ಪ್ಲಾಸ್ಟಿಕ್ ಪರಿಸರದ ಮಹಾಶತ್ರು
ಪ್ಲಾಸ್ಟಿಕ್ ಪರಿಸರದ ಮಹಾಶತ್ರು

ಸರ್ವಾಂತರ್ಯಾಮಿ ಪ್ಲಾಸ್ಟಿಕ್ ಬದಲಾಯಿಸಿ

ಪ್ಲಾಸ್ಟಿಕ್ ಮೆದುವಾದ ಮತ್ತು ವಿವಿಧ ಆಕಾರಗಳ ಘನ ಕಾಯಗಳ ಹೊಯ್ದು ಸಿಂಥಟಿಕ್ ವಸ್ತು. ಪ್ಲಾಸ್ಟಿಕ್ಗಳು ಹೆಚ್ಚಿನ ಅಣು ದ್ರವ್ಯರಾಶಿಯ ಜೈವಿಕ ಪಾಲಿಮರ್ಗಳು ಆದರೆ ಸಾಮಾನ್ಯವಾಗಿ ಇತರ ಪದಾರ್ಥಗಳನ್ನು ಹೊಂದಿರುತ್ತದೆ. ವಿಶ್ವದಾದ್ಯಂತ ಘನ ತ್ಯಾಜ್ಯ ವಸ್ತುಗಳ ಪ್ರಮಾಣ ದಿನೇ ದಿನೇ ಹೆಚ್ಚಾಗುತ್ತಿದೆ. ಮಿತಿಮೀರಿ ಬೆಳೆಯುತ್ತಿರುವ ಜನಸಂಖ್ಯೆ, ಅತಿ ಭರದಿಂದ ತಲೆಯೆತ್ತಿ ಮೆರೆಯುತ್ತಿರುವ ನಗರಗಳು, ತ್ಯಾಜ್ಯ ವಸ್ತುಗಳ ಹೆಚ್ಚಳಕ್ಕೆ ಮುಖ್ಯವಾದ ಕಾರಣಗಳು, ತ್ಯಾಜ್ಯ ವಸ್ತುಗಳ ವಿಲೇವಾರಿಗೆ ಇದು ದೊಡ್ಡ ಸವಾಲಾಗಿದೆ. ಪ್ರಗತಿ ಪರ ರಾಷ್ಟ್ರಗಳಿಗೆ ಇದು ಒಂದು ಪರಿಹರಿಸಲಾಗದ ಸಮಸ್ಯೆಯಾಗಿದೆ. ನಿರುಪಯುಕ್ತ ಪ್ಲಾಸ್ಟಿಕ್ ಅನ್ನು ಸಿಕ್ಕ ಸಿಕ್ಕಲ್ಲಿ ಎಸೆಯುವುದರಿಂದ, ವಿಲೇವಾರಿಯ ವ್ಯವಸ್ಥೆ ಸಮರ್ಪಕವಾಗಿಲ್ಲದಿರುವುದರಿಂದ ಇದರ ದುಷ್ಪರಿಣಾಮಗಳಿಗೆ ಕಾರಣವಾಗಿದೆ. ಇದಕ್ಕೆ ಮುನಿಸಿಪಾಲಿಟಿ ಮತ್ತು ಕಾರ್ಪೋರೇಷನ್ ರವರ ಅಜಾಗರೂಕತೆಯೇ ಕಾರಣ ಎಂದರೆ ತಪ್ಪಾಗಲಾರದು. ತ್ಯಾಜ್ಯ ವಸ್ತುವಿನ ಸಂಗ್ರಹ ಮತ್ತು ವಿಲೇವಾರಿ ಮುನಿಸಿಪಾಲಿಟಿ ಮತ್ತು ಕಾರ್ಪೋರೇಷನ್ ಜವಾಬ್ದಾರಿ.ತ್ಯಾಜ್ಯ ವಸ್ತು ಮಿತಿಮೀರಿ ತುಂಬಿದ್ದರೂ ಇದಕ್ಕೆ ಹೆಚ್ಚು ಗಮನ ಕೊಡುತ್ತಿಲ್ಲ. ಹಣಕಾಸಿನ ಕೊರತೆಯೂ ಇದಕ್ಕೆ ಒಂದು ಕಾರಣವಾಗಿರಬಹುದು. ಈ ಕಾಯ್ದೆಯು ತ್ಯಾಜ್ಯ ವಸ್ತುವಿನಿಂದಾಗುವ ದುಷ್ಪರಿಣಾಮಗಳ ಪರಿಹಾರವಾಗಿ ಮರುಬಳಕೆ ಮತ್ತು ಮರುಟ್ಟನ್ನು ಮಾಡಲು ಒತ್ತಿ ಹೇಳಿದೆ. ಆದರೆ, ಪ್ಲಾಸ್ಟಿಕ್ ನ ತ್ಯಾಜ್ಯವನ್ನು ಕಡಿಮೆ ಮಾಡುವ ಬಗ್ಗೆ ಚಕಾರವೆತ್ತಿಲ್ಲ. ಆದುದರಿಂದ ಇದು ಬಳಕೆಗೆ ಪ್ರೋತ್ಸಾಹ ನೀಡುತ್ತದೆಯೇ ಹೊರತು ಬಳಸದಿರಲು ತಿಳಿಸಿದಂತೆ ಆಗಲಿಲ್ಲ.ಪ್ಲಾಸ್ಟಿಕ್ ವಸ್ತುವಿನ ದಪ್ಪ ಹೆಚ್ಚಿಸಲು ತಿಳಿಸಿರುವುದು ಮತ್ತಷ್ಟು ತೊಂದರೆಗೆ ಆಹ್ವಾನ ಕೊಟ್ಟಂತಾಗಿದೆ. ಈ ಕಾನೂನಿನಲ್ಲಿ ಮುಂದೆ ಸಂಭವಿಸಬಹುದಾದ ತೊಂದರೆಗಳನ್ನು ಪ್ರತಿಬಂಧಿಸಲು ಕ್ರಮ ತೆಗೆದುಕೊಳ್ಳುವ ಬಗ್ಗೆ ಯಾವ ಪರಿಹಾರವನ್ನು ಸೂಚಿಸಿಲ್ಲ.

ಪ್ಲಾಸ್ಟಿಕ್ ಪರಿಸರದ ಮಹಾಶತ್ರು
 
ಪ್ಲಾಸ್ಟಿಕ್ ಪರಿಸರದ ಮಹಾಶತ್ರು

ಪ್ಲಾಸ್ಟಿಕ್ ಕಾರ್ಖಾನೆಗಳು ಮತ್ತು ನಡೆದು ಬಂದ ದಾರಿ ಬದಲಾಯಿಸಿ

  1. ) ಪ್ಲಾಸ್ಟಿಕ್.ಕಾರ್ಖಾನೆಗಳ ಉಗಮ ಮತ್ತು ನಡೆದು ಬಂದ ದಾರಿ...,
  • ] ೧೯೪೦ರ ದಶಕದ ಅಂತ್ಯ ಭಾಗದಲ್ಲಿ, ಭಾರತದಲ್ಲಿ ಪ್ಲಾಸ್ಟಿಕ್ ಕಾರ್ಖಾನೆ ತಲೆ ಎತ್ತಿತು. ಇದಕ್ಕೆ ಬೇಕಾದ ಯಂತ್ರಗಳು, ಕಚ್ಚಾವಸ್ತುಗಳು, ತಯಾರಿಕೆಯ ಮಾಹಿತಿಗಳನ್ನು ಹೊರದೇಶಗಳಿಂದ ಪಡೆಯಲಾಯಿತು.
  • ] ೧೯೬೦ರ ಹೊತ್ತಿಗೆ ಸ್ವಲ್ಪ ಚೇತರಿಸಿಕೊಳ್ಳಲಾರಂಭಿಸಿತು. ಆಗ ಚಿಕ್ಕದಾದ ನ್ಯಾಪ್ತ ಕ್ರಾಕರ್ ಪ್ಲಾಂಟ್[Naptha cracker plant] ಅನ್ನು ಇಥಿಲಿನ್ ತಯಾರಿಕೆಗೆ ಬಳಸಲು ಪ್ರಾರಂಭಿಸಲಾಯಿತು. ಇದರಿಂದ ಹೈಡೆನ್ಸಿಟಿ ಪಾಲೀಥಿಲಿನ್ ಮತ್ತು ಪಿವಿಸಿಯ ತಯಾರಿಕೆ ಪ್ರಾರಂಭವಾಯಿತು.
  • ] ೧೯೭೦ರಲ್ಲಿ ಪಾಲಿಮರ್ ಇಂಡಸ್ಟ್ರೀಯ ತೊಂದರೆಗೆ ಈಡಾದದ್ದರಿಂದ ಪ್ಲಾಸ್ಟಿಕ್ ಇಂಡಸ್ಟ್ರೀಗಳ ಬೆಳವಣಿಗೆ ಸ್ಥಗಿತವಾಯಿತು.
  • ] ೧೯೯೧ರಲ್ಲಿ ಸರ್ಕಾರದ ಯೋಜನೆಯಿಂದ ಸ್ವಲ್ಪ ಸುಧಾರಣೆಯಾಯಿತು. ೭ನೇ ಪಂಚವಾರ್ಷಿಕ ಯೋಜನೆಯಲ್ಲಿ ರಿಲಾಯನ್ಸ್ ಕಂಪನಿಗೆ ಸಹಾಯವಾಯಿತು. ಇದು ಪಾಲಿಮಾರ್ ಇಂಡಸ್ಟ್ರೀಯ ಮುಖ್ಯಸಂಸ್ಥೆ.

೨) ಭಾರತದಲ್ಲಿನ ಬೆಳವಣಿಗೆ

  • ] ಪ್ಲಾಸ್ಟಿಕ್ ಕಾರ್ಖಾನೆಗಳ ಬೆಳವಣಿಗೆ ಇತರ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತದಲ್ಲಿ ಶೇ.೧೭ರಷ್ಟು ಹೆಚ್ಚು ಪ್ರಗತಿ ಪಥದಲ್ಲಿ ಸಾಗುತ್ತಿದೆ.
  • ] ಪ್ಲಾಸ್ಟಿಕ್ ನ ಬಳಕೆ ಭಾರತದಲ್ಲಿ ಪ್ರತಿವರ್ಷ ೪ ಮಿಲಿಯನ್ ಟನ್ ಗಳು.
  • ] ಭರತದ ಜನಸಂಖ್ಯೆ ಒಟ್ಟು ೧ ಬಿಲಿಯನ್. ಅದರಲ್ಲಿ ೧/೩ ಭಾಗ ಬಡತನದ ರೇಖೆಯ ಅಡಿ ಇರುವವರು. ಇವರು ಬಳಕೆಗೆ ಹೆಚ್ಚು ಅರ್ಹರಲ್ಲ.

೩)ಪ್ಲಾಸ್ಟಿಕ್ ಗಳ ಬಳಕೆ ದಿನಬಳಕೆಯ ಎಲ್ಲಾ ವಸ್ತುಗಳಿಗೆ ಹೋಲಿಸಿದರೆ ಪ್ಲಾಸ್ಟಿಕ್ ಬಳಕೆ ಹೆಚ್ಚಾಗುತ್ತದೆ. ಒಟ್ಟು ಪ್ಲಾಸ್ಟಿಕ್ ಬಳಕೆಯಲ್ಲಿ ದಿನಬಳಕೆಯ ವಸ್ತುಗಳ ತಯಾರಿಕೆಗೆ ಶೇಕಡ ೮೫ರಷ್ಟು, ಇಂಜಿನಿಯರಿಂಗ್ ಮತ್ತು ಇತರ ಬಳಕೆಗೆ ಶೇಕಡ ೧೫ರಷ್ಟು ಬಳಕೆಯಾಗುತ್ತಿವೆ.

೪) ಬಳಕೆಯ ಪ್ರಮಣ ಮತ್ತು ತಯಾರಿಕೆಗೆ ಪ್ರೋತ್ಸಾಹ. - ವಿಶ್ವದಲ್ಲಿ ಸರಾಸರಿ ಪ್ರತಿಯೊಬ್ಬರ ಬಳಕೆ ೧೮.ಕೆ.ಜಿ . - ಭಾರತದಲ್ಲಿ ಸರಾಸರಿ ಪ್ರತಿಯೊಬ್ಬರ ಬಳಕೆ ೪ ಕೆ.ಜಿ . - ಭಾರತದಲ್ಲಿ ಇನ್ನೂ ಹೆಚ್ಚು ಬಳಸುವ ಸಾಧ್ಯತೆಯಿದೆ.

ಪ್ಲಾಸ್ಟಿಕ್ ತ್ಯಾಜ್ಯದ ಮೂಲ ದುಷ್ಪರಿಣಾಮಗಳು ಮತ್ತು ವಿಲೇವಾರಿ ಬದಲಾಯಿಸಿ

  1. ) ಮೂಲ;

ಮುಖ್ಯವಾದವುಗಳು-

  • . ಮುನಿಸಿಪಾಲಿಟಿ ತ್ಯಾಜ್ಯ- ಮನೆಗಳಿಂದ, ಸಾಧಾರಣ ವ್ಯಾಪಾರದಿಂದ, ಹೋಟೆಲ್ಗಳಿಂದ, ಆಸ್ಪತ್ರೆಗಳಿಂದ.
  • . ಕಾರ್ಖಾನೆ- ಆಹಾರ ಮತ್ತು ರಾಸಾಯನಿಕ ವಸ್ತುಗಳ ಕಾರ್ಖಾನೆಗಳಿಂದ, ಪಿಲ್ಮಗಳ ಪ್ಯಾಕೆಟ್ ಗಳು.
  • . ಇತರ- ತಂತಾನೆ ಉತ್ಪತ್ತಿಯಾಗುವಂತಹವುಗಳು. ಕೃಷಿಗಳಿಂದ, ಕಾರ್ಖಾನೆಗಳಿಂದ, ಕಟ್ಟಡ ನಿರ್ಮಾಣಗಳಿಂದ ಬರುವ ಅನುಪಯುಕ್ತ ವಸ್ತುಗಳು.
  1. ) ಉತ್ಪತ್ತಿಯ ಕಾರಣಗಳು-

ತ್ಯಾಜ್ಯ ವಸ್ತುವಿನ ಉತ್ಪತ್ತಿ ಸಾಮಾಜಿಕ ಮತ್ತು ಆರ್ಥಿಕ ಪರಿಸ್ಥಿತಿ, ಕೈಗಾರೀಕಾಕರಣ, ವಾತಾಯನ. ಶ್ರೀಮಂತ ನಗರಗಳಲ್ಲಿ ಘನ ತ್ಯಾಜ್ಯ ವಸ್ತು ಹೆಚ್ಚು ಉತ್ಪತ್ತಿಯಾಗುತ್ತದೆ.

  1. ) ಉತ್ಪತ್ತಿ ಪ್ರಮಾಣ-

ಎಮ್.ಎಸ್.ಡಬ್ಲ್ಯು.ಪ್ಲಾಸ್ಟಿಕ್ ಪ್ರಮಾಣ ಸರಾಸರಿ ಪ್ರತಿತಲೆಗೆ ೧-೪%

  • .೫ ಕೆ.ಜಿ./ತಲೆಗೆ

ಇದರಲ್ಲಿ ಶೇಕಡಾ ೬೦ ಮರುಬಳಕೆಗೆ, ಮರುಟ್ಟಿಗೆ ಬಳಸುತ್ತಾರೆ. ಶೇಕಡಾ ೪೦ರಷ್ಟು ವ್ಯರ್ಥವಾಗುತ್ತದೆ. ಸುಮಾರು ೮,೦೦,೦೦೦ ಟನ್ ವ್ಯರ್ಥವಾಗುತ್ತದೆ.

ಆಸ್ಪತ್ರೆಗಳ ತ್ಯಾಜ್ಯ ವಸ್ತುಗಳು- ಪ್ಲಾಸ್ಟಿಕ್ ಗೆ ಸಂಬಂಧಪಟ್ಟವುಗಳು ಬದಲಾಯಿಸಿ

  1. ) ತ್ಯಾಜ್ಯ ವಸ್ತುಗಳ ಉತ್ಪತ್ತಿಯ ಮೂಲ ಸ್ಥಳಗಳು
  • ಕ್ಲಿನಿಕ್ ಗಳು, ೨. ಚಿಕಿತ್ಸಾಲಯಗಳು, ೩. ನರ್ಸಿಂಗ್ ಹೋಮ್ ಗಳು, ೪.ಆಸ್ಪತ್ರೆಗಳು, ೫. ಹೆರಿಗೆ ಆಸ್ಪತ್ರೆಗಳು, ೬. ಪ್ರಯೋಗ ಶಾಲೆಗಳು, ೭. ದಂತ ಚಿಕಿತ್ಸಾಲಯಗಳು, ೮. ಪ್ರಥಮ ಚಿಕಿತ್ಸಾಸ್ಥಳಗಳು.

೨) ಸಂದರ್ಭಗಳು

  • 1. ರೋಗನಿರ್ಧಾರದ ಸಮಯ, ೨.ಚಿಕಿತ್ಸೆಯ ಸಮಯ, ೩.ಲಸಿಕೆ ಕಾರ್ಯಾಕ್ರಮ, ೪. ಔಷಧ ತಯಾರಿಕೆ ಮತ್ತು ಅದರ ಪರೀಕ್ಷೆಯ ಸಮಯ, ೫. ಮೆಡಿಕಲ್ ಕಾಲೇಜ್ ಮತ್ತು ಪ್ರಯೋಗ ಶಾಲೆಗಳಲ್ಲಿ ಬಳಸಿದ ವಸ್ತುಗಳು, ೬. ಪ್ರಾಣಿಗಳ ಚಿಕಿತ್ಸಾಸ್ಥಳಗಳು.

ಕೃತಕ ವಿರುದ್ದ ನೈಸರ್ಗಿಕ ಬದಲಾಯಿಸಿ

ಜೈವಿಕ ಪ್ಲಾಸ್ಟಿಕ್ ಅತ್ಯಂತ ಪ್ಲಾಸ್ಟಿಕ್ ಪೆಟ್ರೋಕೆಮಿಕಲ್ ತಯಾರಿಸಬಹುದು.ಪೆಟ್ರೋಕೆಮಿಕಲ್ ಮೀಸಲು ಮತ್ತು ಜಾಗತಿಕ ತಾಪಮಾನ ಬೆದರಿಕೆ ಸೀಮಿತತೆಯ ಪ್ರೇರಣೆ, ಜೈವಿಕ ಪ್ಲಾಸ್ಟಿಕ್ ಅಭಿವೃದ್ದಿಗೊಳಿಸಲಾಗುತ್ತಿದೆ. ಜೈವಿಕ ಪ್ಲಾಸ್ಟಿಕ್ ಸೆಲ್ಯುಲೋಸ್ ಮತ್ತು ಪಿಷ್ಟ ನವೀಕರಿಸಬಹುದಾದ ಸಸ್ಯದ ವಸ್ತುಗಳಿಂದ ಗಣನೀಯವಾಗಿ ಮಾಡಲಾಗುತ್ತದೆ. ೧೨.೩ ಮಿಲಿಯನ್ ಟನ್ ಎಂದು ಅಂದಾಜಿಸಲಾಗಿದೆ. [೧]

ಮುಕ್ತಾಯ ಬದಲಾಯಿಸಿ

  1. ) ನಿಮ್ಮ ಸ್ವಂತ ಶಾಪಿಂಗ್ ಬ್ಯಾಗ್ ತನ್ನಿ;

ನಿಮ್ಮ ಸ್ವಂತ ಪ್ಲಾಸ್ಟಿಕ್ ಚೀಲ ತರುವುದು ಸಾಮಾನ್ಯ ಆದರೆ ಉತ್ತಮ ಪರಿಸರ ಸಲಹೆ, ಕೆಲವೊಂದು ಸರ್ಕಾರಗಳು ಅದನ್ನು ಹೆಚ್ಚು ಪ್ರೋತ್ಸಾಹಿಸುವ ನೀತಿಗಳನ್ನು ಜಾರಿಗೆ ತಂದಿದೆ .

  1. ) ನಿಲ್ಲಿಸಿ ಬಾಟಲ್ ನೀರಿನ ಖರೀದಿ;

ಬದಲಿಗೆ, ಸೂಕ್ತ ಒಂದು ಪುನಃ ತುಂಬುಬಹುದಾದ ಬಾಟಲ್ ಇರಿಸಿಕೊಳ್ಳಿ.[೧]

ಹೊರಗಿನ ಸಂಪರ್ಕ ಬದಲಾಯಿಸಿ

ಉಲ್ಲೇಖಗಳು ಬದಲಾಯಿಸಿ

  1. ೧.೦ ೧.೧ "ಪ್ಲಾಸ್ಟಿಕ್".