ಸದಸ್ಯ:Gaganar1940461/ನನ್ನ ಪ್ರಯೋಗಪುಟ

ನನ್ನ ಕಿರು ಪರಿಚಯ:- ನಮಸ್ಕಾರ. ನನ್ನ ಹೆಸರು ಗಗನ ಆರ್. ನಾನು ಬಿ.ಎಸ್.ಸಿ (ಪಿಸಿಎಮ್) ವಿಭಾಗದಲ್ಲಿ ಓದುತ್ತಿದ್ದೇನೆ. ನಾನು ಹೊಸೂರಿನ ನನ್ನ ಅಜ್ಜಿಯ ಮನೆಯಲ್ಲಿ ಜನಿಸಿದೆ. ಮಾತನಾಡುವುದು ನನ್ನ ಹವ್ಯಾಸ. ನಾನು ೨೧ನೇ ಸೆಪ್ಟೆಂಬರ್ ೨೦೦೨ರಲ್ಲಿ ಜನಿಸಿದೆ. ನನ್ನ ತಂದೆಯ ಹೆಸರು ರಾಜರೆಡ್ಡಿ.ಜಿ. ನನ್ನ ತಾಯಿಯ ಹೆಸರು ಸುಧಾ.ಎಮ್. ನನ್ನ ಅಣ್ಣನ ಹೆಸರು ನಿತೀಶ್. ನನಗೆ ನನ್ನ ಅಣ್ಣ ಎಂದರೆ ತುಂಬಾ ಪ್ರೀತಿ. ನನ್ನ ಅಣ್ಣ ನನಗೆ ತುಂಬಾ ಸಹಾಯ ಮಾಡುತ್ತಾನೆ. ನನ್ನ ಅಪ್ಪ ನನ್ನ ಜೀವ,ನನ್ನ ಪ್ರಾಣ. ನನಗೆ ಸುತ್ತಾಡುವುದು ಎಂದರೆ ತುಂಬಾ ಒಲವು. ನಾನು ರಾಮನನ್ನು ಆರಾಧಿಸುತ್ತೇನೆ. ರಾಮಯಣ,ಕತೆ,ಹಾಡು,ಪುಸ್ತಕ ಓದುವುದು ನನ್ನ ಹವ್ಯಾಸ. ದಿನ ನಾನು ೫ ಗಂಟೆಗೆ ಎದ್ದೇಳುತ್ತೇನೆ. ನನಗೆ ಊಟ ಮಾಡುವುದು ಎಂದರೆ ಇಡಿಸುವುದಿಲ್ಲ. ನನ್ನ ಅಮ್ಮ ಯಾವಾಗಲು ಈ ಸಲುವಾಗಿ ಕೋಪ ಮಾಡಿಕೊಳ್ಳುತ್ತಾರೆ. ನನ್ನ ಅಪ್ಪ ನನಗಾಗಿ ಏನು ಬೇಕಾದರು ಮಾಡುತ್ತಾರೆ.

ನನ್ನ ಬಾಲ್ಯ:ಚಿಕ್ಕ ವಯಸ್ಸಿನಿಂದಲು ತುಂಬಾ ಹಠಗಾರ್ತಿ.ನಾನು ಅಂದುಕೊಂಡ ಹಾಗೇಯೆ ನಡೆಯಬೇಕು ಎಂಬ ಕೆಟ್ಟ ನಿಲುವು. ನಮ್ಮದು ರೈತ ಕುಟುಂಬ. ಒಂದು ದಿನ ಅಮ್ಮ ಹಸುವಿಗೆ ಮೇವು ತರಬೇಕಿತ್ತು. ಆದ್ದರಿಂದ ಅವರು ನನ್ನನ್ನು ಮನೆಯಲ್ಲಿಯೇ ಬಿಟ್ಟು ಹೊರಡಬೇಕಾದ ಅನಿವಾರ್ಯತೆ. ನಾನು ನನ್ನ ಅಮ್ಮನನ್ನು ಹುಡುಕಿಕೊಂಡು ಹೋಗುವಾಗ ದಾರಿ ತಪ್ಪಿ ನಮ್ಮ ಊರಿನ ಬೇರೆ ಮನೆಗೆ ಹೋದೆ. ಆಗ ಮಾತನಾಡಲು ಬರುತ್ತಿರಲಿಲ್ಲ. ಆ ಮನೆಯವರಿಗೆ ನಾನು ತುಂಬಾ ಇಡಿಸಿದೆ, ಆದ್ದರಿಂದ ಅವರು ನನ್ನನ್ನು ಸಾಕಲು ನಿರ್ಧಾರ ಮಾಡಿದರು. ಕೆಲ ಗಂಟೆಗಳ ನಂತರ ನನ್ನ ಅಮ್ಮ ನನ್ನನ್ನು ಹುಡುಕಿಕೊಂಡು ಬಂದಾಗ ನಾನು ಅವರ ಮನೆಯಲ್ಲಿ ತಿಂಡಿ ತಿನ್ನುತ್ತಾ ಇದ್ದೆ. ಆಗ ಅಮ್ಮ ನನ್ನನ್ನು ಮನೆಗೆ ಕರೆದುಕೊಂಡು ಹೋದರು. ಈಗ ನೆನೆಸಿಕೊಂಡರೆ ತುಂಬಾ ನಗು ಬರುತ್ತದೆ.

ನನ್ನ ಶಿಕ್ಷಣ: ನಾನು ಪ್ರಾಥಮಿಕ ಶಿಕ್ಷಣವನ್ನು ನಮ್ಮೂರಿನ ಕನ್ನಡ ಮಾದ್ಯಮ ಶಾಲೆಯಲ್ಲಿ ಮುಗಿಸಿದೆ. ನನಗೆ ಕನ್ನಡ ಮತ್ತು ಗಣಿತ ಎಂದರೆ ಪ್ರೀತಿ. ಒಂದು ದಿನ ನಾನು ಪರೀಕ್ಷೆಗೆ ನಿಧಾನವಾಗಿ ಹೊರಟೆ. ಶಿಕ್ಷಕರು ಪರೀಕ್ಷೆ ಬರೆಯಲು ಬಿಡುವುದಿಲ್ಲ ಎಂದು ಹೇಳಿದರು,ಆದರೆ ನನ್ನ ಅಮ್ಮ ಕಾಡಿ ಬೇಡಿ ಪರೀಕ್ಷೆ ಬರೆಯಲು ಅವಕಾಶ ಕೊಡಿಸಿದರು.ಆದರೆ ಎಲ್ಲರಿಗೂ ಮೊದಲು ಮುಗಿಸಿದೆ.ನಮ್ಮ ಶಿಕ್ಷಕರು ಈಗಲೂ ನನ್ನನ್ನು ರೇಗಿಸುತ್ತಾರೆ.ನನ್ನ ಮೊದಲ ಶಾಲಾ ದಿನಗಳಲ್ಲಿ ಜೊತೆಗಿದ್ದವರು ಶ್ರೀ.ಆಂಜನೇಯ ಸ್ವಾಮಿ. ನಾನು ಎಂದಿಗೂ ಅವರಿಗೆ ಆಭಾರಿಯಾಗಿರುತ್ತೇನೆ.

ಕಾರಣಾಂತರಗಳಿಂದ ೮ನೇ ತರಗತಿಗೆ ಶಾಲೆ ಬದಲಾಯಿಸಬೇಕಾಯಿತು. ನಂತರ ನಾನು ಮಹಾತ್ಮ ವಿದ್ಯಾಲಯ ಆಂಗ್ಲ ಮಾಧ್ಯಮ ಶಾಲೆಗೆ ಸೇರಿದೆ. ಏನೂ ತಿಳಿಯದ ಪರಿಸರ. ಸುಂದರವಾದ ಪಕ್ಷಿಯಂತೆ ಹಾರಾಡುತ್ತಿದ್ದ ನನ್ನನ್ನು ಪಂಜರದ ಗಿಳಿ ಮಾಡಿದರೆಂದು ಭಾವನೆ. ಯಾವಾಗಲೂ ಮಾತಾಡುವ ನನಗ ಬಾಯಿ ಕಟ್ಟಿದಂತಾಯಿತು. ಆಗ ನನಗೆ "ನನ್ನವರು ಯಾರು ಇಲ್ಲ,ಯಾರಿಗು ಯಾರು ಇಲ್ಲ" ಎಂಬ ಸಾಲುಗಳು ನೆನಪಿಗೆ ಬಂದವು. ಆಗ ನನಗೆ "ಜೀವಕ್ಕೆ ಜೀವಳಾದ ಗೆಳತಿ" ಸಿಗುತ್ತಾಳೆ ಎಂಬ ಕಲ್ಪನೆಯು ಇರಲಿಲ್ಲ. ನನಗೆ ಸಹಾಯವಾಗಿ ಎಲ್ಲರೂ ನಿಂತರು. ಆಗ ನನ್ನ ಬೆನ್ನೆಲುಬಾಗಿ ನಿಂತದ್ದು ಶ್ರೀ.ವಿನಾಯಕ್ ಎಂ ನಾಯಕ್. ಅವರು ಶಿಕ್ಷಕರಿಗಿಂತ ಮಿಗಿಲಾಗಿ ಅಣ್ಣನಾದರು.

ನಾನು ನನ್ನ ಪದವಿ ಪೂರ್ವ ಶಿಕ್ಷಣ ಆರಂಭಿಸಲು ವಿಸ್ಮಯ ಪದವಿ ಪೂರ್ವ ವಿದ್ಯಾಲಯಗೆ ಹೊರಟೆ. ಆರಂಭದ ವರ್ಷ ತುಂಬಾ ಹೋರಾಡಿದೆ. ವಿಸ್ಮಯ ನನಗೆ "ಮೊದಲು ಪ್ರೀತಿಸು ನಂತರ ಯತ್ನಿಸು" ಎಂಬ ಪಾಠ ಕಲಿಸಿತು. ನಂತರ ನಿಧಾನವಾಗಿ ಪ್ರೀತಿಸಲು ಆರಂಭಿಸಿದೆ. ಅದರ ಪರಿಣಾಮ ಬಿಟ್ಟು ಬರುವಾಗ ನನಗೇ ತಿಳಿಯದೆ,ನನ್ನ ಅರಿವೇ ಇಲ್ಲದೆ ಕಣ್ಣಿನಲ್ಲಿ ಕಂಬನಿ ಸುರಿಯಲಾರಂಭಿಸಿದವು. ನನಗೆ ಈ ಸಮಯದಲ್ಲಿ ನೆನಪಾಗುವ ವ್ಯಕ್ತಿ ಶ್ರೀ.ಧನುಂಜಯ್. ಒಬ್ಬ ಗುರು ಹೀಗೇಯೂ ಇರುತ್ತರೆ ಎಂದು ಇವರನ್ನು ನೋಡಿ ತಿಳಿಯಬಹುದು. ಯಾವಾಗಲು ನಾನು ಏನೇ ಹೇಳಿದರು ಕೇಳುತ್ತಿದ್ದರು. ನನ್ನ ನೋವು-ನಲಿವು ಎಲ್ಲವನ್ನೂ ಅವರ ಬಳಿ ಹೇಳುತ್ತಿದ್ದೆ. ಅವರು ನನ್ನ ಅಂಚೆ ಪೆಟ್ಟಿಗೆಯಾದರು.

ನನ್ನ ಗುರಿ: ಚಿಕ್ಕಂದಿನಿಂದಲು ಎಲ್ಲವನ್ನು ಪ್ರಶ್ನಿಸುವ,ಇದು ಹೇಗೆ,ಯಾಕೆ? ಎಂಬ ಕುತೂಹಲ. ದಿನಾಂಕ ೧೬ನೇ ಮಾರ್ಚ್ ೨೦೧೫ರಂದು ದೂರದರ್ಶನ ನೋಡುತ್ತಾ ಕುಳಿತಿದ್ದೆ. ಅಲ್ಲಿ ಒಬ್ಬ ವ್ಯಕ್ತಿಯ ಸಾವಿನ ಸುದ್ದಿಯು ಬಂದಿತು. ನನ್ನ ಮನದಲ್ಲಿ ಏನೋ ತಳ-ಮಳ, ಕಸಿ-ವಿಸಿ. ಆ ವ್ಯಕ್ತಿಯು ಡಿ.ಕೆ.ರವಿ. ಒಬ್ಬ ಐ.ಎ.ಎಸ್. ಅಧಿಕಾರಿ. ಅವರ ಸಾವು ನಾನಾ ಊಹಾಪೋಹಗಳನ್ನು ಹುಟ್ಟುಹಾಕಿತು. ಆ ದಿನ ನಿರ್ಧಾರ ಮಾಡಿದೆ, ನಾನು ಐ.ಎ.ಎಸ್ ಅಧಿಕಾರಿಯಾಗಿ ಈ ಕ್ರಮ ಬದಲಾಯಿಸಬೆಕು ಎಂದು. ಅವರೆ ನನ್ನ ಮಾದರಿ.

ನನ್ನ ಹವ್ಯಾಸ: ಓದುವುದು,ಕತೆ,ಹಾಡು,ಸಂಗೀತ ಕೇಳುವುದು. ಮನೆ ಬಿಟ್ಟು ಬೇರೆಲ್ಲಾ ಸುತ್ತಡುವುದು. ನನಗೆ ಒಬ್ಬಳು ಮುದ್ದಿನ ಅಜ್ಜಿ ಇದ್ದಾಳೆ. ಚಿಕ್ಕಂದಿನಿಂದಲೂ ನಾನಾ ಕತೆ, ಹಾಡು ಹೇಳಿ ಬೆಳೆಸಿದಳು. ನನ್ನ ದೊಡ್ಡಮ್ಮ ನನ್ನನ್ನು ಈಗಲೂ ತುಂಬಾ ಪ್ತೀತಿಯಿಂದ ನೋಡಿಕೊಳ್ಳುತ್ತಾರೆ.ಏನೇ ತಿಂಡಿ ಮಾಡಿದರು ನನಗೆ ನೀಡದೆ ತಿನ್ನುವುದಿಲ್ಲ. ನನಗೆ ಇಬ್ಬರು ಮುದ್ದಿನ ಅಣ್ಣಂದಿರಿದ್ದಾರೆ. ಅವರು ಸ್ವಂತ ಅಣ್ಣನಿಗಿಂತ ಹೆಚ್ಚು. ಎಲ್ಲ ವಿಷಯದಲ್ಲೂ ಸಹಾಯ ಮಾಡುತ್ತಾರೆ. ಅವರೆಂದರೆ ನನಗೆ ಪ್ರಾಣ.

ಮುತ್ತಾನಲ್ಲುರು ಕೆರೆ

ನನ್ನ ತತ್ವ: "ಅತಿಯಾದ ನಂಬಿಕೆ ಒಳೆಯದಲ್ಲ, ಅತಿಯಾದ ಪ್ರೀತಿಯು ಸರಿಯಲ್ಲ, ಅತಿಯಾದ ಭರವಸೆಯಂತು ಬೇಡವೇ ಬೇಡ. ಏಕೆಂದರೆ ಅತಿ ಎನ್ನುವುದು ಅತಿಯಾಗಿ ನೋಯಿಸುತ್ತದೆ"

ಲಾಲ್ ಬಾಗ್ ಉದ್ಯಾನವನ

ನನ್ನ ಈ ಕಿರುಪರಿಚಯದ ಟಿಪ್ಪಣಿಯನ್ನು ಓದಿದ ನಿಮಗೆ ಧನ್ಯವಾದಗಳು.

ವಿಧಾನ ಸೌಧ

ನನ್ನ ಊರು ಬೆಂಗಳೂರು.

ನಾನು ಮುತ್ತಾನಲ್ಲೂರು ಎಂಬ ಹಳ್ಳಿಯಲ್ಲಿ ವಾಸಿಸುತ್ತೇನೆ.

ನಮ್ಮ ಊರಿನಲ್ಲಿ ಒಂದು ಕೆರೆಯಿದೆ.

ನಮ್ಮ ಊರಿನ ತಾಲ್ಲೂಕು ಆನೇಕಲ್. ಹೋಬಳಿ ಸರ್ಜಾಪುರ.



ಲಾಲ್ ಬಾಗ್:

ವರ್ಣರಂಜಿತ ಫಲ ಹಣ್ಣು ಕಾಯಿಗಲಳಿಗೆ ಪ್ರಸಿದ್ಧವಾದ ಸಸ್ಯೋದ್ಯಾನ, ಕರ್ನಾಟಕ ರಾಜಧಾನಿ ಬೆಂಗಳೂರಿನಲ್ಲಿದೆ.

ಈ ಉದ್ಯಾನವನವನ್ನು ಹೈದರಾಲಿ ನಿರ್ಮಿಸಿದ್ದಾರೆ.

ಲಾಲ್ ಬಾಗ್ ಸಸ್ಯೋದ್ಯಾನದ ಮಧ್ಯದಲ್ಲಿ ಸುಂದರವಾದ ಗಾಜಿನ ಮನೆಯು ಇದೆ.



ಬೆಂಗಳೂರು ಅರಮನೆ

ವಿಧಾನ ಸೌದ:

ಕರ್ನಾಟಕದ ವಿಧಾನ ಮಂಡಲದ ಸಭೆ ನಡೆಯುವ ಕಟ್ಟಡ.

ಕೆಂಗಲ್ ಹನುಮಂತಯ್ಯನವರ ಆಡಳಿತದ ಅವಧಿಯಲ್ಲಿ ನಿರ್ಮಾಣವಾಯಿತು.

ವಿಧಾನ ಸೌಧ ಕಟ್ಟಲು ಸುಮಾರು ೧.೭೫ ಕೊಟಿ ವೆಚ್ಚ ಖರ್ಚು ಆಗಿದೆ ಎಂಬ ವರದಿಯೂ ಇದೆ.



ಬೆಂಗಳೂರು ಅರಮನೆ:

ಸದಾಶಿವನಗರ ಮತ್ತು ಜಯಮಹಲ್ ಮಧ್ಯದ, ನಗರದ ಹ್ರುದಯ ಭಾಗವಾದ ಪ್ಯಾಲೆಸ್ ಗಾರ್ಡೆನನಲ್ಲಿದೆ.

ಇದನ್ನು ಇಂಗ್ಲೆಂಡಿನ ವಿನ್ಸರ ಕ್ಯಾ ಸಲನ ಹಾಗೆ ನಿರ್ಮಿಸಬೇಕೆಂದಿತ್ತು.

ಇದರ ಕಾಮಗಾರಿಯು ೧೮೬೨ರಲ್ಲಿ ರೆವ್.ಗಾರೆಟ್ ಅವರಿಂದ ಪ್ರಾರಂಭವಾಯಿತು.

ಕಬ್ಬನ್ ಪಾರ್ಕ್

ನಂತರ ೧೮೮೪ ರಲ್ಲಿ ಒಡೆಯರ್ ರಾಜವಂಶದಿಂದ ಚಾಮರಾಜ ಒಡೆಯರ್ ಅವರಿಂದ ಖರೀದಿಸಲ್ಪಟ್ಟಿತು.



ಕಬ್ಬನ್ ಪಾರ್ಕ್:

ಬೆಂಗಳೂರು ನಗರದಲ್ಲಿರುವ ಹಲವಾರು ಉದ್ಯಾನವನಗಲ್ಲಿ ಕಬ್ಬನ್ ಪಾರ್ಕ್ ಒಂದು.

ಲಾಲ್ ಬಾಗ್ ಬಳಿಕ ಇದೇ ಅತ್ಯುತ್ತಮವಾದ ಉದ್ಯಾನ.

ಲಾರ್ಡ್ ಕಬ್ಬನ್ ಅವರ ಪ್ರೀತಿಯ ಉದ್ಯಾನವನ ಇದಾಗಿದೆ.

ಕಬ್ಬನ್ ಪಾರ್ಕ್ ಕೇವಲ ಪಾರ್ಕ್ ಆಗಿರದೆ, ಮಕ್ಕಳ ವಯಸ್ಕರ ಕಲಿಕೆಯ ತಾಣವಾಗಿದೆ.