ಮ್ಯಾಕ್ಸ್ವೆಲ್ ನ ವಿದ್ಯುತ್ ಕಾಂತಿಯ ಸಿದ್ಧಾಂತ
ಜಿಮ್ಸ್ ಕ್ಲರ್ಕ್ ಮ್ಯಾಕ್ಸ್ವೆಲ್ ಪ್ರತಿಪಾದಿಸಿದ ವಿದ್ಯುತ್ ಕಾಂತಿಯ ಸಿದ್ಧಾಂತದ ಪ್ರಕಾರ ಬೆಳಕು ವಿದ್ಯುತ್ ಕಾಂತಿಯ ತರಂಗ ರೂಪದಲ್ಲಿ ಚಲಿಸುತ್ತದೆ.
ಈ ವಿದ್ಯುತ್ ಕಾಂತಿಯ ತರಂಗಗಳು ಸ್ವಭಾವದಲ್ಲಿ ಅಡ್ದ ತರಂಗಗಳಾಗಿದ್ದು ಅವುಗಳು ಪ್ರಸರಿಸಲು ಯಾವುದೇ ಮಾಧ್ಯಮದ ಅವಶ್ಯಕತೆ ಇಲ್ಲ.
ಈ ತರಂಗಗಳು ನಿರ್ವಾತದ ಮೂಲಕವು ಸಹ ಚಲಿಸುತ್ತವೆ ಆದಾಗ್ಯೂ ಈ ಸಿದ್ಧಾಂತವು ಬೆಳಕಿನ ಹಲವಿ ಕ್ಶಣಗಳನ್ನು ತ್ರಪ್ತಿಕರವಾಗಿ
ವಿವರಿಸುತ್ತದೆ,ಆದರೆ "ಕಪ್ಪು ಕಾಯ ವಿಕಿರಣ ರೋಹಿತ"(black body radiation) ಮತ್ತು
'ಧ್ಯುತಿವಿದ್ಯುತ್ ಪರಿಣಾಮ'(photoelectric effect) ಇವುಗಳನ್ನು ವಿವರಿಸಲು ವಿಫಲವಾಯಿತು.

             ಅಂತರಿಕ್ಷ ಜಲಪಾತ


ಹೆಸರೇ ಸೂಚಿಸುವಂತೆ ಅದು ಬಾಹ್ಯಾಕಾಶದಲ್ಲಿ.ನಕ್ಷತ್ರ ಲೋಕದಲ್ಲಿ ಜರುಗುತ್ತಿರುವ ವಿಸ್ಮಯದ ಒಂದು ವಿದ್ಯಮಾನದ ದೃಶ್ಯ. ರಭಸದಿಂದ ಸುರಿಯುತ್ತಿರುವ ಜಲರಾಶಿಯನ್ನು ಹೋಲುವ ಈ ದೃಶ್ಯದಲ್ಲಿರುವ 'ಜಲಧಾರೆ'ಯ ಆಗಲ ಎತ್ತರಗಳು ಸಾವಿರರು ಕಿಲೋಮೀಟರ್ ಗೂ ಆಧಿಕ. ಇನ್ನು ಈ ಜಲಪಾತ ನಮ್ಮಿಂದ ಇರುವ ದೂರವಂತೂ ಕಲ್ಪನಾತೀತ :ಆ ದೂರ ಸುಮರು ಒಂದೂವರೆ ಸಾವಿರ ಜ್ಯೋತಿವರ್ಷ.

ವಸ್ತು ಸ್ಥಿತಿ ಏನಂದರೆ ಜ್ಯೋತಿರ್ಮೇಘ ವೊಂದರಲ್ಲಿ ಈಗಿನ್ನು ಮೈದಳೆಯುತ್ತಿರುವ ಒಂದು ನಕ್ಷತ್ರ ಈ ದೃಶ್ಯಕ್ಕೆ ಮೂಲ.ಆ ನಕ್ಷತ್ರದಿಂದ ಅಪಾರ ಪ್ರಮಾಣದ-ಪ್ರತಿ ನಿಮಿಶಕ್ಕೂ ಮಿಲಿಯಾಂತರ ಟನ್ ಪ್ರಮಾಣದ ಅಧಿಕ ಶಕ್ತಿಯ ಶಕ್ತಿ ಕಣಗಳ ರಾಶಿ ಚಿಮ್ಮಿ,ಸಿಡಿದು ಎರಚ್ಲ್ಪಡುತ್ತಿದೆ.ಜೊತೆ ಜೊತೆಗೇ ಆ ನಕ್ಷತ್ರದತ್ತ ಸುರಿದು ಬೀಳುತ್ತಿದೆ.ಇವಿಷ್ಟು ಸೇರಿ ಈ ಅಂತರಿಕ್ಷ ಜಲಪಾತ ಮೈದಳೆದಿದೆ.
ವಿಸ್ಮಯ ಏನೆಂದರೆ ಅಂತರಿಕ್ಷ ಜಲಪಾತದಂತಹ ದೃಶ್ಯಗಳು ವಿಶ್ವದಲ್ಲಿ ಅಪರೂಪವೇನಲ್ಲ.ವಿಶೇಷವಾಗಿ 'ಗ್ರಹೀಯ ನೀಹಾರಿಕೆ'ಗಳಿಂದ ರೋಪುಗೊಂಡಿರುವ ದೃಶ್ಯಗಳದು ಹೇರಳ ಸಂಖ್ಯೆ,ಅಸೀಮ ವೈವಿಧ್ಯ ಮತ್ತು ಅನುಪಮ ಸೌಂದರ್ಯ.ನಮ್ಮ ಸೂರ್ಯನಂತಹ ನಕ್ಷತ್ರಗಳು ತಮ್ಮ ಬಾಳಿನ ಅಂತಿಮ ಹಂತದಲ್ಲಿ ತಮ್ಮದೇ ಹೊರ ಪದರಗಳನ್ನೆಲ್ಲ ಕಳಚುತ್ತವೆ.ಈ ಪದರಗಳ ಕೇಂದ್ರದಲ್ಲಿ ಉಳಿದ ದಟ್ಟ ,ಸಾಂದ್ರ,ಉಜ್ವಲ 'ಶ್ವೇತ ಕುಬ್ಜ'ದ ಸುತ್ತ ಕಲ್ಪನಾತೀತ ಚಿತ್ರವಿಚಿತ್ರ ಆಕಾರಗಳಲ್ಲಿ ಹರಡಿಕೊಳ್ಳುತ್ತದೆ. ಇಂತಹ ಗ್ರಹೀಯ ನೀಹಾರಿಕೆಗಳು ನಮಗೆ ಪರಿಚಿತವಾದ ಬೇಕಾದಷ್ಟು ವಿವಿಧ ಸಜೀವ ನಿರ್ಜೀವಗಳನ್ನು ಹೋಲುವ ಆಕಾರಗಳಲ್ಲಿ ಅನಾವರಣಗೊಳ್ಲುತ್ತವೆ.