ಸದಸ್ಯ:Durgakaveri Hosamane/ನನ್ನ ಪ್ರಯೋಗಪುಟ

'''ಸುಟ್ಟವು ಮಾಣಿಯ ಕಥೆ''' Suttavu maniya kathe/ havigannada kathe

ಬದಲಾಯಿಸಿ

   ಇದು ಹವ್ಯಕರಿಂಗೆಲ್ಲಾ ಸಾಮಾನ್ಯವಾಗಿ ಗೊಂತಿಪ್ಪ ಜನಪದ ಕಥೆ, ಮತ್ತೆ ಕೇವಲ ಹವ್ಯಕರಲ್ಲಿ ಮಾತ್ರ ಕಂಡುಬಪ್ಪ ಕಥೆ, ಹಾಂಗಾಗಿ ಹವ್ಯಕ ಜನಪದ ಕಥೆ ಹೇಳ್ರೂ ತಪ್ಪಿಲ್ಲೆ. (ಹೀಂಗಿಪ್ಪ ಅನೇಕ ಜನಪದ ಕಥೆಗ ನಮ್ಮ ಹವ್ಯಕ ಭಾಷೆಲಿ ಇದ್ದು)  ಮೊದಲಣ ಕಾಲಲ್ಲಿ ಮಕ್ಕಳ ಮನುಗುಸುವಾಗ ಅಥವಾ ಪುರುಸೊತ್ತಿಪ್ಪ ಸಮಯಲ್ಲಿ ಈ ಕಥೆಯ ಹಿರಿಯರು ಹೇಳಿಗೊಂಡಿತ್ತವು. ಇದು ಒಂದು ನೀತಿ ಕಥೆಯೂ ಅಪ್ಪು ಹೇಳುಲಕ್ಕು, ರಾಕ್ಷಸಿ ಅಜ್ಜಿ ಸುಟ್ಟವು ಮಾಣಿಯ ಕೊಂದು ತಿನ್ನೆಕ್ಕು ಹೇಳಿ ಗ್ರೇಶಿತ್ತು, ಆದರೆ ಕಡೆಗೆ ದೇವರು ರಾಕ್ಷಸಿ ಅಜ್ಜಿಯೇ ಸಾಯುವ ಹಾಂಗೆ ಮಾಡಿದ ಕಥೆ. ಹಾಂಗಾಗಿ ಕೆಟ್ಟದಕ್ಕೆ ಯಾವಾಗಲು ಒಳ್ಳೆಯ ಅಂತ್ಯ ಇಲ್ಲೆ ಅಥವಾ ದುಷ್ಟ ಸಂಹಾರ ಮಾಡ್ಲೆ ಶಿಷ್ಟರ ರಕ್ಷಿಸುಲೆ ದೇವರು ಯಾವಾಗಲೂ ಇರ್ತ ಹೇಳಿ ಈ ಕಥೆಯ ನೀತಿ ಹೇಳಿ ತಿಳ್ಕೊಂಬಲಕ್ಕು.

   ಸುಟ್ಟವು ಮಾಣಿ ಕಥೆಯ ಸುಮಾರು ಹತ್ತರಿಂದ ಇಪ್ಪತ್ತು ನಿಮಿಷವರೆಗೆ ಬೇರೆ ಬೇರೆ ರೀತಿಲಿ ಬೇರೆ ಬೇರೆ ಪ್ರದೇಶಲ್ಲಿ ಹೇಳುದು ಕಂಡುಬತ್ತು.  ಇದರಲ್ಲಿ ಜಾದೂ, ತ್ರಿಲ್ಲಿಂಗ್, ಚೂರ್ ಚೂರು ಹಾರರ್ ಹೇಳುವ ವಿಷಯಗಳೂ ಇದ್ದು. ಯಾವುದೇ ಅರೇಬಿಯನ್ ನೈಟ್ಸ್, ಗಲಿವರ ಕಥೆಗೊಕ್ಕೆ ಕಮ್ಮಿ ಇಲ್ಲದ್ದಾಂಗೆ ಇದರ ಹೇಳಿಗೊಂಡಿತ್ತವು ಕೆಲವು ಅಜ್ಜ- ಅಜ್ಜಿಯಕ್ಕ.  


'''ದಕ್ಷಿಣ ಕನ್ನಡ ಕಾಸರಗೋಡು ಭಾಗಲ್ಲಿ ಹೇಳುವ ಸುಟ್ಟವು ಮಾಣಿ ಕಥೆ'''

   ಒಂದೂರಿಲಿ ಒಬ್ಬ ಮಾಣಿ ಇತ್ತನಡ, ಅವ ಒಂದು ದಿನ ನೆರೆಕರೆಯ ಒಂದು ಮನೆಗೆ ತಿಥಿಗೆ ಹೋದನಡ. ಅಲ್ಲಿ ತಿಥಿ ಕಳುದಿಕ್ಕಿ ಉಂಡಿಕ್ಕಿ ಹೆರಡುವಾಗ ಆ ಮನೆಯವು ಸುಟ್ಟವು ಕಟ್ಟಿ ಕೊಟ್ಟವಡ. (ಇಲ್ಲಿ ತಿಥಿಯ ಬಗ್ಗೆ ಕಥೆ ಹೇಳುವವು ಅವರವರ ಕಲ್ಪನೆಗೆ ಬಪ್ಪ ಹಾಂಗೆ ತಿಥಿಯ ವಿವರುಸುತ್ತವು) ಅವ ಮನೆಗೆ ಸುಟ್ಟವು ತೆಕ್ಕೊಂಡು ಬಂದು, ಅದ್ರಲ್ಲಿ ಒಂದು ಸುಟ್ಟವಿನ ಜಾಲಿನ ಕೋಡಿಲಿ ಮಣ್ಣು ಒಕ್ಕಿ, ಸುಟ್ಟವಿನ ಬಿತ್ತು ಹಾಕಿದನಡ. ಹಾಕಿಕ್ಕಿ ಹೇಳಿದಡ "ನಾಳೆ ಅಪ್ಪಗ ನೀನು ಹುಟ್ಟಿ ಗಿಡ ಆಗದ್ರೆ ಎನ್ನ ಅಪ್ಪನ ಬಡ್ಡು ಪೀಶಕತ್ತಿಲಿ ನಿನ್ನ ಕೊಚ್ಚಿ ಕೊಚ್ಚಿ ಹಾಕುತ್ತೆ" ಹೇಳಿ. ಮರುದಿನ ಎದ್ದು ನೋಡುವಾಗ ಸುಟ್ಟವು ಹುಟ್ಟಿ ಗಿಡ ಆಯ್ದಡ. ಅದರ ಕಂಡು ಮಾಣಿಗೆ ಭಾರೀ ಖುಷಿ ಆತಡ. ಮತ್ತೆ ಪುನಾ ಹೇಳಿದ್ನಡ " ನಾಳಂಗಪ್ಪಗ ನೀನು ದೊಡ್ಡ ಮರ ಆಗದ್ರೆ ಎನ್ನ ಅಪ್ಪನ ಬಡ್ಡು ಪೀಶಕತ್ತಿಲಿ ಕೊಚಿ ಕೊಚ್ಚಿ ಕೊಚ್ಚಿ ಹಾಕುತ್ತೆ" ಹೇಳಿ. ಮರುದಿನ ನೋಡುವಾಗ ಅದು ದೊಡ್ಡ ಮರವೇ ಆಯ್ದಡ. ಮಾಣಿಗೆ ಇನ್ನೂ ಖುಷಿ ಆತಡ. ಮಾಣಿ ಹೇಳಿದಡ " ನಾಳೆ ನೀನು ಹೂಗು, ಕಾಯಿ, ಹಣ್ಣು ಎಲ್ಲ ಬಿಡದ್ರೆ ಎನ್ನ ಅಪ್ಪನ ಬಡ್ಡು ಪೀಶಕತ್ತಿಲಿ ಕೊಚಿ ಕೊಚ್ಚಿ ಕೊಚ್ಚಿ ಹಾಕುತ್ತೆ" ಹೇಳಿ. ಆ ದಿನ ಆ ಮರಲ್ಲಿ ಸುಟ್ಟವಿನ ಹೂಗು, ಕಾಯಿ, ಹಣ್ಣು ಎಲ್ಲಾ ಆಯ್ದಡ. (ಇಲ್ಲೆಲ್ಲ ಒಂದು ರೀತಿಯ ಜಾದೂ ಅಥವ ನಂಬುಲೆಡಿಯದ್ದ ಸಂಗತಿಗ ಇದ್ದು, ಇದು ಮಕ್ಕಳ ಕಥೆ ಕೇಳುವ ಕುತೂಹಲವ ಮತ್ತಷ್ಟು ಹೆಚ್ಚಿಸುತ್ತು). ಮಾಣಿಗೆ ಸಂತೋಷಲ್ಲಿ ಎಂತ ಮಾಡೆಕ್ಕು ಹೇಳಿ ಅರಡಿಯಡ. ಕೂಡ್ಲೇ ಅವ ಸುಟ್ಟವು ಮರಕ್ಕೆ ರಪ ರಪನೆ ಹತ್ತಿದನಡ. ಹತ್ತಿ ಸುಟ್ಟವು ಹಣ್ಣಿನ ಕೊಯ್ದು ಕೊಯ್ದು ತಿಂದಡ. ಹಾಂಗೆ ಸುಮಾರು ಹೊತ್ತು ಆತಡ. ಅಷ್ಟಪ್ಪಗ ಕೆಳ ಒಂದು ಅಜ್ಜಿ ಚೀಲ ತೆಕ್ಕೊಂಡು ಬಂತಡ. ಅದು ಮಾಣಿಯ ಕರುದತ್ತಡ. "ಮಾಣಿ ಮಾಣಿ, ಆನು ಉಣ್ಣದ್ದೆ ಸುಮಾರು ದಿನ ಆತು, ಎನಗೆ ಹಷು ಆವ್ತಾ ಇದ್ದು, ಎನಗೆ ಒಂದೆರಡು ಸುಟ್ಟವಾದ್ರೂ ಕೊಯ್ದು ಕೊಡುವೆಯಾ" ಕೇಳಿತ್ತಡ. ಅಷ್ಟಪ್ಪ ಮಾಣಿ "ಆತು ಕೊಡ್ತೆ" ಹೇಳಿದಡ. ಮಾಣಿ ಸುಟ್ಟವು ಕೊಯ್ದು ಕೆಳ ಹಾಕಿದಡ. ಆವ್ಗ ಅಜ್ಜಿ ಹೇಳಿತ್ತಡ "ಮಾಣೀ ಮಾಣಿ , ಆ ಸುಟ್ಟವು ಕೆಸರಿನ ಹೊಂಡಕ್ಕೆ ಬಿದ್ದತ್ತು, ಬೇರೆ ಕೊಯ್ದು ಕೊಡು ಹೇಳಿತ್ತಡ. ಅಷ್ಟಪ್ಪಗ ಮಾಣಿ ಪುನಾ ಕೊಯ್ದು ಹಾಕಿದಡ, ಆವ್ಗ ಅಜ್ಜಿ ಹೇಳಿತ್ತಡ " ಮಾಣಿ ಅದು ಉಚ್ಚಿನ ಹೊಂಡಕ್ಕೆ ಬಿದ್ದತ್ತು ಹೇಳಿ"   ಅಷ್ಟಪ್ಪಗ ಮಾಣಿ ಪುನಾ ಕೊಯ್ದು ಹಾಕಿದಡ, ಆವ್ಗಾ ಅಜ್ಜಿ ಹೇಳಿತ್ತಡ " ಮಾಣೀ ಅದು ಹೇಲಿನ ಹೊಂಡಕ್ಕೆ ಬಿದ್ದತ್ತು ಹೇಳಿ" ಮತ್ತೆ ಅಜ್ಜಿ ಹೇಳಿತ್ತಡ " ಮಾಣಿ ನೀನು ಕೊಯ್ದು ಹಾಕಿರೆ ಎನಗೆ ಸಿಕ್ಕುತ್ತಿಲ್ಲೇ, ನೀನು ನಿನ್ನ ಜೊಟ್ಟಿಲಿ ಕಟ್ಟಿ ಕೆಳ ಇಳಿಶು" ಹೇಳಿ. ಹಾಂಗೆ ಮಾಣಿ ಜೊಟ್ಟಿಲಿ ಕಟ್ಟಿಕೊಂಡು ಕೆಳ ಬಂದನಡ.

ಆವ್ಗ ಅಜ್ಜಿ ಮಾಣಿಯ ಹಿಡುದು ಅದ್ರ ಚೀಲಲ್ಲಿ ತುಂಬ್ಸಿಕೊಂಡತ್ತಡ. ಮಾಣಿ ಬೊಬ್ಬೆ ಹಾಕಿದಡ, ಕಿರ್ಚಿದಡ ಮಾಣಿಯ ಬಿಟ್ಟಿದೇ ಇಲ್ಲೆಡ ಅಜ್ಜಿ. ಅಲ್ಲಿಂದ ಹೆರಟತ್ತಡ.

     ಮಾಣಿಯ ಚೀಲಲ್ಲಿ ತುಂಬ್ಸಿ ಹೊತ್ತುಕೊಂಡು ಹೋತಡ ಹೋತಡ. ಹೋಯ್ಕೊಂಡಿಪ್ಪಗ ಅದಕ್ಕೊಂದು ಉಚ್ಚು ಬಂತಡ. ಉಚ್ಚೊಯ್ಲೆ ಅಲ್ಲೆಲ್ಯಾರು ಜಾಗೆ ಇದ್ದಾ ಹೇಳಿ ನೋಡಿತ್ತಡ. ಆವಾಗ ಅಲ್ಲಿ ಗದ್ದೆಲಿ ನೇಜಿ ನೆಡುವ ಹೆಣ್ಣುಗ ಕೆಲ್ಸ ಮಾಡಿಕೊಂಡಿತ್ತವಡ. ಅವರತ್ರೆ ಹೋಗಿ ಕೇಳಿತ್ತಡ, ಇಲ್ಲಿ ಉಚ್ಚು ಹೊಯ್ವಲೆ ಜಾಗೆ ಎಲ್ಲಿದ್ದು ಹೇಳಿ. ಅವಕ್ಕೆ ಈ ಅಜ್ಜಿಯ, ಅಜ್ಜಿಯ ಚೀಲವ ಎಲ್ಲ ನೋಡಿಯಪ್ಪಗ ಅದ್ರ ಬಾಯಿಗೆ ಕೋಲಾಕೆಕ್ಕು ಹೇಳಿ ಆತಡ. ಹಾಂಗೆ ಅವು ಹೇಳಿದವಡ " ಇಲ್ಲೆಲ್ಲಿಯು ಇಲ್ಲೆ ಅಜ್ಜಿ, ನೀನು ಉಚ್ಚು ಹೊಯ್ಯೆಕ್ಕಾರೆ ಏಳು ಬೇಲಿ ದಾಂಟಿ, ಏಳು ಕೆರೆ ದಾಂಟಿ, ಏಳು ಹೊಳೆ ದಾಂಟಿ, ಏಳು ಸಮುದ್ರ ದಾಂಟಿ, ಏಳು ಪರ್ವತ ದಾಂಟಿ ಹೋಯೆಕ್ಕು ಆವಾಗ ಉಚ್ಚೊಯ್ವಲೆ ಜಾಗೆ ಸಿಕ್ಕುತ್ತು" ಹೇಳಿ. ಆದರೆ ಅಜ್ಜಿಗೆ ಹೋಗದ್ದೆ ಉಪಾಯ ಇಲ್ಲೆಡ ಹಾಂಗೆ ಅಜ್ಜಿ ಅವರತ್ರೆ ಹೇಳಿತ್ತಡ " ಎನ್ನ ಈ ಚೀಲವ ನೋಡಿಕೊಳ್ಳಿ, ಆನು ಉಚ್ಚು ಹೊಯ್ದಿಕ್ಕಿ ಬತ್ತೆ" ಹೇಳಿಕ್ಕಿ ಹೋತಡ. ಈ  ಹೆಂಗಸರಿಂಗೆ ಅದರ ಒಳ ಎಂತ ಇದ್ದು ನೋಡಿ ಬಿಡುವ ಹೇಳಿ ಆತಡ. ಹಾಂಗೆ ಅವು ಚೀಲವ ತೆಗದವಡ. ಅಷ್ಟಪ್ಪಗ ಮಾಣಿ ಅಲ್ಲಿಂದ ಎಳದ್ದು ಓಡಿದನಡ. ಈ ಹೆಂಗಸರಿಂಗೆ ತಲೆ ಬಿಸಿ ಆತಡ, ಈಗ ಅಜ್ಜಿ ಬಂದು ಕೇಳಿರೆ ಎಂತ ಮಾಡುದು ಹೇಳಿ. ಹಾಂಗೆ ಅವು ಆ ಚೀಲದ ಒಳಾಂಗೆ ಕಲ್ಲು, ಮುಳ್ಳು, ಕಪ್ಪೆ, ಏಡಿ, ಚೇಳು ಹೀಂಗೆ ಗದ್ದೆಲಿ ಎಂತೆಲ್ಲಾ ಸಿಕ್ಕುತ್ತು ಅದ್ರೆಲ್ಲಾ ತುಂಬ್ಸಿಟ್ಟವಡ. ಅಜ್ಜಿ ಬಂತಡ. ಅದ್ರ ಚೀಲ ಇದ್ದು ಹೇಳಿ ನೆಮ್ಮದಿ ಆತಡ, ಹಾಂಗೆ ಚೀಲವ ಹೊತ್ತುಗೊಂಡು ಅದರ ಮನೆಗೆ ಹೆರಟತ್ತಡ. ಚೀಲಲ್ಲಿ ಇತ್ತ ಚೇಳುಗ, ಏಡಿಗ ಎಲ್ಲ ಅದಕ್ಕೆ ಕಚ್ಚುಲೆ ಸುರು ಮಾಡಿದವಡ. ಅಜ್ಜಿ"ಕಚ್ಚೆಡ ಮಾಣಿ, ಚೂಂಟೆಡ ಮಾಣಿ. ಕಚ್ಚೆಡ ಮಾಣಿ, ಚೂಂಟೆಡ ಮಾಣಿ" ಹೇಳಿ ಹೇಳಿಗೊಂಡು ಹೋತಡ. ಚೂರು ದೂರ ಹೋಗ್ಯಪ್ಪಗ ಅದಕ್ಕೆ ಮಾಣಿ ಚೂಂಟುದು ಕಚ್ಚುದು ತಡವಲೆಡಿತ್ತಿಲ್ಲೆ, ಎರಡ್ಡು ಬಾರ್ಸೆಕ್ಕು ಮಾಣಿಗೆ ಹೇಳಿ ಚೀಲವ ಇಳಿಶಿ ಚೀಲದ ಬಾಯಿ ಬಿಚ್ಚಿತ್ತಡ, ನೋಡುವಾಗ ಮಾಣಿ ಇಲ್ಲೆ. ಅಜ್ಜಿ ಕೋಪ ಬಂತಡ. ಮಾಣಿ ಹೇಂಗೆ ತಪ್ಸಿದ ಹೇಳಿ ತಲೆಗೆ ಹೋಯ್ದಿಲ್ಲೆಡ. ಪುನಾ ಸುಟ್ಟವು ಮರದ ಹತ್ರ ಹೋಗಿ ಮಾಣಿಯ ಹಿಡಿತ್ತೆ ಹೇಳಿ ಹೆರಟತ್ತಡ. (ಈಗ ಪುನಾ ಅದೇ ಸುರುವಿನ ಕಥೆ, ಅಜ್ಜಿ ಸುಟ್ಟವು ಇಳಿಶುಲೆ ಹೇಳುದು, ಮಾಣಿಯ ಹಿಡಿವದು, ಈ ಸರ್ತಿ ಅಜ್ಜಿಗೆ ಉಚ್ಚಿನ ಬದಲು, ಇಚ್ಚಿ ಬಪ್ಪದು. ಎರಡನೇ ಸರ್ತಿಯು ಮಾಣಿ ತಪ್ಸುದು. ಅದಾಗಿ ಪುನಾ ಅಜ್ಜಿ ಸುಟ್ಟವಿನ ಮರದತ್ರೆ ಹೋಗಿ ಮತ್ತೆ ಅದೇ ವಾಕ್ಯಂಗಳ ಹೇಳಿ ಮಾಣಿಯ ಹಿಡಿವದು. ಈಗ ಮೂರನೇ ಸರ್ತಿ ಅಜ್ಜಿಗೆ ಉಚ್ಚು ತಾಚಿ ಎಲ್ಲ ಬತ್ತಿಲ್ಲೆ. ಇದರ ಮೂರು ಸರ್ತಿಯು ಕಥೆ ಹೇಳುವವು ಹೇಳುಗು)

  ಈ ಸರ್ತಿ ಅಜ್ಜಿ ಮಾಣಿಯ ಹಿಡುದು ತೆಕ್ಕೊಂಡು ಹೋವ್ತು. ಹೋಗಿ ಅದರ ಮನೆಗೆ ಎತ್ಯಪ್ಪಗ ಅಲ್ಲಿ ಅದ್ರ ಪುಳ್ಳಿ ಇರ್ತು. ಆ ಪುಳ್ಳಿಯತ್ರೆ ಹೇಳ್ತು, "ಆನು ಒಂದು ಮಾಣಿಯ ತೈಂದೆ. ಆ ಚೀಲಲ್ಲಿ ಇದ್ದ. ಅವನ ಸಾಂಬಾರ್ ಮಾಡಿ ಇರ್ಸು, ಆನು ಮಿಂದಿಕ್ಕಿ ಬತ್ತೆ" ಹೇಳಿಕ್ಕಿ ಹೋತು. ಈ ಪುಳ್ಳಿ ಗೋಣಿ ಚೀಲ ಬಿಡ್ಸಿ ಮಾಣಿಯ ಹೆರ ತೆಗೆತ್ತು. ಮಾಣಿಯತ್ರೆ ಹೇಳ್ತು " ನೀನು ಈ ಕಡವ ಕಲ್ಲಿಂಗೆ ತಲೆ ಮಡುಗು, ಆನು ನಿನ್ನ ಕಡದು ಸಾಂಬಾರ್ ಮಾಡ್ಲಿದ್ದು ಎನ್ನ ಅಜ್ಜಿ ಹೇಳಿದ್ದು" ಹೇಳಿ. ಮಾಣಿ ಬುದ್ದಿವಂತಿಕೆ ಮಾಡ್ತ "ಹೇಂಗೆ ತಲೆ ಇರ್ಸುದು, ಒಂದರಿ ಇರ್ಸಿ ತೋರ್ಸು ನೋಡುವ" ಹೇಳಿ ಕೇಳ್ತ. ಅಷ್ಟಪ್ಪ ಕೂಸು ಕಡವ ಕಲ್ಲಿಂಗೆ ತಲೆ ಮಡುಗಿ "ಹೀಂಗೆ" ಹೇಳ್ತು. ಕೂಡ್ಲೆ ಮಾಣಿ ಅದರನ್ನೇ ಕಡದು ಸಾಂಬಾರ್ ಮಾಡಿ ಮಡುಗುತ್ತ. ಅಷ್ಟು ಮಾಡಿಕ್ಕಿ ಅಟ್ಟ ಹತ್ತಿ ಹೋಗಿ ಕೂರ್ತ. ಅಜ್ಜಿ ಮಿಂದಿಕ್ಕಿ ಬಂದಪ್ಪಗ ಒಳ್ಳೆ ಪರಿಮಳ ಬತ್ತು. ಅಜ್ಜಿ ಮಾಣಿಯ ಸಾಂಬಾರ್ ನ ಪರಿಮಳ ಹೇಳಿ ಖುಷಿ ಪಡ್ತು. ಪುಳ್ಳಿ ಅಲ್ಲಿ ಎಲ್ಲಿಯು ಕಾಣದ್ದು ನೋಡಿ, "ಕೂಸೇ, ಏ ಕೂಸೆ ಎಲ್ಲಿ ಹೋದೆ. ಎನಗೆ ಹಶುವಿಲಿ ಏನೆಡಿತ್ತಿಲ್ಲೆ. ಆನು ಊಟ ಮಾಡ್ತೆವಿಲ್ಯ" ಹೇಳಿಕ್ಕಿ ಅಜ್ಜಿ ಉಂಬಲೆ ಕೂರ್ತು. ಆವಾಗ ಮಾಣಿ ಅಟ್ಟಲ್ಲಿ ಕೂದು ಕೆಳ ಉಂಬಲೆ ಕೂತ ಅಜ್ಜಿಗೆ ಉಪದ್ರ ಕೊಡ್ತ. ಅಜ್ಜಿಗೆ ಸಂಶಯ ಬಂದು ಅಟ್ಟ ಹತ್ತಿ ನೋಡುವಾಗ ಮಾಣಿ. ಆವಾಗಾ ಅಜ್ಜಿಗೆ ಕೋಪ ಬತ್ತು. ಅವನ ಹಿಡಿವಲೆ ಹೋವ್ತು. ಅಷ್ಟೊತ್ತಿಂಗೆ ಮಾಣಿ ತಪ್ಪುಸಿಕೊಂಬಲೆ ದೇವರತ್ರೆ ಕೇಳ್ತ "ದೇವರೇ ದೇವರೇ ಎನಗೊಂದು ಜನಿವಾರ ಕೊಡಿ, ಎನ್ನ ರಾಕ್ಷಸಿ ಅಜ್ಜಿ ಅಟ್ಟಿಸಿಕೊಂಡು ಬತ್ತಾ ಇದ್ದು ಹೇಳ್ತ" ಆವಾಗ ದೇವರು ಅವಂಗೆ ಒಂದು ಗಟ್ಟಿ ಜನಿವಾರ ಕೊಡ್ತವು. ಮಾಣಿ ಅದರ ಹಿಡುದು ಅಟ್ಟಂದ ಮಾಡಿಗೆ ಹತ್ತುತ್ತ. ಅದರ ನೋಡಿ ಅಜ್ಜಿಯು ದೇವರತ್ರೆ ಕೇಳ್ತು, ಆವ್ಗ ಅಜ್ಜಿಗೆ ದೇವರು ತುಂಬ ಗಟ್ಟಿ ಇಲ್ಲದ್ದ ಜನಿವಾರ ಕೊಡ್ತ, ಅಜ್ಜಿಯು ಮಾಡಿಂಗೆ ಹತ್ತುತ್ತು. ಮಾಣಿ ಆಕಾಶಕ್ಕೆ ಹತ್ತುಲೆ ದೇವರತ್ರೆ ಕೇಳ್ತ ಮಾಣಿಗೆ ದೇವರು ಗಟ್ಟಿ ಜನಿವಾರ ಕೊಡ್ತವು. ಮಾಣಿ ಅದ್ರಲ್ಲಿ ಆಕಾಶಕ್ಕೆ ಹತ್ತುತ್ತ. ಅಜ್ಜಿಯು ಕೇಳ್ತು. ಅಜ್ಜಿಗೆ ದೇವರು ಕುಂಬು ಜನಿವಾರ ಕೊಡ್ತವು. ಅಜ್ಜಿ ಅರ್ಧಕ್ಕೆ ಹತ್ಯಪ್ಪಗ ಜನಿವಾರ ಕಡುದು ಅಜ್ಜಿ ನೆಲಕ್ಕಕ್ಕೆ ಭಡಂ ಹೇಳಿ ಬೀಳ್ತು. ಬಿದ್ದು ಅಜ್ಜಿ ಸತ್ತೇ ಹೋವ್ತು. ಮಾಣಿ ಇಳುದು ಬಂದು ಅವನ ಮನೆಗೆ ಹೋವ್ತ.

   ಇದು ಸುಟ್ಟವು ಮಾಣಿಯ ಕಥೆ.  ಇದರ ಬೇರೆ ಬೇರೆ ಜಾಗೆಗಳಲ್ಲಿ ಬೇರೆ ಬೇರೆ ರೀತಿಲಿ ಹೇಳ್ತವಡ. ಇದ್ರಲ್ಲಿ ಕಾಮೆಡಿಯು ಇದ್ದು, ತ್ರಿಲ್ಲಿಂಗೂ ಇದ್ದು, ಹಾರರ್ ಹೇಳುವಂತದ್ದೂ ಇದ್ದೂ, ನೀತಿಯೂ ಇದ್ದು. ಹೀಂಗಾಗಿ ಮಕ್ಕೊಗೆ ಈ ಕಥೆ ಇಷ್ಟ ಆವ್ತು.