ಗೋವಾದ ವಾಜ್ ಶ್ರೀಲಂಕಾ ಸಂತ.................

ಭಾರತ ಮೂಲದ ಕ್ರೈಸ್ತ ಧರ್ಮ ಗುರು ಜೋಸೆಫ಼್ ವಾಜ್ ಅವರನ್ನು ಶ್ರೀಲಂಕಾದ ಮೊದಲ ಸಂತ ಎಂದು ಪೋಪ್ ಫ಼್ರಾನ್ಸಿಸ್ ರವರು ಘೋ‍‍‍‌‌‍‍ಷಿಸಿದರು.ಸಾವಿರರು ಜನರು ಸೇರಿದ ಸಾರ್ವಜನಿಕ ಕಾರ್ಯಕ್ರಮದಲ್ಲಿ ಪೋಪ್ ಅವರು ಘೋಷಣೆ ಮಾಡಿದರು.೧೭ನೇ ಶತಮಾನದಲ್ಲಿ ಶ್ರೀಲಂಕಾದಲ್ಲಿ ಕೆಲಸ ಮಾಡಿದ ಜೋಸೆಫ಼್ ವಾಜ್ ಅವರು ಅಲ್ಲಿನ ಭೀಕರ ಆಂತರಿಕ ಯುದ್ದದ ಸಮಯದಲ್ಲಿ ಸಮರಸ್ಯ ಮೂಡಿಸಲು ಕೆಲಸ ಮಾಡಿದರು. ಪೋರ್ಚ್ಗಿಸ್ ವಸಹತಾಗಿದ್ದ ಗೋವಾದಲ್ಲಿ೧೬೫೦ರಲ್ಲಿ ಜನಿಸಿದ್ದ ಜೋಸೆಫ಼್ ವಾಜ್ ಅವರು ೧೬೮೧ರಲ್ಲಿ ಕರ್ನಾಟಕದ ಕರಾವಳಿಯಲ್ಲಿ ಧರ್ಮ ಪ್ರಚರಕ್ಕೆ ನಿಯುಕ್ತಗೊಂಡರು. ಮಂಗಳೂರು,ಕುಂದಪುರ ಮುಂತಾದ ಪ್ರದೇಶಗಳಲ್ಲಿ ಸೇವೆ ಸಲ್ಲಿಸಿದರು. ಆಮೇಲೆ ಮೂರು ವರುಷಗಳ ಸೇವೆಯ ನಂತರ ೧೬೮೪ರಲ್ಲಿ ಅವರು ಗೋವಾಕ್ಕೆ ಮರಳಿದರು.ಜೋಸೆಫ಼್ ವಾಜ್ ರವರು ಗೋವಾ ಜನರ ಸೇವೆ ಮಾಡುತ್ತ ಸುಮಾರು ಮೂರು ವರುಷಗಳನ್ನು ಕಳೆದರು, ನಂತರ ಅವರು ದೇವರ ಕರೆಯ ಆಲಿಸಿ ಶ್ರೀಲಂಕಾದ ಜನರ ಸೇವೆ ಮಾಡಲು ತೆರಳಿದರು. ಶ್ರೀಲಂಕಾದ ಕರಾವಳಿ ಪ್ರದೇಶಗಳನ್ನು ಪೋರ್ಚ್ಗಿಸರಿಂದ ವಶಪಡಿಸಿಕೊಂಡ ನಂತರ, ಅವರು ಅಲ್ಲಿದ್ದ ಕ್ರೈಸ್ತರಿಗೆ ಕಿರುಕುಳ ಕೊಡಲಾರಂಭಿಸಿದರು.ಇಂತಹ ಸಮಯದಲ್ಲಿ ಕ್ರೈಸ್ತರಿಗೆ ಅಭಯ ತುಂಬುವುದಕ್ಕಾಗಿ ೧೬೮೭ರಲ್ಲಿ ಜೋಸೆಫ಼್ ವಾಜ್ ರವರು ಶ್ರೀಲಂಕಾಕ್ಕೆ ಹೋದರು, ಅಲ್ಲಿ ಅವರು ತಮ್ಮನ್ನೆ ಜನರ ಸೇವೆಗೆ ಮೀಸಲಾಗಿಸಿ ಜನರ ಮನ ಗೆದ್ದರು.ಈಗೆ ಅವರ ಒಂದು ಸೇವೆ ಶ್ರೀಲಂಕಾದ ಜನರ ಮನ, ಮನೆಗಳಲ್ಲಿ ಬೇರೊರಿದೆ.ಜೋಸೆಫ಼್ ವಾಜ್ ರವರು ಆನೇಕ ವರುಷಗಳ ಜನರ ಸೇವೆ ಮಾಡಿ ೧೮೧೧ರಲ್ಲಿ ಅವರು ಮರಣಹೊಂದಿದರು.......


ಜೋಯಲ್ ಸಂದೀಪ್ ದ್ವಿತೀಯ ಬಿ.ಕಾಮ್ "ಸಿ" ೧೩೩೩೦೬.