ಸದಸ್ಯ:Harini.ng2001/ನನ್ನ ಪ್ರಯೋಗಪುಟ

ಕರಡಿಗುಡ್ಡ

ಬದಲಾಯಿಸಿ
 
ಕರಡಿಗುಡ್ಡ

ಸ್ಥಳ ಕರಡಿಗುಡ್ಡ ಎಂಬ ಊರು ಶಿವಮೊಗ್ಗ ಮಾರ್ಗವಾಗಿ ಸವಳಂಗ, ಸುರುವನ್ನೆ, ಕೆಂಚಿಕೊಪ್ಪ ಮತ್ತು ಸೊರಟೂರು ಮಧ್ಯದಲ್ಲಿ ಎರಡು ಕಿಲೋಮೀಟರ್ ದೂರದಲ್ಲಿದೆ.

ಬದಲಾಯಿಸಿ

ಶಿವಮೊಗ್ಗದಿಂದ ಈ ಗುಡ್ಡಕ್ಕೆ ಸುಮಾರು ಐವತ್ತು ಕಿಲೋಮೀಟರ್ ದೂರದಲ್ಲಿದೆ. ಹಾಗೂ ಹೊನ್ನಾಳಿ ತಾಲ್ಲೂಕಿನ ಹತ್ತು ಕಿಲೋಮೀಟರ್ ದೂರದಲ್ಲಿದೆ . ಈ ದೇವಸ್ಥನಕ್ಕೆ ಪುರಾಣ ಇತಿಹಾಸ ವಿದೆ . ಈ ದೇವಸ್ಥಾನಕ್ಕೆ ೧೫೦ ರಿಂದ ೨೦೦ ಮೆಟ್ಟಿಲುಗಳನ್ನು ಏರಿ ಹೋಗಬೇಕು . ಇಲ್ಲಿ ಸಿದ್ದೇಶ್ವರ ದೇವರನ್ನು ಪೂಜಿಸುತ್ತಾರೆ. ಇದು ತುಂಬಾ ಜನರ ಮನೆ ದೇವರು ಕೂಡ ಹಾಗಿದೆ . ಇಲ್ಲಿ ಅಪಾರವಾಗಿ ಬಿಲ್ವ ಪತ್ರೆಯ ಮರಗಳು ಬೆಳೆದಿದೆ. ಇಲ್ಲಿ ಅಭಿಷೇಕ , ಜಾತ್ರೆ , ತೇರು ಉತ್ಸವಾಗಳು ನಡೆಯುತ್ತದೆ.

ಬದಲಾಯಿಸಿ

ಇತಿಹಾಸ

ಬದಲಾಯಿಸಿ

ಇಲ್ಲಿರುವ ಶಿವಲಿಂಗಕ್ಕೆ ಏಳು ಎಡೆಯ ಕಾಳಿಂಗ ಸರ್ಪವು ಪ್ರತಿನಿತ್ಯ ಶಿವಲಿಂಗಕ್ಕೆ ಪೂಜೆ ಮಾಡುತಿತ್ತು ಎಂಬ ಹಿತಿಹಾಸವಿದೇ. ಕಾಳಿಂಗ ಸರ್ಪವು ಈ ಶಿವಲಿಂಗಕ್ಕೆ ಅಭಿಷೇಕ ಮಾಡಿ ಪೂಜೆ ಮಾಡುತಿತ್ತು. ಅಭಿಷೇಕ ದಲ್ಲಿ ತುಪ್ಪ, ಹಾಲು,ಮೊಸರು, ಜೇನುತುಪ್ಪ , ಹಸುವಿನ ಗಂಜಲ , ಗಂಧ ,ಹೊಣ ಹಣ್ಣುಗಳು ಎಲ್ಲವನ್ನೂ ಬಳಸುತಿತ್ತು . ಪೂಜೆಯಾದ ನಂತರ ಸರ್ಪವು ಹೋಗುತ್ತಿತ್ತು. ಆನಂತರ ಅಭಿಷೇಕವನ್ನು ನೋಡಿ ಕರಡಿಯು ಲಿಂಗವನ್ನೂ ಸವಿಯಲು ಬಂದಾಗ , ಸರ್ಪವು ಅದನ್ನು ನೋಡಿ ಹೆದರಿ ಲಿಂಗವನ್ನು ನುಂಗುತ್ತದೆ . ಈ ಪವಿತ್ರವಾದ ಸ್ಥಳದಲ್ಲಿ ದ ಶಿವಲಿಂಗವು ಬಂಡೆಯಲ್ಲಿ ಹೊಡಮೂಡಿ ಉದ್ಭವವಾಗಿದೆಉದ್ಭವವಾಗಿದೆ .ಇದನ್ನು ಕಂಡ ಒಬ್ಬ ಗುರುಗಳು ಈ ಶಿವಲಿಂಗವನ್ನು ಸಿದ್ದೇಶ್ವರ ಎಂದು ಪೂಜೆ ಮಾಡಿ ಅದೇ ಜಾಗದಲ್ಲಿ ನೂರ ಒಂದು ಶಿವಲಿಂಗವನ್ನು ಕೆತ್ತನೆ ಮಾಡಿದ್ದಾರೆ. ಈ ಲಿಂಗಗಳು ಮೂರರಿಂದ ನಾಲ್ಕು ಅಡಿ ಎತ್ತರವಿದೆ. ಈ ಲಿಂಗದಲ್ಲಿ ಮತ್ತೆ ನೂರ ಒಂದು ಲಿಂಗಗಳನ್ನು ಕೆತ್ತನೆ ಮಾಡಿದರೆ . ಅದಕ್ಕೆ ಗುಹೇಶ್ವರ , ಶಂಕರ , ನೀಲಕಂಠ , ಮುಕ್ಕಣ್ಣೇಶ್ವರ , ಗಂಗಾಧರ , ಶ್ರೀಕಂಠೇಶ್ವರ , ಕಾಲಭೈರೇಶ್ವರ ಎಂಬ ಮುಂತಾದ ನಾನಾ ಹೆಸರುಗಳನ್ನು ಸಹ ಉಪಯೋಗಿಸಿದ್ದಾರೆ. ಈ ಪವಿತ್ರ ಸ್ಥಳದಲ್ಲಿ ಪ್ರತಿನಿತ್ಯವೂ ಪೂಜೆ ನಡೆಯುತ್ತದೆ . ಇದರ ಪಕ್ಕದಲ್ಲಿ ಗುಹೆ ಕೂಡ ಇದೆ . ಪೂಜೆಯ ಸಮಯದಲ್ಲಿ ಈಗಲೂ ಸಹ ಸರ್ಪವು ಬರುತ್ತದೆ, ಹಾಲನ್ನು ಸೇವಿಸಿ ಯಾರಿಗೂ ಹಾನಿ ಮಾಡದಂತೆ ಹೋಗುತ್ತದೆ ಹಾಗೂ ಕೆಲ ಸಮಯಗಳಲ್ಲಿ ಕರಡಿಯು ಸಹ ಬರುತ್ತದೆ ಎಂದು ಪೂಜೆ ಮಾಡುವ ಅರ್ಚಕರು ಹೇಳುತ್ತಾರೆ. ಈ ದೇವಸ್ಥಾನವನ್ನು ಸಿದ್ದಪ್ಪ ಅಜ್ಜನವರು ವಹಿಸಿಕೊಂಡು ಇದನ್ನು ಬೆಳೆಸಿ ಸುಧಾರಣೆ ಮಾಡುತ್ತಿದ್ದರು ಅವರ ಕಾಲದಲ್ಲಿ ಈ ಪವಿತ್ರ ಜಾಗದಲ್ಲಿ ಮದುವೆ ಶುಭ ಸಮಾರಂಭಗಳು ನಡೆಯಲೆಂದು , ಬಡವರಿಗೆ ಉಪಯೋಗ ವಾಗುವಂತೆ ಚಿಕ್ಕ ಕಲ್ಯಾಣ ಮಂಟಪವನ್ನು ನಿರ್ಮಾಣ ಮಾಡಿರುತ್ತಾರೆ . ಈಗಲೂ ಧಾರ್ಮಿಕ ಸಮಾರಂಭಗಳು ನಡೆಯುತ್ತಿರುತ್ತವೆ .ಹಾಗೂ ಸಾಮೂಹಿಕ ವಿವಾಹಗಳನ್ನು ನೆರವೇರಿಸಲಾಗುತ್ತದೆ . ಈಗ ಸಿದ್ದಪ್ಪ ಅವರ ಕುಟುಂಬಸ್ಥರು ಅವರ ಮಗ ಮುಂದುವರೆಸಿಕೊಂಡು ಹೋಗುತ್ತಿದ್ದಾರೆ.

ಬದಲಾಯಿಸಿ

ಪ್ರವಾಸಿ ತಾಣ

ಬದಲಾಯಿಸಿ

ಇದು ಈಗ ಜನಗಳಿಗೆ ತಿಳಿದು ಪ್ರವಾಸ ತಾಣ ವಾಗಿದೆ. ಸಾವಿರಾರು ಜನರು ಬಂದು ದೇವರ ದರ್ಶನ ಪಡೆಯುತ್ತಾರೆ. ಇಲ್ಲಿನ ಮತ್ತೊಂದು ವಿಶೇಷತೆ ಏನೆಂದರೆ ಬೂದು ಹಾಗೂ ಕಪ್ಪು ಮಿಶ್ರಿತ ವಾದ ಮಣ್ಣು ಸಿಗುತ್ತದೆ . ಇದರಿಂದ ಒಳ್ಳೆ ಪಸಲು ಬರುತ್ತದೆ . ಸುತ್ತ ಮುತ್ತಲು ಹಲವು ಪ್ರವಾಸಿ ತಾಣ ಮತ್ತು ಧಾರ್ಮಿಕ ಕ್ಷೇತ್ರಗಳು ಇವೆ , ತೀರ್ಥ ರಾಮೇಶ್ವರ ಇದು ದಕ್ಷಿಣ ಕಾಶಿ ಎಂದು ಪ್ರಸಿದ್ಧಿಯಾಗಿದೆ ಹಾಗೂ ರಾವಣನಿಂದ ಲಿಂಗವು ಚಿದ್ರವಾದಾಗ ಇಲ್ಲಿ ಒಂದು ತುಂಡು ಬಿದಿತ್ತು ಇಲ್ಲಿ ಗಂಗೆ ಬಾಯಿ ಇಂದ ನೀರು ಬರುತ್ತದೆ ಆದರೆ ಅದು ಎಲ್ಲಿಂದ ಬರುತ್ತದೆ ಎಂದು ಯಾರಿಗೂ ತಿಳಿದಿಲ್ಲ ,ಗುಳಿಗುಳಿ ಶಂಕರ ,ವಿಶ್ವ ವಿಖ್ಯಾತ ಜೋಗ ಜಲಪಾತ , ಕೊಡಚಾದ್ರಿ ಬೆಟ್ಟ ಗಳಿವೆ. ಶಿವಮೊಗ್ಗ ಮಲೆನಾಡ ಪ್ರದೇಶವಾಗಿದ್ದು ಈ ದೇವಸ್ಥಾನದ ಪರಿಸರವನ್ನು ನೋಡಿದ ಕೆಂಚಿಕೊಪ್ಪದ ಒಬ್ಬ ನಿರ್ದೇಶಕ "ಬೆಳ್ಳಿ ಬೆಟ್ಟ" ಎಂಬ ಚಲನಚಿತ್ರವನ್ನು ಕರಡಿ ಗುಡ್ಡದ ಸುತಾಮುತ ಚಿತ್ರೀಕರಿಸಿದ್ದಾರೆ . ಮಲೆನಾಡ ಸೊಬಗನ್ನು ಹಾಗೂ ದೇವಸ್ಥಾನವನ್ನು ಸವಿಯಲು ಬನ್ನಿ .

ಬದಲಾಯಿಸಿ