ಗ್ಲೋರಿ

ಸ್ವವಿವರ

ಬದಲಾಯಿಸಿ

ನನ್ನ ಹೆಸರು ಗ್ಲೋರಿ.ಸಿ .ನಾನು ೧೯೯೭ರ ಜನವರಿ ೭ರಂದು ಬೆಂಗಳೂರಿನಲ್ಲಿ ಹುಟ್ಟಿದೆನು.ನನ್ನ ತಂದೆಯ ಹೆಸರು ಶ್ರೀ ಜಾರ್ಜ್ ಮತ್ತು ತಾಯಿಯ ಹೆಸರು ಶ್ರೀಮತಿ ಲಿಸಿಯಮ್ಮ.ನನ್ನ ತಂದೆ ಖಾಸಗಿ ವೃತ್ತಿಯೊಂದನ್ನು ಮಾಡುತ್ತಿದ್ದಾರೆ ಹಾಗೂ ತಾಯಿ ಸರಕಾರಿ ಆಸ್ಪತ್ರೆಯೊಂದರಲ್ಲಿ ಶುಶ್ರೂಷಕಿಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.ನನಗೆ ಸಹೋದರ, ಸಹೋದರಿಯರು ಯಾರೂ ಇಲ್ಲ.ನನ್ನ ತಂದೆ ತಾಯಿಗೆ ನಾನು ಒಬ್ಬಳೇ ಮಗಳು.ನಾನು ೨೦೦೧ರಲ್ಲಿ ಎಲ್.ಕೆ.ಜಿ ವಿದ್ಯಾರ್ಥಿಯಾಗಿ ‍‍‍ಕ್ರೈಸ್ಟ್ ಶಾಲೆಗೆ ಸೇರಿದಲ್ಲಿಂದ ಹತ್ತನೇ ತರಗತಿಯವರೆಗೂ ಅದೇ ಶಾಲೆಯ ವಿದ್ಯಾರ್ಥಿಯಾಗಿ ವಿದ್ಯಾಭ್ಯಾಸ ಮಾಡಿದ್ದೇನೆ.೨೦೧೩ರಲ್ಲಿ ಹತ್ತನೇ ತರಗತಿಯಿಂದ ೯೧.೩೬%ನೊಂದಿಗೆ ತೇರ್ಗಡೆಯಾಗಿದ್ದೇನೆ.ಹನ್ನೊಂದು ಮತ್ತು ಹನ್ನೆರಡನೆ ತರಗತಿಯ ವಿದ್ಯಾಭ್ಯಾಸವನ್ನು ಕ್ರೈಸ್ಟ್ ಕಿರಿಯ ಕಾಲೇಜಿನಲ್ಲಿ ೨೦೧೩ರಿಂದ ೨೦೧೫ರ ಅವಧಿಯಲ್ಲಿ ಮುಗಿಸಿದ್ದೇನೆ.ವಿಜ್ಞಾನ ವಿಭಾಗದ ವಿದ್ಯಾರ್ಥಿಯಾದ ನಾನು ೮೧% ಅಂಕಗಳೊಂದಿಗೆ ೨೦೧೫ರಲ್ಲಿ ತೇರ್ಗಡೆಯಾಗಿದ್ದೇನೆ.ಅನಂತರ ೨೦೧೫ ಏಪ್ರಿಲ್ ತಿಂಗಳಿನಲ್ಲಿ ಕರ್ನಾಟಕದ ವೃತ್ತಿಪರ ಶಿಕ್ಷಣಕ್ಕಾಗಿ ನಡೆದ ಪ್ರವೇಶ ಪರೀಕ್ಷೆಯಲ್ಲಿ ಭಾಗವಹಿಸಿದ್ದೆ.ಅದರಲ್ಲಿ ಫಾರ್ಮ್.ಡಿ ಎಂಬ ವೃತ್ತಿಪರ ಶಿಕ್ಷಣಕ್ಕೆ ಆಯ್ಕೆಯಾಗಿದ್ದೆ.ಆದರೆ ವೈಯಕ್ತಿಕ ಕಾರಣಗಳಿಂದ ನನಗೆ ಆ ಶಿಕ್ಷಣಕ್ಕೆ ಹೋಗಲು ಅಸಾಧ್ಯವಾಯಿತು.ಆದುದರಿಂದ ಮುಂದಿನ ವಿದ್ಯಾಭ್ಯಾಸಕ್ಕಾಗಿ ಕ್ರೈಸ್ಟ್ ವಿಶ್ವವಿದ್ಯಾನಿಲಯಕ್ಕೆ ೨೦೧೫ರಲ್ಲಿ ಸೇರಿಕೊಂಡಿದ್ದೇನೆ.ಈಗ ನಾನು ಮೊದಲನೇ ವರ್ಷದ ಪದವಿಪೂರ್ವ ಶಿಕ್ಷಣದ ವಿದ್ಯಾರ್ಥಿಯಾಗಿ ವಿಜ್ಞಾನ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದೇನೆ.ಪದವೀಧರೆ ಆದ ನಂತರ ಸ್ನಾತಕೋತ್ತರ ಪದವಿಯನ್ನು ಕೂಡ ಮಾಡಬಯಸುತ್ತೇನೆ. ಸ್ನಾತಕೋತ್ತರ ಪದವಿ ಪಡೆದ ನಂತರ ಒಂದು ಉತ್ತಮ ಉಪನ್ಯಾಸಕಳಾಗಿ ಮುಂಬರುವ ವಿದ್ಯಾರ್ಥಿಗಳಿಗೆ ಮಾದರಿಯಾಗಬೇಕೆಂದು ಬಯಸುತ್ತೇನೆ.

ಜೀವನದ ಅಭಿರುಚಿಗಳು

ಬದಲಾಯಿಸಿ

ನನಗೆ ಚಿಕ್ಕಮಕ್ಕಳೆಂದರೆ ಬಲು ಇಷ್ಟ.ಕಷ್ಟದಲ್ಲಿರುವವರನ್ನು ಕಂಡರೆ ಸಹಾಯ ಮಾಡಬೇಕೆಂದು ಬಯಸುತ್ತೇನೆ.ನನಗೆ ಗೆಳೆಯರ ಜೊತೆಯಲ್ಲಿ ಆಟವಾಡಲು ಬಲು ಇಷ್ಟ.ಅದರಲ್ಲೂ ಓಟದ ಸ್ಪರ್ಧೆ,ಚೆಂಡು ಎಸೆತ ಸ್ಪರ್ಧೆ ಎಂದರೆ ಬಹಳ ಇಷ್ಟ.ಎನ್.ಸಿ.ಸಿ ಕಡೆಗೆ ನನಗೆ ಬಹಳ ಒಲವು ಇತ್ತು.ಎರಡು ವರ್ಷಗಳ ಕಾಲ ನಾನು ಎನ್.ಸಿ.ಸಿಯಲ್ಲಿ ಇದ್ದೆ.ಆದರೆ ಅದನ್ನು ಮುಂದುವರಿಸಲು ಕಾರಣಾಂತರಗಳಿಂದ ಆಗಲಿಲ್ಲ.ಸಮಾಜ ಸೇವೆ ಮಾಡುವುದೆಂದರೆ ನನಗೆ ತುಂಬ ಸಂತೋಷದ ವಿಷಯ.ನನಗೆ ಊಟಮಾಡುವುದೆಂದರೆ ಅಷ್ಟೋಂದು ಇಷ್ಟವಿಲ್ಲ.ಆದರೆ ಕರಿದ ತಿಂಡಿಗಳೆಂದರೆ ನನಗೆ ಬಲು ಇಷ್ಟ.ಒಳ್ಳೆಯ ಬರವಣಿಗೆ ನನಗಿದೆ.ಅಧ್ಯಾಪಕರೆಲ್ಲರೂ ನನ್ನ ಬರವಣಿಗೆಯನ್ನು ಇಷ್ಟಪಡುತ್ತಾರೆ.ನನ್ನ ಬರವಣಿಗೆ ಅಂದವಾಗಿರಲು ಮುಖ್ಯಕಾರಣವೆಂದರೆ ನಾನು ಏಳನೇ ತರಗತಿಯಲ್ಲಿ ಓದುತ್ತಿರುವಾಗ ನನ್ನ ತರಗತಿಯ ಅಧ್ಯಾಪಕಿಯಾಗಿದ್ದ ಸಾಲಿ ಎಂಬುವವರು.ನಾನು ಕೆಲವು ಸಂದರ್ಭಗಳಲ್ಲಿ ಬಹಳ ಕೋಪಿಷ್ಠೆ.ಯಾವುದೇ ಒಂದು ಕೆಲಸವನ್ನು ವೇಗವಾಗಿ ಮಾಡುವುದಿಲ್ಲ.ಬಹಳ ನಿಧಾನ ಪ್ರವೃತ್ತಿಯುಳ್ಳವಳು.ಆಯಾಯ ಪಾಠಗಳನ್ನು ಅಂದೇ ಓದಿ ಮುಗಿಸುವ ಸ್ವಭಾವ ನನಗಿಲ್ಲ.ಎಲ್ಲಾ ಪರೀಕ್ಷೆ ಹತ್ತಿರ ಬರುವಾಗ ನೋಡಿಕೊಳ್ಳೋಣ ಎಂದು ಮುಂದೂಡುತ್ತೇನೆ.ಮನೆಯಲ್ಲಿ ತಂದೆ ತಾಯಿಯರ ಮಾತಿಗೆ ಬಹಳ ಬೇಗನೆ ಉತ್ತರಿಸುವುದಿಲ್ಲ.ಮನೆಯ ಕೆಲಸಗಳೆಲ್ಲಾ ತಂದೆ ತಾಯಿಯರ ಹತ್ತಿರ ಬಯ್ಯಿಸಿಕೊಂಡರೆ ಮಾತ್ರ ಮಾಡುತ್ತೇನೆ.ನಾನಾಗಿ ಇಷ್ಟಪಟ್ಟು ಮಾಡುವ ಕೆಲಸಗಳು ಬಹಳ ವಿರಳ.

ಅನುಭವಗಳು

ಬದಲಾಯಿಸಿ

ನನ್ನ ಇಲ್ಲಿಯವರೆಗಿನ ಜೀವನದಲ್ಲಿ ಕೆಲವು ಮರೆಯಲಾಗದ ಅನುಭವಗಳಿವೆ.ನಾನು ೨೦೧೩ರಲ್ಲಿ ದೆಹಲಿಗೆ ಹದಿನೈದು ದಿನಗಳ ಪ್ರವಾಸಕ್ಕಾಗಿ ಹೋಗಿದ್ದೆ.ಅಲ್ಲಿ ಎಂಟು ಅದ್ಭುತಗಳಲ್ಲಿ ಒಂದಾದ ತಾಜ್ ಮಹಲನ್ನು ಕಾಣುವ ಅವಕಾಶ ನನಗೆ ದೊರಕಿತು.ಕೆಂಪು ಕೋಟೆ,ಚಾರ್ಮಿನಾರ್,ಲೋಟಸ್ ಟೆಂಪಲ್ ಮುಂತಾದ ಸ್ಥಳಗಳಿಗೆ ಭೇಟಿ ನೀಡಿದೆವು.ಅದು ನನಗೆ ಬಹಳ ಸಂತೋಷವನ್ನು ಉಂಟುಮಾಡಿದೆ.ನಾನು ೨೦೧೨ರಲ್ಲಿ ಹತ್ತು ದಿವಸದ ಎನ್.ಸಿ.ಸಿ ಶಿಬಿರದಲಿದ್ದಾಗ ನಮಗೆ ಚೆಂಡು ಎಸೆತಕ್ಕೆ ದ್ವಿತೀಯ,ನೃತ್ಯಕ್ಕೆ ಮೊದಲನೆ ಸ್ಥಾನ ಸಿಕ್ಕಿತು ಹಾಗು ನನಗೆ ೧೦೦ ಮೀಟರ್ ಓಟದ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಸಿಕ್ಕಿದು ಬಲು ಸಂತೋಷಕರವಾದ ಅನುಭವಗಳು.

 This user is a member of WikiProject Education in India



ಉಪಪುಟಗಳು

ಬದಲಾಯಿಸಿ

In this ಸದಸ್ಯspace:

ಸದಸ್ಯರ ಚರ್ಚೆಪುಟ:
Glory c george