ಬಝರ್ಡ್

ಬದಲಾಯಿಸಿ

ಇದು ಒಂದು ಬಗೆಯ ಹದ್ದು ವರ್ಗ:ಬ್ಯೂಟಿಯೋನಿಡೀ ಕುಟುಂಬಕ್ಕೆ ಶಾಸ್ತ್ರೀಯ ಹೆಸರು:ಬಸ್ಟಾಟರ್ ಟೀಸ ದೇಹದ ಬಣ್ಣ ಕಂದು,ಕತ್ತಿನ ಬಾಗದಲ್ಲಿ ಬಿಳಿಬಣ್ಣ,ಗಲ್ಲದ ಮೇಲೆ ಎರಡು ಕಪ್ಪು ಪಟ್ಟಿಗಳು.ಹೀಗೆ ಇದರ ಕಂದು-ಬಿಳಿ-ಕಪ್ಪು ಮಿಶ್ರಣದಿಂದ ಈ ಹದ್ದನ್ನು ಸುಲಭವಾಗಿ ಗುರುತಿಸಬಹುದು.ಇದು ದಕ್ಷಿಣ ಭಾರತದಲ್ಲಿ ಅಪರೂಪ,ಉತ್ತರ ಭಾರತ ಹಾಗೂ ಹಿಮಾಲಯ ಪರ್ವತದ ತಪ್ಪಲಿನಲ್ಲಿ ವಿಶೇಷವಾಗಿ ಕಂಡುಬರುತ್ತದೆ.ಹೆಚ್ಚು ಸಾಂದ್ರತೆ ಇಲ್ಲದ ಕಾಡುಗಳಲ್ಲಿ ಮತ್ತು ಮೈದಾನಪ್ರದೇಶಗಳಲ್ಲಿಯೂ ಇದನ್ನು ಕಾಣಬಹುದು.

ದೊಡ್ಡ ಕೀಟ,ಓತಿಕ್ಯಾತ,ಇಲಿ ಮುಂತಾದವು

ಗೂಡು ಕಟ್ಟುವ ವಿಧಾನ

ಬದಲಾಯಿಸಿ

ಗಂಡುಹೆಣ್ಣು ಎರಡೂ ಸಹಕರಿಸಿ ಗೂಡು ಕಟ್ಟುತ್ತವೆ,ಫೆಬ್ರುವರಿ-ಮೇ ಅವಧಿಯಲ್ಲಿ ಗೂಡುಗಳನ್ನು ಕಟ್ಟುತ್ತವೆ,ಗೂಡು ಕಾಗೆ ಗೂಡಿನಂತೆ ಕಡ್ದಿಗಳಿಂದ ರಚಿಸಲ್ಪಟ್ಟಿರುತ್ತದೆ. ಇದರೊಳಗೆ ಹೆಣ್ಣು ಬಝುರ್ಡ್ ಹಸುರು-ಬಿಳಿ ಬಣ್ಣದ ಮೊಟ್ಟೆ ಇಡುತ್ತದೆ ಮತ್ತು ಹೆಣ್ಣು ಬಝುರ್ಡ್ ಮಾತ್ರ ಮೊಟ್ಟೆಗಳಿಗೆ ಕಾವು ಕೊಡುತ್ತದೆ,ತಂದೆ ತಾಯಿ ಎರಡೂ ಮರಿಗಳಿಗೆ ಆಹಾರ ಉಣಿಸಿ ಪೋಷಿಸುತ್ತವೆ.