ಟೆಂಪ್ಲೇಟು:Chembox CASNoಟೆಂಪ್ಲೇಟು:Chembox EC-number Hydrocarbons, C3–C4 Identifiers Except where noted otherwise, data are given for materials in their standard state (at 25 °C, 100 kPa) Infobox references

ದ್ರವೀಕೃತ ಪೆಟ್ರೋಲಿಯಮ್‌ ಅನಿಲ(LPG , GPL , LP ಗ್ಯಾಸ್‌ , ಅಥವಾ ಆಟೋಗ್ಯಾಸ್‌ ಎಂದೂ ಕರೆಯಲಾದ) [[ಸುಲಭವಾಗಿ ಉರಿಯಬಲ್ಲ ಹೈಡ್ರೋಕಾರ್ಬನ್‌ ಅನಿಲಗಳ ಮಿಶ್ರಣ. ಈ ಅನಿಲವನ್ನು ಬಿಸಿ ಮಾಡುವ ಉಪಕರಣಗಳು ಹಾಗೂ ವಾಹನಗಳಲ್ಲಿ ಇಂಧನ ರೂಪದಲ್ಲಿ ಬಳಸಲಾಗುತ್ತಿದೆ. ಇದಲ್ಲದೆ, ಓಜೋನ್‌ ಪದರಕ್ಕೆ ಹಾನಿಯನ್ನು ಕಡಿಮೆಗೊಳಿಸುವ ಉದ್ದೇಶದಿಂದ, ಕ್ಲೋರೋಫ್ಲೋರೋಕಾರ್ಬನ್‌ಗಳ ಬದಲಿಗೆ, ವಾಯುದ್ರವ ನೋದಕ (ಏರೋಸಾಲ್ ಪ್ರೊಪೆಲ್ಲಂಟ್‌‌) ಹಾಗೂ ಶೀತಕ|ಸುಲಭವಾಗಿ ಉರಿಯಬಲ್ಲ ಹೈಡ್ರೋಕಾರ್ಬನ್‌ ಅನಿಲಗಳ ಮಿಶ್ರಣ. ಈ ಅನಿಲವನ್ನು ಬಿಸಿ ಮಾಡುವ ಉಪಕರಣಗಳು ಹಾಗೂ ವಾಹನಗಳಲ್ಲಿ ಇಂಧನ ರೂಪದಲ್ಲಿ ಬಳಸಲಾಗುತ್ತಿದೆ. ಇದಲ್ಲದೆ, ಓಜೋನ್‌ ಪದರಕ್ಕೆ ಹಾನಿಯನ್ನು ಕಡಿಮೆಗೊಳಿಸುವ ಉದ್ದೇಶದಿಂದ, ಕ್ಲೋರೋಫ್ಲೋರೋಕಾರ್ಬನ್‌ಗಳ ಬದಲಿಗೆ, ವಾಯುದ್ರವ ನೋದಕ (ಏರೋಸಾಲ್ ಪ್ರೊಪೆಲ್ಲಂಟ್‌‌) ಹಾಗೂ ಶೀತಕ]]ದ ರೂಪದಲ್ಲಿ LPGಯ ಬಳಕೆ ಹೆಚ್ಚಾಗುತ್ತಿದೆ.

ಖರೀದಿಸಲಾದ ಹಾಗೂ ಮಾರಲಾದ LPG ವೈವಿಧ್ಯಗಳಲ್ಲಿ ಮುಖ್ಯವಾಗಿ ಪ್ರೊಪೇನ್‌ ಒಳಗೊಂಡಿರುವ ಮಿಶ್ರಣಗಳು, ಮುಖ್ಯವಾಗಿ ಬ್ಯೂಟೇನ್‌ ಒಳಗೊಂಡಿರುವ ಮಿಶ್ರಣಗಳು, ಅಥವಾ, ಇನ್ನೂ ಸಾಮಾನ್ಯವಾಗಿ, ಪ್ರೊಪೇನ್‌ C3H8 (60%) ಹಾಗೂ ಬ್ಯೂಟೇನ್‌ C4H10 (40%) ಒಳಗೊಂಡಿರುವ ಮಿಶ್ರಣಗಳು ಸೇರಿವೆ. ಋತುವನ್ನು ಅವಲಂಬಿಸಿ, – ಚಳಿಗಾಲದಲ್ಲಿ ಹೆಚ್ಚು ಪ್ರೊಪೇನ್‌ ಹಾಗೂ ಬೇಸಿಗೆಯಲ್ಲಿ ಹೆಚ್ಚು ಬ್ಯೂಟೇನ್ ಇರುತ್ತದೆ.


ಈ ಮಿಶ್ರಣಗಳಲ್ಲಿ ಪ್ರೊಪಿಲೀನ್‌ ಮತ್ತು ಬ್ಯೂಟಲೀನ್‌ ಸಹ ಸಾಮಾನ್ಯವಾಗಿ ಕಡಿಮೆ ಸಾಂದ್ರತೆಯಲ್ಲಿ ಇರುತ್ತವೆ. ಇಥೇನ್‌ಧಿಯಾಲ್‌ ಎಂಬ ಪ್ರಬಲ ವಾಸನೆ ಸೂಸುವ ಅನಿಲವನ್ನು ಸಹ ಇದಕ್ಕೆ ಸೇರಿಸಲಾಗಿದೆ. ಇದರಿಂದಾಗಿ ಅನಿಲ ಸೋರುವಿಕೆಯನ್ನು ಪತ್ತೆ ಮಾಡುವುದು ಬಹಳ ಸುಲಭವಾಗುತ್ತದೆ. EN 589 ಎಂಬುದು ಅಂತಾರಾಷ್ಟ್ರೀಯ ಪ್ರಮಾಣವಾಗಿದೆ. ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿ, ಥಿಯೋಫೀನ್‌ ಅಥವಾ ಅಮೈಲ್‌ ಮರ್ಕ್ಯಾಪ್ಟನ್‌ ಸಹ ಅನುಮೋದಿತ ವಾಸನೆಯ ಅನಿಲಗಳಾಗಿವೆ.

LPG ಗ್ರಾಮಾಂತರ ಪ್ರದೇಶಗಳಲ್ಲಿ ಲಭ್ಯವಾಗಿರುವ, ಕಡಿಮೆ ಪ್ರಮಾಣದಲ್ಲಿ ಇಂಗಾಲ ಹೊರಸೂಸುವ ಹೈಡ್ರೋಕಾರ್ಬನ್‌ ಇಂಧನವಾಗಿದೆ. ಪ್ರತಿ kWhಗೆ, ಇದು ತೈಲಕ್ಕಿಂತ 19% ಕಡಿಮೆ CO2CO2 ಇದ್ದಿಲಿಗಿಂತಲೂ 30% ಹಾಗೂ ಜಾಲದ ಮೂಲಕ ವಿತರಿತವಾಗುವ ಇದ್ದಿಲು ಆಧಾರಿತ ವಿದ್ಯುತ್ತಿಗಿಂತಲೂ 50%ಕ್ಕಿಂತಲೂ ಕಡಿಮೆ ಹೊರಸೂಸುತ್ತದೆ.[ಸೂಕ್ತ ಉಲ್ಲೇಖನ ಬೇಕು]

ಪ್ರೋಪೇನ್‌ ಹಾಗೂ ಬ್ಯೂಟೇನ್‌ನ ಮಿಶ್ರಣ LPG ಅನಿಲವು, ಪ್ರತಿ ಜೌಲ್‌ಗೆ ಬ್ಯೂಟೇನ್‌ಗಿಂತಲೂ ಕಡಿಮೆ ಇಂಗಾಲ ಹಾಗೂ ಪ್ರತಿ ಜೌಲ್‌ಗೆ ಪ್ರೋಪೇನ್‌ಗಿಂತಲೂ ಹೆಚ್ಚು ಇಂಗಾಲವನ್ನು ಹೊರಸೂಸುತ್ತದೆ.