ಓಂ ಶ್ರೀ ಗುರುಭ್ಯೊನ್ನಮಃ ಶ್ರೀ ಗುರುಶೆಟ್ಟೂರು ನಾರಾಯಣ ಶರ್ಮ ಮತ್ತು ವೇದಾಂತ ಸಂಜೀವಯ್ಯ ವಿಚಾರದಿಂದ ಆಯ್ಕೆ ಅವರ ಶಿಷ್ಯಳು ಶ್ರೀ ಮತಿ ವಿಜಯಲಕ್ಷ್ಮಿ ಶ್ರೀನಿವಾಸಯ್ಯ.


ಮನಸ್ಸು ಮತ್ತು ಧ್ಯಾನ ಇದನ್ನು ಕುರಿತು ಆಲೋಚಿಸಿದರೆ, ವೇದಗಳು ಮತ್ತು ಋಷಿ ಮುನಿಗಳು ನೀಡಿರುವ ವಿಚಾರಧಾರೆಗಳು ನೆನಪಿಗೆ ಬರುತ್ತವೆ. ಮಂದಮತಿಗಳಿಗೆ ಭೋಗಜೀವಿಗಳಿಗೆ ಅವರ ಅನುಭವದ ನುಡಿಗಳು ನುಂಗಲಾರದ ತುತ್ತಾಗಿರುತ್ತದೆ. ಆದರೂ ಅವರ ವಿಚಾರಗಳ ಪುಟಗಳನ್ನು ತಿರುವಿಹಾಕುವ ಯೋಗ್ಯತೆಯಷ್ಟೇ ನಮಗಿರುವುದು. ಸಾಮಾನ್ಯವಾಗಿ ನಾವು ಹೇಳೋದು ಮನಸ್ಸಿದ್ದರೆ ಏನಾದ್ರು ಮಾಡ್ತೀವಿ ಅಂತ, ಮನಸ್ಸಿಲ್ಲದಿದ್ದರೆ ಏನು ಆಗೋಲ್ಲ. ಅದಕ್ಕೆ ನಮ್ಮ ಹಿರಿಯರು ಮನಸ್ಸಿದ್ದರೆ ಮಾದೇವ ಅಂದ್ರು.

ಆ ಮಹದೇವನನ್ನು ಕಾಣಲು || ಶಿವೋ ಭೂತ್ವ ಶಿವಾಂಯಜೇತ್ | ಶಿವನಾಗಿ ಶಿವನನ್ನು ತಿಳಿ |

ಅಂದರೆ ಶುದ್ಧ ಮನಸ್ಸಿನಿಂದ ವಿಷಯವನ್ನು ಯೋಚಿಸಲು, ಚಿಂತನೆ ಇಲ್ಲದೆ ಇರುವ ಮನಸ್ಸಿರಬೇಕು.

ಶ್ರುತಿ || ಮನ್ಸತೆ ಅನೇನೇತಿಮನಃ || ಮನಜ್ಞಾನೇ ಮನು ಅವ ಬೋಧನೆ || ಮನಸೈ ವೇದ ಮಾಪ್ತವ್ಯಂ | ನೇಹ ನಾ ನಾಸ್ತಿ ಕಿಂಚನ ||

ಮನಸ್ಸಿದ್ದರೆ ಅರಿವುಂಟು (ಜ್ಞಾನ), ಮನಸ್ಸಿಲ್ಲದಿದ್ದರೆ ಅರಿವಿಲ್ಲ. ಶುದ್ಧ ಮನಸ್ಸಿನಿಂದಲೇ ಆ ಬ್ರಹ್ಮನನ್ನು ಹೊಂದುತ್ತೇವೆ. ಆಗ ನಾನತ್ವ ಇರುವುದಿಲ್ಲ. ಭಗವಂತನನ್ನು ತಿಳುದುಕೊಳ್ಳಲಿಕ್ಕೆ ಮನಸ್ಸೊಂದೇ ಸಾಧನೆ.

ವಿರಕ್ತಿ ಇಲ್ಲದವರ ಯೋಗಧ್ಯಾನುಷ್ಟಾನ ಸಾಧನಗಳೆಲ್ಲವೂ ಚವಳು ಭೂಮಿಯಲ್ಲಿ ಮಾಡಿದ ಕೃಷಿಯಂತೆ ನಿಷ್ಪ್ರಯೋಜಕ. ಚಂಚಲ ಮನಸ್ಸು ಎರಡು ವಿಧವಾಗಿರುತ್ತವೆ. ಒಂದು, ವಿಷಯಾಸಕ್ತವಾದ ಮನಸ್ಸು ಅಥವಾ ಅಶುದ್ಧ ಮನಸ್ಸು. ಇನ್ನೊಂದು ನಿರ್ವಿಷಯವಾದ ಮನಸ್ಸು ಶುದ್ಧ ಮನಸ್ಸು.

ಧ್ಯಾನಂ ನಿರ್ವಿಷಯಮ್ ಮನಃ | ತದ್ ವಿಶ್ಣೋಪರಮಮ್ ಪದಂ ||

ವಿಷಯ ವೃತ್ತಿಗಳೇ ಇಂದ್ರಿಯಗಳ ಸಮೂಹಗಳೆಂದು ಸಾಧಕನು ಅರಿತಿರಬೇಕು. ವಿಷಯಾಸಕ್ತವಾದ ದಾರಿ ಸೋಮಾರಿಗಳು ಹೋಗುವ ದಾರಿ. ಇನ್ನೊಂದು ಸೋಹಂಪರರು ಹೋಗುವದಾರಿ, ಸತ್ವ ಗುಣವಿರುವ ಶುದ್ಧ ಮನಸ್ಸು. ವಿಷಯ ವಿರಕ್ತಿನಿಂದ ಸೋಹಂಪರರು ಮಾಡಿದ ಧ್ಯಾನ ಫಲಿಸುತ್ತದೆ.

ಮನೋಸ್ಥಿರತೆ ಇಲ್ಲದವರ ಮನಸ್ಸು ಯಾವರೀತಿ ಇರುತ್ತದೆ ಎನ್ನುವುದಕ್ಕೆ ಗುರುಗಳು ಒಂದು ದೃಷ್ಟಾಂತ ಕೊಡುತ್ತಾರೆ. ಒಮ್ಮೆ ಒಬ್ಬರು ಧ್ಯಾನಕ್ಕೆ ಕುಳಿತಿರುತ್ತಾರೆ, ಅದೇ ಸಮಯದಲ್ಲಿ ಹೊರಗಡೆ ಯಾರೋ ಬಂದಂತಾಗುತ್ತದೆ, ಅವರು ಯಾರೆಂದು ಮನಸ್ಸು ಮೆಲ್ಲನೆ ಆಲೋಚಿಸುತ್ತದೆ. ಅವರ ಧ್ವನಿ ಅರಿಯುತಿದ್ದಹಾಗೆ ಅವರ ವ್ಯಕ್ತಿತ್ವ ಮತ್ತು ಗುಣಗಳೆಲ್ಲವೂ ಧ್ಯಾನಕ್ಕೆ ಕುಳಿತಿರುವವರ ಚಿತ್ತಪಟಲಕ್ಕೆ ಬರುತ್ತದೆ. ಆಗ ಅವರ ಮನಸ್ಸು ಬಂದವರ ಆಕಾರದೊಡನೆ ಐಕ್ಯವಾಗುತ್ತದೆ. ಇಂಥಾ ಪರಿಣಾಮವನ್ನು ಧ್ಯಾನ ಕಾಲದಲ್ಲಿ ಆಗದಂತೆ ನೋಡಿಕೊಳ್ಳಬೇಕು.

ತೆಲುಗುನಲ್ಲಿ ಯೋಗಿ ಒಬ್ಬರು ಹೇಳಿದ್ದಾರೆ:

ತಾನು ತನ್ನ ಮನಸ್ಸುನೆರಗಿನ !!!!!!!!!!!!!!!!!!!!!!!!!!

ಮಾನವುನಿಕ ದೃಶ್ಯಮಂತಯು ತಾನೇ ವೆಲುಗನ್


ವಾನಿಕಿ ಸಹಜಾನಂದಮು ಮನಸೇರುಗಣಿ ನಾದಬಿಂದು ಕಳಯೋಗಮುಳಾನ್ ಮನಸೀರುಗನಿಡೀಲೇದ್ಯೆ


ಮನಸೇ ಲೇನಟ್ಟಿ ನಿರ್ಮನಾಸ್ಕಾಮ್ ಮಿಗುಳಂ " ಏಂದು ಮನಸ್ಸು ದೃಶಕಾರವಾಗಿ ನೋಡಿ ಕೊಳ್ಳುವುದೆ ದೊಡ್ಡ ಸಾಧನ . ಧೇಯಾಕಾರದ್ದಲ್ಲಿ ನಿಶ್ಚಲವಾದವನಿಗೆ ಮಾತ್ರ ಸಾಧ್ಯ . ಆತ್ಮನೇ ಸರ್ವ ದೃಕ್ , ಅದೇ ಧ್ಯೇಯ, ಅದೇ ಲಕ್ಷ್ಯ್ಯ (ಗುರಿ) ಧ್ಯೇಯಕಾರದಲ್ಲಿ ನಿಶ್ಚಲವಾಗಿ ನಿಂತರೆ ಆತ್ಮನಲ್ಲಿ ಮನಸ್ಸು ಬೆರೆತಂತಾಯಿತು.

!!!!!!!!!!!!!!!!!!!  !!!!!!!!!!!!!!!!!!!!! !!!!!!!!!!!!!!!!!!!  !!!!!!!!!!!!!!!!!!!!!!

ಅಜ್ಞಾನ ತಿಮಿರಾಂಧಸ್ಯ ಜ್ಞಾನಾರಿಜನಶಲಾಖಯಾ ||

ಎನ್ನುವ ಗುರುಸ್ತುತಿಯಂತೆ ಅಜ್ಞಾನವು (ಅವಿಧ್ಯೆ) ವ್ಯೆಷ್ಟಿ. ಜ್ಞಾನವು ಸಮಷ್ಟಿ (ವಿಧ್ಯೆ) ಗುಣವುಳ್ಳದ್ದು. ಅಜ್ಞಾನ ಅಂಧಕಾರ-ಜ್ಞಾನವು ಪ್ರಕಾಶಸ್ವರೂಪವು. ಅಜ್ಞಾನಾಂಧ ಕಾರವನ್ನು ಹೋಗಲಾಡಿಸಲು ಅಖಂಡವಾದ ಧ್ಯಾನ ಮೂಖ್ಯ.

ಜ್ಞಾನಜ್ಯೋತಿ ಪ್ರಕಾಶದಿಂದ, ಅಜ್ಞಾನಾನಾಂದಕಾರವೆಂಬ ಮೊಸಳೆ ಬಾಯಿಂದಡಬಿಡಿಸಿಕೊಂಡು ಜ್ಞಾನ ಬಿಕ್ಷುಗಳಿಂದ ಆತ್ಮಾನಂದವನ್ನು ಹೊಂದಬಹುದೆನ್ನುವುದಕ್ಕೆ ಶೃತಿ || ಅಜ್ಞಾನ ಕಲುಷಂ ಜೀವಂ | (ಜ್ಞಾನಾಭ್ಯಾಸಾದಿನಿರ್ಮಲಂ) ಅಜ್ಞಾನಂ ಭೇದ ದರ್ಶನಂ | ಅಭೇದ ದರ್ಶನಂ ಜ್ಞಾನಂ ||

ಯೋಗಿಯಾಗಲೀ, ಭೋಗಿಯಾಗಲೀ ಧ್ಯಾನಕ್ಕೆ ಕುಳಿತುಕೊಳ್ಳುವ ಮೊದಲು, ಕೆಲವು ಅಡ್ಡಿ-ಆತಂಕಗಳನ್ನು ದೂರಮಾಡಿಕೊಂಡು ಅಡಚಣೆಯಾಗದಂತೆ ನೋಡಿಕೊಳ್ಳಬೇಕು. ರೈತ ತನ್ನ ಜಮೀನಿನಲ್ಲಿ ಬೆಳೆ ಬೆಳೆಯುವ ಮೊದಲು, ಆ ನೆಲವನ್ನು ಸ್ವಛ್ಛಗೊಳಿಸಿ, ಅದಕ್ಕೆ ಬೇಕಾದ ಹದ ಮಾಡಿಕೊಂಡು ಬೀಜ ಬಿತ್ತಿದರೆ ಬೆಳೆ ಸೊಗಸಾಗಿ ಬರುವಂತೆಯೇ, ಧ್ಯಾನಕ್ಕೆ ಕುಳಿತವರು ಯಾರೆ ಆಗಲೀ ನಿರ್ವಿಶಯಗಳ ರಹಿತವಾಗಿ ಏಕಾಗ್ರಚಿತ್ತದಿಂದ ಧ್ಯಾನ ಸಮಾಧಿಯಲ್ಲಿ ಆನಂದವನ್ನು ಹೊಂದುವಂತೆ ಆಗಬೇಕು

ಧ್ಯಾನಂ ನಿರ್ವಿಷಯಂಮಃ || ತಸ್ಯನಿಸ್ಚಿಂತಾಧ್ಯಾನಂ | ಸರ್ವಕರ್ಮನಿರಾಕರಣಂ||

ಎಂದಿದ್ದಾರೆ ಆಚಾರ್ಯರು. ಹೀಗಿರುವಾಗ ತೋರಿಕೆಗಾಗಿ ಅಥವಾ ಸಂಪ್ರದಾಯಕವಾಗಿ ಏನಾದರು ಕೆಲವು ಘಂಟೆಗಳ ಕಾಲ ಧ್ಯಾನ ಮಾಡಿದರೆ ಗುರಿ ಸಾಧನೆ ಆಗಲಾರದು.


ಒಂದು ಸಾರಿ ಒಬ್ಬ ರಿಷ್ಯ ಗುರುಗಳ ಬಳಿ ಬಂದು ಹೀಗೆ ಕೇಳುತ್ತಾನೆ: "ಸ್ವಾಮಿ! ಗುರುಗಳೆ ನನಗೆ ಧ್ಯಾನ ಕುದುರಲಿಲ್ಲವೇಕೆ? ಎಷ್ಟು ಪ್ರಯತ್ನಿಸಿದರೂ ಮನಸ್ಸು ಸ್ಥಿರವಾಗಿ ಒಂದು ಕಡೆ ನಿಲ್ಲುವುದಿಲ್ಲ. ಇದಕ್ಕೇನು ಮಾಡಬೇಕೆಂದು" ಪ್ರಶ್ನಿಸುತ್ತಾನೆ. ಅದಕ್ಕೆ ಗುರುಗಳು ಹೇಳುತ್ತಾರೆ "ಎಲೆ! ಶಿಷ್ಯನೇ ಧ್ಯಾನಕ್ಕೆ ಬೇಕಾದ ಉಪಕರಣಗಳನ್ನು ಮೊದಲು ಸಜ್ಜು ಮಾಡಿಕೋಬೇಕು ನಂತರ ಪ್ರಯತ್ನಿಸು, ಧ್ಯಾನ ಕುದುರುತ್ತದೆ. ಸಣ್ಣ-ಸಣ್ಣ ದೋಣಿಯಲ್ಲಿ ಕುಳಿತು ಸಮುದ್ರವನ್ನು ದಾಟಲಾಗುವುದಿಲ್ಲ, ಸಮುದ್ರವನ್ನು ದಾಟಬೇಕಾದರೆ ದೃಢವಾದ ಸ್ಟೀಮರ್ ಹೇಗೆ ಅವಶ್ಯಕವೋ ಹಾಗೆ, ಭವಸಾಗರವನ್ನು ದಾಟಲು ದೇಹೇಂದ್ರಿಯಗಳಿಗೆ ವಿಲಕ್ಷಣವಾದ ಶುದ್ಧ ಮನಸ್ಸು ಭೂರಾದಿ ಸಪ್ತ ಲೋಕಗಳನ್ನು ದಾಟಿಸಿ ಶಿವನನ್ನು ನೋಡಿ ಅಮೃತತ್ವವನ್ನು ಹೊಂದಿಸುವುದು. ಇಂಥಾ ಮನಸ್ಸನ್ನು ಸ್ವಾಧೀನ ಪಡಿಸಿಕೊಳ್ಳುವುದೇ ಜ್ಞಾನ ಸಾಧನೆ ಅಥವಾ ಜ್ಞಾನ ಯೋಗ.

ಸಂಘೇಶಕ್ತಿ ಕಲೌಯುಗೇ || ಇಂದ್ರಿ ಯಾಣಿ ಹಯಾನಾಹುರ್ವಿಷಯಾ ರಿಸ್ತೇಷು ಗೋಚರ್ಕ | ಆತ್ಮೇಂದ್ರಿಯ ಮನೋಯುಕ್ತಂ | ಭೋಕ್ತೇತ್ಸಾಹುರ್ಮನೀಷಣಃ ||

ಶರೀರೇಂದ್ರಿಯ ಮನಸ್ಸಿನೊಡನೆ ಸೇರಿದ ಆತ್ಮನು ಬೋಕ್ತನೆಂದು ವಿದ್ವಾಂಸರು ಹೇಳಿರುತ್ತಾರೆ.

ಆತ್ಮನಂ ರಥಿನಂ ವಿದ್ಧಿ | ಶರೀರಂ ರಥಮೇವಚ | ಬುದ್ಧಿಂತು ಸಾರಥಿಂತು ವಿದ್ಧಿಮನಃ | ಪ್ರಗ್ರಹ ಮೇವಚ ||

ಆಧ್ಯಾತ್ಮ ಮಾರ್ಗವೆಂದರೇನೋ, ಆ ಮಾರ್ಗಗಳಲ್ಲಿರುವ ಅನುಭವಗಳೇನೋ, ಅವುಗಳನ್ನು ಹೊಂದುವ ವಿಧಾನ ಯಾವುದೋ ಎಂದು ತಿಳಿಯದವರೆಲ್ಲರೂ ತಮ್ಮ ಇಷ್ಟುದೈವತೆ ಮುಂದೆ ಕಣ್ಮುಚ್ಚಿ ಕುಳಿತುಕೊಂಡ ಕೂಡಲೇ ಧ್ಯಾನ ಫಲಿಸಿತು ಎಂದು ಕೊಳ್ಳುವುದು ಸರಿಯಲ್ಲ. ಈಗ ಆಲೋಚನೆ ಮಾಡಿ ನೋಡಿ ಸರಿಯೋತಪ್ಪೋ ಎಂದು, ಹೊಟ್ಟೆಪಾಡಿಗಾಗಿ ಒಬ್ಬ ಮನುಷ್ಯ ದಿನಗೂಲಿ ಕೆಲಸ ಮಾಡಿ ದಿನವಿಡೀ ದುಡಿದು ಹಣ ಸಂಪಾದಿಸಬೇಕು, ಅದರಂತೆ ತಿಂಗಳಾವಧಿ ತನಕ ಮಾಡಿಯಾದರೂ ಹೆಚ್ಚಿನ ಹಣ ಸಂಪಾದಿಸುತ್ತಾನೆ. ಇಷ್ಟಾದರು ತನ್ನ ಕುಟುಂಬ ನಿರ್ವಹಣೆಗೆ ಸಾಲದೆ ಕೊರಗುತ್ತಾನೆ. ಬೋನಸ್ ಹಣ ಮತ್ತು ಪಿ.ಎಫ್ ಹಣ ಬಂದರೂ ಸಾಲುವುದಿಲ್ಲ. ಅಲ್ಲಿಗೆ ಅವನ ಶ್ರಮ ಎಷ್ಟಾಯಿತು. ಅಂಥಾದ್ದರಲ್ಲಿ ಚಂಚಲ ಮನಸ್ಸಿನ ಕೆಲವು ಘಂಟೆಗಳಲ್ಲಿ ಧ್ಯೇಯ ಸಾಧನೆ ಆಗುವುದೇ! +++++++++++++++++++++++++++

ಸಂಸಾರ ಸಾಗರಂದು:ಖಂ ತಸ್ಮಾದ್ ಜಾಗ್ರತ ಜಾಗ್ರತ ||

ಎಂದು ಎಚ್ಚರಿಸುವ ಆಚಾರ್ಯರು, ಈ ಕಣ್ಣಿನ ಮುಂದೆ ಬಹಳ ಆಕರ್ಷಣೀಯವಾಗಿ ಗೋಚರಿಸುತ್ತ ಕೈಚಾಚಿದರೆ ಸಾಕು ಸಿಗುವಂಥ ಪ್ರಪಂಚ ಸುಖವನ್ನು ಕಾಲಿನಿಂದ ಒದೆಯಬೇಕು. ಸಂಸಾರ ಸುಖಕ್ಕಾಗಿ, ಸಂತೋಷಕ್ಕಾಗಿ ದಿನವಿಡೀ ಬೆವರು ಸುರಿಸುರಿಸಿ ಶ್ರಮ ಪಡುತ್ತೇನೆ, ಹೀಗಿರುವಾಗ ಆಧ್ಯಾತ್ಮಿಕ ಆಹಾರಕ್ಕಾಗಿ ಜನ್ಮರಾಹಿತ್ಯವನ್ನೇ ಪ್ರಸಾದಿಸಿ ಆನಂದ ಸಗರದಲ್ಲಿ ಮುಳುಗಿಸುವ ಜ್ಞಾನ ಧನಕ್ಕೋಸ್ಕರ ಎಷ್ಟು ಶ್ರಮ ಪಡಬೇಕಾಗುತ್ತದೋ ಎಂದು ಆಲೋಚಿಸಬೇಕು. ಮಾನವನು ಸ್ಥೂಲ ಶರೀರದಿಂದ ಕಷ್ಟಪಟ್ಟು ಜೀವಿಸಿಕೊಂಡಿದ್ದು ಸೂಕ್ಷ್ಮ ಶರೀರ ಸಂಬಂಧವಾದ ಸಂಕಲ್ಪ ಮತ್ತು ಅಹಂಕಾರವನ್ನು ಬಿಟ್ಟು ಜೀವ ಸೃಷ್ಟಿಯನ್ನು ತ್ಯಾಗ ಮಾಡಿ ಬ್ರಹ್ಮನಿಷ್ಟೆಯಲ್ಲಿ ನಿಂತು ಜ್ಞಾನಾನಂದ ಅನುಭವನಾದರೆ ಅವನೇ ಜೀವನ್ಮುಕ್ತನು. ಈ ಮುಕ್ತಿಗಾಗಿಯೂ ಸೂಕ್ಷ್ಮ ಶರೀರದಿಂದ ದುಡಿಯಬೇಕು. ಪ್ರಯತ್ನ ಪೂರ್ವಕವಾಗಿ ಮನಸ್ಸನ್ನು ಹದಗೊಳಿಸಿ.

ಶಿವೋಭೂತ್ವ ಶಿವಂಯಜೇತ್ | ಶಿವನಾಗಿ ಶಿವನನ್ನು ತಿಳಿಯಬೇಕೆಂದು ಶೃತಿ ತಿಳಿಸುತ್ತಾನೆ.

ಧ್ಯಾನ ಸಮಾಧಿಯಲ್ಲಾಗಲೀ, ಬ್ರಹ್ಮಚಿಂತನೆಯಲ್ಲಾಗಲೀ ಇರತಕ್ಕವರು ಧ್ಯಾತನನ್ನು ಧ್ಯೇಯವನ್ನು ಏಕತ್ವ ಮಾಡಲು ಯಾವ ವೃತ್ತಿಗಳೂ ಇಲ್ಲದವರಾಗಿ ಅಜ್ಞಾನ ವೃಕ್ಷದಿ ಮೂಲಬೇರನ್ನು ಕತ್ತರಿಸಿದವರಾಗವರು. ಜ್ಞಾನಿಯಾದವನು ಮನಸ್ಸನ್ನು ದೈವ (ಆತ್ಮ) ಮಯವಾಗಿ ಬದಲಾಯಿಸುವನು. ಅಜ್ಞಾನಿ ಆತ್ಮ ಮನೋರೂಪವಾಗಿ ಬದಲಾಯಿಸುವುದರಿಂದ ವಿಷಯದಲ್ಲಿ ಮುಳುಗಿ ಹೋಗುತ್ತಾನೆ. ಜೀವರು ಅನೇಕರು ಈಶ್ವರನು ಒಬ್ಬನೇ. ಜೀವನು ಈಶ್ವರನನ್ನೇ ಶರಣಾಗತಿ ಹೊಂದಬೇಕು ಅಂದರೆ ಶಿವನಲ್ಲಿ ಐಕ್ಯವಾಗಬೇಕು. ಶಿವನಲ್ಲಿ ಐಕ್ಯವಾಗಲು ಧ್ಯಾನ ಸಾಧನ ಮುಖ್ಯ.

ದಾಸೋಹಂ ಎಂದು ಧ್ಯಾನ ಮಾಡಿದರೂ ಸರಿಯೇ | ಶಿವೋಹಂ ಎಂದು ಧ್ಯಾನ ಮಾಡಿದರೂ ಸರಿಯೇ |

ಉಪ್ಪನ್ನು ನೀರಿನಲ್ಲಾದರು ಹಾಕು, ನೀರನ್ನು ಉಪ್ಪಿಗೆ ಹಾಕು ಎರಡೂ ಕರಗಿ ಒಂದೇ ಆಗುವಂತೆ. ಶಿವನನ್ನು ಕುರಿತು ಮಾಡಿದ ಧ್ಯಾನ ಶಿವನೇ ಆಗುವಂತೆ.

ಶಿವೋಭೂತ್ವ ಶಿವಂಯಜೇತ್ || ಓಂ ತತ್ಸತ್