನಾಡಿನ ಬಾಯೆಲ್ಲಾ ಮೊಸರು

ನೀ ಬೆಳೆದಿರುವ ಪೈರು

ನೀಡುವದು ನಮಗೆಲ್ಲ ಉಸಿರು.


ಮೋಡ-ಮೋಡ ಬಡಿದು ಬಂದಾಗ ವಷ೯

ನಿನ್ನ ಮೊಗದಲ್ಲಿ ಅದೇನು ಹಷ೯

ನೀ ಇರಬೇಕು ಯಾವಾಗಲೂ ಸಂತೋಷ

ಆಗಲೇ ನಾಡೆಲ್ಲಾ ಸುಭೀಕ್ಷ.