ಸದಸ್ಯ:Honakerappasanshi/ನನ್ನ ಪ್ರಯೋಗಪುಟ/01
ಶರಣಪ್ಪ ಬೇವಿನಕಟ್ಟೆ
ಬದಲಾಯಿಸಿಸಾಹಿತ್ಯ ಕ್ಷೇತ್ರ ಎನ್ನುವುದು ಸೃಜನಾತ್ಮಕ ಕಾರ್ಯಕ್ಕೆ ಹೆಸರಾದ ಕ್ಷೇತ್ರ, ಆಸಕ್ತಿಇರುವವರು ಯಾರು ಬೇಕಾದರೂ ಈ ವಲಯದಲ್ಲಿ ಯಶಸ್ವಿಯ, ಮತ್ತು ಹೆಸರನ್ನು ಪಡೆದುಕೊಂಡವರಿದ್ದಾರೆ. ಈ ಕ್ಷೇತ್ರದಿಂದ ಜ್ಞಾನ ಹಂಚುವ ಕೆಲಸ ಹಾಗೂ ಸಾಹಿತ್ಯವನ್ನು ಶ್ರೀಮಂತಗೊಳಿಸುವುದಕ್ಕೆ ಇಲ್ಲಿ ಅವಶಕಾಶ ಹೇಳಳವಾಗಿ ಇದೆ. ಶ್ರದ್ಧೆ, ಶ್ರಮ, ವಿಭಿನ್ನವಾಗಿ ಚಿತಿಂಸುವವರಿಗೆ ಇಲ್ಲಿ ಅವಕಾಶ ಹೆಚ್ಚು ಸಿಗುತ್ತವೆ. ಇದೆ ಹಾದಿಯಲ್ಲಿ ಸಾಗಿದವರು ಶರಣಪ್ಪ ಬೆವಿನಕಟ್ಟೆ. ವೃತ್ತಿಯಲ್ಲಿ ಕೃಷಿಕ, ಇದರೊಂದಿಗೆ ಚಿಕ್ಕ ದಿನಸಿ ಅಂಗಡಿ ನಡೆಸುತಿದ್ದಾರೆ. ಬದುಕಿನ ಬಂಡಿ ಸಾಗಲು ವ್ಯಾಪಾರ ಅವಲಂಬಿಸಿದರೆ. ತಮ್ಮ ಭಾವನೆಗಳನ್ನು ಇತರರಿಗೆ ಹಂಚಲು ಸಾಹಿತ್ಯ ಕ್ಷೇತ್ರವನ್ನುಆಯ್ಕೆ ಮಾಡಿ ತಮ್ಮ ಸಾಹಿತ್ಯ ಕೃಷಿ ಆರಂಭಿಸಿದ್ದಾರೆ. ಶರಣಪ್ಪ ಬೇವಿನಕಟ್ಟೆ೧೯೮೦ ರಲ್ಲಿ, ಗದಗ ಜೀಲ್ಲೆ ಗಜೇಂದ್ರಗಢ ತಾಲೂಕಿನಲ್ಲಿ, ಕಳಕಪ್ಪ,ಈರಮ್ಮ ದಂಪತಿ ಪುತ್ರನಾಗಿ ಜನಿಸಿದರು. ಪ್ರಾಥಮಿಕ, ಪ್ರೌಢ ಶಿಕ್ಷಣ ತಮ್ಮೂರಲ್ಲಿಯೆ ಮುಗಿಸಿದರು. ಇವರು ಕಲಾ ವಿಭಾಗದಲ್ಲಿ ಬಿ.ಎ ಪದವಿ ಪಡೆದು ತಮ್ಮ ವೃತ್ತಿಯ ಜೋತೆ ಪ್ರವೃತ್ತಿನ್ನಾಗಿ ಸಾಹಿತ್ಯ ಕ್ಷೇತ್ರ ಆಯ್ಕೆ ಮಾಡಿದ್ದಾರೆ.ಇವರು ಕವನಗಳ ಮೂಲಕವೆ ಕನ್ನಡ ಸಾಹಿತ್ಯಕ್ಕೆ ಪಾದಾರ್ಪಣೆ ಮಾಡಿದವರು.ಅದಕ್ಕೆ ಸಾಕ್ಷಿ ಅವಳೆದೆಯ ಮಾತುಗಳು ಎಂಬ ಅಡಿಬರಹದಲ್ಲಿ ‘ನಮ್ಮವ್ವ’ ಕವನ ಸಂಕಲನ. ಚೇತನ ಪ್ರಕಾಶನ ಹೊತ ತಂದಿದೆ.ಹೆಣ್ಣನ್ನು, ಮಗಳಾಗಿ, ತಾಯಿಯಾಗಿ, ಸಹೋದರಿಯನ್ನಾಗಿ, ಅವಳ ಕೌಟುಂಬಿಕ ಸಂಬAದಗಳ ಭಾವನಾತ್ಮಕ ಭಾವನೆಗಳನ್ನು ಈ ಕವನ ಸಂಕಲನದಲ್ಲಿ ವ್ಯಕ್ತಪಡಿಸಲಾಗಿದೆ. ಶಾಲೆಗೆ ಹೋಗು ಪುಸ್ತಕದ ಚೀಲನ ಹೋರಲಾರದಂತಹ ಎಸಳು ಹೆಗಲುಗಳು ಕೇಳು ನನ್ನವ್ವ ಸಂಸಾರ ಎನ್ನುವ ಭಾರನ ಹೊರಸಿ ಕೈ ಬಿಟ್ಟಾರಲ್ಲ ನನ್ನವ್ವ ಗಝಲ್ ಸಾಹಿತ್ಯ ಪ್ರಕಾರಕ್ಕೆ ಮೀಸಲಾದ ‘ಸಾಕಿ’ ಎಂಬ ಪದವನ್ನು ವಿಭೀನ್ನ ಪ್ರಕಾರಗಳಲ್ಲಿ ಬಳಸಿಕೊಂಡು ಯಶಸ್ವಿ ಹಾದಿಯನ್ನು ತುಳಿದವರು. ಸಾಕಿಯನ್ನು ಬಳಸಿಕೊಂಡು ಸಾವಿರಕ್ಕೂ ಹೆಚ್ಚು ಶಾಹರಿಗಳನ್ನು ತಮ್ಮದೆ ಆದ ವಿಶಿಷ್ಟ ಶೈಲಿಯಲ್ಲಿ ರಚಿಸಿದ್ದಾರೆ. ಕವನ ಸಂಕಲನದಲ್ಲಿಯ ಸೃಜನಶೀಲತೆ, ಸಾಹಿತ್ಯದ ಸಾಧನೆಯನ್ನು ಗಮನಿಸಿ, ೨೦೧೮ನೇ ಸಾಲಿನ ಬೆಂಗಳೂರು ಪುಸ್ತಕ ಹಬ್ಬ ಕಾರ್ಯಕ್ರಮದಲ್ಲಿ ಸಾಕಿಯ ನವಾಬ ಬಿರುದಾಂಖಿತ ಶಾಹಿರಿ ಸರ್ದಾರ ಪ್ರಶಸ್ತಿಯನ್ನು ಚೇತನ ಪ್ರಕಾಶನ ಸಂಸ್ಥೆ ನೀಡಿ ಗೌರವಿಸಲಾಗಿದೆ. ೧೨೦೦ ಶಾಹರಿಗಳನ್ನು ಹೊಸ ಶೈಲಿಯಲ್ಲಿ ಶಾಹರಿ ರಚನೆ ಮಾಡಿದ್ದಾರೆ. ಕತ್ತಲೊಳಗಿನ ನೆನಪಿನೆದುರುಗಳಲ್ಲಿ ಬೆತ್ತಲಾಗುವುದಕ್ಕೆ ಇನ್ನೇನು ಉಳಿದಿದೆ ರಂಗಿ ಮದು ದಾಸನಿಗೆ ಈಗ ಜಗದ ನೈತಿಕತೆಯ ಪಾಠದ ಅವಶ್ಯಕಥೆ ಇದೆಯೆ.! ಖಜಲ್, ಪಾಗಲ್,ತಮ್ಮ ತಿಮ್ಮ, ಪದ ಬಳಕೆಯ ಮೂಲಕ ಕವನಗಳನ್ನು ರಚಿಸಿದ್ದಾರೆ.
ನಿರ್ಣಯ ಕಾದಂಬರಿ
ಬದಲಾಯಿಸಿಸಮಾಜದಲ್ಲಿ ಬಡತನದ ಭಾವನೆಗಳನ್ನು, ಸಮಸ್ಯೆಗಳನ್ನು ತಮ್ಮ ಕಾದಂಬರಿಗಳಲ್ಲಿ ಚಿಂತನಾಶೀಲತೆ, ಬದುಕಿನ ಸಂವೇದನ ಶೀಲ ಗುಣಧರ್ಮ ಜೊತೆ ಸತ್ಯದ ಹುಡುಕಾಟ ಹಾದಿಯಲ್ಲಿ ನೊಂದವರ ಬದುಕಿನ ದೌರ್ಬಲ್ಯ, ಅದರ ಪರಿಣಾಮಗಳ ಘೋರತೆಯನ್ನು ತಮ್ಮ ಕಾದಂಬರಿಯ ವಸ್ತುವನ್ನಾಗಿ ಬಳಸಿದ್ದಾರೆ.ಅಖಿಲ್, ರಮೇಶ ಎರಡು ಕಥಾನಾಯಕರ ನಡುವೆಯ ಜೀವನ ವ್ಯವಸ್ಥೆಯನ್ನೆ, ಗ್ರಾಮೀಣ ಭಾಗಕ್ಕೆ ಹೊಂದುವAತೆ ನಿರ್ಣಯ ಕಾದಂಬರಿಯಲ್ಲಿ ಕಟ್ಟಿಕೊಟ್ಟಿದ್ದಾರೆ. ಈ ಕಾದಂಬರಿಯನ್ನು ಪ್ರಕಟಿಸಿ ಬಂದ ಹಣವನ್ನು ಇವರು ವಿಶೇಷ ಚೆತನವುಳ್ಳ (ಅಂಗವಿಕಲ) ಮಗುವಿಗೆ ಸಹಾಯ ಮಾಡಿದ್ದಾರೆ. ನೈತಿಕತೆ ಸಾಹಿತ್ಯದಿಂದ ಸಮಾಜಕ್ಕೆ ಉಡುಗೂರೆಯನ್ನಾಗಿ ನೀಡುವಲ್ಲಿ ಮೊದಲ ಹೆಜ್ಜೆಯನ್ನು ಇರಿಸಿದ್ದಾರೆ. ಈ ನಿರ್ಣಯ ಕಾದಂಬರಿ ಇನ್ನೊಬ್ಬರ ಜೀವನನಿರ್ಣಸುವ ಕೆಲಸ ಮಾಡಿದ್ದು, ಸಮಾಜಕ್ಕೆ ಇದೊಂದು ಮಾರ್ಗದರ್ಶ ಮಾಡಬಲ್ಲದು. ಕಾದಂಬರಿ ಉತ್ತರ ಕರ್ನಾಟಕದ ಕನ್ನಡದ ಕಥಾ ವಸ್ತುವೊಂದನ್ನು ಹೊಂದ್ದಿದ್ದು. ಸಮಯ ಹಾಗೂ ಸನ್ನಿವೇಶಗಳನ್ನು ಸಂದರ್ಭಕ್ಕೆ ತಕ್ಕಂತೆ ಬಳಸಿ ಸಾಹಿತ್ಯಾಸಕ್ತರನ್ನು ಓದಿಸಿಕೊಂಡು ಹೋಗುವಂತೆ ಕಾದಂಬರಿಯನ್ನು ಇಲ್ಲಿ ರಚಿಸಲಾಗಿದೆ. ಇವರು ಪದವಿ ಪೂರ್ವ, ಮತ್ತು ಪದವಿಯ ಶಿಕ್ಷಣದ ಸಮಯದಲ್ಲಿ ಕವನಗಳನ್ನು ಓದುವುದು, ಬರೆಯುವ ಹವ್ಯಾಸವನ್ನು ರೂಡಿಸಿಕೊಂಡಿದ್ದರ ಪರಿಣಾಮವಾಗಿ ಸಾಹಿತ್ಯಕೃಷಿ ಆಸಕ್ತಿ ಮುಂದುವರೆಯಿತು. ಎನ್ನುವುದು ಅವರ ಮನದ ಮಾತು.
ಸಾಹಿತ್ಯ ಸೇವೆ
ಬದಲಾಯಿಸಿಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕ ರೋಣ ಮತ್ತು ಗಜೇಂದ್ರಗಢ ಹೋಬಳಿ ಘಟಕ, ಸಹಯೊಗದಲ್ಲಿ ಸಾಹಿತ್ಯಗೊಷ್ಠಿಯನ್ನು ಪ್ರತಿ ಶನಿವಾರ ಸಾಯಂಕಾಲ ನಡೆಸಲಾಗುತ್ತದೆ. ತಾಲೂಕು ಕ. ಸಾ.ಪ. ಐ.ಎ.ರೇವಡಿ ಅಧ್ಯಕ್ಷತೆಯಲ್ಲಿ ಮಾಡಲಾಗುತ್ತದೆ. (ಜುಲೈ ೨೭ ೨೦೧೯ ನೇ ಶನಿವಾರ)ಈ ಸಾಹಿತ್ಯಗೊಷ್ಠಿಯ೧೫೦ನೇ ಸಂಭ್ರಮಾಚರಣೆಯನ್ನು ಮಾಡಲಾಗಿದೆ. ಪ್ರತಿವಾರ ಕಾರ್ಯಕ್ರಮವನ್ನು ಮಾಡುವುದರ ಮೂಲಕವಾಗಿ ಕನ್ನಡವನ್ನು ಉಳಿಸಿ ಬೆಳೆಸುವ ಪ್ರಯತ್ನವನ್ನು ಇವರ ತಂಡ ಮಾಡುತ್ತಿದೆ. ಪ್ರಶಸ್ತಿಗಳು: ಸಾಕಿಯ ನವಾಬ ಬಿರುದಾಂಕಿತ ಶಾಹಿರಿ ಸರ್ದಾರ್ ಪ್ರಶಸ್ತಿ ೨೦೧೯. ಸಾವಿರ ಕವಗಳ ಸರ್ದಾರ, ಹನುಮಾ ಸಾಂಸ್ಕೃತಿಕ ವೇದಿಕೆ(ರಿ) ಜಹಗೀರಗೂಡದೂರು ಹೆಜ್ಜೆಗಳು ನಾಟಕೊತ್ಸವ ಕಾರ್ಯಕ್ರಮದಲ್ಲಿ ‘ನಮ್ಮವ’್ವ ಎಂಬ ಗ್ರಾಮ್ಯ ಸಾಹಿತ್ಯ ಸೆವೆಯಯನ್ನು ಗುರುತಿಸಿ‘ಭೂಮಿಯ ತಾಯಿಯ ಚೊಚ್ಚಲ ಮಗ’ ಎಂಬ ಬಿರುದು ಸಹ ಇವರ ಪಾಲಿಗೆ ಬಂದಿದೆ.