ಸದಸ್ಯ:Gagannrao/sandbox
ಅಬೀಜ ಸಸ್ಯಾಅಭಿವ್ರುಧಿ
ಬದಲಾಯಿಸಿಅಬೀಜ ಸಸ್ಯಾಅಭಿವ್ರುಧಿ ಸಸ್ಯಗಳನ್ನು ಬೀಜಗಳಿಂದ ಅಲ್ಲದೆ ಬೀರು,ಕಾಂಡಾ,ಮೊಗ್ಗು , ಯೆಲೆ ,ಮುಂತಾದ ಅಬೀಜ ಬಾಗಗಳಿಂದಲೂ ಹೆಚಿಸಿಕೊಳ್ಳುವುದು ,ಈ ಬಗೆಯ ಸಸ್ಯ ಹೆಚ್ಚಳಿಕೆಗೆ ಅಬೀಜ ಸಸ್ಯಾಅಭಿವ್ರುಧ್ಹಿ ಯೆಂದು ಕರೆಯಲಾಗುತ್ತದೆ. ಇದೊಂದು ಅಲೈಂಗಿಕ ಸಂತನೊತ್ಪತ್ತಿಯ ವಿಧಾನವಗಿದೆ.ಒಂದು ಗಿಡ ಸಸ್ಯದಿಂದ ಬೆಳೆಯಬೆಕಾದರೆ ತಂದೆ ಮತ್ತು ತಾಯಿಯ ಗುಣಗಳನ್ನು ಹೊಂದಿರುತ್ತವೆ ಅದು ಆ ಗಿಡ ಬೆಳೆದ ನಂತರ ತಿಳಿಯುತ್ತದೆ ಆದರೆ ಈ ವಿದಾನದಿಂದ ಬೆಳೆಯುವ ಗಿಡ ಬರಿ ತಾಯಿ ಗಿಡದ ಗುಣಗಳನ್ನು ಹೊಂದಿರುತ್ತವೆ,ಅದು ಯಾವ ಬಾಗದಿಂದಾದರು ಆಗಿರಲಿ.ಆದುದರಿಂದ ಯಾವುದೆ ಒಂದು ತಳಿಯ ಜಾತಿ ಅಥವಾ ಪ್ರಭೇದವನ್ನು ಗುನಶುದ್ದವಾಗಿ ಉಳಿಸಿಕೊಳ್ಳಲು ಅಬೀಜ ಸಸ್ಯಾಅಭಿವ್ರುಧಿಯನ್ನು ಉಪಯೊಗಿಸಬಹುದು.
ಈ ವಿಧಾನ ತೋಟಗಾರಿಕೆಯಲ್ಲಿ ಅತಿ ಉತ್ತಮವಾದಂತ ಪ್ರಯೊಗವಾಗಿದೆ.ಈ ವಿಧಾನದ ಮುಖ್ಯ ವಿಧಗಳಾಗಿ ಬೆರ್ಪಡಿಸಲಾಗಿದೆ ಇವುಗಳು "ಲೆಯೆರಿಂಗ್" ,"ಗ್ರಾಫ್ಟಿಂಗ್" ಮತ್ತು "ಬಡ್ಡಿಂಗ್" ಯಂದು ಕರೆಯಲಾಗಿದೆ.ಅಬೀಜ ಸಸ್ಯಾಅಭಿವ್ರುಧಿ ಏಕದಳ(Monocotyledons)ಸಸಿಗಳಲ್ಲಿ ಉಪಯೊಗಿಸಲು ಸಾದ್ಯವಿಲ್ಲ ಬರಿ ದ್ವಿದಳ (Dicotyledons) ಸಸಿಗಳಲ್ಲಿ ಮಾತ್ರ ಮಾಡಲು ಸಾಧ್ಯ.
- ಅಬೀಜ ಸಸ್ಯಭಿವ್ರುಧಿಯ ವಿದಾನಗಲು
- ಗ್ರಾಫ್ಟಿಂಗ್ ಅಥವಾ ಕಸಿಕಟ್ಟಿಕೆ
- ಲಯೆರಿಂಗ್
- ಭಡ್ಡೀಂಗ್
ಗ್ರಾಫ್ಟಿಂಗ್/ಕಸಿಕಟ್ಟಿಕೆ
ಬದಲಾಯಿಸಿಗ್ರಾಫ್ಟಿಂಗ್ ಅಥವಾ ಕಸಿಕಟ್ಟೀಕೆ ಒಂದು ಸಸ್ಯದ ಭಾಗವನ್ನು ಮತ್ತೂಂದು ಸಸ್ಯದ ಮಲೆ ಕೂರಿಸಿ,ಎರಡಕ್ಕು ಬೆರೆತು ಬೆಳೆಯುವಂತೆ ಮಡುವ ಸಮ್ವಿಧಾನವೆ ಕಸಿಕಟ್ಟೀಕೆ .ಕಸಿಕಟಿಕೆಯಲ್ಲಿ ಮುಖ್ಯವಾಗಿ ೨ ಸಸ್ಯಗಳ ಪತ್ರವಹಿತ್ತವೆ(೧)ಕೂರಿಸುವ ಸಸ್ಯ ಭಾಗ (೨)ಧರಿಸುವ ಸಸ್ಯ ಭಾಗ.
(೧)ಕೂರಿಸುವ ಸಸ್ಯಭಾಗ: ಇದು ಸಾಮನ್ಯವಾಗಿ ಒಳ್ಳೆಯ ಜಾತಿ-ಸಿರಿ ಸಸ್ಯ. ಈ ಭಾಗವನ್ನು ಸಿರಿಕಾಂಡ , ಸಿರಿಕುಡಿ ,ಕುಲೀನ್ ಕುಡಿ ಅಥವಾ ಸೈಯನ್ ಯನ್ನುತ್ತಾರೆ.
(೨)ಧರಿಸುವ ಸಸ್ಯ :ಸೈಯನ್ ಕುಡಿಯನ್ನು ಧರಿಸುವುಧು.ಕೂರಿಸಿದ ಸಸ್ಯವನ್ನು ದ್ರುಡವಾಗಿ ಕಟ್ಟುವುದು,ತಾಯಿ ಸಸಿ ಅಥವಾ ತಾಯಿ ದಿಂಡನ್ನು(ಸ್ಟಾಕ್) ಕೊಯ್ದು ಅದರಲ್ಲಿ ಬೆರೆ ಸಸಿಯನ್ನು ಸೆರಿಸುವುದು.
ಗ್ರಾಫ್ಟಿಂಗ್ ಮತ್ತು ಪ್ರಾಚಾಣಿಕ ವಿಧಾನಗಳಾದ ಬೇರು ಬಿಡಿಸಿಕೆ ಹಾಗು ತುಂಡುಹಾಕಿಕೆಗಳ ಮಧ್ಯೆ ಇರುವ ವ್ಯಥ್ಯಾಸವೆನೆಂದರೆ ,ಕಸಿಕಟ್ಟಿವಿಕೆಯಲ್ಲಿ ಸೈಯಾನ್ನನ್ನು ಬೀರು ಇಲ್ಲದಂತೆ ಮಾಡಿ ,ಬೇರಿರುವ ಬೆರೆ ಗಿಡದಲ್ಲಿ ಕೂರಿಸುವುದು ಆದರೆ ಬೇರೆ ವಿಧಾನಗಲ್ಲಿ ಬೇರಿಲ್ಲದೆ ಯಾವ ಭಾಗವನ್ನು ಉಪಯಗಿಸುವುದಿಲ್ಲ ಹಾಗೆ ಕಸಿಕಟ್ಟೈವಿಕೆಯಲ್ಲಿ ಎರಡು ಗಿಡಗಳು ಸೆರ್ಪಡೆ ಆಗುತ್ತದೆ ಇದು ಯಾವ ಹಳೆಯ ವಿಧಾನಗಳಲ್ಲಿ ಮಾಡುವುದಿಲ್ಲ.
- ಕಸಿಕಟ್ಟಲು ೭ ಉಧೆಶಗಲಿವೆ ಅವು
- ಬೀಜಗಲ್ಲಿಂದ ಉತ್ತಮ ಬಗೆಯ ಅಥ್ವಾ ಸಿರಿವಂತ ಗುಣ ಜಾತಿಗಲನ್ನು ಪದೆಯಲು ಸಧ್ಯವಿಲ್ಲದಾಗ,ಒಳ್ಳೆಯ ಜಾತಿಯ ಗುಣಗಳನ್ನು ಅದರವಂಶದಲ್ಲಿಯೆ ಇರುವಂತೆ ನಿಶ್ಛಯ ಪಡಿಸಿಕೊಳ್ಳಲು ಈ ಜಾತಿಯ ಗಿಡದ ಮೆಲೆ ಸಸ್ಯೊತ್ಪಾದನೆ ಮಾಡಬಹುದು.
- ಬೀಗನೆ ಫ್ಲ ಪಡೆಯಲು ಕಸಿಕಟ್ಟುತ್ತಾರೆ.ಸಾಮನ್ಯವಾಗಿ ಬೀಜದ ಸಸಿಗಳಿಗಿಂತ ಕಸಿಕಟ್ಟಿದ ಗಿಡಗಳೆ ಬೀಗನೆ ಫಲವನ್ನು ಕೊಡುತ್ತವೆ.
- ಕೆಲವು ಸಿರಿ ಜಾತಿ ಗಿಡಗಳು ಎತ್ತರಕ್ಕೆ ಬೆಳೆಯುದರ ಬದಲು ಮೊಟಾಗಿ ಬೆಳೆಯುವಂತೆ ಮಾದಲು ಮೋಟು ಮಾಡುವ ಸ್ಪಾಕಿನ ಮೆಲೆ ಕಸಿ ಹಕಿ ಬೆಳೆಸುತ್ತಾರೆ.ಹೀಗೆ ಮೊಟುಗೊಳಿಸುವುದರಿಂದ ಹೂವು ಹಣ್ಣುಗಳುನ್ನು ಕೀಳಲು ಸುಲಭ.
- ಸಿರಿವಂತ ಜಾತಿಗಳು ಸಾಮನ್ಯವಾಗಿ ಕೂಮಲ.ಈ ಜಾತಿಯನ್ನು ಹೆಚ್ಚುಕಾಲ ದಶ್ಪಪುಶ್ಟವಾಗಿ ಮಾದಲು ಹಾಗೆ ಆರೊಗ್ಯಕರವಾಗಿ ಇಡಲು ಕಸಿಕಟ್ಟುವಿಕೆ ಬಹಳ ಅಗತ್ಯ.
- ಗಿಡ ಅಥವಾ ಮರದ ರೂಪವನ್ನು ಬದಲಾಯಿಸಲು, ಅದರ ದಿಂಡು , ರೆಂಬೆಗಳ ಬಲವನ್ನು ಹೆಚ್ಚಿಸಲು ಅಥವಾ ರೆಂಬೆ ಮುರಿದು ಹೊಗಿದ್ದರೆ ಹೊಸ ರೆಮ್ಬೆ ಹಲಲು ಕಸಿಕಟ್ಟ ಬಹುದು.
- ಹಳೆಯ ಗಿಡ ಮರಗಳ ಪುನರೊತ್ಪಾದನೆಗಾಗಿ ಕಸಿಕಟ್ಟಲಾಗುತ್ತದೆ.
- ಕೆಲವು ಗಿಡ-ಮರಗಳಲ್ಲಿ ಗಂಡು ಮರಗಳು ಕೆಲವು,ಹೆಣ್ಣು ಮರಗಳು ಕೆಲವು ಇರುತ್ತವೆ. ಹೆಣ್ಣುಮರಗಳು ತಮ್ಮ ಹೂವಿನ ಶರ್ಮವನ್ನು ಗಂಡು ಮರಗಳಿಗೆ ನೀಡಿ ಹೊಸಹೂಗಳ ಬೆಳವಣಿಗೆಗೆ ಧಾರಿ ಮಾಡುತ್ತವೆ.ಆದರೆ ಈ ಮರಗಳು ಒಂದಕ್ಕೆ ಒಂದು ದೂರವಿದ್ದರೆ ಶರ್ಮಗಳು ಬದಲಾವಣೆಗೊಳ್ಳಲು ಕಷ್ಟ ಆದ್ದರಿಂದ ಗಂಡು ಮರದ ಸಾಯನನ್ನು ಹೆಣ್ಣುಮರದಲ್ಲಿ ಕಸಿಕಟ್ಟುತ್ತಾರೆ
- ಕಸಿಗಾರಿಕೆಯ ಮೂಲತತ್ವಗಳು(Principles of Grafting)
ಸ್ಟಾಕಿನ ಮೇಲೆ ಉತ್ತಮ ಜಾತಿಯ ಸೈಯಾನ್ ಕೊಡಿ ಬೆಳೆಯಬೇಕಾದರೆ ಸ್ಟಾಕಿಗು ಸೈಯನಿಗೂ ವಿರೋಧವಿರಬಾರದು. ಹೀಗೆ ವಿರೊಧವಿದ್ದು ಕೂಡಿಕೊಂಡರೂ ಕಸಿಯ ಮುಂದಿನ ಬೆಳವಣಿಗೆ ಕುಂಟಿತವಾಗುತ್ತದೆ. ಸಾಮಾನ್ಯವಾಗಿ ಸಾಮ್ಯ ಹೆಚ್ಚಾಗಿ ಹತ್ತಿರ ಸಂಭಂದ ವಿರುವ ಸ್ಟಾಕು-ಸೈಯಾನಗಳು ಚೆನ್ನಾಗಿ ಕೂಡಿಕಂಡು ಬೆಳೆಯ ತಕ್ಕವು.ಸ್ಟಾಕು-ಸೈಯಾನ್ ಬಾಗವು ಕೂಡಿರುವ ಬಾಗವನ್ನು ಒಣಗದಂತೆ ನೂಡಿಕೊಳ್ಳಬೇಕು. ಸ್ಟಾಕು ಮತ್ತು ಸಯಾನು ಒಟ್ಟಾಗಿ ಕೂಡುವಂತೆ ಅವುಗಳನ್ನು ಕತ್ತಿರಸಬೇಕು ಮತ್ತು ಜೂಡಿಸಬೇಕು.ಇವೆರಡರ ಕೇಂಬಿಯಂ ಪದರಗಳು ಸಮ್ಪಪರ್ಕವಾಗುವಂತೆ ಕೂಡಿಸಬಬೇಕು. ಕಸಿಕಟ್ಟುವುದರಲ್ಲಿ ಅನೇಕ ವಿದಗಳು ಉಂಟು ,ಪ್ರತಿವಿದಕ್ಕು ಒಂದು ವಿಶೆಷತೆ.ಒಂದು ವಿದಾನದಲ್ಲಿ ಕೂದುವ ಕಸಿ ಬೇರೆ ವಿದಾನದಲ್ಲಿ ಕೂಡದೆಇರಬಹುದು ಆದ್ದರಿಂದ ಆಅಗಿಡಕ್ಕೆ ತಕ್ಕಂತೆ ಕಸಿಕಟ್ಟುವವಿದಾನ ಉಪಯೊಗಿಸಬೀಕು.
- ಕಸಿ ವಿದಾನಗಳು(Methods of Grafting)
ಸೈಯನಿಗೂ,ಸ್ಟಾಕಿಗು ಅನೇಕ ವಿಧಗಳಲ್ಲಿ ಸಂಕರ್ಪ ಉಂಟು ಪಡಿಸಬಹುದು.ಈ ಕಸಿಕಟ್ಟುವ ವಿದಗಳನ್ನು ನಾಲ್ಕು ಗುಂಪುಗಳಾಗಿ ವಿಂಗಡಿಸಲಾಗಿದೆ.
- ಬೇರು ಕಸಿ(Root Grafting)
- ಮೇಲ್ಗಸಿ(Top Grafting)
- ಕಾಂಡ ಅಥವಾ ದಿಂಡು ಕಸಿ (Stem Grafting)
- ನೆತ್ತಿ ಕಸಿ(Crown Grafting)
- ಬೇರು ಕಸಿಕಟ್ಟಿಕೆ:ಈ ಕ್ರಮದಲ್ಲಿ ಬೇರನ್ನು ಸ್ಟಾಕಾಗಿಟ್ಟುಕೊಂಡು ಅದರ ಮೇಲೆ ಸಯನ್ನನ್ನು ಕೂರಿಸುತ್ತಾರೆ.ಅನೇಕ ವೇಳೆ ಸಣ್ಣ ಸಸ್ಯಗಳ ಬೇರುಗಳೆಲ್ಲವನ್ನೂ ಸ್ಟಾಕಾಗಿ ಇಟ್ಟುಕೊಳ್ಳುತ್ತಾರೆ.ಸಯನನ್ನೂ ತಾಯಿ ಬೇರಿನ ಮೆಲ್ಭಾಗದಲ್ಲಿ ಕೂರಿಸಿದರೆ ಅದನ್ನು "ಪೂರ್ಣ ಬೇರು ಕಸಿ " ಎಂದು ಕರೆಯುತ್ತಾರೆ.ಅದೆ ಬೇರನ್ನು ಎರಡು ಅಥವಾ ಮೂರು ಭಾಗಗಳಾಗಿ ಮಾಡಿದರೆ ಅದನ್ನು "ಭಾಗ ಭೇರು ಕಸಿ" ಎಂದು ಕರೆಯುತ್ತರೆ.ಉದ್ದವಾದ ಸೈಯನನ್ನು ಮೂಟು ಬೇರು ಬಾಗದ ಮೇಲೆ ಕೂರಿಸಿದಗ ಅದನ್ನು "ದಾದಿಬೇರುಕಸಿ" ಎನ್ನುವರು.
- ಮೆಲ್ಗಸಿ ಕಟ್ಟಿಕೆ: ಒಂದು ಅಂಗುಲಕ್ಕಿಂತ ದಪ್ಪವಾಗಿರುವ ಮರದ ರೆಂಬೆ ಗಳಿಗೆ ಸೈಯನನ್ನು ಕೂರಿಸುವ ವಿಧಾನ.ಮರದ ರೆಂಬೆ ಯನ್ನು ಮಚ್ಚಿನಿಂದ ಸೀಳ್ಬಿಡುವಂತೆ ಕೊರೆದು ಅಥವಾ ಕತ್ತರಿಸಿ ಅದರಲ್ಲಿ ಸೈಯನನ್ನು ಕೂರಿಸಲಗುತದೆ.
- ಕಾಂಡ ಕಸಿಕಟ್ಟಿಕೆ : ಈ ವಿದಾನದಲ್ಲಿ ತಾಯಿ ಗಿಡದ ಕಾಂಡ(ಸ್ಟಾಕನ್ನು) ಹಾಗು ಸೈಯನನ್ನು ಸಮಾನವಾಗಿ ಅಡ್ಡಜಾರಿ ಕತ್ತರಿಸಿ ಒಂದರಮೇಲೆ ಇನ್ನೊಂದನ್ನ ಕೂರಿಸಿಕಟ್ಟುವುದನ್ನು ಕಾಂಡಕಸಿ ಯನ್ನುತ್ತಾರೆ.
- ನೆತ್ತಿ ಕಸಿಕಟ್ಟಿಕೆ: ಸ್ಟಾಕನ್ನು ಮೇಲಿನಿಂದ ಎರಡು ಅಥವಾ ಮೂರು ಸಿಳ್ಗನ್ನು ಮಾಡಿ ಅದರಲ್ಲಿ ಸೈಯಾನನ್ನು ಕೂರಿಸುವುದು.
- ಈ ವಿಧಾನಗಳಲ್ಲೆ ಉಪವಿಧಾನಗಳಾಗಿ ೫ ಗುಂಪುಗಳಿವೆ ಅವು
- ಗೂಟದ ಕಸಿ: ಮುಖ್ಯ ರೆಂಬೆಗೆ ಅದಷ್ವು ಹತ್ತಿರುವ ಪಕ್ಕದ ರೆಂಬೆಯನ್ನು ಕಸಿ ಹಾಕಲು ಆರಿಸಿಕೊಳ್ಳಬೇಕು.ಅದರ ಮೇಲೆ ಸೈಯನನ್ನು ಕಸಿಹಾಕಬೇಕು.ಉಳಿದ ಕಸಿಕ್ರಮಗಳಲ್ಲಿ ಮುಖ್ಯ ರೆಂಬೇಯಮೇಲೆ ಕಸಿಕಟ್ಟುತ್ತಾರೆ.
- ಪಕ್ಕ ಕಸಿ: ಸ್ಟಾಕ್ ಅಥವಾ ತಾಯಿ ಗಿಡದ ದಂಟಿನ ಮೇಲೆ "T"ಆಕಾರದಲ್ಲಿ ಕೊಯ್ದು ಅದರಲ್ಲಿ ಸೈಯನನ್ನು ಕೂರಿಸುವುದು.
- ಕಂಡಿ ಕಸಿ: ಸ್ಟಾಕ್ ಅಥವಾ ತಾಯಿ ಗಿಡದ ದಂಟಿನ ಮೇಲೆ "I" ಆಕಾರದಲ್ಲಿ ಕೊಯ್ದು ಅದರಲ್ಲಿ ಸೈಯನನ್ನು ಕೂರಿಸುವುದು.
- ತೊಗಟೆ ಕಸಿ: ಸ್ಟಾಕ್ ಅಥವಾ ತಾಯಿ ಗಿಡದ ದಂಟಿನ ಮೇಲೆ"^" ಆಕಾರದಲ್ಲಿ ಕೊಯ್ದು ಅದರಲ್ಲಿ ಸೈಯನನ್ನು ಕೂರಿಸುವುದು.
- ಅಪ್ರೊಚ್ ಕಸಿ ಅಥವ ಇನಾರ್ಕಿಂಗ್ : ಈ ಕ್ರಮ ಹಿಂದೆ ತಿಳಿಸಿದ ಕರಮಗಲಿಗಿಂತ ಮುಖ್ಯ ಹಾಗು ವಿಷೆಶವಾದದ್ದು. ಬೇರೆ ಕ್ರಮಗಳಲ್ಲಿ ಸೈಯಾನ ಅಥವಾ ಬೇರೆ ಗಿಡದ ಮೊಗ್ಗು/ದಂಟುಗಳಿಗೆ ಬೇರು ಇರುವುದಿಲ್ಲ ಆದರೆ ಈ ವಿಧಾನದಲ್ಲಿ ಸೈಯಾನಿಗೆ ಬೇರು ಇರುತ್ತದೆ.ಸೈಯಾನಿಗೆ ಸ್ವಂತಾಬೇರಿರುವಾಗಲೆ ಅದನ್ನು ತಾಯಿ ಅಥವಾ ಸ್ಟಾಕಿನ ಜೊತೆ ಸಾರಿಸಿ ನಂತರ ಕೂಡಿಕೊಳ್ಳುವಂತೆ ಮಾಡಿ ,ಕಸಿ ಹತ್ತಿದ ನಂತರ ಅದನ್ನು ಬೇರುಭಾಗದಿಂದ ಪ್ರತ್ಯೆಕ ಮಾಡುವುದೆ ಈ ಕ್ರಮದ ವಿಷೇಶ್.
- ಅಬೀಜ ಸಸ್ಯಭಿವ್ರುದ್ದಿಯ ಪ್ರಯೊಜನಗಳು(Advantages).
- ಕೆಲವು ಸಸ್ಯಗಳು ಬೀಜ ಕಚ್ಚುವುದಲ್ಲ - ಬಾಳೆ ,ಅಬೀಜ ದ್ರಾಕ್ಷಿ ; ಅಬೀಜ ಕಿತ್ತಳೆ ಇತ್ಯದಿಗಳು ಅಬೀಜ ಸಸ್ಯಾಭಿವ್ರುದ್ದೀಂದಲೆ ಸಾದ್ಯ.
- ಅನೇಕ ಬಗೆಯ ಉತ್ಕ್ರುಷ್ಟ ಹಣ್ಣಿನ್ ಗಿಡಗಳನ್ನು ಉಳಿಸಿ ಕೊಂಡು ಬರಲು ಇದೊಂದು ಕ್ರಮ .ಇಂತಹವುಗಳನ್ನು ಬೇಜಗಳಿಂದ ಬೆಳೆದುಕೊಂಡರೆ ಅನೇಕ ಅವಗುಣಗಳು ಕಣಿಸಿಕೊಳ್ಳುತ್ತದೆ.
- ಅಬೀಕಜ ಭಾಗಗಳಿಂದ ಬೆಳೆಸಿದ ಅನೇಕ ಗಿಡಗಳು ಕಸುವಾಗಿ ಬೆಳೆಯೂವುದಿಲ್ಲದೆ ಬೇಗ ಫಲವನ್ನು ಕೊಡುತ್ತವೆ.ಕಸಿಕಟ್ಟಿದ ಮರ ೨-೩ ವರ್ಶಗಳ್ಳೆ ಫಲವನ್ನು ನೇಡಲಾರಂಬಿಸುತ್ತವೆ.
- ಕೆಲವು ಸಂದರ್ಭಗಳಲ್ಲಿ ಅಬೀಜಕ್ರಮದಿಂದ ಕರ್ಚು ಕದಿಮೆ ,ಇದರ ಬೀಜಗಲು ದುಭಾರಿ.
- ಅಬೀಜ ಸಸ್ಯಾಆಭಿವ್ರುದ್ದಿಯ ದುಷ್ಪರಿಣಾಮಗಳು(Dis Advantages)
- ಈ ರೀತಿಯದ ಸಸ್ಯಾಅಭಿವ್ರುಧಿಯನ್ನು ಮಾಡಲು ಬಹಳಷ್ಟು ತಾಳ್ಮೆ , ತೀವ್ರತೆ ಹಾಗು ಕಲೆಯ ಅವಶ್ಯಕತೆ ಇರಬೇಕು.
- ಅಬೀಜ ಸಸ್ಯಾಆಭಿವ್ರುಧ್ಹಿಮಾಡಿದ ಗಿಡಗಳಿಗೆ ಸೂಕ್ತ ವಾತಾವರಣ ಬೇಕು.
- ಯಲ್ಲ ಸಮಯದಲ್ಲು ಈ ವಿದಾನ ಯಶಸ್ಸುಗೊಳ್ಳಲು ಸಾದ್ಯವಿಲ್ಲ ಕೆಲೊಸಲ ಗಿಡ ಬೆಳೆಯದೆಇರಬಹುದು.
- ಈ ವಿದಾನ ಎಕದಳಸಸಿಗಳ್ಳಲ್ಲಿ(Monocotyledons) ಮಾಡಲು ಸಾದ್ಯವಿಲ್ಲ
ನೈಸರ್ಗಿಕ ಅಬೀಜ ಸಸ್ಯಾಅಭಿವ್ರುಧಿ(Natural Vegetative Propagation)
ಬದಲಾಯಿಸಿನೈಸರ್ಗಿಕವಾಗಿ ಗಿಡಗಳು ತಾನಗಿಯೆ ತಾಯಿ ಗಿಡದಿಂದ ಬೆರ್ಪಟ್ಟು ಬೇರು, ದಂಟು , ಮೊಗ್ಗುಗಳನ್ನು ಬೆಳೆಯುವ ಭೂಮಿಯೆಲ್ಲಿ ಬೆಳೆದರೆ ಅದನ್ನು ನೈಸರ್ಗಿಕ ಸಸ್ಯಾಆಭಿವ್ರುಧ್ಹಿ ಯನ್ನಲಾಗುತ್ತದೆ. ಗಿಡಗಳು ತಾನಗಿಯೆ ನೈಸರ್ಗಿಕ ಸಸ್ಯಾಆಭಿವ್ರುಧಿಯನ್ನು ಅವಕಾಶ ಮಾಡಿಕೊಡುವವುಗಳನ್ನು ನಾಲ್ಕು ಗುಂಪುಗಳಾಗಿ ವಿಂಗಡಿಸಲಾಗಿದೆ ಅವು
- ಬಲ್ಭಸ್
- ರೈಜ಼ೊಮ್
- ಟ್ಯುಬರ್ಸ್
- ಸ್ಟೊಲೊನ್ಶ್
- ಬಲ್ಭಸ್ : ಕೆಲೊ ಗಿಡಗಳು ತಮ್ಮ ಜಡಸ್ಥಿತಿಯಲ್ಲಿ ಉತ್ಫಾದಿಸಿದ ಊಟವನ್ನು ಸಂಗ್ರಹಿಸಲು "ಬಲ್ಭ"ಯನ್ನುವ ಸಣ್ಣ ಯಲೆಉಳ್ಳ ಮಮ್ಸಕಾರಿ ದಂಟನ್ನು ಉತ್ಫಾದಿಸುತ್ತವೆ. ಉದಾ: ಈರುಳ್ಳಿ
- ರೈಜ಼್ಹೊಮ್: ಕೆಲೊ ಗಿಡಗಳ ದಂಟು ಬದಲಾವಣೆಯನ್ನುಗಳಿಸಿ ತಮ್ಮ ಗ್ರಂಥಿಗಳಿಂದ ಹೊಸ ಬೇರು,ದಂಟುಗಳನ್ನು ಬಿಡುತ್ತವೆ ಆ ದಂಟುಗಳ ತುದಿಮೊಗ್ಗಿನಿಂದ ಬೆಳೆಯುವ ಮಾಮ್ಶವನ್ನು ರೈಜ಼್ಹೊಮ್ ಯನ್ನುತ್ತರೆ.ಉದಾ:ಶುಂಟಿ
- ಸ್ತೊಲೊನ್ಸ್: ಗಿಡಗಳ ದಂಟಿನ ಗ್ರಂಥಿಗಳಿಂದ ಹೊಸದಗಿ ಬೆಳೆದು ತಾಯಿ ದಂಟಿಗೆ ಸಮತಲವಾಗಿ ಓಡಿ ಬೆಳೆಯುವ ದಂಟನ್ನು ಸ್ತೊಲೊನ್ ಯನ್ನುತ್ತಾರೆ .ಉದಾ:ಸ್ಟ್ರಾಬೆರ್ರಿ
- ಟ್ಯುಬರ್ಸ್ : ಗಿಡಗಳ ಬೇರುಗಳು ಗಿಡದ ಜಡಸ್ಥಿತಿಯಲ್ಲಿ ಅಥವಾ ಕಷ್ಟಕಾಲದಲ್ಲಿ ಉತ್ಫಾದಿಸಿದ ಊಟವನ್ನು ಸಂಗ್ರಹಿಸಲು "ಟ್ಯುಬರ್ಸ್" ಯನ್ನುವ ಬೇರು ಬದಲಾವಣೆಯನ್ನು ಉಪಯೊಗಿಸುತ್ತವೆ. ಉದಾ:ಆಲುಗೆಡ್ಡೆ
ಉಲ್ಲೆಖನಗಳು
ಬದಲಾಯಿಸಿ- ↑ ಮ.ಲ.ನರಸಿಂಹ ಅಯ್ಯಂಗಾರ್ , ಎಂ.ಆರ್.ಆನಂದರಾಮಯ್ಯ,"ತೊಟಗಾರಿಕೆ".ಮುದ್ರಕರು:ಪವರ್ ಪ್ರೈಸ್,ಮಣಿಪಾಲ್,ಮೈಸೂರು ರಾಜ್ಯ(೧೯೭೩) ವೊಲ್-೧ ಪುಟ:೯೨-೧೧೦.
- ↑ http://sciencelearn.org.nz/Innovation/Innovation-Stories/Zealong-Tea/Articles/Vegetative-plant-propagation
- ↑ https://en.wikipedia.org/wiki/Tuber