ಗಡ್ಡಾಫಿ ಕ್ರೀಡಾಂಗಣ

ಗಡ್ಡಾಫಿ ಕ್ರೀಡಾಂಗಣ[] (ಉರ್ದು: قذافی اسٹیڈیم) ಲಾಹೋರ್, ಪಾಕಿಸ್ತಾನದಲ್ಲಿ ಇರುವ ಕ್ರಿಕೆಟ್ ಮೈದಾನವಾಗಿದೆ. ಇದನ್ನು ಪ್ರಸಿದ್ಧ ವಾಸ್ತುಶಿಲ್ಪಿ ಮತ್ತು ಎಂಜಿನಿಯರ್ ನಾಸಿರುದಿನ್ ಮುರಾಟ್ ಖಾನ್ ವಿನ್ಯಾಸಿದರು. ಈ ಕ್ರೀಡಾಂಗಣವನ್ನು ೧೯೯೬ ಕ್ರಿಕೆಟ್ ವಿಶ್ವಕಪ್‍ಗಾಗಿ ನವೀಕರಿಸಲಾಯಿತು. ಇದು ಪಾಕಿಸ್ತಾನದ ಅತಿ ದೊಡ್ಡ ಕ್ರಿಕೆಟ್ ಕ್ರೀಡಾಂಗಣ; ಇದರ ಸಾಮರ್ಥ್ಯ ೬೦,೦೦೦, ನವೀಕರಣದ ನಂತರ ಇದರ ಸಾಮರ್ಥ್ಯ ೨೭,೦೦೦.

ದಾಖಲೆಗಳು

ಬದಲಾಯಿಸಿ

ಈ ಕ್ರೀಡಾಂಗಣದಲ್ಲಿ, ನ್ಯೂಜಿಲ್ಯಾಂಡಿನ ಪೀಟರ್ ಪಟ್‍ರಿಕ್ ಪಾಕಿಸ್ತಾನ ವಿರುದ್ಧ, ೯ ಅಕ್ಟೋಬರ್ ೧೯೭೬; ಪಾಕಿಸ್ತಾನದ ವಾಸಿಮ್ ಅಕ್ರಮ್ ಶ್ರೀಲಂಕಾ ವಿರುದ್ಧ, ೬ ಮಾರ್ಚ್ ೧೯೯೯; ಪಾಕಿಸ್ತಾನದ ಮೊಹಮದ್ ಸಮಿ ಶ್ರೀಲಂಕಾ ವಿರುದ್ಧ ಹ್ಯಾಟ್ರಿಕ್ ವಿಕೆಟ್ ಪಡೆದಿದ್ದಾರೆ[].

ಟೆಸ್ಟ್ ಪಂದ್ಯಗಳು

ಬದಲಾಯಿಸಿ
  • ಗರಿಷ್ಠ ಇನ್ನಿಂಗ್ಸ್ ಮೊತ್ತ: ೬೯೯ ಪಾಕಿಸ್ತಾನ, ಭಾರತದ ವಿರುದ್ಧ, ೧೯೮೯.
  • ಕಡಿಮೆ ಇನ್ನಿಂಗ್ಸ್ ಮೊತ್ತ: ೭೩ ನ್ಯೂಜಿಲ್ಯಾಂಡ್, ಪಾಕಿಸ್ತಾನದ ವಿರುದ್ಧ, ೨೦೦೨.
  • ಗರಿಷ್ಠ ವೈಯಕ್ತಿಕ ಮೊತ್ತ: ೩೨೯ ಇಂಜಮಾಮ್ ಉಲ್ ಹಕ್, ನ್ಯೂಜಿಲ್ಯಾಂಡ್ ವಿರುದ್ಧ ೨೦೦೨.

ಏಕದಿನ ಪಂದ್ಯಗಳು

ಬದಲಾಯಿಸಿ
  • ಗರಿಷ್ಠ ಇನ್ನಿಂಗ್ಸ್ ಮೊತ್ತ: ೩೭೬ ಪಾಕಿಸ್ತಾನ, ಜಿಂಬಾಬ್ವೆ ವಿರುದ್ಧ, ೨೬ ಮೇ ೨೦೧೫.
  • ಕಡಿಮೆ ಇನ್ನಿಂಗ್ಸ್ ಮೊತ್ತ: ೭೫ ಪಾಕಿಸ್ತಾನ, ಶ್ರೀಲಂಕಾದ ವಿರುದ್ಧ, ೨೨ ಜನವರಿ ೨೦೦೯.
  • ಗರಿಷ್ಠ ವೈಯಕ್ತಿಕ ಮೊತ್ತ: ೧೩೯* ಇಜಾಜ್ ಅಹ್ಮದ್, ಭಾರತ ವಿರುದ್ಧ, ೨ ಅಕ್ಟೋಬರ್ ೧೯೯೭.

ಟ್ವೆಂಟಿ-೨೦

ಬದಲಾಯಿಸಿ
  • ಗರಿಷ್ಠ ಇನ್ನಿಂಗ್ಸ್ ಮೊತ್ತ: ೧೭೬ ಪಾಕಿಸ್ತಾನ, ಜಿಂಬಾಬ್ವೆ ವಿರುದ್ಧ, ೨೪ ಮೇ ೨೦೧೫.
  • ಕಡಿಮೆ ಇನ್ನಿಂಗ್ಸ್ ಮೊತ್ತ: ೧೭೨ ಜಿಂಬಾಬ್ವೆ, ಪಾಕಿಸ್ತಾನ ವಿರುದ್ಧ, ೨೨ ಮೇ ೨೦೧೫.
  • ಗರಿಷ್ಠ ವೈಯಕ್ತಿಕ ಮೊತ್ತ: ೮೩ ಮುಕ್ತಾರ್ ಅಹ್ಮದ್, ಜಿಂಬಾಬ್ವೆ ವಿರುದ್ಧ, ೨೨ ಮೇ ೨೦೧೫.

ಉಲ್ಲೇಖನಗಳು

ಬದಲಾಯಿಸಿ
  1. "Gaddafi Stadium - Pakistan - Cricket Grounds - ESPN Cricinfo". Cricinfo.
  2. http://cricket-freaks.com/hat-tricks-done-by-bowlers-in-test-odi-t20-and-world-cup-cricket/