ಸದಸ್ಯ:Guru Sharan N/sandbox1
ಬಾಗನ್
ಬದಲಾಯಿಸಿಬಗಾನ್ ಮಯನ್ಮಾರ್‍ನ ಮಂಡಾಲೆ ಪ್ರದೇಶದ ಪುರಾತನ ನಗರ[೧]. ಈ ನಗರವು ೯ ರಿಂದ ೧೩ನೇ ಶತಮಾನಗಳ ಕಾಲ ಪಗಾನ್ ಸಾಮ್ರಾಜ್ಯದ ರಾಜಧಾನಿಯಾಗಿತ್ತು. ಬಗಾನ್ ಬರ್ಮೀಸ್ ಪದವಾದ ಪುಗನ್ನ ಈಗಿನ ಉಚ್ಚಾರಣೆ.
೧೧ ಮತ್ತು ೧೩ ನೇ ಶತಮಾನಗಳ ನಡುವೆ ರಾಜ್ಯದ ಅವಧಿಯಲ್ಲಿ, ೧೦,೦೦೦ ಬೌದ್ಧ ಮಂದಿರಗಳು, ಪಗೋಡಗಳು ಮತ್ತು ಧಾರ್ಮಿಕ ಕ್ಷೇತ್ರಗಳು ಬಗಾನ್‍ನ ಬಯಲಿನಲ್ಲಿ ನಿರ್ಮಾಣಮಾಡಿದ್ದರು. ಇಂದಿಗೂ ೨,೨೦೦ ಮಂದಿರಗಳ ಮತ್ತು ಪಗೋಡಗಳ ಶೇಷಗಳನ್ನು ಕಾಣಬಹುದು. ಬಗಾನ್ ಉತ್ತರ ವಲಯ ದೇಶದ ಪ್ರವಾಸೋದ್ಯಮದ ಒಂದು ಪ್ರಮುಖ ತಾಣವಾಗಿದೆ.
ಇತಿಹಾಸ
ಬದಲಾಯಿಸಿಬರ್ಮ್ದ ಚರಿತ್ರೆಯಲ ಪ್ರಕಾರ, ಬಗಾನ್ ಪ್ರದೇಶವನ್ನು ಕ್ರಿ.ಶ. ಎರಡನೆಯ ಶತಮಾನದಲ್ಲಿ ಸ್ಥಾಪಿಸಲಾಯಿತು ಮತ್ತು ರಾಜ ಪ್ಯಿನ್ಬ್ಯ್ ಕ್ರಿ.ಶ. ೮೪೯ರಲ್ಲಿ ಕೋಟೆಗಳನ್ನು ಕಟ್ಟಿದ್ದರು. ಬಗಾನ್ ೧೦೪೪ರಿಂದ ೧೨೮೭ತನಕ ಪಾಗನ್ ಸಾಮ್ರಾಜ್ಯದ ರಾಜಕೀಯ, ಆರ್ಥಿಕ ಮತ್ತು ಸಾಂಸ್ಕೃತಿಕ ರಾಜಧಾನಿ ಹಾಗೂ ರಾಜ್ಯದ ಮುಖ್ಯ ಕೇಂದ್ರವಾಗಿತ್ತು. ೨೫೦ ವರ್ಷಗಳ ಅವಧಿಯಲ್ಲಿ, ಬಗಾನ್ ತಂಡದ ಆಡಳಿತಗಾರರು ಮತ್ತು ಶ್ರೀಮಂತ ಜನರು ಸುಮಾರು ೧೦೦೦ ಬೌದ್ಧ ಸ್ತೂಪಗಳು, ೧೦,೦೦೦ ಸಣ್ಣ ದೇವಾಲಯಗಳು ಮತ್ತು ೩೦೦೦ ಮಠಗಳನ್ನು ನಿರ್ಮಿಸಿದ್ದಾರೆ [೨] . ಈ ನಗರಕ್ಕೆ ಭಾರತ, ಶ್ರೀಲಂಕಾ ಮತ್ತು ಕೇಮರ್ ಸಾಮ್ರಾಜ್ಯದ ಸನ್ಯಾಸಿಗಳು ಮತ್ತು ವಿದ್ಯಾರ್ಥಿಗಳನ್ನು ಆಕರ್ಷಿಸಿತು.
೧೨೭೭ ಮತ್ತು ೧೩೦೧ರ ಕಾಲದಲ್ಲಿ ಪಾಗನ್ ಸಾಮ್ರಾಜ್ಯವನ್ನು ಮಂಗೋಲರು ಪದೇ ಪದೇ ಆಕ್ರಮಣ ಮಾಡಿದ ಕಾರಣ, ಪಗಾನ್ ಸಾಮ್ರಾಜ್ಯವು ೧೨೮೭ರಲ್ಲಿ ಕುಸಿಯಿತು. ಮ್ಯಿಂಸೈಂಗ್ ಸಾಮ್ರಾಜ್ಯ ಉತ್ತರ ಬರ್ಮಾದಲ್ಲಿ ಹೊಸ ಅಧಿಕಾರಕ್ಕೆ ಬಂದಮೇಲೆ, ಡಿಸೆಂಬರ್ ೧೨೯೭ರಲ್ಲಿ ಬರ್ಮಾದ ರಾಜಧಾನಿಯಾಗಿ ಮುಂದುವರೆಯಿತು. ಬಗಾನ್ ಒಂದು ಮಾನವ ನೆಲೆಸುವಿಕೆಯನ್ನು ಕಂಡಿತು ಮತ್ತು ಅವಧಿಯುದ್ದಕ್ಕೂ ತೀರ್ಥಯಾತ್ರೆಯ ತಾಣವಾಗಿ ೧೫ನೇ ಶತಮಾನದ ತನಕ ಉಳಿದುಕೊಂಡಿತು.