ಸದಸ್ಯ:Gagan.av1940452/ನನ್ನ ಪ್ರಯೋಗಪುಟ

ನಮಸ್ಕಾರ,

ನನ್ನ ಹೆಸರು ಗಗನ್.ಎ.ವಿ.ನಾನು ಜನವರಿ ೨೬ ,೨೦೦೧ರಂದು ದಾವಣಗೆರೆಯಲ್ಲಿ ಜನಿಸಿದೆನು.ನನ್ನ ಪೋಷಕರಿಗೆ ನಾನು ಏಕಮಾತ್ರ ಮಗನಾಗಿದ್ದು ನನಗೆ ಸಹೋದರ-ಸಹೋದರಿಯರು ಯಾರು ಇಲ್ಲ.ನಾನು ಹುಟ್ಟಿದ್ದು,ಬೆಳೆದಿದ್ದು ಎಲ್ಲಾ ದಾವಣಗೆರೆಯಲ್ಲಿಯೆ.ನನ್ನ ತಂದೆಯ ಹೆಸರು ವೀರೇಶಿ.ಎ.ವಿ. ಹಾಗೂ ತಾಯಿ ಗೀತಾ.ಎಚ್.ಎಸ್.ನನ್ನ ತಂದೆ ನೀರ್ಥಡಿಯ ಸರ್ಕಾರಿ ಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.ನಾನು ೧ರಿಂದ೧೦ನೇ ತರಗತಿಯವರೆಗೂ ದಾವಣಗೆರೆಯಲ್ಲಿರುವ 'ಶ್ರೀ ಸೋಮೇಶ್ವರ ವಿದ್ಯಾಲಯ'ದಲ್ಲಿ ವ್ಯಾಸಂಗ ಮಾಡಿದೆನು.ಪ್ರಥಮ ಪಿ.ಯು.ಸಿ.ಹಾಗೂ ದ್ವಿತೀಯ ಪಿ.ಯು.ಸಿ. ಯನ್ನು ದಾವಣಗೆರೆಯಲ್ಲಿರುವ 'ಶ್ರೀ ವೈಷ್ಣವಿ ಚೇತನ' ಪದವಿಪೂರ್ವ ಕಾಲೇಜಿನಲ್ಲಿ ವ್ಯಾಸಂಗ ಮಾಡಿದೆನು.ಪ್ರಸ್ತುತ ಬೆಂಗಳೂರಿನಲ್ಲಿರುವ 'ಕ್ರೈಸ್ಟ್' ವಿಶ್ವವಿದ್ಯಾಲಯದಲ್ಲಿ ಬಿ.ಎಸ್.ಸಿ.(ಪಿ.ಸಿ.ಎಮ್.) ಶಿಕ್ಷಣವನ್ನು ಪಡೆಯುತ್ತಿದ್ದೇನೆ.

ಪುಸ್ತಕಗಳನ್ನು ಓದುವುದು,ಕ್ರಿಕೆಟ್ ಪಂದ್ಯ ವೀಕ್ಷಿಸುವುದು,ಅಭಿನಯ ಮಾಡುವುದು,ಬಿಡುವಿನ ಸಮಯದಲ್ಲಿ ಹಾಡು ಕೇಳುವುದು,ಟಿ.ವಿ ವೀಕ್ಷಿಣೆ,ದಿನಪತ್ರಿಕೆ ಓದುವುದು ನನ್ನ ಕೆಲವು ಹವ್ಯಾಸಗಳು.ನನಗೆ ನನ್ನ ಅಮ್ಮನ ಅಡುಗೆ ಎಂದರೆ ಅಚ್ಚುಮೆಚ್ಚು.ನನ್ನ ಶಾಲೆಯ ದಿನಗಳಲ್ಲಿ ನಾನು ಹಲವಾರು ಸ್ಪರ್ಧೆಗಳಲ್ಲಿ ಭಾಗವಹಿಸಿ, ಬಹುಮಾನಗಳನ್ನು ಪಡೆದಿರುತ್ತೇನೆ. ೨೦೧೫ ರಲ್ಲಿ ನಡೆದ ಜಿಲ್ಲಾ ಮಟ್ಟದ ವಿಙ್ಞಾನ ಸಮಾವೇಶದಲ್ಲಿ ನನಗೆ 'ಬಾಲ ವಿಙ್ಞಾನಿ' ಎಂಬ ಬಿರುದನ್ನು ನೀಡಿ ಸನ್ಮಾನಿಸಲಾಯಿತು,ನಂತರ ಬೀದರ್ ನಲ್ಲಿ ನಡೆದ ರಾಜ್ಯ ಮಟ್ಟದ ವಿಙ್ಞಾನ ಸಮಾವೇಶದಲ್ಲಿ ಭಾಗವಹಿಸಿ ರಾಷ್ಟಮಟ್ಟಕ್ಕೆ ಆಯ್ಕೆಯಾದೆನು.೨೦೧೫ ಜನವರಿಯಲ್ಲಿ ಬೆಂಗಳೂರಿನಲ್ಲಿ ೫ ದಿನಗಳ ಕಾಲ ನಡೆದ ೨೨ನೇ ಅಖಿಲ ಭಾರತ ಮಕ್ಕಳ ವಿಙ್ಞಾನ ಸಮಾವೇಶದಲ್ಲಿ ಭಾಗವಹಿಸಿ ಸಮಾಧಾನಕರ ಬಹುಮಾನವನ್ನು ಪಡೆದುಕೊಂಡೆನು,ಅಲ್ಲಿ ನನಗೆ ಸಿ.ಎನ್.ಆರ್.ರಾವ್ ಸರ್ ಅವರ ಬೋಧನೆಯನ್ನು(ನ್ಯಾನೋ ಟೆಕ್ನಾಲಜಿ ಕುರಿತು) ಕೇಳುವ ಅವಕಾಶ ದೊರೆಯಿತು.ಈ ಸಾಧನೆ ಮಾಡಲು ನನಗೆ ಸಹಾಯ ಮಾಡಿದ ನನ್ನ ತಂಡದ ಸದಸ್ಯರಿಗೆ ಹಾಗೂ ನನ್ನ ಶಿಕ್ಷಕರಿಗೆ ನಾನು ಸದಾ ಋಣಿಯಾಗಿರುತ್ತೇನೆ,ನನ್ನ ಶಾಲೆಯ ಆಡಳಿತ ಮಂಡಳಿಯವರು ಸಹ ನನಗೆ ಬೆನ್ನೆಲುಬಾಗಿ ನಿಂತಿದ್ದರು.ಜೀವನಕ್ಕೆ ಬೇಕಾದ ಮೌಲ್ಯಗಳನ್ನು ಮನೆಗಿಂತ ಶಾಲೆಯಲ್ಲಿ ಕಲಿತಿದ್ದೆ ಹೆಚ್ಚು,ನನ್ನ ಶಾಲಾ-ದಿನಗಳನ್ನು ನಾನು ಎಂದಿಗೂ ಮರೆಯಲಾರೆ! ನಂತರ ಪದವಿ-ಪೂರ್ವ ಕಾಲೇಜಿನಲ್ಲಿ ಎರಡು ವರ್ಷಗಳು ಹೇಗೆ ಕಳೆಯಿತು ಎಂಬುದೇ ಗೊತ್ತಾಗಲಿಲ್ಲ!ಕಾಲೇಜು ಜೀವನವು ಒತ್ತಡದಿಂದ ಕೂಡಿತ್ತು ಎಂದರೆ ತಪ್ಪಾಗಲಾರದು.ಜೀವನ ಎಂಬ ಪಯಣದಲ್ಲಿ ಎಡವಿದಾಗ ನನ್ನನ್ನು ತಿದ್ದಿದ ನನ್ನ ತಂದೆ-ತಾಯಿಗೆ,ಶಿಕ್ಷ ಕರಿಗೆ,ಹಾಗೂ ನನ್ನ ಸ್ನೇಹಿತರಿಗೆ ನಾನು ಋಣಿಯಾಗಿದ್ದೇನೆ, "ಸುಖ ಬಂದಾಗ ಹಿಗ್ಗಬಾರದು,ಕಷ್ಟ ಬಂದಾಗ ಕುಗ್ಗಬಾರದು" ಎಂಬ ನೀತಿ ಪಾಠವನ್ನು ಸದಾ ನನ್ನ ಪೋಷಕರು ನನಗೆ ಬೋಧಿಸುತ್ತಾರೆ.ನನ್ನ ಚಿಕ್ಕಪ್ಪ-ಚಿಕ್ಕಮ್ಮಂದಿರು,ದೊಡ್ಡಪ್ಪ-ದೊಡ್ಡಮಂದಿರು,ತಾತ-ಅಜ್ಜಿಯಂದಿರು,ಮಾವ-ಅತ್ತೆಯಂದಿರು ನನಗೆ ತೋರಿಸಿದ ಪ್ರೀತಿಯನ್ನು ನಾನೆಂದಿಗೂ ಮರೆಯಲಾರೆ.

ದಾವಣಗೆರೆಯಿಂದ ಬೆಂಗಳೂರಿಗೆ ಓದಲು ಬಂದಿರುವ ನನಗೆ ಈ ಸ್ಥಳ ಹೊಸತು,ಇಲ್ಲಿನ ವಾತವರಣಕ್ಕೆ ಹೊಂದಿಕೊಳ್ಳುವುದು ಅಷ್ಟೇನೂ ಕಷ್ಟವಾಗಲಿಲ್ಲ.ಅನೇಕ ವಿದ್ಯಾರ್ಥಿಗಳು ಹೊರ-ರಾಜ್ಯಗಳಿಂದ, ಅಷ್ಟೆ ಅಲ್ಲದೆ ಹೊರ-ದೇಶಗಳಿಂದ ಬಂದು ಇಲ್ಲಿನ 'ಕ್ರೈಸ್ಟ್' ವಿಶ್ವವಿದ್ಯಾಲಯ'ದಲ್ಲಿ ವ್ಯಾಸಂಗ ಮಾಡುತ್ತಾರೆ, ಇದೇ ಈ ವಿಶ್ವವಿದ್ಯಾಲಯದ ವಿಶೇಷತೆ.ಓದಿಗೆ ಕೊಡುವಷ್ಟೆ ಪ್ರಾಮುಖ್ಯತೆಯನ್ನು ಇತರ ಚಟುವಟಿಕೆಗಳಿಗೂ ಸಹ ಕೊಡುವುದು ಈ ವಿಶ್ವವಿದ್ಯಾಲಯದ ಮತ್ತೊಂದು ವಿಶೇಷತೆ.ಇಂತಹ ವಿಶ್ವವಿದ್ಯಾಲಯದಲ್ಲಿ ಓದುತ್ತಿರುವುದು ನನ್ನ ಅದೃಷ್ಟವೆಂದರೆ ತಪ್ಪಾಗಲಾರದು. ಕಳೆದವಾರ ನಮ್ಮ ಸೀನಿಯರ್ಸ್ ನಡೆಸಿಕೊಟ್ಟ 'ಫ್ರೆಶರ್ಸ್ ಡೇ' ಕೂಡ ನನ್ನ ಜೀವನದ ಅತ್ತ್ಯುತ್ತಮ ಕ್ಷಣಗಳಲ್ಲೊಂದು

ನಾನು ಬೇಸಿಗೆ ರಜೆಯ ದಿನಗಳನ್ನು ಚಿಕ್ಕಮಗಳೂರು ಜಿಲ್ಲೆಯಲ್ಲಿರುವ ಬುಕ್ಕಾಂಬುಧಿ ಎಂಬ ಹಳ್ಳಿಯಲ್ಲಿ ಕಳೆಯುತ್ತಿದ್ದೆನು,ಅದು ನನ್ನ ಅಮ್ಮನ ತವರೂರು.ಅಲ್ಲಿರುವ ತೋಟ,ಗುಡ್ಡ,ದೇವಸ್ಥಾನ ಗಳಿಗೆ ಹಲವಾರು ಬಾರಿ ಹೋಗಿದ್ದೇನೆ,ಅಲ್ಲಿರುವ ವಿರೂಪಾಕ್ಷ ದೇವಸ್ಥಾನಕ್ಕೆ ವಚನಗಳನ್ನು ಹೇಳಲು ಹೋಗುತ್ತಿದ್ದೆನು.೨೦೧೧ರ ವಿಶ್ವಕಪ್ ಕ್ರಿಕೆಟ್ ನ ಅಂತಿಮ (ಫೈನಲ್) ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು ಸೋಲಿಸಿ ಭಾರತ ತಂಡ ಗೆಲುವಿನ ನಗು ಬೀರಿದಾಗ ನಾನು ಬುಕ್ಕಾಂಬುಧಿಯಲ್ಲಿಯೆ ಇದ್ದೆ,ಆಗ ಭಾರತ ತಂಡದ ಗೆಲುವನ್ನು ನಾನು ನನ್ನ ಸ್ನೇಹಿತರೊಡನೆ ಸಂಭ್ರಮಿಸಿದ ಕ್ಷಣವನ್ನು ಮರೆಯಲಾರೆ.೨೦೧೧ರ ಮುಂಚೆ ನನಗೆ ಕ್ರಿಕೆಟ್ ನಲ್ಲಿ ಆಸಕ್ತಿ ಇತ್ತು,೨೦೧೧ರ ಅಂತಿಮ ಪಂದ್ಯದ ನಂತರ ಅದು ಇಮ್ಮಡಿ ಆಯಿತು.ಕ್ರಿಕೆಟ್ ಲೋಕದ 'ಕ್ಯಾಪ್ಟನ್ ಕೂಲ್' ಎಂದು ಕರೆಯಲ್ಪಡುವ ಎಮ್.ಎಸ್.ಧೋನಿ ನನ್ನ ನೆಚ್ಚಿನ ಆಟಗಾರ. ಐ.ಪಿ.ಲ್. ಪಂದ್ಯಗಳಂತೂ ಅಂತರಾಷ್ಟ್ರೀಯ ಪಂದ್ಯಗಳಿಗಿಂತ ಕುತೂಹಲಕಾರಿಯಾಗಿರುತ್ತವೆ.

ನಮ್ಮ ಊರು ದಾವಣಗೆರೆ ಬೆಣ್ಣೆ ದೋಸೆ, ಮಿರ್ಚಿ ಮಂಡಕ್ಕಿ ಹಾಗೂ ಎಲ್ಲಾ ವಿಧದ ಸ್ವಯಂ ಪಾಕಗಳಿಗೆ ಹೆಸರುವಾಸಿ,ದಾವಣಗೆರೆಯನ್ನು 'ಮ್ಯಾಂಚೆಸ್ಟರ್ ಆಫ್ ಕರ್ನಾಟಕ' ಎಂದು ಕರೆಯುತ್ತಾರೆ.ಇದು ಕರ್ನಾಟಕ ಭೂಪಟದಲ್ಲಿ ಮಧ್ಯದಲ್ಲಿರುವ ಕಾರಣ ಇದನ್ನು ಎರಡನೇ ರಾಜಧಾನಿಯನ್ನಾಗಿ ಮಾಡಬೇಕೆಂಬ ಕೂಗು ಬಹಳ ವರ್ಷಗಳ ಹಿಂದೆ ಕೇಳಿಬಂದಿತ್ತು,ಇದು ನಮ್ಮೂರಿನ ಕಿರು ಪರಿಚಯ.

ಒಬ್ಬ ಉತ್ತಮ ಶಿಕ್ಷಕನಾಗಬೇಕೆಂಬುದು ನನ್ನ ಜೀವನದ ಗುರಿಯಾಗಿದ್ದು,ಅದಕ್ಕೆ ಈಗಿನಿಂದಲೇ ತಯಾರಿ ನಡೆಸಬೇಕೆಂದುಕೊಂಡಿದ್ದೇನೆ.ನನಗೆ ಜೀವನದಲ್ಲಿ ಅನೇಕ ಆದರ್ಶಪ್ರಿಯ ವ್ಯಕ್ತಿಗಳಿದ್ದಾರೆ, ಅವರೆಲ್ಲರಿಂದಲೂ ಕಲಿಯುವ ಪಾಠ ಇನ್ನೂ ಸಾಕಷ್ಟಿದೆ.ಎಲ್ಲರಂತೆ ನನಗೂ ಜೀವನದಲ್ಲಿ ಏನಾದರೂ ಸಾಧಿಸಬೇಕೆಂಬ ಆಸೆ, ಹಂಬಲ ಇದೆ, ಅದಕ್ಕಾಗಿ ಶ್ರಮಪಡಬೇಕು.ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಸರ್ ಅವರು ಹೇಳಿದಂತೆ, " ನಿದ್ದೆಯಲ್ಲಿ ಬರುವುದು ಕನಸಲ್ಲ, ನಿದ್ದೆ ಮಾಡಲು ಬಿಡದಿರುವುದು ಕನಸು" ಎಂಬ ಅಂಶವನ್ನು ನೆನಪಿನಲ್ಲಿಟ್ಟುಕೊಂಡು ಸಮಯ ವ್ಯರ್ಥ ಮಾಡದಂತೆ ನನ್ನ ಗುರಿಯ ಕಡೆ ಸಾಗಲು ನನ್ನ ಕೈಲಾದಷ್ಟು ಪ್ರಯತ್ನಿಸಬೇಕೆಂದುಕೊಂಡಿದ್ದೇನೆ.ಸ್ವಾಮಿ ವಿವೇಕಾನಂದರು ಹೇಳಿರುವಂತೆ " ನಿನ್ನ ಬಾಳಿನ ಶಿಲ್ಪಿ ನೀನೆ" ಎಂಬುದನ್ನು ಗಮನದಲ್ಲಿಟ್ಟುಕೊಂಡು ನನ್ನ ಬಾಳನ್ನು ನಿರ್ಮಿಸಿಕೊಳ್ಳಬೇಕು. "ಸೋಲೆ ಗೆಲುವಿನ ಸೋಪಾನ" ಎನ್ನುವಂತೆ ಪ್ರತಿ ಸೋಲಿನಿಂದ ಅನುಭವವನ್ನು ಪಡೆದುಕೊಂಡು ಮುಂದೆ ಆ ತಪ್ಪು ಆಗದಂತೆ ನೋಡಿಕೊಳ್ಳಲು ನನ್ನ ಕೈಲಾದಷ್ಟು ಪ್ರಯತ್ನಿಸುತ್ತೇನೆ. ನಾವೆಷ್ಟೆ ಒಳ್ಳೆಯ ಕಾರ್ಯಗಳನ್ನು ಮಾಡಿದರೂ, ಜನರು ನಾವು ಮಾಡಿದ ತಪ್ಪಿನಿಂದಲೇ ನಮ್ಮನ್ನು ಗುರುತಿಸುತ್ತಾರೆ ಎಂಬ ಪಾಠವನ್ನು ಜೀವನ ನನಗೆ ಕಲಿಸಿಕೊಟ್ಟಿದೆ, ಹಾಗಾದ ಮಾತ್ರಕ್ಕೆ ತಪ್ಪು ಮಾಡಲೇಬಾರದು ಎಂದು ಹೇಳುವುದಕ್ಕೂ ಸಾಧ್ಯವಿಲ್ಲ.ಏಕೆಂದರೆ ತಪ್ಪು ಮಾಡುವುದು ಮನುಜನ ಒಂದು ಲಕ್ಷಣ, ತಪ್ಪು ಮಾಡದವರು ಯಾರಾದರೂ ಈ ಜಗತ್ತಿನಲ್ಲಿದ್ದರೆ ಅವರು ದೇವರೇ ಸರಿ.ನನ್ನ ಪ್ರಕಾರ ಜೀವನದಲ್ಲಿ ಶಿಕ್ಷಣ ಎಷ್ಟು ಮುಖ್ಯವೋ ಅಷ್ಟೇ ನಮ್ಮ ಸಂಸ್ಕೃತಿಯು ಮುಖ್ಯವಾಗುತ್ತದೆ.

ಕೊನೆಯದಾಗಿ ನನ್ನ ಜೀವನದಲ್ಲಿ ನನಗೆ ಸಹಾಯ ಮಾಡಿದ ಎಲ್ಲಾರಿಗೂ ನನ್ನ ಧನ್ಯವಾದಗಳು !


ನಮ್ಮ ದಾವಣಗೆರೆ ಬದಲಾಯಿಸಿ

 
ನಮ್ಮ ದಾವಣಗೆರೆ


 
ದಾವಣಗೆರೆ ಜಿಲ್ಲೆಯ ಶ್ಯಾಮನೂರು

ದಾವಣಗೆರೆ - ಕರ್ನಾಟಕ ರಾಜ್ಯದ ಮಧ್ಯ ಕರ್ನಾಟಕದ ಪ್ರಮುಖ ಜಿಲ್ಲೆ.ಈಗ ಈ ಊರು ಶರವೇಗದಿಂದ ಬೆಳೆಯುತ್ತಿದೆ. ದಾವಣಗೆರೆಯ ಮೊದಲಿನ ಹೆಸರು "ದೇವನಗರಿ" ಅದು ಕಾಲ ಕ್ರಮೇಣ ದಾವಣಗೆರೆ ಆಯಿತು.

ದಾವಣಗೆರೆಯು ಮಧ್ಯ ಕರ್ನಾಟಕದ ಪ್ರಮುಖ ವ್ಯಾಪಾರ ಸ್ಥಳ.ದಾವಣಗೆರೆ ಇತ್ತೀಚೆಗೆ ರಾಜ್ಯದ ಪ್ರಮುಖ ವಿದ್ಯಾಕೇಂದ್ರವಾಗಿ ಬೆಳೆದಿದ್ದು, ಇಲ್ಲಿ ಚಿತ್ರಕಲೆ, ವಸ್ತ್ರ ವಿನ್ಯಾಸ ಶಾಸ್ತ್ರ , ಎಂಜಿನಿಯರಿಂಗ್ (ಅಭಿಯಂತರ ಶಾಸ್ತ್ರ), ವೈದ್ಯಕೀಯ, ಕಲೆ, ವಾಣಿಜ್ಯ ಹಾಗು ಇತರ ವಿದ್ಯಾ ವಿಭಾಗಗಳನ್ನು ಹೊಂದಿರುವ ಮಹಾವಿದ್ಯಾಲಯಗಳಿವೆ.

ದಾವಣಗೆರೆಯು ಕರ್ನಾಟಕದ ಹೃದಯಭಾಗದಲ್ಲಿ 14° 28’ ರೇಖಾಂಶ ಮತ್ತು 75° 59’ ಅಕ್ಷಾಂಶದಲ್ಲಿದ್ದು ಸಮುದ್ರ ಮಟ್ಟದಿಂದ 602.5 ಮೀ ಎತ್ತರದಲ್ಲಿದೆ.ದಾವಣಗೆರೆಯ ತಾಲ್ಲೂಕುಗಳು ಇಂತಿವೆ:

  • ದಾವಣಗೆರೆ
  • ಹರಿಹರ
  • ಜಗಳೂರು
  • ಹೊನ್ನಾಳಿ
  • ಚನ್ನಗಿರಿ
  • ಹರಪನಹಳ್ಳಿ

ದಾವಣಗೆರೆ ಮೊದಲು ಚಿತ್ರದುರ್ಗ ಜಿಲ್ಲೆಗೆ ಸೇರಿತ್ತು. ಆಗಸ್ಟ್ ೧೫, ೧೯೯೭ರಂದು ಅಂದಿನ ಮುಖ್ಯಮಂತ್ರಿ ಜೆ ಹೆಚ್ ಪಟೇಲ್ ಅವರ ನಿರ್ಧಾರದ ಮೇರೆಗೆ ಚಿತ್ರದುರ್ಗ ಜಿಲ್ಲೆಯಿಂದ ದಾವಣಗೆರೆ, ಹರಿಹರ, ಮತ್ತು ಜಗಳೂರು ತಾಲ್ಲೂಕುಗಳನ್ನು, ಶಿವಮೊಗ್ಗ ಜಿಲ್ಲೆಯಿಂದ ಹೊನ್ನಾಳಿ ಮತ್ತು ಚನ್ನಗಿರಿ ತಾಲ್ಲೂಕುಗಳನ್ನು, ಹಾಗೂ ಬಳ್ಳಾರಿ ಜಿಲ್ಲೆಯಿಂದ ಹರಪನಹಳ್ಳಿತಾಲ್ಲೂಕುಗಳನ್ನು ಸೇರಿಸಿ ಹೊಸ ದಾವಣಗೆರೆ ಜಿಲ್ಲೆಯನ್ನು ರಚಿಸಲಾಯಿತು. ೨೦೧೯ರಲ್ಲಿ ಹರಪನಹಳ್ಳಿ ತಾಲೂಕನ್ನು, ತಾಲೂಕಿನ ಜನರ ಆಶಯದ ಮೇರೆಗೆ ಬಳ್ಳಾರಿ ಜಿಲ್ಲೆಗೆ ಸೇರಿಸಲಾಯಿತು.

 
ಬೆಣ್ಣೆ ದೋಸೆ

ದಾವಣಗೆರೆ ಮಧ್ಯ ಕರ್ನಾಟಕದ ನಗರವಾಗಿರುವುದರಿಂದ ಇದು ಉತ್ತರ ಮತ್ತು ದಕ್ಷಿಣ ಕರ್ನಾಟಕದ ಆಹಾರ ವೈಶಿಷ್ಟ್ಯಗಳ ಅನನ್ಯ ಸಂಗಮವಾಗಿದೆ. ದಾವಣಗೆರೆಯಲ್ಲಿ ಪ್ರಮುಖವಾಗಿ ಉತ್ತರ ಕರ್ನಾಟಕದ,ಜೋಳದ ರೊಟ್ಟಿ, ಶೇಂಗಾ ಚಟ್ನಿ ಪುಡಿ,ಕುರಶನಿ(ಗುರೆಳ್ಳು, ಹುಚ್ಚೆಳ್ಲು)ಪುಡಿ ಹೊಂದಿರುವ ಆಹಾರ ತಿನಿಸುಗಳೂ ದೊರೆಯುತ್ತವೆ.ಮತ್ತು ಬಳಸಲಾಗುತ್ತದೆ ಮತ್ತು ದಕ್ಷಿಣ ಕರ್ನಾಟಕದ(ಮೈಸೂರು ಪ್ರಾಂತ್ಯದ) ರಾಗಿ ಮುದ್ದೆಗಳೂ ಇಲ್ಲಿನ ಆಹಾರ ಪದಾರ್ಥಗಳಾಗಿವೆ. ರೊಟ್ಟಿಯೊಂದಿಗೆ ಅನ್ನವೂ ಬಳಸಲ್ಪಡುತ್ತದೆ.ದಾವಣಗೆರೆ ಬೆಣ್ಣೆ ದೋಸೆ ವಿಶ್ವದಲ್ಲೇ ಪ್ರಸಿದ್ಧಿ ಹೊಂದಿದೆಮತ್ತು ಇಲ್ಲಿನ ವಿಶಿಷ್ಟ. ಮಿರ್ಚಿ ಮಂಡಕ್ಕಿ ತವರೂರಾಗಿದೆ. ಸಿಹಿ ತಿನಿಸಾದ ಗುಳ್ಳಡಿಕಿ ಉಂಡಿ ದಾವಣಗೆರೆಯಲ್ಲಿ ಮಾತ್ರ ಮಾಡಲಾಗುತ್ತದೆ.ಬೆಣ್ಣೆದೋಸೆ, ಖಾರ ಮಂಡಕ್ಕಿ, ಓಪನ್ನ್ ಬೆಣ್ಣೆದೋಸೆ, ಮಸಾಲೆ ಬೆಣ್ಣೆದೋಸೆ, ಗುಳ್ಳಡಕಿ ಉಂಡೆ, ಅತ್ತಿಕಾಯಿ, ಹಿಟ್ಟು ಹಚ್ಚಿದ ಮೇಣಸಿನಕಾಯೆ, ನರ್ಗೀಸ್ ಮಂಡಕ್ಕಿ, ಮಸಾಲೆ ಮಂಡಕ್ಕಿ, ಮಸಾಲೆ ಅವಲಕ್ಕಿ ,ತಾಳಿಪೇಟ್ಟು ತಿನಿಸುಗಳು ಇಲ್ಲಿ ಜನಪ್ರಿಯ.

ದಾವಣಗೆರೆ ಪಟ್ಟಣ ಮಧ್ಯ ಕರ್ನಾಟಕದ ಪ್ರಮುಖ ವ್ಯಾಪಾರ ಕೇಂದ್ರವಾಗಿದೆ. ಇಲ್ಲಿನ ಅನೇಕ ಹತ್ತಿ ಗಿರಣಿಗಳು ಮತ್ತು ಬಟ್ಟೆ ವ್ಯಾಪಾರ ಸಂಸ್ಥೆಗಳು ದಾವಣಗೆರೆಯನ್ನು "ಕರ್ನಾಟಕದ ಮ್ಯಾಂಚೆಸ್ಟರ್" ಎಂದು ಶ್ಲಾಘಿಸಿದರು. ಇದು ರಾಜ್ಯ ಕೇಂದ್ರದಲ್ಲಿ ಭೌಗೋಳಿಕ ಸ್ಥಳ ಮತ್ತು ಉತ್ತಮ ರೈಲು, ರಸ್ತೆ ಸಂಪರ್ಕ ವಹಿವಾಟಿಗೆ ಸಾಕಷ್ಟು ಅವಕಾಶಗಳನ್ನು ಒದಗಿಸುತ್ತದೆ.

ಚಿಗಟೆರಿ ಶಿವನಾರದಮುನಿ ದೇವಸ್ತಾನ ಕುಂದವಾಡ ಕೆರೆಯು ನಗರದ ಜನರಿಗೆ ಅತ್ಯಂತ ಹತ್ತಿರವಿರುವ ಸ್ಠಳವಾಗಿದೆ. ಹರಿಹರದ ತುಂಗಭದ್ರೆ ಮತ್ತು ಪುರಾತನ ಹರಿಹರೇಶ್ವರ ದೇವಾಲಯ, ಶಾಂತಿಸಾಗರ, ಕೊಂಡಜ್ಜಿಯ ಅರಣ್ಯಧಾಮ, ಪುರಾತನ ಬಾಗಳಿ ಕಲ್ಲೇಶ್ವರ ದೇವಾಲಯ, ನೀಲಗುಂದದ ಭೕಿಮೆಶ್ವರ ಮದೇವಾಲಯಗಳು,ಉಕ್ಕಡಗಾತ್ರಿ ಕರಿಬಸವೇಶ್ವರ, ಅಜ್ಜಯ್ಯ ದೇವಾಲಯ,ನಂದಿಗುಡಿ ,ಹಿಂದಿನ ಕಾಲದ ವೃಷಭಮಠ, ಸಂತೇಬೆನ್ನೂರಿನ ಪುರಾತನ ಪುಷ್ಕರಿಣಿ.ದೊಡ್ಡಬಾತಿ ಪವಿತ್ರವನ.ಆನೆಕೊಂಡದ ಪುರಾತನ ಬಸವೇಶ್ವರ ಹಾಗು ಈಶ್ವರ ದೇವಾಲಯ. ಭಾರತದಲ್ಲಿಯೆ ಪ್ರಸಿದ್ಧವಾದ ಅತಿ ದೊಡ್ಡ ಗ್ಲಾಸ್ ಹೌಸ್ ಕುಂದುವಾಡ ಬಳಿ ಇದೆ...

ಪ್ರೇಕ್ಷಣೀಯ ಸ್ಥಳಗಳು ಬದಲಾಯಿಸಿ

  • ದಾವಣಗೆರೆಯ ಆನೇಕೊಂಡ ಬಸವೇಶ್ವರ ಸ್ವಾಮಿ ದೇವಾಲಯ.
  • ಹರಪನಹಳ್ಳಿ ತಾಲೂಕು ಕಂಚಿಕೆರೆ ಗ್ರಾಮದ ಶ್ರೀ ಕೋಡಿ ಸಿದ್ದೇಶ್ವರ ಮತ್ತು ಶ್ರೀ ಮದಗಾಂಭಿಕ ದೇವಿ ಭವ್ಯ ಪುರಾತನ ದೇವಸ್ಥಾನ ಮತ್ತು ಕೆರೆ
  • ಹರಪನಹಳ್ಳಿ ತಾಲೂಕು ಬಾಗಳಿ ಕಲ್ಲೇಶ್ವರ ಸ್ವಾಮಿ ದೇವಾಲಯ.
  • ಚಿಗಟೇರಿ ಶಿವನಾರದಮುನಿ ದೇವಸ್ತಾನ
  • ಕೊಂಡಜ್ಜಿ ಕೆರೆ
  • ವಿಶ್ವವಿಖ್ಯಾತ ಹರಿಹರ ಸಂಗಮ ಕ್ಷೇತ್ರ.
  • ಲಕ್ಕಮುತ್ತೇನಹಳ್ಳಿಯ ಶ್ರೀ ರಂಗನಾಥ ಸ್ವಾಮಿ ದೆವಾಲಯ(ಚಿತ್ರದುರ್ಗದ ಪಾಳೇಗಾರರ ಕಾಲದ್ದು)
  • ಚನ್ನಗಿರಿ ತಾಲೂಕಿನ ಹೋದಿಗೆರೆಯಲ್ಲಿ ಇರುವ ಷಾಜಿ ರಾಜೆ ಬೋಸ್ಲೆ ರವರ(ಶಿವಾಜಿ ಮಹಾರಾಜರ ತಂದೆ) ಸಮಾಧಿ.
  • ಮಾಯಕೊಂಡದಲ್ಲಿನ ಶ್ರೀ ಹಿರೇಮದಕರಿ ನಾಯಕರ ಸಮಾಧಿ.
  • ಆನಗೋಡಿನ ಇಂದಿರಾ ಪ್ರಿಯದರ್ಶಿನಿ ಪ್ರಾಣಿ ಸಂಗ್ರಹಾಲಯ.
  • ನಿರ್ಥಡಿಯ ಪುರಾತನ ರಂಗನಾಥ ಸ್ವಾಮಿ ದೇವಸ್ಥಾನ
  • ನರಗನಹಳ್ಳಿಯ ಆಂಜನೇಯ ಸ್ವಾಮಿ ದೇವಸ್ಥಾನ ಕೂಡ ಪುರಾತನ ಕಾಲದ್ದು ನವಿಕರಿಸಲಾಗಿದೆ
  • ಶಬನೂರಿನ (ಶಾಮನೂರು) ದೇವಸ್ಥಾನ ಕೂಡ ಪುರಾತನ ಕಾಲದ್ದು
  • ಬೇತೂರಿನ ಹಳೆಯ ಶ್ರೀ ಕಲ್ಲೆಶ್ವರ ಸ್ವಾಮಿ ದೇವಸ್ಥಾನ
  • ಬೇತೂರಿನ ಜೈನ ತೀರ್ಥಂಕರ ಮೂರ್ತಿಗಳು
  • ಚನ್ನಗಿರಿ ತಾಲ್ಲೂಕಿನ ಪುಣ್ಯಸ್ಥಳದ ಶ್ರೀ ರಾಘವೇಂದ್ರ ಸ್ವಾಮಿ ದೇವಸ್ಥಾನ.
  • ಕೊಮಾರನಹಳ್ಳಿಯ ಪ್ರಸಿದ್ಧವಾದ ಹೆಳವನಕಟ್ಟೆ ಶ್ರೀ ರಂಗನಾಥ ಸ್ವಾಮಿ ದೇವಸ್ಥಾನ.


 
ಕಲ್ಲೇಶ್ವರ ದೇವಾಲಯ
 
ಚರ್ಚ್,ಹರಿಹರ




 
ದಾವಣಗರೆ ಕಲಾ ಕಾಲೇಜು