ಸದಸ್ಯ:Jessanajoseph/ನನ್ನ ಪ್ರಯೋಗಪುಟ/financial inclusion

ಹಣಕಾಸಿನ ಸೇರ್ಪಡೆ (ಹಣಕಾಸು ಒಳಗೊಳ್ಳುವಿಕೆ) :

ಹಣಕಾಸಿನ ಸೇರ್ಪಡೆ ಅಥವಾ ಹಣಕಾಸು ಒಳಗೊಳ್ಳುವಿಕೆಯು ಹಣಕಾಸಿನ ಸೇವೆಗಳ ವಿತರಣೆಯನ್ನು(ಬ್ಯಾಂಕಿಂಗ್ ಮಾತ್ರವಲ್ಲ), ಸಮಾಜದ ಅನಾನುಕೂಲ ಮತ್ತು ದುರ್ಬಲ ಗುಂಪುಗಳ ವಿಶಾಲ ವಿಭಾಗಗಳಿಗೆ ಕೈಗೆಟುಕುವ ವೆಚ್ಚದಲ್ಲಿ ನೀಡುತ್ತದೆ. ಉಳಿತಾಯ ಹಾಗೂ ಬಂಡವಾಳ ಹೂಡಿಕೆ ಮಾಡಲು ಮತ್ತು ಕ್ರೆಡಿಟ್ ಪಡೆಯಲು ಇದು ಸಮರ್ಥವಾದ ವ್ಯವಹಾರದ ಪ್ರತಿಪಾದನೆಯಾಗಿದೆ.

ಹಣಕಾಸಿನ ಸೇರ್ಪಡೆ


ಇತಿಹಾಸ: ಬದಲಾಯಿಸಿ

ಸತತವಾಗಿ ಹಲವು ಸರ್ಕಾರಗಳು ನಮ್ಮ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಮಾಡಿದ ಪ್ರಯತ್ನಗಳ ಹೊರತಾಗಿಯೂ; ಇನ್ನೂ ದುರ್ಬಲ ಗುಂಪುಗಳು ಹಣಕಾಸಿನ ಕ್ಷೇತ್ರದಿಂದ ಒದಗಿಸಲ್ಪಟ್ಟ ಅವಕಾಶ ಮತ್ತು ಸೇವೆಗಳಿಂದ ಹಿಂದುಳಿದಿದ್ದರಿಂದ, ೨೦೦೬ ರಲ್ಲಿ ಭಾರತ ಸರಕಾರವು ಆರ್ಥಿಕ ಸೇರ್ಪಡೆ ಸಮಿತಿಯನ್ನು ರೂಪಿಸಿತು, ಇದರ ನೇತೃತ್ವವನ್ನು ಅಂದಿನ ಪ್ರಧಾನ ಮಂತ್ರಿಗಳ ಆರ್ಥಿಕ ಸಲಹಾ ಮಂಡಳಿಯ ಅಧ್ಯಕ್ಷರಾಗಿದ್ದ "ಡಾ.ಸಿ.ರಂಗರಾಜನ್"‍‍ರವರು ವಹಿಸಿದರು. ರಾಷ್ಟ್ರದ ಹಣಕಾಸು ಮತ್ತು ಬ್ಯಾಂಕಿಂಗ್ ವ್ಯವಸ್ಥೆಯ ಅಧಿಕಾರಿಗಳು ಈ ಸಮಿತಿಯ ಸದಸ್ಯರಾಗಿದ್ದರು.

೨೯ ಡಿಸೆಂಬರ್ ೨೦೦೩ ರಂದು ವಿಶ್ವಸಂಸ್ಥೆಯ ಮಾಜಿ ಪ್ರಧಾನ ಕಾರ್ಯದರ್ಶಿ "ಕೊಫಿ ಅನ್ನಾನ್" ಅವರು ಹೀಗೆ ಹೇಳಿದರು: "ವಿಶ್ವದ ಅತ್ಯಂತ ಬಡಜನರು ಇನ್ನೂ ಉಳಿತಾಯ, ಹಣಕಾಸಿನ ಸೇವೆಗಳಿಗೆ ಪ್ರವೇಶವನ್ನು ಹೊಂದಿಲ್ಲ. ಆರ್ಥಿಕ ವಲಯದಲ್ಲಿ ಪೂರ್ಣ ಪಾಲ್ಗೊಳ್ಳುವಿಕೆಯಿಂದ ಜನರನ್ನು ಹೊರಗಿಡುವ ಕಾರಣಗಳನ್ನು ಪರಿಹರಿಸುವುದು ನಮಗೆ ಎದುರಾಗಿರುವ ದೊಡ್ಡ ಸವಾಲು. ಅದಕ್ಕೆ ನಾವೆಲ್ಲಾ ಒಟ್ಟಾಗಿ ಸೇರಿ ಬಡಜನರ ಜೀವನವನ್ನು ಸುಧಾರಿಸಲು ಸಹಾಯ ಮಾಡುವ ಅಂತರ್ಗತ ಹಣಕಾಸು ವಲಯಗಳನ್ನು ನಿರ್ಮಿಸಬಹುದು".[೧]

ಗುರಿಗಳು: ಬದಲಾಯಿಸಿ

"ಹಣಕಾಸು ಸೇರ್ಪಡೆ" ಎಂಬ ಪದವು ೨೦೦೦ ದ ಪ್ರಾರಂಭದಿಂದ ಪ್ರಾಮುಖ್ಯತೆಗಳಿಸ ತೊಡಗಿತು, ಆರ್ಥಿಕ ಹೊರಗಿಡುವಿಕೆ ಮತ್ತು ಬಡತನಕ್ಕೆಇರುವ ನೇರ ಸಂಬಂಧವನ್ನು ಗುರುತಿಸುವ ಪರಿಣಾಮವಾಗಿ, ಆರ್ಥಿಕ ಸೇರ್ಪಡೆಯ ಗುರಿಗಳನ್ನು ವಿಶ್ವಸಂಸ್ಥೆಯು ಈ ಕೆಳಕಂಡಂತೆ ವ್ಯಾಖ್ಯಾನಿಸುತ್ತದೆ:

  • ಉಳಿತಾಯ ಅಥವಾ ಠೇವಣಿ ಸೇವೆಗಳು, ಪಾವತಿ ಮತ್ತು ವರ್ಗಾವಣೆ ಸೇವೆಗಳು, ಕ್ರೆಡಿಟ್ ಮತ್ತು ವಿಮೆ ಸೇರಿದಂತೆ ಪೂರ್ಣ ಪ್ರಮಾಣದ ಹಣಕಾಸು ಸೇವೆಗಳನ್ನು ಕಡಿಮೆ ವೆಚ್ಚದಲ್ಲಿ ಪಡೆಯಲು
  • ಆರ್ಥಿಕ ಮತ್ತು ಸಾಂಸ್ಥಿಕ ಸಮರ್ಥನೀಯತೆ, ನಿರಂತರತೆಯ ಮತ್ತು ಹೂಡಿಕೆಯ ನಿಶ್ಚಿತತೆಯನ್ನು ಖಚಿತಪಡಿಸಿಕೊಳ್ಳಲು, ಮತ್ತು
  • ಗ್ರಾಹಕರಿಗೆ ಆಯ್ಕೆ ಮತ್ತು ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು.
  • ಕೃಷಿ ಮತ್ತು ಗ್ರಾಮೀಣಾಭಿವೃದ್ಧಿಗಾಗಿ ರಾಷ್ಟ್ರೀಯ ಬ್ಯಾಂಕ್ ಸಹಭಾಗಿತ್ವದಲ್ಲಿ "ವಿಶ್ವಸಂಸ್ಥೆ" ಸೂಕ್ತ ಹಣಕಾಸಿನ ಉತ್ಪನ್ನಗಳನ್ನು ಅಭಿವೃದ್ಧಿಪಡಿಸುವುದರ ಮೂಲಕ ಬಡವರ ಆರ್ಥಿಕ ಸೇರ್ಪಡೆ ಹೆಚ್ಚಿಸಲು ಹಾಗೂ ಲಭ್ಯವಿರುವ ಹಣಕಾಸಿನ ಸೇವೆಗಳ ಬಗ್ಗೆ ಜಾಗೃತಿ ಮೂಡಿಸಲು ಹಾಗೂ ವಿಶೇಷವಾಗಿ ಮಹಿಳೆಯರ ನಡುವೆ ಆರ್ಥಿಕ ಸಾಕ್ಷರತೆಯನ್ನು ಬಲಪಡಿಸುವ ಗುರಿ ಹೊಂದಿದೆ.

ಹಣಕಾಸು ಸೇರ್ಪಡೆ ಸೂಚ್ಯಂಕ : ಜೂನ್ ೨೫, ೨೦೧೩ ರಂದು, ಭಾರತದ ಪ್ರಮುಖ ಕ್ರೆಡಿಟ್ ರೇಟಿಂಗ್ ಮತ್ತು ಸಂಶೋಧನಾ ಕಂಪೆನಿ ಭಾರತದಲ್ಲಿ ಆರ್ಥಿಕ ಸೇರ್ಪಡೆ ಸ್ಥಿತಿಯನ್ನು ಅಳೆಯಲು ಕ್ರೈಸಿಲ್ ಸೂಚ್ಯಂಕವನ್ನು ಪ್ರಾರಂಭಿಸಿತು

ಭಾರತದಲ್ಲಿ ಹಣಕಾಸಿನ ಸೇರ್ಪಡೆ: ಬದಲಾಯಿಸಿ

ಭಾರತೀಯ ಸನ್ನಿವೇಶದಲ್ಲಿ ಏಪ್ರಿಲ್ ೨೦೦೫ ರಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ನ ಗವರ್ನರ್ ಆಗಿದ್ದ "ವೈ. ವೇಣುಗೋಪಾಲ್ ರೆಡ್ಡಿ" ನೀಡಿದ ವಾರ್ಷಿಕ ನೀತಿಯ ಅನುಸಾರವಾಗಿ ಈ ಹೇಳಿಕೆಯಲ್ಲಿ "ಹಣಕಾಸಿನ ಸೇರ್ಪಡೆ" ಪದವನ್ನು ಮೊದಲ ಬಾರಿಗೆ ಬಳಸಲಾಯಿತು. ನಂತರ ಈ ಪರಿಕಲ್ಪನೆಯು ಭಾರತ ಹಾಗೂ ವಿದೇಶಗಳಲ್ಲಿ "ಹಣಕಾಸಿನ ಒಳಗೊಳ್ಳುವಿಕೆಗೆ" ವ್ಯಾಪಕವಾಗಿ ಬಳಸಲ್ಪಟ್ಟಿತು. ೨೦೦೫-೦೬ರಲ್ಲಿ "ರೂರಲ್ ಕ್ರೆಡಿಟ್" ಮತ್ತು "ಮೈಕ್ರೋಫೈನಾನ್ಸ್" (ಖಾನ್ ಕಮಿಟಿ) ಗೆ ಸಂಬಂಧಿಸಿರುವ ಸಮಸ್ಯೆಗಳನ್ನು ಪರಿಶೀಲನೆ ಮಾಡಲು ಇಂಟರ್ನಲ್ ಗುಂಪಿನ ವರದಿಯನ್ನು ತೆಗೆದುಕೊಳ್ಳಲಾಯಿತು. ಖಾನ್ ಕಮಿಟಿ ವರದಿಯಲ್ಲಿ ಆರ್.ಬಿ.ಐ ಬ್ಯಾಂಕುಗಳಿಗೆ ಮೂಲಭೂತ "ಅಪ್ರಚಲಿತವಾದ" ಬ್ಯಾಂಕಿಂಗ್ ಖಾತೆಯನ್ನು ಲಭ್ಯವಾಗುವಂತೆ ಮಾಡಲು ಹೆಚ್ಚಿನ ಆರ್ಥಿಕ ಸೇರ್ಪಡೆ ಸಾಧಿಸುವ ದೃಷ್ಟಿಯಿಂದ ಪ್ರೇರೇಪಿಸಿತು. ೨೦೦೫ ರಲ್ಲಿ ಭಾರತೀಯ ಬ್ಯಾಂಕ್‍‍ನ ಅಧ್ಯಕ್ಷರಾದ ಕೆ.ಸಿ.ಮಂಗಲಂ ನವರ ನೇತೃತ್ವದಲ್ಲಿ ಪುದುಚೇರಿ ಎಂಬ ಗ್ರಾಮವು ಹಣಕಾಸು ಸೇರ್ಪಡೆ ಸೌಲಭ್ಯವನ್ನು ಪಡೆದ ಭಾರತದ ಮೊದಲ ಗ್ರಾಮವಾಯಿತು. ಪೈಲಟ್ ಆಧಾರದ ಮೇಲೆ ೧೦೦% ಆರ್ಥಿಕ ಸೇರ್ಪಡೆ ಕಾರ್ಯಾಚರಣೆಯನ್ನು ಆರಂಭಿಸಲು ಬ್ಯಾಂಕುಗಳು ವಿವಿಧ ಪ್ರದೇಶಗಳಲ್ಲಿ ವಾಣಿಜ್ಯ ಬ್ಯಾಂಕುಗಳನ್ನು ಕೇಳಿಕೊಂಡವು. ಇದರ ಪರಿಣಾಮವಾಗಿ, ಪುದುಚೆರಿ , ಹಿಮಾಚಲ ಪ್ರದೇಶ ಮತ್ತು ಕೇರಳ ರಾಜ್ಯಗಳು ಹಾಗೂ ಹಲವು ಕೇಂದ್ರಾಡಳಿತ ಪ್ರದೇಶಗಳು ತಮ್ಮ ಎಲ್ಲಾ ಜಿಲ್ಲೆಗಳಲ್ಲಿ ೧೦೦% ಆರ್ಥಿಕ ಸೇರ್ಪಡೆ ಘೋಷಿಸಿತು. ಭಾರತದಲ್ಲಿ ಹೆಚ್ಚಿನ ಹಣಕಾಸಿನ ಸೇರ್ಪಡೆ ಸಾಧಿಸಲು ಆರ್.ಬಿ.ಐ ಹಲವು ಕ್ರಮಗಳನ್ನು ಪ್ರಾರಂಭಿಸಿದೆ, ಭಾರತದಲ್ಲಿ ಹಣಕಾಸಿನ ಸೇರ್ಪಡೆ ಪ್ರಮುಖ ಪಾತ್ರ ವಹಿಸುತ್ತಿದೆ.

ಹಣಕಾಸಿನ ಸೇರ್ಪಡೆಯ ಪ್ರಾಮುಖ್ಯತೆ: ಬದಲಾಯಿಸಿ

  • ಉಳಿತಾಯ ಹೆಚ್ಚಿಸಲು
  • ಕ್ರೆಡಿಟ್‍‍ನ ಲಭ್ಯತೆ ಹೆಚ್ಚಿಸಲು
  • ಹೆಚ್ಚಿನ ಪ್ರಮಾಣದಲ್ಲಿ ದುರ್ಬಲ ಜನರನ್ನು ಬ್ಯಾಂಕಿಂಗ್ ನಿವ್ವಳಕ್ಕೆ ತರಲು ಇದು ಸಹಾಯ ಮಾಡುತ್ತದೆ
  • ಸರಳೀಕೃತ ಶಾಖಾ ದೃಢೀಕರಣ
  • ಹಣಕಾಸು ಸೇವೆಗಳಿಗೆ ಪ್ರವೇಶಿಸುವುದರ ಮೂಲಕ ಬಡತನದಿಂದ ಹೊರಬರಲು ಮತ್ತು ಸಮಾಜದಲ್ಲಿನ ಅಸಮಾನತೆಯನ್ನು ಕಡಿಮೆ ಮಾಡಲು ಸಹಾಯಕವಾಗಿದೆ
  • ಹಣಕಾಸು ಸೇರ್ಪಡೆಯು ವ್ಯಕ್ತಿಗಳಿಗೆ ಮತ್ತು ಕುಟುಂಬಗಳಿಗೆ ಮಾತ್ರವಲ್ಲದೆ ಒಟ್ಟಾರೆಯಾಗಿ ಇಡೀ ಸಮುದಾಯವನ್ನು ಅಭಿವೃದ್ಧಿಪಡಿಸುತ್ತದೆ ಮತ್ತು ಆರ್ಥಿಕ ಬೆಳವಣಿಗೆಗೆ ಸಹಾಯ ಮಾಡುತ್ತದೆ
  • ಮಕ್ಕಳ ಶಿಕ್ಷಣದ ವೆಚ್ಚವನ್ನು ಪಾವತಿಸಲು ಸಾಧ್ಯವಾಗುವುದರಿಂದ ಶಿಕ್ಷಣ ಮತ್ತು ತಿಳುವಳಿಕೆಯಿರುವ ಹೊಸ ಪೀಳಿಗೆಯನ್ನು ಇದು ಸೃಷ್ಟಿಸುತ್ತದೆ.

ಒಟ್ಟಾರೆಯಾಗಿ ಹಣಕಾಸಿನ ಸೇರ್ಪಡೆಯು ಆರ್ಥಿಕತೆಯನ್ನು ಉತ್ತೇಜಿಸಲು ಹೆಚ್ಚಿನ ಸಹಾಯವನ್ನು ಮಾಡುತ್ತಿದೆ.

ವಿವಿಧ ಯೋಜನೆಗಳು: ಬದಲಾಯಿಸಿ

  • ಪ್ರಧಾನ ಮಂತ್ರಿ ಸುರಕ್ಷಾ ಭೀಮಾ ಯೋಜನೆ
  • ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಭೀಮಾ ಯೋಜನೆ
  • ಅಟಲ್ ಪೆನ್‍‍ಷನ್ ಯೋಜನೆ
  • ಜೀವನ್ ಸುರಕ್ಷಾ ಬಂಧನ್ ಯೋಜನೆ
  • ಪ್ರಧಾನ ಮಂತ್ರಿ ಜನ್‍‍ಧನ್ ಯೋಜನೆ

ಪ್ರಧಾನ ಮಂತ್ರಿ ಜನ್‍‍ಧನ್ ಯೋಜನೆ : ಬದಲಾಯಿಸಿ

ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ೧೫ ಆಗಸ್ಟ್ ೨೦೧೪ ರಂದು ತಮ್ಮ ಮೊದಲ ಸ್ವಾತಂತ್ರ್ಯ ದಿನದ ಭಾಷಣದಲ್ಲಿ ಸಮಗ್ರ ಹಣಕಾಸಿನ ಸೇರ್ಪಡೆಗಾಗಿ ಈ ಯೋಜನೆಯನ್ನು ಘೋಷಿಸಿದರು. ಈ ಯೋಜನೆಯನ್ನು ಅಧಿಕೃತವಾಗಿ ೨೮ ಆಗಸ್ಟ್ ೨೦೧೪ ರಂದು ಪ್ರಾರಂಭಿಸಲಾಯಿತು. ಈ ಯೋಜನೆಯು, ಜನವರಿ ೨೬, ೨೦೧೫ ರ ಒಳಗೆ ಕನಿಷ್ಠ ೭೫ ಮಿಲಿಯನ್ ಜನರಿಗೆ ಬ್ಯಾಂಕ್ ಖಾತೆಗಳನ್ನು ಒದಗಿಸುವ ಗುರಿಯನ್ನು ಹೊಂದಿತ್ತು ಈ ಯೋಜನೆಗಯ ಪ್ರಯೋಜನಗಳು:

  • ಠೇವಣಿಯ ಮೇಲೆ ಹೆಚ್ಚಿನ ಬಡ್ಡಿಯನ್ನು ಒದಗಿಸುವುದು
  • ಅಪಘಾತದ ವಿಮೆಯಾಗಿ ರೂ. ೧೦೦೦೦೦/- ಪರಿಹಾರ ನಿಧಿಯನ್ನು ಒದಗಿಸಲಾಗುತ್ತದೆ
  • ಭಾರತದಾದ್ಯಂತ ಸುಲಭವಾಗಿ ಹಣದ ವರ್ಗಾವಣೆ ಮಾಡಲು[೨]

ಉಲ್ಲೇಖಗಳು: ಬದಲಾಯಿಸಿ

  1. https://en.wikipedia.org/wiki/Financial_inclusion
  2. https://www.pmjdy.gov.in/scheme