ಸದಸ್ಯ:Harsha1910147/ನನ್ನ ಪ್ರಯೋಗಪುಟ
ಗರುಡ ದೇವಾಲಯ,ಮುಳಬಾಗಿಲು
ಬದಲಾಯಿಸಿthumb|ಗರುಡ ದೇವಾಲಯ, ಮುಳಬಾಗಿಲು ನಿಮಗೆ ತಿಳಿದಹಾಗೆ ಗರುಡ ಪಕ್ಷಿಯು ಹಿಂದು ನಂಬಿಕೆಯ ಪ್ರಕಾರ ಪವಿತ್ರ ಸ್ಥಾನ ಪಡೆದಿರುವ ಪಕ್ಷಿಯಾಗಿದೆ. ವಿಷ್ಣುವಿನ ವಾಹನ ಗರುಡ. ಆದರೆ ಗರುಡ ದೇವನೆ ಮುಖ್ಯ ದೈವವಾಗಿ ಆರಾಧಿಸಲ್ಪಡುವ ದೇವಾಲಯಗಳು ಭಾರತದಲ್ಲಿ ಬಹುಶಃ ಎಲ್ಲಿಯೂ ಕಂಡುಬರುವುದಿಲ್ಲ ಹಾಗು ಆ ದೇವಾಲಯಕ್ಕೆ ದಿನನಿತ್ಯವೂ ನೂರಾರು ಭಕ್ತರು ಭೇಟಿ ನೀಡುತಿದ್ದರು. ಆ ದೇವಾಲಯ ನಮ್ಮ ಕರ್ನಾಟಕದ ಕೋಲಾರ ಜಿಲ್ಲೆಯಲ್ಲಿ ಇರುವುದು. ದೇವಾಲಯ್ದಲ್ಲಿ ಇರುವ ವಿಗ್ರಹ ಇನ್ನು ಬೇರೆ ಯಾವುದೇ ದೇವಾಲಯದಲ್ಲಿ ಹಾಗೂ ಪ್ರಪಂಚದಲ್ಲಿ ಎಲ್ಲೂ ಇಲ್ಲ ಎಂದು ಗುರುತಿಸಲಾಗಿದೆ. ನಮ್ಮ ಜೀವನದಲ್ಲಿ ಪ್ರತಿಯೊಬ್ಬ ಮನುಷ್ಯನಿಗೆ ಜೀವ ಹಾಗೂ ವಸ್ತುವಿನಲ್ಲಿಯೂ ದೈವತ್ವವನ್ನು ಕಾಣುವುದು ಸಾಮಾನ್ಯವಾದದ್ದು.ಗರುಡ ಒಂದು ಜಾತಿಯ ಪಕ್ಷಿ.ಇದು ಮಹಾವಿಷ್ಣುವಿನ ವಾಹನ.ಗರುಡನಿಗೂ ಕೂಡ ಒಂದು ಮಹಿಮಾನ್ವಿತವಾದ ದೇವಾಲಯವಿದೆ. ಆ ದೇವಾಲಯಕ್ಕೆ ಭೇಟಿ ನೀಡಿದರೆ ಸಂತಾನ ಇಲ್ಲದೇ ಇರುವವರಿಗೆ ಸಂತಾನವಾಗುತ್ತದೆ ಎಂದು ನಂಬಲಾಗಿದೆ.ಆದರೆ, ಕರ್ನಾಟಕ ರಾಜ್ಯದಲ್ಲಿ ಗರುಡಸ್ವಾಮಿಗೆಂದೆ ಮುಡಿಪಾದ ಅಪರೂಪದ ದೇವಾಲಯವೊಂದಿರುವುದು ವಿಶೇಷ. ಇದೆ ಕೊಲದೇವಿಯ ಗರುಡಸ್ವಾಮಿಯ ದೇವಾಲಯ. ಕೋಲಾರ ಜಿಲ್ಲೆಯ ಮುಳುಬಾಗಿಲು ತಾಲೂಕಿನಲ್ಲಿ ಈ ದೇವಾಲಯವಿದೆ. ಮುಳುಬಾಗಿಲಿನಿಂದ ಸುಮಾರು 15 ಕಿ.ಮೀ ದೂರದಲ್ಲಿರುವ ಕೊಲದೇವಿ ಎಂಬ ಕ್ಷೇತ್ರದಲ್ಲಿ ಈ ದೇವಸ್ಥಾನವಿದ್ದು ಮುಳಬಾಗಲುವಿನಿಂದ ಇಲ್ಲಿಗೆ ತೆರಳಬಹುದಾಗಿದೆ.ಹಿಂದೆ ದ್ವಾಪರಯುಗದಲ್ಲಿ ಅರ್ಜುನನೊಮ್ಮೆ ಬೇಟೆಯಾಡಲು ಕಾಡಿಗೆ ತೆರಳಿ ಬಾಣಗಳನ್ನು ಬಿಡುತ್ತಿದ್ದಾಗ ಅವುಗಳ ರಭಸ ಹಾಗೂ ಶಕ್ತಿಯಿಂದ ಕಾಡಲ್ಲಿ ಬೆಂಕಿ ಹತ್ತಿ ಸಾಕಷ್ಟು ಹಾವುಗಳು ಸಾಯಲ್ಪಟ್ಟವು. ಇದರಿಂದೆ ಅರ್ಜುನನಿಗೆ ಸರ್ಪದೋಷ್ ಉಂಟಾಗಿ ಅದರಿಂದ ಮುಕ್ತಿ ಪಡೆಯಲು ಗರುಡನನ್ನು ಪೂಜಿಸಬೇಕೆಂಬ ಪರಿಹಾರವು ಋಷಿ ಮುನಿಗಳಿಂದ ಸಲಹೆ ರುಪದಲ್ಲಿ ಸಿಕ್ಕಿತು. ಹೀಗಾಗಿ ಅರ್ಜುನನೆ ಸ್ವತಃ ಪ್ರತಿಷ್ಠಾಪಿಸಿದ ಗರುಡ ದೇವಾಲಯ ಇದಾಗಿದೆ ಎಂಬ ಪ್ರತೀತಿಯಿದೆ.ಅಲ್ಲದೆ, ಇನ್ನೊಂದು ಕಥೆಯಂತೆ, ಸೀತೆಯನ್ನು ರಾವಣ ಅಪಹರಿಸಿ ಪುಷ್ಪಕವಿಮಾನದಲ್ಲಿ ಕೊಂಡೊಯ್ಯುತ್ತಿರುವಾಗ, ಸೀತೆಯ ಅರ್ತನಾದವನ್ನು ಕೇಳಿದ ಜಟಾಯು ತನ್ನ ಸಾಮರ್ಥ್ಯಕ್ಕೆ ಮೀರಿ ಸೀತೆಯನ್ನು ಕಾಪಾಡಲು ಪ್ರಯತಿಸಿತಾದರೂ ರಾವಣನ ಖಡ್ಗದಿಂದ ಕೊಲ್ಲಲ್ಪಟ್ಟಿತು. ಹೀಗಾಗಿ ಈ ಸ್ಥಳಕ್ಕೆ ಕೊಲದೇವಿ ಎಂಬ ಹೆಸರು ಅಂದಿತೆನ್ನಲಾಗಿದೆ. ಅಲ್ಲದೆ ಈ ಒಂದು ಸ್ಥಳದಲ್ಲಿ ಜಟಾಯು ಪ್ರಾಣ ಬಿಟ್ಟು ವಿಷ್ಣುವಿನ ಕೃಪೆಗೆ ಪಾತ್ರವಾಗಿ ನಂತರ ಇದೆ ಸ್ಥಳದಲ್ಲಿ ಗರುಡ ದೇವರಾಗಿ ನಂಬಿಕೊಂಡು ಬರುವ ಭಕ್ತಾದಿಗಳ ಸಕಲ ಕಷ್ಟಗಳನ್ನು ದೂರ ಮಾಡುವ ದೈವವಾಗಿ ಪ್ರಖ್ಯಾತವಾಗಿದೆ.ಈ ದೇವಾಲಯದಲ್ಲಿ ಕೇವಲ ಗರುಡಸ್ವಾಮಿಯಲ್ಲದೆ ಆಂಜನೇಯನ ವಿಶಿಷ್ಟ ರೂಪವನ್ನು ಕಾಣಬಹುದಾಗಿದೆ. ಅಲ್ಲದೆ ಇನ್ನೊಂದು ವಿಶೇಷವೆಂದರೆ ಗರುಡಸ್ವಾಮಿಯು ಇಲ್ಲಿ ತನ್ನ ಹೆಗಲಿನ ಎರಡೂ ಬದಿಗಳಲ್ಲಿ ವಿಷ್ಣು ಹಾಗೂ ಲಕ್ಷ್ಮೆ ದೇವಿಯರನ್ನು ಕುಳ್ಳಿರಿಸಿಕೊಂಡು ನಿಂತಿರುವುದು. ಹೀಗಾಗಿ ವಿಷ್ಣುವಿನ ಆಶೀರ್ವಾದವೂ ಸಹ ಇಲ್ಲಿ ಸುಲಭವಾಗಿ ದೊರೆಯುತ್ತದೆಂಬ ಪ್ರಬಲ ನಂಬಿಕೆ ಇಲ್ಲಿ ಭೇಟಿ ನೀಡುವ ಭಕ್ತರಲ್ಲಿದೆ
ಇದು ಗರುಡನ ಮಹಿಮಾನ್ವಿತವಾದ ದೇವಾಲಯ
ಬದಲಾಯಿಸಿಭಾರತ ದೇಶದ ಪ್ರತಿ ಗ್ರಾಮದಲ್ಲಿಯು ವಿಷ್ಣುವಿನ ದೇವಾಲಯ ಇರುವುದು ಸರ್ವೆ ಸಾಮಾನ್ಯ. ಅದೇವಿಷ್ಣುವಿನ ವಾಹನವಾದ ಗರುಡನಿಗೆ ಇರುವ ದೇವಾಲಯಗಳು ಕೆಲವು ಮಾತ್ರ ಎಂದೇ ಹೇಳಬಹುದು.ಅಂತಹ ದೇವಾಲಯಗಳಲ್ಲಿ ಕರ್ನಾಟಕದಲ್ಲಿನ ದೇವಾಲಯವು ಒಂದು. ಈ ದೇವಾಲಯದ ಬಗ್ಗೆ ಅಷ್ಟುಪ್ರಚಾರ ಇಲ್ಲದೆ ಇರುವ ಕಾರಣದಿಂದ ಅಷ್ಟು ಪ್ರಾಮುಖ್ಯತೆಯನ್ನು ಪಡೆದಿರಲಿಲ್ಲ. ಆದರೆಪ್ರಸ್ತುತ ಉತ್ತಮವಾದ ಸಾರಿಗೆ ಸಂಪರ್ಕ ಹೊಂದುತಿರುವುದರಿಂದ ಇತ್ತೀಚೆಗೆ ಭಕ್ತರ ಸಂಖ್ಯೆ ಕೂಡ ಹೆಚ್ಚಾಗುತ್ತಾ ಇದೆ.
ವಿಷ್ಣುವಿನ ವಾಹನ
ಬದಲಾಯಿಸಿಈ ದೇವಾಲಯದಲ್ಲಿ ಪ್ರಧಾನವಾಗಿ ಪೂಜೆಗಳನ್ನು ಮಾಡಿಸಿಕೊಳ್ಳುತ್ತಿರುವುದು ವಿಷ್ಣುವಿನವಾಹನವಾದ ಗರುಡ. ಇಲ್ಲಿರುವ ಹಾಗೆ ಗರುಡ ಮೂರ್ತಿಯು ಪ್ರಪಂಚದಲ್ಲಿ ಬೇರೆ ಎಲ್ಲೂ ಇಲ್ಲಎಂದು ಸ್ಥಳೀಯರು ಹೇಳುತ್ತಾರೆ. ಇಲ್ಲಿ ಗರುಡನು ಒಂದುಕಾಲನ್ನು ಕೆಳಗೆ ಮಡಚಿ, ಮತ್ತೊಂದುಕಾಲಿನ ಮೇಲೆ ನಿಂತು, ಎಡ ಭುಜದ ಮೇಲೆ ಲಕ್ಷ್ಮೀ ದೇವಿಯನ್ನು ಹೊಂದಿದ್ದಾನೆ. ಅಷ್ಟೇ ಅಲ್ಲಇಲ್ಲಿನ ವಿಗ್ರಹಕ್ಕೆ ಹಾವುಗಳು ಆಭರಣಗಳಾಗಿವೆ.
ಸ್ಥಳ ಪುರಾಣ
ಬದಲಾಯಿಸಿರಾವಣಾಸುರನು ಸೀತಾ ದೇವಿಯನ್ನು ಅಪಹರಿಸುತ್ತಿದ್ದ ಸಮಯದಲ್ಲಿ ಒಂದು ಗರುಡ ಪಕ್ಷಿಯುರಾವಣನ ಜೊತೆ ಪ್ರಸ್ತುತ ದೇವಾಲಯವಿರುವ ಪ್ರದೇಶದಲ್ಲಿ ಹೋರಾಟ ಪ್ರಾರಂಭ ಮಾಡಿ, ಕೊನೆಗೆ ಆಹೋರಾಟದಲ್ಲಿ ಮರಣ ಹೊಂದುತ್ತದೆ. ಗರುಡ ಪಕ್ಷಿಯ ಕೊನೆಯ ಕ್ಷಣದಲ್ಲಿ ರಾಮ... ರಾಮ....ಎಂದು ಕರೆಯಿತಂತೆ. ಈ ವಿಷಯವನ್ನು ದೂರದೃಷ್ಟಿಯಿಂದ ನೋಡಿದ ರಾಮನು ಆ ಗರುಡ ಪಕ್ಷಿಗೆಮೋಕ್ಷವನ್ನು ಪ್ರಸಾದಿಸಿದ್ದಲ್ಲದೆ ಆ ಪ್ರದೇಶವನ್ನು ಪ್ರಮುಖ ಪುಣ್ಯಕ್ಷೇತ್ರವಾಗಿಕಂಗೊಳಿಸಲಿ ಎಂದು ವರವನ್ನು ನೀಡಿದನಂತೆ. ಅಂದಿನಿಂದ ಈ ಪ್ರದೇಶವು ಪುಣ್ಯಕ್ಷೇತ್ರವಾಗಿ ಹೆಸರುವಾಸಿಯಾಯಿತು.
ಕೋರಿಕೆಗಳು ನೆರವೇರುತ್ತವೆ
ಬದಲಾಯಿಸಿಸಾಧಾರಣವಾಗಿ ಈ ದೇವಾಲಯಕ್ಕೆ ಸಂತಾನ ಇಲ್ಲದೇ ಇರುವ ದಂಪತಿಗಳು ಹೆಚ್ಚಾಗಿ ಭೇಟಿನೀಡುತ್ತಿರುತ್ತಾರೆ. ಈ ದೇವಾಲಯದಲ್ಲಿ ಪೂಜೆ ಮಾಡಿದವರಿಗೆ ತಪ್ಪದೇ ಸಂತಾನ ಉಂಟಾಗುತ್ತದೆಎಂದು ಕೇವಲ ಸ್ಥಳೀಯರೇ ಅಲ್ಲದೇ, ಸುತ್ತ-ಮುತ್ತಲಿನ ಗ್ರಾಮದವರು ಕೂಡ ನಂಬುತ್ತಾರೆ.
ಭಕ್ತಿ
ಬದಲಾಯಿಸಿಭಾವ ಉಕ್ಕಿಸುವ ಹನುಮನ ವಿಗ್ರಹ ಈ ದೇವಾಲಯದ ಅವರಣದಲ್ಲಿ ಭಕ್ತಿ-ಭಾವವನ್ನು ಹೆಚ್ಚಿಸುವ ಹನುಮಂತನ ವಿಗ್ರಹವಿದೆ. ಈವಿಗ್ರಹವು ನೇರವಾಗಿ ಗರುಡ ವಿಗ್ರಹದ ಎದುರಿಗೆ ಇದ್ದು, ಒಂದೊಕ್ಕೊಂದು ನೋಡುತ್ತಿರುವ ಹಾಗೆ ಭಾಸವಾಗುತ್ತದೆ.
ಪುರಾಣದ ಪ್ರಕಾರ
ಬದಲಾಯಿಸಿಛಲವಂತ ರಾವಣ ಸೀತೆಯನ್ನು ಅಪಹರಿಸಿದ ವೇಳೆ ವಿಷ್ಣುವಿನ ವಾಹನ ಜಟಾಯು ಪಕ್ಷಿ ಸೀತೆಯನ್ನು ಕಾಪಾಡಲು ಮುಂದಾದರೆ ರಾವಣ ಜಟಾಯುವಿನ ಎರಡು ರೆಕ್ಕೆಗಳನ್ನು ಕತ್ತರಿಸಿ ಹಾಕುತ್ತಾನೆ.ಆ ಎರಡು ರೆಕ್ಕೆಗಳು ಈ ಭಾಗದಲ್ಲಿ ಬಿದ್ದವು ಎನ್ನುವುದು ಇತಿಹಾಸ. ಹಾಗಾಗಿಯೇ ರಾವಣನಿಂದ ಗರುಡ ಕೊಲ್ಲಲ್ಪಟ್ಟ ಸ್ಥಳ ಇದಾಗಿದ್ದು ಇದಕ್ಕೆ ಕೊಲದೇವಿ ಎಂಬ ಹೆಸರು ಬಂದಿದೆ ಎಂದು ಪುರಾಣಗಳು ಹೇಳುತ್ತವೆ. ಇನ್ನು ಜಟಾಯು ಬಿದ್ದ ಸ್ಥಳದಲ್ಲೇ ಹನುಮನು ಬಂದು ನೆಲೆಸಿದ್ದಾರೆ ಎನ್ನಲಾಗುತ್ತದೆ.
ಇಲ್ಲಿರುವ ಆಂಜನೇಯ ಹಲ್ಲು ಹಾಗೂ ಕೈಯಲ್ಲಿ ಬ್ರಹ್ಮಾಸ್ತ್ರವನ್ನು ಹೊಂದಿದ್ದಾನೆ. ಗರುಡ ದೇವರ ದರ್ಶನ ಮಾಡಿದರೆ ಅದೃಷ್ಟ ಖುಲಾಯಿಸುತ್ತೆ ಎನ್ನುವುದು ಗರುಡ ಪುರಾಣಗಳಲ್ಲಿ ಕಂಡುಬರುತ್ತದೆ. ಇನ್ನೊಂದೆಡೆ ಮೇಲುಕೋಟೆ ಚಲುವ ನಾರಾಯಣಸ್ವಾಮಿ ಹಾಗೂ ತಿರುಪತಿಯ ದೇವಾಲಯಗಳು ಈ ಗರುಡ ದೇವರಿಗೂ ಸಂಬಂಧವಿದೆ ಎಂಬ ಇತಿಹಾಸವು ಇಲ್ಲಿದೆ.
ಈ ಗರುಡ ದೇವರನ್ನು ದರ್ಶನ ಮಾಡಿದರೆ ೮ರೀತಿಯ ಸರ್ಪ ದೋಷಗಳು ನಿವಾರಣೆಯಾಗುತ್ತವೆ. ಕಲ್ಯಾಣ ಭಾಗ್ಯ, ಸಂತಾನ ಭಾಗ್ಯ ಸೇರಿದಂತೆ ವೈದ್ಯಲೋಕಕ್ಕೆ ಸವಾಲಾದ ಹಲವು ಕಾಯಿಲೆಗಳು ಇಲ್ಲಿ ವಾಸಿಯಾಗಿದೆ.ವಾಮಾಚಾರ, ಮಾಟ-ಮಂತ್ರಗಳ ನಿವಾರಣೆಗೆ ಬಂದ ಭಕ್ತ ಕೋಟಿಯನ್ನು ಗರುಡ ದೇವರು ರಕ್ಷಿಸುತ್ತಾನೆ. ಪ್ರತಿ ಶನಿವಾರ, ಭಾನುವಾರ ಇಲ್ಲಿ ವಿಶೇಷ ಪೂಜೆಗಳನ್ನು ಮಾಡಲಾಗುತ್ತದೆ.ಗರುಡ ದೇವರ ದರ್ಶನ ಪಡೆದರೆ ಬೇಡಿದ್ದನ್ನು ನೀಡುತ್ತಾರೆ ಎಂಬ ಪ್ರತೀತಿ ಇಲ್ಲಿದೆ. ಇಲ್ಲಿಗೆ ಬಂದ ಸಾಕಷ್ಟು ಜನರು ಒಳಿತನ್ನೇ ಕಂಡಿದ್ದಾರೆ. ಹೀಗಾಗಿ ಇಲ್ಲಿ ನೆರೆಯ ಆಂಧ್ರ ಹಾಗೂ ತಮಿಳುನಾಡಿನ ಸಾವಿರಾರು ಭಕ್ತರು ಬಂದು ದರ್ಶನ ಪಡೆಯುತ್ತಾರೆ.
ಉಲ್ಲೇಖ
ಬದಲಾಯಿಸಿ<r>https://kannada.nativeplanet.com/travel-guide/a-visit-very-rare-temple-garuda-koladevi-000691.html</r>
<r>http://www.aralikatte.com/2016/08/21/%E0%B2%97%E0%B2%B0%E0%B3%81%E0%B2%A1/</r>