ಸದಸ್ಯ:Durgaprasanna/ನನ್ನ ಪ್ರಯೋಗಪುಟ
ಶ್ರೀ ಮಹಾವೀರ ಸ್ವಾಮಿ ಬಸದಿಯನ್ನು ಶೆಟ್ಟರ ಬಸದಿ ಎಂದೂ ಕರೆಯುತ್ತಾರೆ. ಈ ಬಸದಿಯು ಜೈನ ಕಾಶಿ ಮೂಡುಬಿದಿರೆಯಲ್ಲಿರುವ ೧೮ ಬಸದಿಗಳಲ್ಲಿ ಒಂದು. ಈ ಬಸದಿಗೆ ಹತ್ತಿರದ ಶೆಟ್ರ ಮನೆತನದವರು ಭೇಟಿ ನೀಡುತ್ತಿರುತ್ತಾರೆ.
ಇತಿಹಾಸ
ಬದಲಾಯಿಸಿಈ ಬಸದಿ ಸುಮಾರು ೪೦೦ ವಷಗಳ ಇತಿಹಾಸ ಹೊಂದಿದ್ದು, ಬಂಗೋತ್ತಮ ಶೆಟ್ಟಿ ಎನ್ನುವವರು ಇದನ್ನು ಕಟ್ಟಿಸಿದ್ದಾರೆ. ಒಂದು ಬಾರಿ ಬಂಗೋತ್ತಮ ರತ್ನ ವ್ಯಾಪಾರಕ್ಕೆ ದೇಶಾಂತರ ಪರ್ಯಟನೆ ಮಾಡುತ್ತಾ ಉತ್ತರ ದೇಶಕ್ಕೆ ಹೋಗುತ್ತಾರೆ. ಅಲ್ಲಿ ಉಜ್ಜಯಿನಿಯ ರಾಜನು ಒಡ್ಡಿದ ಪರೀಕ್ಷೆಯನ್ನು ಬೇಧಿಸಿದಾಗ ರಾಜನ ವಂಶದ ದ್ರವ್ಯವನ್ನು ಆತನಿಗೆ ಕೊಡುಗೆ ನೀಡಲಾಯಿತು. ಒಂಟೆಯ ಮೇಲೆ ದ್ರವ್ಯವನ್ನು ಹೇರಿಕೊಂಡು ಬರುತ್ತಿರುವಾಗ ಮಲಗಿದ್ದ ಒಂಟೆಯು ಮೇಲೇಳದೆ ಇದ್ದಾಗ ಜಿನಾಲಯವನ್ನು ಕಟ್ಟಿಸಿ ಪಂಚಕಲ್ಯಾಣ ಮಾಡಿಸುವುದಾಗಿ ಪ್ರತಿಜ್ಞೆ ಮಾಡಿ, ಈ ಬಸದಿಯನ್ನು ಭಟ್ಟಾರಕರ ಮಾರ್ಗದರ್ಶನದಲ್ಲಿ ನಿರ್ಮಿಸಿದರು ಎಂಬ ಪ್ರತೀತಿ ಇದೆ.
ಆರಾಧನೆ
ಬದಲಾಯಿಸಿಶೆಟ್ಟರ ಬಸದಿಯಲ್ಲಿ ಪೂಜಿಸಲ್ಪಡುವ ಮೂಲ ನಾಯಕ ಶ್ರೀ ಮಹಾವೀರ. ಈ ವಿಗ್ರಹವನ್ನು ಕಪ್ಪು ಶಿಲೆಯಲ್ಲಿ ಕೆತ್ತಲಾಗಿದೆ. ಇದರ ಎಡಬದಿಗೆ ಹರಿಪೀಠದ ಪ್ರತಿಮೆಗಳು. ಎಡ ಬಲ ಬಸದಿಯಲ್ಲಿ ಸರಸ್ವತಿ ಹಾಗೂ ಪದ್ಮಾವತಿ ದೇವಿಯವರ ವಿಗ್ರಹ ಇರಿಸಲಾಗಿದೆ. ಮೂಲ ಸ್ವಾಮಿಗೆ ಪ್ರತಿದಿನವೂ ಜಲಾಭಿಷೇಕ ಹಾಗೂ ಇತರ ಅಭಿಷೇಕಗಳು ನಡೆಯುತ್ತವೆ. ಬಸದಿಯ ಬಲ ಮೂಲೆಯಲ್ಲಿ ಕ್ಷೇತ್ರಪಾಲನ ಸನ್ನಿಧಿ ಇದೆ. ಹಲವು ನಾಗರಕಲ್ಲುಗಳಿದ್ದು, ಹಾಲಿನ ಅಭಿಷೇಕ ಮಾಡಲಾಗುತ್ತದೆ.