ಸದಸ್ಯ:Hudson151113/sandbox
ಸರ್ವಪಳ್ಳಿ ರಾಧಾಕೃಷ್ಣನ್
ಸೆಪ್ಟೆಂಬರ್ 5 ಬಂದರೆ ಮಾಜಿ ರಾಷ್ಟ್ರಪತಿ, ಶಿಕ್ಷಣತಜ್ಞ ಸರ್ವಪಳ್ಳಿ ರಾಧಾಕೃಷ್ಣನ್ ಅವರ ಜನ್ಮದಿನವನ್ನು ಶಿಕ್ಷಕರ ದಿನಾಚರಣೆಯನ್ನಾಗಿ ಆಚರಿಸುತ್ತೇವಷ್ಟೇ. ಎಷ್ಟೋ ಸಂವತ್ಸರಗಳು ಉರುಳಿದರೂ ಇಂದಿಗೂ ಕೂಡ ಆದರ್ಶ ಶಿಕ್ಷಕ ಎಂದರೆ ರಾಧಾಕೃಷ್ಣನ್ ಅವರ ಹೆಸರು ಅಥವಾ ದಶಕಗಳ ಹಿಂದಿನ ಧೋತಿ ಉಟ್ಟಕೊಂಡು ಬರುತ್ತಿದ್ದ ಮೇಷ್ಟ್ರುಗಳ ಹೆಸರು ನೆನಪಿಗೆ ಬರುತ್ತವೆಯೇ ಹೊರತು ಇಂದಿನ ಕಾಲದ ಶಿಕ್ಷಕರು ನೆನಪಿಗೆ ಏಕೆ ಬರುತ್ತಿಲ್ಲ? ಶಿಕ್ಷಕರ ಜೀವನವಿಧಾನ, ಪಾಠ ಮಾಡುವ ಧರತಿ ಎಲ್ಲ ಬದಲಾಗಿರಬಹುದು, ಆದರೆ ಇಡೀ ನಾಡೇ ತಲೆಯೆತ್ತಿ ನೋಡುವಂಥ ಮೇಷ್ಟ್ರುಗಳೇಕೆ ಹುಟ್ಟುತ್ತಿಲ್ಲ?
ಗುರು ಪರಂಪರೆಯ ನಮ್ಮ ದೇಶದಲ್ಲಿ ಗುರುಗಳು ಯಾವಾಗಲೂ ಇತರರಿಗೆ ಆದರ್ಶವಾಗಿರಬೇಕು ಎಂದು ಸಮಾಜ ಬಯಸುತ್ತದೆ. ಇಪ್ಪತ್ತು ವರ್ಷದ ಹಿಂದೆ ಗುರುವಿಗೆ ಅದೇ ರೀತಿಯ ಮಹತ್ವ ಇತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಗುರುವಿನ ಬಗ್ಗೆ ಮೊದಲಿದ್ದಷ್ಟು ಗೌರವ ಸಮಾಜಕ್ಕೆ ಇಲ್ಲ ಮತ್ತು ಅದು ಕಡಿಮೆಯಾಗುತ್ತಾ ಇದೆ. ಇದು ನಿಜಕ್ಕೂ ದುರದೃಷ್ಟಕರ. ಸಮಾಜ ಸಹಾ ಹಿಂದೆ ಇದ್ದ ಗುರುವಿನಂತೆ ಈಗಿನ ಶಿಕ್ಷಕರು ಇರಬೇಕೆಂದು ಅಪೇಕ್ಷೆ ಮಾಡುವುದು ಸೂಕ್ತವಲ್ಲ. ಎಲ್ಲಾ ಕ್ಷೇತ್ರಗಳಲ್ಲಿಯೂ ಅಮೂಲಾಗ್ರ ಬದಲಾವಣೆ ಆಗುತ್ತಿದೆ ಅದರಂತೆ ಶಿಕ್ಷಣ ಕ್ಷೇತ್ರವೂ ಬದಲಾಗುತ್ತಾ ಇದೆ. ಅದಕ್ಕೆ ತಕ್ಕಂತೆ ಗುರುವಿನ ಕಾರ್ಯನಿರ್ವಹಣೆ ಕೂಡ ಬದಲಾಗಿದೆ. ಹಿಂದಿನ ಗುರುಗಳು ವಿದ್ಯಾರ್ಥಿಗಳಿಗೆ ಮಾತ್ರವಲ್ಲ ಇಡೀ ಸಮಾಜಕ್ಕೆ ಮಾದರಿಯಾಗಿರುತ್ತಿದ್ದರು. ಆದರೆ ಇಂದಿನ ಕೆಲವು ಗುರುವನ್ನು ಮಾದರಿಯಾಗಿರಿಸಿಕೊಂಡರೆ ಅದಕ್ಕಿಂತ ದುರಂತ ಇನ್ನೊಂದಿರಲಿಕ್ಕಿಲ್ಲ. ಶಿಕ್ಷಕ ದಿನಾಚರಣೆಯ ಈ ಸಂದರ್ಭದಲ್ಲಿ ಸಮುದಾಯ ಶಿಕ್ಷಕವರ್ಗದಿಂದ ನಿರೀಕ್ಷಿಸುವ ಅಂಶಗಳು, ಶಿಕ್ಷಕರು ಇರುವ ರೀತಿ ಈ ಬಗ್ಗೆ ಅವಲೋಕಿಸ ಬೇಕಾದ ಅಗತ್ಯವಿದೆ. ಮಕ್ಕಳಿಗೆ ಉತ್ತಮ ನೀತಿಯನ್ನು ತಿಳಿಸಬೇಕಾದ ಎಲ್ಲರೂ ಮೊದಲು ತಾವು ವಯ್ಯಕ್ತಿಕವಾಗಿ ನೈತಿಕವಾಗಿರಬೇಕು. ಅದು ಹಿಂದಿನ ಶಿಕ್ಷಕರಲ್ಲಿ ಇತ್ತು ಅವರಿಗೆ ಸಮಾಜದ ಬಗ್ಗೆ ಗೌರವ ಇತ್ತು. ಇಂದು ಶಿಕ್ಷಕ ಹುದ್ದೆ ಕೊಡುಕೊಳ್ಳುವ ವ್ಯವಹಾರಕ್ಕೆ ಸೀಮಿತವಾಗಿದೆ. ಶಿಕ್ಷಕರ ವೈಯಕ್ತಿಕ ಜೀವನ ತೆರೆದ ಪುಸ್ತಕದಂತೆ ಇರಬೇಕು. ಅದು ಉಳಿದಿವರಿಗೆ ಮಾದರಿಯಾಗಬೇಕು. ಇಂದಿನ ಶಿಕ್ಷಕರು ಹೇಳುವುದೇನು ಗೊತ್ತೆ? ಶಾಲಾ ಅವಧಿಯಲ್ಲಿ ನಾನು ಸರಿಯಾಗಿ ಕಾರ್ಯನಿರ್ವಹಿಸುತ್ತಿರುವೆ, ಉಳಿದ ಅವಧಿ ಅದು ನನ್ನ ವೈಯಕ್ತಿಕ. ಅದನ್ನು ಪ್ರಶ್ನಿಸುವುದಕ್ಕೆ ನೀವ್ಯಾರು ಅನ್ನುತ್ತಾರೆ! ಸಾರ್ವಜನಿಕ ವ್ಯಕ್ತಿ ಯಾರೇ ಆದರೂ ಅವರು ಮೊದಲು ವೈಯಕ್ತಿಕವಾಗಿ ನೈತಿಕರಾಗಿರಬೇಕಾದ ಅಗತ್ಯವಿದೆ. ಕಾರ್ಯನಿರ್ವಹಿಸುವ ವೇಳೆಗೆ ಮಾತ್ರ ನಾವು ಬದ್ದರಾದರೆ ಅದು ಒಂದು ವ್ಯವಹಾರವೇ ವಿನಾ ಸೇವೆಯಲ್ಲ ಎಂಬುದನ್ನು ಅರ್ಥಮಾಡಿಕೊಳ್ಳುವ ಅಗತ್ಯವಿದೆ. ಈ ರೀತಿಯ ಬದಲಾವಣೆಗಳು ಆಗುತ್ತಾ ಇದ್ದರೂ ನಮ್ಮ ದೇಶದಲ್ಲಿ ಇನ್ನೂ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರು ಇದ್ದಾರೆ ಎಂಬುದು ಸಮಾಧಾನದ ಸಂಗತಿ. ಸಂಪೂರ್ಣ ಶಿಕ್ಷಣ ವ್ಯವಸ್ಥೆಯೇ ವ್ಯವಹಾರಿಕವಾಗಿ ಕಾರ್ಯನಿರ್ವಹಿಸುತ್ತಿರುವಾಗ, ಶಿಕ್ಷಕರು ಯಾರು ಉತ್ತಮರು ಎಂದು ಹಿಂದಿನ ಗುರುಗಳಿಗೆ ಹೋಲಿಸಿ ಹೇಳುವುದಕ್ಕಿಂತ ಸದ್ಯದಲ್ಲಿ ಕೆಲವು ಶಿಕ್ಷಕರಲ್ಲಿ ಕಂಡು ಬರುತ್ತಿರುವ ಗುಣ ಮತ್ತು ವರ್ತನೆಗಳನ್ನು ಈ ಕೆಳಗೆ ನೀಡಲಾಗಿದೆ. ಯಾರು ಆದರ್ಶ ಉತ್ತಮ ಶಿಕ್ಷಕರು ಎಂಬುದನ್ನು ಅವರವರ ವಿವೇಚನೆಗೆ ಬಿಡಲಾಗಿದೆ.