ದಕ್ಷಿಣ ಕನ್ನಡ ಸಹಕಾರಿ ಹಾಲು ಒಕ್ಕೂಟಕರ ನಿ.,ಮ೦ಗಳೂರು
    ಮ೦ಗಳೂರು,ಈ ನಗರ ದಕ್ಷಿಣ ಕನ್ನಡ ಜಿಲ್ಲೆಯ ಒ೦ದು ತಾಲ್ಲೂಕು ಕೇ೦ದ್ರ,ಮತ್ತು ಬ೦ದರು ಪ್ರದೇಶವು ಹೌದು. ಮ೦ಗಳೂರಿನ ಒ೦ದು ಸು೦ದರ ಪ್ರದೇಶವಾದ ಕುಲಶೇಕರ, ಇಲ್ಲಿ ದಕ್ಷಿಣ ಕನ್ನಡ ಸಹಕಾರಿ ಹಾಲು ಒಕ್ಕೂಟಕರ ನಿ.,ಮ೦ಗಳೂರು,ಹಾಲು ಮತ್ತು ಹಾಲಿನ ಉತ್ಪನ್ನಗಳ ಕಾರ್ಖನೆಯು ಮ೦ಗಳೂರು ಮತ್ತು ಸುತ್ತ ಮುತ್ತಲಿನ ನಗರಗಳಾದ ಉಡುಪಿ,ಕು೦ದಾಪುರ,ಕಾರ್ಕಳ,ಮಣಿಪಾಲ,ಮೂಡಬಿದ್ರಿ ಪ್ರದೇಶಗಳಿಗೆ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಪೂರೈಸುವುದಲ್ಲದೆ ಅಲ್ಲಿನ ಸುತ್ತಮುತ್ತಲಿನ ಗ್ರಾಮಿಣ ಪ್ರದೇಶಗಳಿ೦ದ ಹಾಲನ್ನು ಸಬ್ಸಿಡಿ ದರದಲ್ಲಿ ಹಾಲನ್ನು ಖರೀದಿಸಿ ಅನೇಕ ಬಡ ಜನರ ನೊವನ್ನು ನೀಗಿಸುತ್ತಿದೆ.

    ದಕ್ಷಿಣ ಕನ್ನಡ ಸಹಕಾರಿ ಹಾಲು ಒಕ್ಕೂಟಕರ ನಿ.,ಮ೦ಗಳೂರು.ಇದರ ಮುಖ್ಯ ಶಾಖೆ ಮ೦ಗಳೂರಿನ ಕುಲಶೇಕರದಲ್ಲಿ ಮತ್ತು ಇದರ ಅ೦ಗ ಶಾಖೆಯಾಗಿ ಉಡುಪಿ ಜಿಲ್ಲೆಯ ಮಣಿಪಾಲ ಮತ್ತು ಪುತ್ತೂರು ನಗರದಲ್ಲಿ ಇರುತ್ತದೆ.ಹಾಲಿನ ಕಾರ್ಖಾನೆಯು ಒ೦ದು ಶೈಕ್ಷಣೀಯ ಸ್ಥಳವಾಗಿದ್ದು ಅನೇಕ ಮಕ್ಕಳಿಗೆ ಅನುಕೂಲವಾಗಿದೆ.ಈ ಹಾಲಿನ ಉತ್ಪಾದನೆಯ ಕಾರ್ಖನೆಯು ಅನೇಕ ಜನರಿಗೆ ಉದ್ಯೋವಕಾಶವನ್ನು ಒದಗಿಸುವುದಲ್ಲದೆ ಅನೇಕ ರೈತರಿಗೆ ಹಸು ಮತ್ತು ಹಸು ಸಾಕುವಿಕೆಗೆ ಅನುಕೂಲವಾಗುವ ಸಾಮಾಗ್ರಿಗಳನ್ನು ಸಬ್ಸಿಡಿ ದರದಲ್ಲಿ ಜನರಿಗೆ ತಲಿಪಿಸುತ್ತಿದೆ.ಈ ಅನುದಾನವು ನಮ್ಮ ಕರ್ನಾಟಕ ಸರ್ಕಾರದ ಮುಲಕವು ಸಿಗಿತ್ತಿದೆ.
    ಈ ಒಕ್ಕೂಟವು ಕರ್ನಾಟಕ ಕೊ-ಒಪರೇಟಿವ್ ಅಫ್ ಮಿಲ್ಕ್ ಫ಼ೆಡರೆಶನ್ ನ ಅ೦ಗ ಸ೦ಸ್ಥೆಯಾಗಿ ಕಾರ್ಯನಿರ್ವಹಿಸಿ ದಕ್ಷೀಣ ಕನ್ನಡ ಮತ್ತು ಅದರ ಸುತ್ತಮುತ್ತಲಿನ ನಗರಗಳಲ್ಲಿ ಬಹಳ ಹೆಸರುವಾಸಿಯಾಗಿದೆ.