ಸದಸ್ಯ:Harshitha Sarathi/sandbox
ಇವರು ಕ್ರೈಸ್ಟ್ ವಿಶ್ವವಿದ್ಯಾಲಯದ ವಿಕಿಪೀಡಿಯ ಶಿಕ್ಷಣ ಯೋಜನೆಯ ಸದಸ್ಯರಾಗಿದ್ದಾರೆ |
ಈ ಪುಟವನ್ನು ಇನ್ನೂ ಸೃಷ್ಟಿಸಲಾಗುತ್ತಿದೆ ಈ ಹೊಸ ವಿಕಿಪೀಡಿಯ ಪುಟವನ್ನು ಕ್ರೈಸ್ಟ್ ವಿಶ್ವವಿದ್ಯಾಲಯ ವಿಕಿಪೀಡಿಯ ಶಿಕ್ಷಣ ಯೋಜನೆಯ ಅಂಗವಾಗಿ ಅಭಿವೃದ್ದಿ ಪಡಿಸಲಾಗುತ್ತಿದೆ.ಸ್ವಲ್ಪ ಸಮಯದವರೆಗೆ ಈ ಪುಟವನ್ನು ಅವಶ್ಯಕತೆ ಇಲ್ಲದೆ ಸಂಪಾದಿಸದಂತೆ, ಅಥವಾ ಅಳಿಸುವಿಕೆಗೆ ಹಾಕದಂತೆ ಲೇಖನದ ಸಂಪಾದನೆಯ ಸಮಯದಲ್ಲಿ ಸಂಪಾದಕರು ಕೇಳಿಕೊಳ್ಳುತ್ತಾರೆ. |
ಸಿಂಹನಾದಂಗೆಯ್ದಂ ಎಂಬ ಕಾವ್ಯವನ್ನು ರನ್ನ ಮಹಾಕವಿ ರಚಿಸಿರುವ ಗದಾಯುದ್ಧ ಎಂಬ ಚಂಪೂಕಾವ್ಯದಿಂದ ಸಂಗ್ರಹಿಸಲಾಗಿದೆ. ದುರ್ಯೋಧನನು ಪಾಂಡವರೊಡನೆ ಸತತವಾಗಿ ಯುದ್ಧ ಮಾಡಿ ಸಮಸ್ತ ಸೈನ್ಯ, ಬಂಧುಮಿತ್ರರನ್ನು ಕಳೆದುಕೊಂಡನು. ನಂತರ ಭೀಷ್ಮಾಚಾರ್ಯರ ಸಲಹೆಯಂತೆ ಪಾಂಡವರ ಕಣ್ಣಿಗೆ ಬಲರಾಮಾದಿಗಳು ಬರುವವರೆಗೆ ಕಾಣಿಸಿಕೊಳ್ಳಬಾರದೆಂದು ವೈಶಂಪಾಯನ ಸರೋವರದಲ್ಲಿ ಅಡಗಿಕೊಂಡನು. ದುರ್ಯೋಧನನು ವೈಶಂಪಾಯನ ಸರೋವರದಲ್ಲಿಯೇ ಅಡಗಿರಬೇಕೆಂದು ಊಹಿಸಿದ ಪಾಂಡವರು ಸರೋವರದ ದಂಡೆಯ ಮೇಲೆ ನಿಂತು ಮೂದಲಿಕೆ ಮಾತುಗಳನ್ನಾಡಿದರು.
ಧರ್ಮರಾಯ, ಅರ್ಜುನ, ನಕುಲ, ಸಹದೇವರ ಮಾತುಗಳಿಗೆ ದುರ್ಯೋಧನ ಬಗ್ಗಲಿಲ್ಲ. ಕೌರವರನ್ನು ಮೇಲೆಬ್ಬಿಸಲು ಭೀಮನು ಆರ್ಭಟಿಸುತ್ತಾ ದುರ್ಯೋಧನನೇ, ನಾನು ಯುದ್ಧದಲ್ಲಿ ನಿನ್ನ ತಮ್ಮನಾದ ದುಶ್ಯಾಸನನ ರಕ್ತದ ರುಚಿಯನ್ನುನೋಡಿದ್ದಾಯಿತು ಅದರ ಜೊತೆಗೆ ನಿನ್ನ ಸೈನ್ಯವೆಂಬ ಸಮುದ್ರದ ರುಚಿಯನ್ನು ಕೂಡ ನೋಡಿದ್ದಾಯಿತು. ಈಗ ಈ ವೈಶಂಪಾಯನ ಸರೋವರದ ನೀರನ್ನು ಕುಡಿದು ಆ ನಂತರ ನಿನ್ನ ರಕ್ತದ ರುಚಿಯನ್ನು ನೋಡಿ ನಿನ್ನನ್ನು ಕೊಲ್ಲುತ್ತೇನೆ ಎಂದನು.
ಭೀಮನು ದುರ್ಯೋಧನನನ್ನು ವೈಶಂಪಾಯನ ಸರೋವರದಿಂದ ಹೊರಗೆ ತರಲು ಒಂದೆ ಸಮನೆ ಚುಚ್ಚು ಮಾತುಗಳನ್ನು ಆಡುತ್ತಾನೆ. ಭೀಮಸೇನನಾದ ನನ್ನ ಈ ಭಯಂಕರವಾದ ಮೂಖವನ್ನು ನೊಡಲು ಧೈರ್ಯವಿಲ್ಲದೆ ಆ ಸರೋವರದಲ್ಲಿ ಅಡಗಿ ಕುಳಿತಿರುವೆಯಾ? ಯುದ್ದಭುಮಿಯನ್ನು ಬಿಟ್ಟು ಈ ಜಲಚರಗಳ ಜೊತೆ ಇರುವೆಯಾ? ಕಾಣದಂತೆ ಕುಳಿತು ಬದುಕಲು ಬಯಸಿರುವೆಯಾ? ಇಂದು ಭೀಮನು ಪ್ರಶ್ನಿಸುತ್ತಾ ಅವನನ್ನು ಹೊರತರಲು ಪ್ರಯತ್ನಿಸಿದನು. ಭೀಮನ ಮೂದಲಿಕೆಯಾ ಮಾತುಗಳನ್ನ್ನು ಕೇಳಿದರೂ ದುರ್ಯೋಧನನು ಹೊರ ಬರದ್ದಿದಾಗ, ಭೀಮನು ತನ್ನ ಮೂದಲಿಕೆಯ ಮಾತುಗಳನ್ನು ಮುಂದುವರೆಸುತ್ತಾ "ನೀರಿನಲ್ಲಿರಬೇಕಾದವು ಮೀನು, ಮೋಸಳೆಗಳೇ ವಿನಃ ಮನುಷ್ಯರಲ್ಲ. ವೀರನಾದ ನೀನು ಆ ನೀರಿನಲ್ಲಿ ಕುಳಿತು ಶೀತಕ್ಕೆ ಒಳಗಾಗಿರುವೆ. ಇದರಿಂದ ನಿನ್ನ ದುರ್ಯೋಧನನೆಂಬ ಹೆಸರಿಗೆ ನಾಚಿಕೆ. ಮಹಾಪರಾಕ್ರಮಿಯಾದ ನೀನು ನೀರಿನಲ್ಲಿ ಇರುವುದು ಸರಿಯಲ್ಲ. ಸಾವಿಗೆ ಯಾಕೆ ಹೆದರುತ್ತಿರುವೆ? ಸತ್ತರೇನು? ಮತ್ತೆ ಹುಟ್ಟುವುದಿಲ್ಲವೆ? ಈಗ ಎದ್ದು ಬಾ. ಕೌರವನೆಂಬ ಮಹಾಪರ್ವತಕ್ಕೆ ಭೀಮನೆಂಬ ವಜ್ರಾಯುಧನು ಬಂದಿದ್ದಾನೆ.ಕುರುವಂಶವೆಂಬ ಸಮುದ್ರವನ್ನು ನಾಶ ಮಾಡಲು ಭೀಮನು ಬಂದಿದ್ದಾನೆ- ಎದ್ದು ಬಾ" ಎಂದು ಭೀಮನು ಮೂದಲಿಸಿದನು
. ಕೌರವನನ್ನು ಹೊರಗೆ ಬರುವಂತೆ ಮಾಡಲು ಭೀಮನು ಅವನು ಇಂದೆ ಮಾಡಿದ ಅಹಂಕಾರಿತ ಕಾರ್ಯವನ್ನು ಹೇಳತೊಡಗಿದನು. ಶ್ರೀ ಕೃಷ್ಣನು ಸಂಧಾನಕ್ಕೆ ಬಂದಾಗ ಅವನನ್ನು ಅವಮಾನಿಸಿದ ಆ ಅಹಂಕಾರ ಈಗ ಎಲ್ಲಿ ಹೋಯಿತು? ದ್ರೌಪದಿಯ ಕೇಶವನ್ನು ಎಳೆತರಿಸಿದಾಗ ಹಾಗು ವಸ್ತ್ರಾಪಹರಣ ಮಾಡಿಸಿದಾಗ ಇದ್ದ ಅಹಂಕಾರ ಈಗ ಎಲ್ಲಿ ಹೋಯಿತು? ಕುಂತಿಯ ಮಕ್ಕಳಾದ ಪಾಂಡವರ ಮೇಲಿನ ಹೋಟ್ಟೆಕಿಚ್ಚಿನಿಂದ ಅವರೊಡನೆ ಮೋಸದ ಜೂಜಾಟವನ್ನು ಆಡಿ ಅವರನ್ನು ಕಾಡಿಗೆ ಕಳಿಸಿ, ಹನ್ನೆರಡು ವರ್ಷಗಳ ಕಾಲ ಕಾಡಿನಲ್ಲಿ ಒಂದೆ ಸಮನೆ ತಿರುಗುವಂತೆ ಮಾಡಿದಾಗ ಇದ್ದ ಮದ ಈಗ ಎಲ್ಲಿ ಹೋಯಿತು? ಎಂದು ಮೂದಲಿಸಿದನು.
ಭೀಮನು ದುರ್ಯೋಧನನನ್ನು ಹೊರಗೆ ಬರುವಂತೆ ಮಾಡಲು ಎಷ್ಟೆ ಪ್ರಯತ್ನಿಸಿದರು ಅವನು ಹೊರಗೆ ಬರದಿದ್ದಾಗ ಸ್ವಲ್ಪ ಧ್ವನಿಯನ್ನು ತಗ್ಗಿಸಿ ಮಾತನಾಡಿತ್ತಾನೆ. ದುರ್ಯೋಧನ ನೀನು ಎಷ್ಟೊತ್ತೆಂದು ನೀರಿನಲ್ಲಿ ಕುಳಿತಿರಲು ಸಾಧ್ಯ? ಈಗಲೇ ಎದ್ದು ಬಾ. ಭೀಮನ ಧ್ವನಿಯನ್ನು ಕೇಳಿಯು ಸಹ ನೀನು ನೀರಿನಲ್ಲಿಯೆ ಕುಳಿತಿರುವೆ; ನೀನು ಕೌರವರ ನಾಶವನ್ನು ಸೂಚಿಸುವಂತಿರುವೆ ಎಂದು ಮೂದಲಿಸಿದನು.
ಭೀಮನು ಎಷ್ಟೆ ಮೂದಲಿಕೆಯ ಮಾತುಗಳನ್ನಾಡಿದರು ಅವನು ಹೊರಗೆ ಬರದಿದ್ದಾಗ ಭೀಮನಿಗೆ ಅಪಾರವಾದ ಕೋಪ ಬಂದಿತು. ಆಗ ಅವನು ಬ್ರಹ್ಮಾಂಡವೇ ಒಡೆದು ಹೊಗುವ ಹಾಗೆ, ಪರ್ವತಗಳೆಲ್ಲ ಉರುಳಿ ಬೀಳುವ ಹಾಗೆ, ಇಡೀ ಭುಮಂಡಲವೆ ನಡಗುವ ಹಾಗೆ, ದೇವತೆಗಳೆಲ್ಲಾ ಹೆದರುವ ಹಾಗೆ, ಜಟಾಸುರನ ಶತ್ರುವು, ಹಿಡಿಂಬನ ಮತ್ತು ಬಕನ ವೈರಿಯೂ ಆದ ಭೀಮನು ಸಿಂಹನಾದವನ್ನು ಮಾಡಿದನು.
ಭೀಮನು ದುರ್ಯೋಧನನನ್ನು ಸರೋವರದಿಂದ ಹೊರಗೆ ಬರುವಂತೆ ಮಾಡಲು ಸಿಂಹನಾದವನ್ನು ಮಾಡಿದಾಗ, ವೈಶಂಪಾಯನ ಸರೋವರದ ಹೃದಯವೆ ಹಾರಿ ಹೋದಂತೆ ಆ ಸರೋವರದಲ್ಲಿದ್ದ ಪಕ್ಷಿಗಳ ಸಮೂಹವೆಲ್ಲ ಒಂದು ಕ್ಷಣ ಗಾಬರಿಗೊಂಡು ಚಕ್ಕನೆ ಹಾರಿ ಹೋದವು. ಅದುವರೆಗೆ ಅಲ್ಲಿದ್ದ ಪಕ್ಷಿಗಳು ಎಂದು ಅಷ್ಟು ಜೋರಾದ ಧ್ವನಿಯನ್ನು ಕೇಳಿರಲಿಲ್ಲ. ಈಗ ಕೇಳಿದ ತಕ್ಷಣವೆ ಬೆಚ್ಚಿ ಬೆದರಿ ಹಾರಿ ಹೋದವು.
ಭೀಮನು ಅಪಾರವಾದ ಕೋಪದಿಂದ ಗರ್ಜಿಸಿದನು. ಅವನ ಕೋಪವು ಬೆಂಕಿಯಂತೆ ಇತ್ತು. ಅವನ ಬೆಂಕಿಯಂತಹ ಕೋಪವು ವೈಶಂಪಾಯನ ಸರೋವರದ ಮೇಲೆ ಭೀಕರವಾದ ಪರಿಣಾಮವನ್ನು ಉಂಟು ಮಾಡಿತು. ಅವನ ಕೋಪವೆಂಬ ಬೆಂಕಿಗೆ ಆ ಸರೋವದಲ್ಲಿದ್ದ ಕಮಲಗಳು ಅರ್ಧ ಬೆಂದು ಹೋದವು. ಅಲ್ಲಿದ್ದ ಪಕ್ಷಿಗಳು ಸಹ ಅರ್ಧ ಬೆಂದವು. ಅವನ ಕೋಪವೆಂಬ ಬೆಂಕಿಯಿಂದ ಸರೋವರದ ಮರಳು ಕಡಲೆಯನ್ನು ಉರಿಯಲು ಬೇಕಿರುವ ಮರಳಿನಂತೆ ಉರಿದಿತ್ತು.
ಭೀಮನು ವೈಶಂಪಾಯನ ಸರೋವರದ ದಂಡೆಯ ಮೇಲೆ ನಿಂತು ಗರ್ಜಿಸಿದಾಗ ಅಲ್ಲಿದ್ದ ಬಕ ಪಕ್ಷಿಗಳು ತಾವು ಸಾಯುವುದು ಖಚಿತ ಎಂದು ತಿಳಿದು ಹೆದರಿ ಹಾರಿ ಹೋದವು. ಏಕೆಂದರೆ ಭೀಮನು ಹಿಂದೆ ಬಕಾಸುರನನ್ನು ಕೊಂದವನು, ಬಕಾಸುರ ಎನ್ನುವ ಹೆಸರಿನ ಒಂದು ಅಂಶ(ಬಕ) ತಮ್ಮ ಹೆಸರಲ್ಲು ಇರುವುದರಿಂದ ಭೀಮನು ತಮ್ಮ ಮೇಲೆ ಕೋಪಗೊಂಡು ನಾಶ ಮಾಡಲು ಬರುತ್ತಿದ್ದಾನೆ ಎಂದು ಭಾವಿಸಿ ಹೆದರಿ ಹಾರಿ ಹೋದವು.
ಭೀಮನ ಕೋಪದ ಪರಿಣಾಮವನ್ನು ಮಹಾಕವಿ ರನ್ನನು ಬಹಳಷ್ಟು ಸೊಗಸಾಗಿ ವರ್ಣಿಸಿದ್ದಾನೆ. ಭೀಮನ ಕೋಪವೆಂಬ ಬೆಂಕಿಯಿಂದ ವೈಶಂಪಾಯನ ಸರೋವರದಲ್ಲಿ ಆದ ಪರಿಣಾಮಗಳನ್ನು ಬಹಳಷ್ಟು ಸೊಗಸಾಗಿ ತಿಳಿಸಿದ್ದಾನೆ. ಹೇಗೆಂದರೆ ಆ ಸರೋವರವು ಕುದಿಯಲು ಆರಂಭಿಸಿತಂತೆ. ಅಕ್ಕಿಯು ಒಲೆಯ ಮೇಲೆ ಹೇಗೆ ಕುದುಯುತ್ತಿತೋ ಆ ರೀತಿ ವೈಶ್ಂಪಾಯನ ಸರೋವರದಲ್ಲಿದ್ದ ಮೀನುಗಳು ಹಾಗು ಇತರೆ ಜಲಚರಗಳು ಬೇಯಲು ಆರಂಭಿಸಿತಂತೆ.
ಭೀಮನ ಕೋಪವೆಂಬ ಬೆಂಕಿಗೆ ವೈಶಂಪಾಯನ ಸರೋವರದ ನೀರೆಲ್ಲವು ಕುದಿಯಲು, ಅದರೊಳಗಿದ್ದ ಜಲಚರಗಳೆಲ್ಲವು ಸತ್ತು ಹೋದವು; ಕೆಲವು ಪ್ರಾಣಿಗಳು ಅರ್ಧಂಬರ್ಧ ಬೆಂದಿದ್ದವು. ಅರೇಬೆಂದ ಪ್ರಾಣಿಗಳು ನೋವಿನಿಂದ ಚೀರುತ್ತಿದ್ದವು. ಆಗ ಭೀಮನು ಮತ್ತೆ ಸಿಹನಾದವನ್ನು ಮಾಡಿದನು.
ಭೀಮನ ಎರಡನೆಯ ಗರ್ರ್ಜನೆಯಿಂದ ನೀರೊಳಗೆ ಕೂತಿದ್ದ ದುರ್ಯೋಧನನು ಒಂದು ಕ್ಷಣ ಕಳವಳಗೊಂಡನು. ಅನವನ ಆ ಗರ್ಜನೆ ಮಹಾ ಗುಡುಗಿನ ಧ್ವನಿಯನ್ನು ಮೀರಿಸುವಂತಿತ್ತು. ಅಂತಹ ಧ್ವನಿಯನ್ನು ಕೇಳಿದ ದುರ್ಯೋಧನನು ಕೋಪಗೊಂಡು, ಕಣ್ಣುಗಳ್ನ್ನು ಕೆಂಪಾಗಿಸಿಕೊಂಡನು. ಉರುಗಪತಾಕನಾದ ಅವನಿಗೆ ಅಪಾರ ಕೋಪ ಬಂದುದ್ದರಿಂದ ಅವನು ನೀರಲ್ಲಿಯೇ ಕುಳಿತು ಬೆವರಲಾರಂಭಿಸಿದನು.
ಉಲ್ಲೇಖನ
ಬದಲಾಯಿಸಿಸಿಂಹನಾದಂಗೈದಂ- ರನ್ನ. ಪುಸ್ತಕ- ಸಾಹಸ ಭೀಮ ವಿಜಯಂ ಸಂಪಾದನೆ- ಆರ್.ವಿ. ಕುಲಕರ್ಣಿ ಕನ್ನಡ ಸಾಹಿತ್ಯ ಪರಿಷತ್ತು ಪ್ರಕಟಣೆ.