ಸದಸ್ಯ:Joswin Lasrado1234/sandbox
ಭಾರತೀಯ ಕೌಟುಂಬಿಕ ವ್ಯವಸ್ಥೆ
ಭಾರತ ಹಲವು ಶತಮಾನಗಳಿಂದ ಅವಿಭಕ್ತ ಕುಟುಂಬ ವ್ಯವಸ್ಥೆ ಎಂಬ ರೂಢಿಗತ ಸಂಪ್ರದಾಯವನ್ನು ಪಾಲಿಸಿಕೊಂಡು ಬಂದಿದೆ. ತಂದೆ-ತಾಯಿ ಅವರ ಮಕ್ಕಳು, ಮಕ್ಕಳ ಪತ್ನಿಯರು, ಮೊಮ್ಮಕ್ಕಳು, ಮರಿಮಕ್ಕಳು.. ಪೀಳಿಗೆಗಳು ಹೀಗೆ ಬೆಳೆಯುತ್ತಾ ಹೋಗುವ ಈ ವ್ಯವಸ್ಥೆಯಲ್ಲಿ ಒಂದೇ ಕುಟುಂಬದಲ್ಲಿ ಹಲವು ಪೀಳಿಗೆಯ ಜನ ಒಟ್ಟಿಗೇ ವಾಸಿಸುತ್ತಾರೆ. ಕುಟುಂಬದ ಅತ್ಯಂತ ಹಿರಿಯ ವ್ಯಕ್ತಿ, ಸಾಮಾನ್ಯವಾಗಿ ಪುರುಷ ಈ ಅವಿಭಕ್ತ ಕುಟುಂಬದ ಮುಖ್ಯಸ್ಥ. ಇವನು ಕುಟುಂಬದ ಒಳಗೆ ಬಹಳ ಮುಖ್ಯವಾದ ಎಲ್ಲ ತೀರ್ಮಾನಗಳನ್ನು ತೆಗೆದುಕೊಳ್ಳುವವನೂ, ನೀತಿ-ನಿಯಮಗಳನ್ನು ರೂಪಿಸುವವನೂ ಆಗಿರುತ್ತಾನೆ. ಕುಟುಂಬದ ಇತರ ಸದಸ್ಯರೆಲ್ಲರೂ ಇದಕ್ಕೆ ಬದ್ಧರಾಗಿರುತ್ತಾರೆ. ನಿಯೋಜಿತ ವಿವಾಹ , ಭಾರತೀಯ ಸಮಾಜದಲ್ಲಿ ಶತ ಶತಮಾನಗಳಿಂದಲೂ ಅಸ್ಥಿತ್ವದಲ್ಲಿರುವ ಸಂಪ್ರದಾಯ. ಇಂದಿಗೂ ಕೂಡ ಬಹುಸಂಖ್ಯಾತ ಭಾರತೀಯರು ನಿಯೋಜಿತ ರೀತಿಯಲ್ಲೇ ವಿವಾಹವಾಗಲು ಬಯಸುತ್ತಾರೆ. ವಧೂ-ವರರ ಪೋಷಕರೂ ಮತ್ತು ಕುಟುಂಬದ ಗೌರವಾನ್ವಿತ ವ್ಯಕ್ತಿಗಳೂ ಈ ವಿವಾಹವನ್ನು ನಿಶ್ಚಯಿಸುತ್ತಾರಾದರೂ, ವಧೂ-ವರರ ಅಭಿಪ್ರಾಯವನ್ನೂ ಕೇಳಲಾಗುತ್ತದೆ.ವಧೂ-ವರರ ವಯಸ್ಸು, ಎತ್ತರ, ವೈಯಕ್ತಿಕ ಘನತೆ ಮತ್ತು ಅಭಿರುಚಿಗಳು, ಕೌಟುಂಬಿಕ ಹಿನ್ನೆಲೆ (ಸಂಪತ್ತು ಮತ್ತು ಸಾಮಾಜಿಕ ಸ್ಥಾನಮಾನ), ಜಾತಿ ಮತ್ತು ಜಾತಕ ಹೊಂದಾಣಿಕೆ ಮುಂತಾದ ವಿಚಾರಗಳು ಒಪ್ಪಿಗೆಯಾದ ನಂತರವಷ್ಟೇ ನಿಯೋಜಿತ ವಿವಾಹಗಳು ನಿರ್ಧಾರವಾಗುತ್ತವೆ.
"ಈ ವಿದ್ಯಮಾನದ ಅರ್ಥವನ್ನು ಆಧರಿಸಿ ಈ ಅಭಿಪ್ರಾಯಗಳನ್ನು ವರ್ಗೀಕರಿಸಬಹುದು: ಸಂಪ್ರದಾಯವಾದಿಗಳಿಗೆ, ಹೆಚ್ಚುತ್ತಿರುವ ವಿಚ್ಛೇದನದ ಪ್ರಮಾಣ ಸಾಮಾಜಿಕ ಅಧಃಪತನದ ಮುನ್ಸೂಚನೆ ಎನಿಸಿದರೆ, ಕೆಲವು ಆಧುನಿಕರು ಇದು ಸ್ತ್ರೀ ಸಬಲೀಕರಣದ ಹೊಸ ಹೆಜ್ಜೆ ಎಂದು ವಾದಿಸುತ್ತಾರೆ. ಬಾಲ್ಯ ವಿವಾಹವನ್ನು ೧೮೬೦ರಲ್ಲೇ ಕಾನೂನು ಬಾಹಿರ ಎಂದು ಕಾಯಿದೆ ರಚಿಸಲಾಗಿದ್ದರೂ, ಭಾರತದ ಕೆಲವು ಗ್ರಾಮೀಣ ಭಾಗಗಳಲ್ಲಿ ಇದು ಈಗಲೂ ಚಾಲ್ತಿಯಲ್ಲಿದೆ. ಯುನಿಸೆಫನ "ಸ್ಟೇಟ್ ಆಫ್ ದಿ ವರ್ಲ್ಡ್ ಚಿಲ್ಡ್ರನ್-೨೦೦೯" (=ವಿಶ್ವ ಮಕ್ಕಳ ಸ್ಥಿತಿಗತಿ-೨೦೦೯) ವರದಿಯ ಪ್ರಕಾರ, ೨೦ರಿಂದ೨೪ರ ವಯೋಮಾನದ ೪೭%ನಷ್ಟು ಭಾರತೀಯ ಮಹಿಳೆಯರು ಕಾನೂನುಬದ್ಧ ವಯಸ್ಸಾದ೧೮ ವರ್ಷಕ್ಕಿಂತ ಮೊದಲೇ ವಿವಾಹವೆಂಬ ವಿಧಿಗೆ ಒಳಗಾಗುತ್ತಾರೆ. ಇದು ಗ್ರಾಮೀಣ ಭಾಗದಲ್ಲಿ ೫೬%ನಷ್ಟಿದೆ. ಅಷ್ಟೇ ಅಲ್ಲದೆ ವಿಶ್ವದಲ್ಲಿ ನಡೆಯುವ ಬಾಲ್ಯ ವಿವಾಹಗಳಲ್ಲಿ ೪೦%ನಷ್ಟು ಭಾರತದಲ್ಲೇ ಸಂಭವಿಸುತ್ತದೆ ಎಂದು ಈ ವರದಿ ಹೇಳುತ್ತದೆ.ಭಾರತೀಯರ ಹೆಸರುಗಳು ವೈವಿಧ್ಯಮಯ ಹಿನ್ನೆಲೆ ಹೊಂದಿದ್ದು, ನಾಮಕರಣ ಮಹೋತ್ಸವಗಳ ವಿಧಾನವೂ ಪ್ರದೇಶದಿಂದ ಪ್ರದೇಶಕ್ಕೆ ಭಿನ್ನವಾಗಿದೆ. ಭಾರತೀಯರ ಹೆಸರುಗಳಲ್ಲಿ ಧರ್ಮ ಮತ್ತು ಜಾತಿಯ ಪ್ರಭಾವ ಸಾಕಷ್ಟಿದೆ. ಅಲ್ಲದೆ ಇಲ್ಲಿನ ಹೆಸರುಗಳು ಸಾಮಾನ್ಯವಾಗಿ ಧರ್ಮ ಇಲ್ಲವೇ ಮಹಾಕಾವ್ಯಗಳಿಂದ ಆಯ್ದುಕೊಳ್ಳಲಾಗಿದೆ. ಭಾರತೀಯರು ವ್ಯಾಪಕ ವೈವಿಧ್ಯಮಯ ಭಾಷೆಗಳನ್ನು ಮಾತನಾಡುತ್ತಾರೆ. ಸ್ತ್ರೀ ಪುರುಷರಿಬ್ಬರೂ ಕಾನೂನಿನ ದೃಷ್ಟಿಯಲ್ಲಿ ಸರಿಸಮಾನರಾಗಿದ್ದರೂ ಮತ್ತು ಲಿಂಗ ಸಮಾನತೆಯ ಧೋರಣೆ ಗಮನಾರ್ಹವಾಗಿದ್ದರೂ ಭಾರತೀಯ ಸಮಾಜದಲ್ಲಿ ಇಂದಿಗೂ ಸ್ತ್ರೀ ಪುರುಷರಿಬ್ಬರೂ ಭಿನ್ನವಾದ ಕಾರ್ಯಗಳನ್ನು ನಿರ್ವಹಿಸುತ್ತಾರೆ. ಸಮಾಜದಲ್ಲಿ ಬಹುತೇಕ ಮಹಿಳೆಯರನ್ನು ಗೃಹಕೃತ್ಯ ಮತ್ತು ಪ್ರತಿಫಲವಿಲ್ಲದ ಸಮುದಾಯ ಸೇವಾಕಾರ್ಯಗಳಿಗಷ್ಟೇ ಸೀಮಿತಗೊಳಿಸಲಾಗಿದೆ. ಇಂಥ ಅಲ್ಪ ಭಾಗೀದಾರಿಕೆಗೆ ಹಲವಾರು ತಾತ್ವಿಕ ಮತ್ತು ಐತಿಹಾಸಿಕ ಕಾರಣಗಳಿವೆ. ಇಲ್ಲಿ ಮಹಿಳೆಯರು ಮತ್ತು ಅವರಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಬಿಂಬಿಸಲು ಸುದ್ದಿ ಮಾಧ್ಯಮಗಳು ನೀಡುವ ಸಮಯ ಕೇವಲ೭-೧೪%ಮಾತ್ರ. ಬಹುತೇಕ ಭಾರತೀಯ ಕುಟುಂಬಗಳಲ್ಲಿ ಮಹಿಳೆಗೆ ತನ್ನದೇ ಹೆಸರಿನಲ್ಲಿ ಯಾವುದೇ ಆಸ್ತಿ-ಪಾಸ್ತಿ ಇರುವುದಿಲ್ಲ, ಅಲ್ಲದೆ ಪಿತ್ರಾರ್ಜಿತ ಆಸ್ತಿಯಲ್ಲಿ ಪಾಲು ಪಡೆಯಲು ಈಕೆ ಬಾಧ್ಯಸ್ಥಳಲ್ಲ. ಮಹಿಳಾ ಸಬಲೀಕರಣಕ್ಕಾಗಿ ರೂಪಿಸಲಾಗಿರುವ ಕಾನೂನುಗಳು ಸಮರ್ಪಕವಾಗಿ ಜಾರಿಯಾಗದ ಕಾರಣ ಆಸ್ತಿ-ಪಾಸ್ತಿಯಲ್ಲಿ ಅವಳಿಗೆ ಸಲ್ಲಬೇಕಾದ ಭಾಗ ಸಲ್ಲುತ್ತಿಲ್ಲ. ಹಲವು ಕುಟುಂಬಗಳಲ್ಲಿ ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಹುಡುಗಿಯರು ಮತ್ತು ಮಹಿಳೆಯರು ಪೌಷ್ಟಿಕಾಂಶದ ವಿಚಾರದಲ್ಲಿ ತಾರತಮ್ಯಕ್ಕೆ ಈಡಾಗಿದ್ದಾರೆ. ಹೀಗಾಗಿ ಇವರು ರಕ್ತಹೀನತೆ ಮತ್ತು ಅಪೌಷ್ಟಿಕತೆಯಿಂದ ನರಳುತ್ತಿದ್ದಾರೆ. ಇವರು ಇಂದಿಗೂ ಆದಾಯ ಮತ್ತು ಔದ್ಯೋಗಿಕ ಸ್ಥಾನಮಾನಗಳಲ್ಲಿ ಪುರುಷರಿಗಿಂತ ಹಿಂದೆ ಬಿದ್ದಿದ್ದಾರೆ. . ಫೆಮಿನಾ , ಗೃಹಶೋಭಾ ಮತ್ತು ವುಮನ್ಸ್ ಎರಾ ಇಲ್ಲಿನ ಜನಪ್ರಿಯ ಮತ್ತು ಪ್ರಭಾವಿ ಮಹಿಳಾ ನಿಯತಕಾಲಿಕಗಳು.