ಎಸ್ ಆರ್ ಶ್ರೀನಿವಾಸ್

ಗುಬ್ಬಿ ಕ್ಷೇತ್ರ ತುಮಕೂರಿನಿಂದ ೨೦ ಕಿಲೋಮೀಟರ್  ಮತ್ತು ಬೆಂಗಳೂರಿನಿಂದ ೯೦ ಕಿಲೋಮೀಟರ್ ದೂರದಲ್ಲಿದೆ.೨೦೧೧ ರ ಜನಗಣತಿ ಪ್ರಕಾರ ಗುಬ್ಬಿ ಟೌನ್  ಜನಸಂಖ್ಯೆಯು ೧೮,೪೫೭ ಆಗಿದೆ. ಗುಬ್ಬಿ ಟೌನ್ನ ಒಟ್ಟು ಪ್ರದೇಶವು ೬.೬೭ ಚದರ ಕಿಲೋಮೀಟರ್. ಗುಬ್ಬಿಯನ್ನು ಮೊದಲು ಅಮರಗೋಂಡ ಎಂಬ ಹೆಸರಿನಿಂದ ಕರೆಯಲಾಗುತ್ತಿತ್ತು. ಉತ್ತಮ ಸಾರಿಗೆ ಮೂಲಸೌಕರ್ಯದ ಕಾರಣ, ಇದು ನೆರೆಯ ಸಣ್ಣ ಹಳ್ಳಿಗಳು ಮತ್ತು ಪಟ್ಟಣಗಳಿಗೆ ಪ್ರಮುಖ ವ್ಯಾಪಾರ ಕೇಂದ್ರವಾಗಿದೆ. ಅಂತರಾಷ್ಟ್ರ ಮಟ್ಟದಲ್ಲಿ ರಂಗಭೂಮಿ, ಕಲೆ, ಸಾಹಿತ್ಯದ ಕೊಡುಗೆ ನೀಡುವ ಮೂಲಕ ಗುಬ್ಬಿ ತಾಲೂಕು ಶ್ರೀಮಂತವಾಗಿದ್ದರು ಆರ್ಥಿಕವಾಗಿ ಹಿಂದುಳಿದ ತಾಲೂಕು. ೨೦೦೧-೨೦೦೨ರ ನಂಜುಂಡಪ್ಪ ವರದಿ ಪ್ರಕಾರ ಗುಬ್ಬಿ ತಾಲೂಕು ಕರ್ನಾಟಕದಲ್ಲಿ ಬಹಳ ಹಿಂದುಳಿದ ತಾಲೂಕಾಗಿತ್ಹು.ಗುಬ್ಬಿ ತಾಲೂಕಿನಲ್ಲಿ ಆರು ಹೋಬಳಿಗಳಿವೆ. ಅವು ಹಗಲವಾಡಿ, ಚೆಲುರು, ನಿಟ್ಟೂರು, ಗುಬ್ಬಿ, ಕಡಬ ಮತ್ತು ಸೀಏನ್ ಪುರ. ಗುಬ್ಬಿ ಜೆಡಿಎಸ್ ವಶದಲ್ಲಿರುವಂತ ಕ್ಷೇತ್ರ, ಕಾಂಗ್ರೆಸ್ ಪಾಲಿಗೆ ಇದು ಬರಡು ಭೂಮಿಯಾಗಿ ಬಹಳ ವರ್ಷಗಳಾಗಿವೆ ಹಾಗು ಬಿಜೆಪಿಯ ಪಾಲಿಗೆ ಸ್ವಲ್ಪ ಕೆಸರು.

ಸುಮಾರು ೩೫ ವರ್ಷಗಳಿಂದ ಗುಬ್ಬಿ ತಾಲೂಕಿನಿಂದ ಯಾವೊಬ್ಬ ಶಾಸಕರು ಸಚಿವರಾಗಿರಲಿಲ್ಲ. ೨೦೧೮ರಲ್ಲಿ ಮೊದಲನೆಯ ಬಾರಿ ಗುಬ್ಬಿ ತಾಲೂಕಿನಿಂದ ಎಸ.ಆರ್ ಶ್ರೀನಿವಾಸರವರು ಮಂತ್ರಿಯಾಗಿದ್ದರೆ.

ಗುಬ್ಬಿಯ ಮೂಕನಹಳ್ಳಿ ಪಟ್ಟಣ ಪಂಚಾಯಿತಿಗೆ ಸೇರಿದ ಸೇರ್ವೆಗಾರನ ಪಾಳ್ಯದ ಎಸ್.ಸಿ ರಾಮೇಗೌಡ ಮತ್ತು ಮಂಗಳಮ್ಮನ ಮಗನಾಗಿ ಎಸ್.ಆರ್ ಶ್ರೀನಿವಾಸ್ ೧೩/೦೭/೧೯೬೨ರಲ್ಲಿ  ಜನಿಸಿದರು. ಅವರ ತಂದೆ ಅಬಕಾರಿ ಗುತ್ಹಿಗೆದಾರರು ಮತ್ತು ಕಾಂಗ್ರೆಸ್ ಪಕ್ಷದ ನಾಯಕರಾಗಿದ್ದರು. ಶ್ರೀನಿವಾಸ್ ಅವರ ಮೂಲ ವಂಶಸ್ತರು ಸಾವಿರಾರು ಎಕರೆ ಜಮೀನನ್ನು ಬಡ ರೈತರಿಗೆ ದಾನ ಮಾಡಿದರು. ಶ್ರೀನಿವಾಸ್ ಅವರು ವಾಸಣ್ಣ ಎಂದು ಜನರಿಗೆ ಪರಿಚಿತರಾಗಿದ್ದರೆ. ಇವರಿಗೆ ೧೯೭೭-೧೯೭೮ರಲ್ಲಿ,ಬಾಲಕನ ಪ್ರಾಣವನ್ನು ಉಳಿಸಿದ್ದಕ್ಕಾಗಿ, ಕರ್ನಾಟಕ ರಾಜ್ಯದ ಶೌರ್ಯ ಪ್ರಶಸ್ತಿಯನ್ನು ಅಂದಿನ ರಾಜ್ಯಪಾಲ ಗೋವಿಂದ್ ನಾರಾಯಣ್ ಅವರಿಂದ ಸ್ವೀಕರಿಸಿದರು. ೨೦೦೦ ಇಸವಿಯಲ್ಲಿ ನಡೆದ ಜಿಲ್ಲಾ ಪಂಚಾಯತಿ ಚುನಾವಣೆಗೆ ಚಂದ್ರಶೇಖರಪುರದಿಂದ ಸ್ಪರ್ಧಿಸಿ ಜಯಗಳಿಸಿದರು. ಇದು ಅವರು ರಾಜಕೀಯದಲ್ಲಿ ಇಟ್ಟ ಮೊದಲ ಹೆಜ್ಜೆ. ಇವರು ಮೊದಲ ಬಾರಿ ವಿಧಾನ ಸಭಾ ಚುನಾವಣೆಗೆ ೨೦೦೪ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ದಿಸಿ ೧೨,೦೦೦ ಮತಗಳ ಅಂತರದಿಂದ ಜಯಗಳಿಸಿದರು.

ಇವರು ಬಡವರ ಮತ್ತು ರೈತರ ಕಷ್ಟಗಳಿಗೆ ಸ್ಪಂದಿಸುತ್ಹಿದ್ದರು. ತಾಲೂಕಿನ ಅಭಿವೃದ್ಧಿ ಕಡೆ ಹೆಚ್ಚಿನ ಗಮನ ಹರಿಸಿ ಒಳ್ಳೆಯ ರಸ್ತೆಗಳು, ಶಾಲಾ ಕಟ್ಟಡಗಳು ಹಾಗು ನೀರಿನ ಸಮಸ್ಯೆಯನ್ನು ಬಹಳ ಯೆಶಸ್ವಿಯಾಗಿ ಪೂರ್ಣಗೊಳಿಸಿದರು. ಹಳ್ಳಿಗಳ ಸ್ವಚ್ಛತೆ ಬಗ್ಗೆ ಗಮನ ಹರಿಸಿ ಚರಂಡಿಗಳನ್ನು ನಿರ್ಮಿಸಿದರು. ನೀರಾವರಿಗೆ ಬಹಳ ಪ್ರೋತ್ಸಹ ಕೊಟ್ಟು ಹೇಮಾವತಿ ನದಿಯ ನೀರನ್ನು ಗುಬ್ಬಿ ತಾಲೂಕಿನ ಸುಮಾರು ಕೆರೆಗಳಿಗೆ ತುಂಬಿಸಿದರು. ಹೇಮಾವತಿ ನದಿಯ ನೀರನ್ನು ಕೆರೆಗಳಿಗೆ ತುಂಬಿಸಲು ಸರ್ಕಾರದ ಮೇಲೆ ಬಹಳ ಒತ್ತಡ ಹಾಕಿ ಯೆಶಸ್ವಿಯಾದರು. ಇದರಿಂದ ತಾಲೂಕಿನ ಜನ ಇವರನ್ನು "ಹೇಮಾವತಿ ಹರಿಕಾರ" ಎಂದು ಕರೆದರು. ಇದರಿಂದ ಶ್ರೀನಿವಾಸ್ ಅವರಿಗೆ ರೈತರ ಬಗ್ಗೆ ಇರುವ ಕಾಳಜಿಯನ್ನು ತೋರಿಸುತ್ಹದ್ದೆ. ಈ ಎಲ್ಲಾ ಕೆಲಸ ಕಾರ್ಯಗಳಿಂದ ಬಡವರು, ದೀನ-ದಲಿತರು, ರೈತ ಕಾರ್ಮಿಕರು, ಯುವಕರು ಹಾಗು ಅಲ್ಪ ಸಂಖ್ಯಾತರು ಇವರಿಗೆ ೨೦೦೮ರ ವಿಧಾನ ಸಭಾ ಚುನಾವಣೆಯಲ್ಲಿ ಜನತಾ ದಳ(ಜಾತ್ಯತೀತ) ಪಕ್ಷದಿಂದ ೧೫,೦೦೦ ಮತಗಳ ಅಂತರದಿಂದ ಮತ್ತೆ ಗೆಲ್ಲಿಸಿದರು. ಗಂಗಾ ಕಲ್ಯಾಣ ಯೋಜನೆಯಿಂದ ಬಡವರಿಗೆ ಕೊಳವೆ ಬಾವಿಗಳನ್ನು ತೊಡಿಸಿದರು, ಹರಿಜನ ಮತ್ತು ಗಿರಿಜನ ಕಾಲೋನಿಗಳಿಗೆ ಸಿಸಿ ರಸ್ತೆಗಳನ್ನು ಮಾಡಿಸಿದರು, ಮುಖ್ಯ ರಸ್ತೆಗಳಿಗೆ ಡಾಂಬರೀಕರಣ ಮಾಡಿಸಿದರು. ತಾಲೂಕಿನಲ್ಲಿ ಆಸ್ಪತ್ರೆಗಳ ನಿರ್ಮಾಣ, ಶಾಲಾ ಕಟ್ಟಡಗಳ ನಿರ್ಮಾಣ, ವಿದ್ಯುತ್ ಉಪಸ್ಥಾವರ ನಿರ್ಮಾಣ ಮತ್ತು ಸ್ತ್ರೀ ಶಕ್ತಿ ಸಂಘಗಳಿಗೆ ಪ್ರೋತ್ಸಾಹವನ್ನು ನೀಡಿದರು. ೨೦೧೩ರ ಚುನಾವಣೆಯಲ್ಲಿ ಗುಬ್ಬಿಯಲ್ಲಿ ಒಟ್ಟು ಮತದಾರರ ಸಂಖ್ಯೆ ೧,೭೯,೦೦೩. ೨೦೧೩ರ ವಿಧಾನ ಸಭಾ ಚುನಾವಣೆಯಲ್ಲಿ ಎಸ ರ್ ಶ್ರೀನಿವಾಸ್ ೫೮,೭೮೩ ಮತಗಳನ್ನು ಪಡೆದು ೭೨೪೪ ಮತಗಳ ಅಂತರದಲ್ಲಿ ಗೆದ್ದಿದ್ದರು. ಅವರ ಮಗ ದುಷ್ಯಂತ್ ಶ್ರೀನಿವಾಸ್ ಹಾಗು ಮಗಳು ತೇಜಸ್ವಿನಿ ಶ್ರೀನಿವಾಸ್. ೨೦೧೮ರ ಚುನಾವಣಾ ಪ್ರಚಾರದಲ್ಲಿ ಇವರು ಪಾಲ್ಗೊಂಡಿದ್ದರು. ೨೦೧೮ರ ವಿಧಾನ ಸಭಾ ಚುನಾವಣೆಯಲ್ಲಿ ಎಸ.ಆರ್ ಶ್ರೀನಿವಾಸವರು ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ದಿದಿ ಜಯಶೀಲರಾಗಿದ್ದರೆ ಮತ್ತು ಮುಖ್ಯಮಂತ್ರಿ ಕುಮಾರಸ್ವಾಮಿಯವರ ಮಂತ್ರಿ ಮಂಡಲದಲ್ಲಿ ವಾಣಿಜ್ಯ ಮತ್ತು ಸಣ್ಣ ಕೈಗಾರಿಕೆ ಮಂತ್ರಿಯಾಗಿದ್ದರೆ.

ಇವರ ತಾಲೂಕಿನ ನೀರಾವರಿ ಯೋಜನೆಗಳು:

೧. ೭೦ ಕೆರೆಗಳಿಗೆ ಹೇಮಾವತಿ ನೀರು, ಬಿಕ್ಕೇಗುಡ್ಡ ಏತ ನೀರಾವರಿ ಯೋಜನೆ( ೨೦ ಗ್ರಾಮಗಳಿಗೆ ಕುಡಿಯುವ ನೀರಿನ ಸೌಕರ್ಯ), ಹಾಗಲವಾಡಿ ಏತ ನೀರಾವರಿ ಯೋಜನೆ(೨೬ ಗ್ರಾಮಗಳಿಗೆ ಕುಡಿಯುವ ನೀರಿನ ಯೋಜನೆ).

೨. ಚೇಳೂರು ಏತ ನೀರಾವರಿ ಯೋಜನೆ(೨೫ ಗ್ರಾಮಗಳಿಗೆ ಕುಡಿಯುವ ನೀರಿನ ಸೌಕರ್ಯ), ಹೊಸಕೆರೆ ಅಳಿಲೂಘಟ್ಟ ಏತ ನೀರಾವರಿ ಯೋಜನೆ(೧೮ ಗ್ರಾಮಗಳಿಗೆ ನೀರಿನ ಸೌಕರ್ಯ), ನಿಟ್ಟೂರು ಮತ್ತು ಕಡಬ ಹೋಬಳಿಗೆ ಬಹುಗ್ರಾಮ ನೀರಿನ ಯೋಜನೆ(೩೦ ಗ್ರಾಮಗಳಿಗೆ ನೀರಿನ ಸೌಕರ್ಯ).