ಸದಸ್ಯ:Jaahnavi123/sandbox
ಸತ್ಯ ನಾರಾಯಣ ಸ್ವಾಮಿ ವೃತ
ಸತ್ಯ ನಾರಾಯಣ ಸ್ವಾಮಿ ವೃತವನ್ನು ಸಾಮಾನ್ಯವಾಗಿ ತಿಂಗಳ ಹುಣ್ಣಿಮೆಯ (ಕಾರ್ತೀಕ ಪೌರ್ಣಮಿ ಅಥವಾ ವೈಶಾಖ ಪೌರ್ಣಮಿ ) ದಿನದಂದು ಅಥವಾ ಪೂಜಿಸುವವರ ಇಚ್ಚೆಯ ದಿನದಂದು ಈ ವ್ರತವನ್ನು ಆಚರಿಸಲಾಗುತ್ತದೆ. ಈ ವೃತವು ಹಿಂದೂ ಧಾರ್ಮಿಕ ಅವಲೂಕನಗಲಲ್ಲಿ ಒಂದಾಗಿದೆ. ಈ ವೃತವನ್ನು ವಿಶೇಷ ಸಂದರ್ಭಗಳಲ್ಲಿ ಎಂದರೆ ಮದುವೆ, ಮುಂಜಿ, ಗೃಹಪ್ರವೇಶ್, ಹಾಗೂ ಪ್ರಮುಖ ಸಂದರ್ಭಗಳಲ್ಲಿಆಚರಿಸುವಥದ್ದು. ಈ ವೃತವು ವಿಷ್ಣುವಿಗೆ ಕೃತಜ್ಞತೆಯ ಅರ್ಪಣಾ ಭಾವದಿಂದ ಮಾಡಲಾಗುತ್ತದೆ. ಈ ಪೂಜೆಯನ್ನು ಮನಸ್ಪೂರ್ವಕವಾಗಿ ಮಾಡಿದರೆ ಮಕ್ಕಳ್ಳಿಲ್ಲದ ಮನೆಯಲ್ಲಿ ಮಕ್ಕಳಾಗುತ್ತದೆ ಎಂದು ಹೇಳಲಾಗುತ್ತದೆ. ಈ ಪೂಜೆಯನ್ನು ಸಾಯಂಕಾಲದಲ್ಲಿ ಮಾಡುವುದು ಸೂಕ್ತವೆಂದು ಹೇಳಿದ್ದಾರೆ. ಪೂಜೆಯ ದಿನ ಪೂಜೆ ಮಾಡುವವರು ಉಪವಾಸ ಇರತಕ್ಕದ್ದು. ಈ ಪೂಜೆಯನ್ನು ಮಡಿಯಿಂದ ಮಾಡಬೇಕು.
ಇತಿಹಾಸ:
ಶ್ರೀ ಸತ್ಯ ನಾರಾಯಣ ಸ್ವಾಮಿ ವೃತವನ್ನು ಭಾರತದ ಅನೇಕ ರಾಜ್ಯಗಳಲ್ಲಿ ಎಂದರೆ ಗುಜರಾತ್, ಬೆಂಗಾಲ್, ಆಂಧ್ರ ಪ್ರದೇಶ್, ಹಾಗೂ ಮಹಾರಾಷ್ಟ್ರ ಗಳಲ್ಲಿ ಆಚರಿಸಲಾಗುತ್ತದೆ. ಆದರೆ ಮಹಾರಾಷ್ಟ್ರದಲ್ಲಿ ಏಕಾದಶಿ ಮತ್ತು ಚತುರ್ಥಿಯ ದಿನದಂದು ಆಚರಿಸುವುದಿಲ್ಲ. ಈ ಪೂಜೆಯೂ ಚಿತ್ಪಾವನ ಸಮುದಾಯದವರಿಗೆ ಬಹಳ ಮಹತ್ಪೂರ್ವಕವಾದುದು. ಬಂಗಾಳದಲ್ಲಿ ಈ ಪೂಜೆಯನ್ನು ಗೃಹಪ್ರವೇಶದ ಸಮಯದಲ್ಲಿ ಮಾಡಲಾಗುತ್ತದೆ. ಆಂಧ್ರ ಪ್ರಏಶದ ಬಹುತೇಕ ಹಿಂದೂಗಳಿಗೆ ಶ್ರೀಮನ್ನಾರಾಯಣನ ಮೇಲೆ ಬಲವಾದ ನಂಬಿಕೆ, ಭಕ್ತಿಯಿದೆ. ಶ್ರೀಮನ್ನಾರಾಯಣನು ವಿಷ್ಣುವಿನ ಆರನೆ ಅವತಾರ. ಆಂಧ್ರ ಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ ಅಣ್ಣಾವರಂ ( ವಿಶಾಖಪಟ್ಟಣ್ಣಂ ಹತ್ತಿರ )ನಲ್ಲಿ ಶ್ರೀ ಸತ್ಯ ನಾರಾಯಣ ಸ್ವ್ವಾಮಿಯ ದೇವಸ್ಥನವಿದೆ. ಇದು ಬಹಳ ಪುರಾತನವಾದುದು.ಅಣ್ಣಾವರಂನಲ್ಲಿ ಈ ವೃತವು ಪ್ರತಿನಿತ್ಯವೂ ಆಚರಿಸಲಗುತ್ತದೆ. ಅನೇಕ ಭಕ್ತರು ತಮ್ಮ ಕುತುಂಬ ಸಮೇತರಾಗಿ ದೇವಸ್ಥನಕ್ಕೆ ಆಗಮಿಸಿ , ವ್ರತವನ್ನು ಆಚರಿಸಿ , ತಮ್ಮ ಬೇಡಿಕೆಗಳನ್ನು ಪೂರೈಸುಕೊಳ್ಳುತ್ತರೆ.
ಪೂಜೆ ಮಾಡುವ ವಿಧಾನ:
ಕಮಲದಲ್ಲಿ ನಿಂತಿರುವ ಶ್ರೀ ಸತ್ಯ ನಾರಾಯಣನ ಭಾವಚಿತ್ರವನ್ನು ಇಟ್ಟು ಪೂಜೆಯನ್ನು ಆಚರಿಸತಕ್ಕದ್ದು. ಮೊದಲಿಗೆ ಗಣೇಶನ ಸ್ತುತಿಯೊಂದಿಗೆ ಆರಂಭಿಸುವುದು. ಇದನ್ನು ಪೂಜೆ ಯಾವುದೆ ವಿಘ್ನವಿಲ್ಲದೆ ನಡೆಯಲಿ ಎಂದು ದೇವರಲ್ಲಿ ಪ್ರಾರ್ತಿಸುವುದು. ಇದರಲ್ಲಿ ಗಣೇಶನ ಎಲ್ಲ ಹೆಸರನ್ನು ಪಠಣ ಮಾಡುವುದು ಮತ್ತು ಗಣೇಶನಿಗೆ ಪ್ರಿಯವಾದ ತಿನಿಸುಗಳನ್ನು ಮಾದಿ ಅವನಿಗೆ ಸಮರ್ಪಿಸಿ ಸುಪ್ರೀತಗೊಳಿಸುವುದು. ಇವರಿಗೆ ಪ್ರಿಯವಾದ ತಿನಿಸುಗಳು : ಮೋದಕ, ಲಡ್ಡು . ಮತ್ತೊಂದು ಭಾಗದಲ್ಲಿ ನವಗ್ರಹಗಳ ಪೂಜೆ. ಅಂದರೆ ಒಂಭತ್ತು ಪ್ರಮುಖ ಆಕಾಶ ಜೀವಿಗಳು. ಅವುಗಲಾವುವೆಂದರೆ : ಸೂರ್ಯ , ಚಂದ್ರ, ಮಂಗಳ , ಬುಧ , ಗುರು, ಶುಕ್ರ, ಶನಿ, ರಾಹು, ಕೇತು. ನಂತರ , ಉಳಿದ ಪೂಜಾ ವಿಧಾನವು ಹೀಗಿದೆ: ಮೊದಲು ಪಂಚಾಮೃತದಿಂದ ಪೂಜಾ ಸ್ಥಳವನ್ನು ಶುದ್ದಿಗೊಳಿಸಬೇಕು. ಸರಿಯಾದ ಸ್ಥಾನದಲ್ಲಿ ದೇವರನ್ನು ಇರಿಸಿದ ಮೇಲೆ , ಸತ್ಯ ನಾರಾಯಣನ ವಿವಿಧ ನಾಮಗಳನ್ನು ಪಠಣೆ ಮಾಡುತ್ತ ಅನೇಕ ವಿಧವಾದ ಪ್ರಸಾದಗಳನ್ನು ಅರ್ಪಿಸುತ್ತರೆ. ಅವುಗಳೆಂದರೆ : ಹಾಲು, ಜೇನು ತುಪ್ಪ, , ತುಪ್ಪ, ಬೆಣ್ಣೆ , ಮೊಸರು, ಸಕ್ಕರೆ.
ಇವುಗಳನ್ನು ಅರ್ಪಿಸಿದ ಮೇಲೆ ಪೂಜೆಯ ಕಥೆಯನ್ನು ಕೇಳುವುದು. ಈ ಕಥೆಯು ಪೂಜೆಯ ಇತಿಹಾಸ, ಪೂಜಾ ವಿಧಿವಿಧಾನಗಳು, ಅದರ ಪ್ರಯೋಜನಗಳನ್ನು ತಿಳಿಸುತ್ತದೆ. ಪೂಜೆಯ ಕೊನೆಯಲ್ಲಿ ದೇವರ ಆರತಿ ಬೆಳಗುವಂತದ್ದು, ನಂತರ ಅಲ್ಲಿ ನೆರೆದಂತಹ ಭಕ್ತಾದಿಗರಿಗೆ ಆರತಿ,ಪಂಚಾಮೃತ, ಮತ್ತು ಪ್ರಸಾದವನ್ನು ಕೊಡುವುದು.ಹೀಗೆ ಮಾಡಿದಲ್ಲಿ ಅವರ ಇಷ್ಟಾರ್ಥಗಳು ಫಲಿಸುತ್ತದೆ ಎಂದು ನಂಬಲಾಗಿದೆ.ಈ ವೃತವು ಕಲಿಯುಗದಲ್ಲಿ ಅತ್ಯಂತ ಶೀಘ್ರದಲ್ಲಿ ಫಲವನ್ನು ನೀಡುತ್ತದೆ. ಈ ಪೂಜೆಯನ್ನು ಆಚರಿಸುವವರು ಅಷ್ಟೈಶ್ವರ್ಯಗಳನ್ನು ಹೂಂದುತ್ತರೆಂದು ಹೇಳಲಾಗಿದೆ.
ಪ್ರಸಾದ:
ಅನೇಕ ವಿಧವಾದ ಪ್ರಸಾದಗಳನ್ನು ಅರ್ಪಿಸುತ್ತರೆ. ಅವುಗಳೆಂದರೆ : ಹಾಲು, ಜೇನು ತುಪ್ಪ, , ತುಪ್ಪ, ಬೆಣ್ಣೆ , ಮೊಸರು, ಸಕ್ಕರೆ. ಸಿರ್ನಿ- ಒಂದು ವಿಧವಾದ ಪ್ರಸಾದ. ಇದರಲ್ಲಿ ಹಾಲು, ಸಕ್ಕರೆ, ಬಾಳೆಹಣ್ಣು, ದಾಲ್ಚಿನ್ನಿ , ಕಡಲೆಕಾಯಿ, ಗೋಡಂಬಿ, ಚೆರ್ರಿಗಳು, ಪುಡಿಮಾಡಿದ ತೆಂಗಿನಕಾಯಿ, ಹಣ್ಣುಗಳು, ಇವುಗಳನ್ನು ಪ್ರಸಾದವಾಗಿ ಹಂಚುತ್ತಾರೆ. ಪಂಚಾಮೃತಕ್ಕೆ ಹಾಲು, ಮೊಸರು, ಜೇನು, ಸಕ್ಕರೆ, ತುಪ್ಪ ಮಿಶ್ರಣ, ಆರತಿಗೆ ಒಂದು ತಟ್ಟೆಯಲ್ಲಿ ನೀರು, ಅರಿಶಿಣ, ಕುಂಕುಮ, ಅಕ್ಷತೆ, ಇವುಗಳನ್ನು ಹಾಕಿ ಬೆಳಗುವಂತದ್ದು.
ಸತ್ಯ ನಾರಾಯಣ ಸ್ವಾಮಿಯ ಕಥೆ:
ಶ್ರೀ ಸತ್ಯ ನಾರಾಯಣ ಸ್ವಾಮಿಯ ಕಥೆಯು ಸ್ಕಂದ ಕಾಂಡದ ರೇವಾ ಸಂಪುಟದಲ್ಲಿದೆ ಎಂದು ಹೇಳಲಾಗಿದೆ. ಆದರೆ ಈ ಕಾಂಡವು ರೇವಾ ನದಿಯ ಕಣಿವೆಯ ಮೇಲಿರುವ ಯಾತ್ರೆಗೆ ಸೇರುವಂತದ್ದೆಂದು ಅಂಗೀಕರಿಸಲಾಗಿದೆ. ಆದರೆ ಮೂಲ ಸ್ಕಂದ ಪುರಾಣದಲ್ಲಿ ಸತ್ಯ ನಾರಾಯಣ ಎಂದು ಹೇಳಿಲ್ಲ. ಸುತ ಮಹರ್ಷಿಯು ಈ ಕಥೆಯನ್ನು ಹೇಳಿದ್ದರೆ. ನೈಮಿಶಾರಣ್ಯದಲ್ಲಿ ಋಷಿ-ಮುನಿಗಳು ೧೦೦೦ ವರ್ಷ ಯಜ್ಞವನ್ನು ಮನುಷ್ಯ ಕುಲಕ್ಕೆ ಒಳ್ಳೆಯದಾಗಲಿ ಎಂದು ಶೌನಕ್ಜೀ ಯವರ ಪ್ರಾಮುಖ್ಯದಲ್ಲಿ ನಡೆಸಲಾಯಿತು. ಈ ಕಥೆಯಲ್ಲಿ ತಮ್ಮ ಮಾತನ್ನು ಉಳಿಸಿಕೊಳ್ಳಲಾಗದೆ ಪೂಜೆಯ ಭಾಗವಹಿಸಲಾಗದವರು ಅನೇಕ ರೀತಿಯ ಕಷ್ಟ - ನಷ್ಟಗಳನ್ನು ಅನುಭವಿಸಿದರೆಂದು ಹೇಳಲಾಗುತ್ತದೆ. ಆದ್ದರಿಂದ ಕೊಟ್ಟ ಮಾತಿಗೆ ತಪ್ಪಬಾರದೆನ್ನುವರು. ಹ್ಹಗೆ ಮಾಡಿದಲ್ಲಿ ದೇವರ ಶಾಪಕ್ಕೆ ಗುರಿಯಾಗುವವರೆಂದು ನಂಬಲಾಗಿದೆ. ಹಾಗೆ, ದೇವರ ಪ್ರಸಾದವನ್ನು ಬೇಡ ಎನ್ನಬಾರದು. ಒಂದುವೇಳೆ ಪ್ರಸಾದವನ್ನು ತಿರಸ್ಕರಿಸಿದಲ್ಲಿ ದೇವರ ಶಿಕ್ಷೆಗೆ ಪಾತ್ರರಾಗಬೇಕಾಗುತ್ತದೆ. ದೇವರ ಹೆಸರಿನಲ್ಲಿ ಹಣ, ಬಂಗಾರ, ಒಡವೆ, ಇತ್ಯಾದಿ ಅಮೂಲ್ಯವಾದ ವಸ್ತುಗಳನ್ನು ದೋಚಿದಲ್ಲಿ, ದೋಚಿದಕ್ಕಿಂತ ಎರಡು ಪಟ್ಟು ಕಳೆದುಕೊಳ್ಳುವರೆಂದು ಹೇಳಿದ್ದಾರೆ.
ಶ್ರೀ ಸತ್ಯ ನಾರಾಯಣ ಸ್ವಾಮಿಯ ದೇವಾಲಾಯಗಳು:
- ಅಣ್ಣವರಂ , ಆಂಧ್ರ ಪ್ರದೇಶ್
- ಚೆನ್ನೈ
- ಚಾಮರಾಜಪೇಟೆ , ಬೆಂಗಳೂರು, ಕರ್ನಾಟಕ
- ಮಲ್ಲೇಶ್ವರಮ್, ಬೆಂಗಳೂರು, ಕರ್ನಾಟಕ
- ಕೃಷ್ಣಾನಗರ, ಅಹಮದಾಬಾದ್ ,
- ದರಿಯಾಪುರ್, ಅಹಮದಾಬಾದ್
- ಪೋರ್ಬಂದರ್
- ದೆಹಲಿ
- ರಾಮನಗರ, ಜೈಪುರ
- ಅಜ್ಮೀರ
- ಕಪುರ್ತಲಾ , ಪಂಜಾಬ್
- ಚಂಡೀಘಡ್
- ಪುಣೆ
- ಮುಂಬೈ
LINK: