ಸದಸ್ಯ:Girishhn11/ನನ್ನ ಪ್ರಯೋಗಪುಟcredit rating
ಕ್ರೆಡಿಟ್ ರೇಟಿಂಗ್
ಕ್ರೆಡಿಟ್ ರೇಟಿಂಗ್ ಎಂದರೆ ಒಬ್ಬ ಸಾಲಗಾರನು ಸಾಲ ಮರುಪಾವತಿ ಮಾಡಲು ಎಷ್ಟು ಅರ್ಹನಿದ್ದಾನೆ, ಎಂದು ಪರೀಶೀಲಿಸಿ ಅವರಿಗೆ ಅಂಕಗಳನ್ನು ಕೊಡುವುದನ್ನು ನಾವು ಕ್ರೆಡಿಟ್ ರೇಟಿಂಗ್ ಎನ್ನುತ್ತೇವೆ.ಒಬ್ಬ ಅಂದರೆ ಅವನು ವ್ಯಕ್ತಿಯೇ ಆಗಬೇಕೆಂದಿಲ್ಲ. ಅದು ಒಂದು ಸಂಸ್ಥೆ , ಸರ್ಕಾರ , ಕಂಪೆನಿ,ಅಥವಾ ಒಂದು ವ್ಯಾಪರ ಸಹ ಆಗಿರಬಹುದು.ಕ್ರೆಡಿಟ್ ರೇಟಿಂಗ್ ಅನ್ನು ಕ್ರೆಡಿಟ್ ರೇಟಿಂಗ್ ಏಜೆಂಸಿಗಳು ಮಾಡುತ್ತವೆ.ಈ ಏಜೆಂಸಿಗಳು ಸಾಲಗರನ ಗುಣಾತ್ಮಕ ಹಾಗು ಪರಿಣಾತ್ಮಕ ಮಾಹಿತಿಗಳನ್ನು ಪರೀಶೀಲಿಸಿ ಅವನಿಗೆ ಅಂಕಗಳನ್ನು ನೀಡುತ್ತದೆ.ಅವನಿಗೆ ಹೆಚ್ಚು ಅಂಕಗಳಿದ್ದರೆ ಅವನಿಗೆ ಸಾಲ ಕೊಡಬಹುದೆಂದು ಅರ್ಥ. ಕಡಿಮೆ ಅಂಕಗಳಿದ್ದರೆ ಅವನನ್ನು ನಂಬಲು ಕಷ್ಟ ಎಂದು ಅರ್ಥ. ಈ ಕೆಲಸವನ್ನು ಕ್ರೆಡಿಟ್ ಏಜೆಂಸಿಯ ವಿಶ್ಲೇಷಕರು ಮಾಡುತ್ತಾರೆ. ಅವರು ಕೊಡುವ ಅಂಕಗಳ ಮೇಲೆ ಸಾಲಗಾರನ ಸಾಲ ತೀರಿಸುವ ಸಾಮರ್ಥ್ಯ ತಿಳಿಯಲಿದೆ.
ಸಾರ್ವಭೌಮ್ಯತೆಯ ಕ್ರೆಡಿಟ್ ರೇಟಿಂಗ್ - ಒಂದು ದೇಶದ ಸರ್ಕಾರದ ಸಾಲ ಮರುಪಾವತಿಯನ್ನು ಪರೀಶಿಲಿಸುವುದನ್ನು ನಾವು ಈಗೆನ್ನುತ್ತೇವೆ.ಇದು ಆ ದೇಶದ ಹೂಡಿಕೆ ಸ್ಥಿತಿಯ ಅಪಾಯ ಮಟ್ಟವನ್ನು ಬಿಂಬಿಸುತ್ತದೆ.ದೇಶದ ಕ್ರೆಡಿಟ್ ರೇಟಿಂಗ್ ಕೊಡಬೇಕಾದರೆ ಆ ದೇಶದ ರಾಜಕೀಯ ಪರಿಸ್ಥಿತಿಯನ್ನು ಸಹ ಪರಿಗಣಿಸುತ್ತದೆ. ಈ ಕೆಳಗಿನ ಪಟ್ಟಿಯಲ್ಲಿ ಹೂಡಿಕೆಗೆ ಅಪಾಯ ಕಡಿಮೆ ಇರುವ ಹತ್ತು ದೇಶಗಳನ್ನು ನೋಡಬಹುದು( ೨೦೧೩ ರ ಅಂಕಿ ಅಂಶಗಳ ಪ್ರಕಾರ)
1 ▲ 1 ನಾರ್ವೆ 88.59
2 ▼ 1 ಸ್ವಿಟ್ಜರ್ಲ್ಯಾಂಡ್ 87.95
3 - ಸಿಂಗಪುರ್ 86.49
4 - ಲಕ್ಸೆಂಬರ್ಗ್ 85.14
5 - ನೆದರ್ಲ್ಯಾಂಡ್ಸ್ 84.49
6 - ಡೆನ್ಮಾರ್ಕ್ 83.87
7 - ಸ್ವೀಡನ್ 83.49
8 - ಜರ್ಮನಿ 82.49
9 - ಕೆನಡಾ 82.04
10 - ಫಿನ್ಲ್ಯಾಂಡ್ 81.09
ಇದು ನೂರು ಅಂಕಗಳಿಗೆ
ಮೂಲ: ಯೂರೋಮನಿ ಕಂಟ್ರಿ ರಿಸ್ಕ್.
ಅಲ್ಪ ಮತ್ತು ದೀರ್ಘಾವಧಿಯ ರೇಟಿಂಗ್- ಒಬ್ಬ ವ್ಯಕ್ತಿ ಗೆ ಅಥವಾ ಒಂದು ಸಂಸ್ಥೆಗೆ ಒಂದು ವರ್ಷದ ಮಟ್ಟಿಗೆ ರೇಟಿಂಗ್ ಕೊಟ್ಟರೆ ಅದು ಅಲ್ಪಾವಧಿ.ಹಾಗು ಒಂದು ವರ್ಷದ ಮೇಲ್ಪಟ್ಟರೆ ಅದು ದೀರ್ಘಾವದಿ ರೇಟಿಂಗ್ ಆಗುತ್ತದೆ.
ಕಾರ್ಪೊರೇಟ್ ರೇಟಿಂಗ್ - ಒಂದು ಕಂಪನಿ ಗೆ ಕೊಡುವ ರೇಟಿಂಗ್ ಅನ್ನು ಕಾರ್ಪೊರೇಟ್ ರೇಟಿಂಗ್ ಎನ್ನುತ್ತೇವೆ.ಇದರಿಂದ ಜನರಿಗೆ ಆ ಕಂಪನಿ ಮೇಲೆ ಹೂಡಿಕೆ ಮಾಡಲು ನಿರ್ದರಿಸುವುದಕೆ ಸಹಾಯ ವಾಗುತ್ತದೆ.
ಕ್ರೆಡಿಟ್ ರೇಟಿಂಗ್ ಏಜೆನ್ಸೀಸ್:
ಪ್ರಪಂಚದಲ್ಲಿಯೇ ಮೂರು ಪ್ರಮುಖವಾದ ಕ್ರೆಡಿಟ್ ರೇಟಿಂಗ್ ಏಜೆನ್ಸೀಸ್ ಗಳಿವೆ. ೧.ಮೂಡೀಸ್ ೨.ಎಸ್ & ಪಿ ೩.ಫಿಚ್ ಈ ಮೂರು ಕಂಪೆನಿಗಳ ಕ್ರೆಡಿಟ್ ರೇಟಿಂಗ್ ಅನ್ನು ಎಲ್ಲಾ ಜನರೂ ನಂಬುತ್ತಾರೆ.