==ಸದಸ್ಯ ಚೌಕ ==
ಟೆಂಪ್ಲೇಟು:Alvas college studeನತ					

ಇದೋ ಜ್ಞಾನದೇಗುಲದ ಶಿಲ್ಪಸುಧೆ


ಶಿಲೆಗಳು ಸಂಗೀತವ ಹಾಡಿವೆ..

ಬೇಲೂರ ಗುಡಿಯಲ್ಲಿ ಕೇಶವನೆದುರಲ್ಲಿ, ಅನುದಿನ, ಅನುಕ್ಷಣ......,

ಅಲ್ಲಿ ಬೇಲೂರ ಗುಡಿಯ ಶಿಲೆಗಳು ಸಂಗೀತ ಹಾಡಿದರೆ, ಇಲ್ಲಿ ವಿದ್ಯಾದೇಗುಲದ ಶಿಲೆಗಳು ಜ್ಞಾನ ದೀವಿಗೆಯ ಪ್ರತಿಬಿಂಬವಾಗಿ ಬೆಳಕ ಚೆಲ್ಲಲು ಸಜ್ಜಾಗಿವೆ. ಆಧುನೀಕರಣಗೊಳ್ಳುತ್ತಿರುವ ಶಿಕ್ಷಣ ವ್ಯವಸ್ಥೆಯ ಜಂಜಾಟದಲ್ಲಿ, ನೈತಿಕ ಮೌಲ್ಯಗಳೇ ಕಡಿಮೆಯಾಗುತ್ತಿರುವ ಹೊಸ್ತಿಲಲ್ಲಿ, ಈ ಶಿಕ್ಷಣ ಸಂಸ್ಥೆಯ ಕ್ಯಾಂಪಸ್ ಮಾತ್ರ ಕಲಾತ್ಮಕವಾಗಿ ಮಕ್ಕಳನ್ನು ಶಾಲೆಯತ್ತ, ಅದರಲ್ಲೂ ಸಂಸ್ಕೃತಿಯತ್ತ ಬರಮಾಡಿಕೊಳ್ಳಬೇಕು ಎನ್ನುವ ಮೂಲ ಉದ್ದೇಶವನ್ನೇ ಗುರಿಯಾಗಿಟ್ಟುಕೊಂಡು ಮುನ್ನಡೆಯುತ್ತಿದೆ. ಕಲಾತ್ಮಕ ಪರಿಸರವನ್ನು ವಿದ್ಯೆಯ ಮಂತ್ರವನ್ನಾಗಿ ಜಪಿಸುತ್ತಿರುವ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನಕ್ಕೆ, ಆಳ್ವಾಸ್ ಮಾತ್ರ ಸಾಟಿ. ಶಿಲೆಗಳ ಒಡಲಲ್ಲಿ ವಿಧ್ಯೆಯ ಕುಸುಮವನ್ನು ಅರಳಿಸಿ ಶಿಲ್ಪ ಕಲೆಗೊಂದು ಸಾರ್ಥಕ್ಯತೆ ತುಂಬುವ ಕೆಲಸ ಪುತ್ತಿಗೆ ವಿವೇಕಾನಂದ ನಗರದಲ್ಲಿರುವ ಆಳ್ವಾಸ್ ಪ್ರೌಡ ಶಾಲಾ ಆವರಣದಲ್ಲಿ ಸದ್ದಿಲ್ಲದೆ ನಡೆಯುತ್ತಿದೆ. ಬಾನೆತ್ತರಕ್ಕೆ ಕೈ ಚಾಚುತ್ತಿರುವ ಕಟ್ಟಡಗಳ ನಡುವೆ ಮೆಲ್ಲನೆ ನಾದ ಪಸರಿಸೋ ಚಿತ್ರ ವೈಭವಗಳ ಸಂಗೀತವೇ ಕಣ್ಣಿಗೆ ಹಬ್ಬ,! ಇಡೀ ಕ್ಯಾಂಪಸ್ ಸುತ್ತುತ್ತಿದ್ದರೆ ಅರಿವಿಲ್ಲದಂತಹ ಹೊಸತನದ ಉಲ್ಲಾಸ. ಇಲ್ಲಿ ರಾಜ್ಯ ಹಾಗೂ ಹೊರ ರಾಜ್ಯಗಳಿಂದ ಬಂದ ಹನ್ನೊಂದು ಶಿಲ್ಪ ಕಲಾವಿದರ ಕೈಚಳಕದಲ್ಲಿ ಅರಳಿದ ಶಿಲ್ಪಗಳು ಏನೋ ಮೋಡಿ ಮಾಡಿದಂತಿವೆ. ಅರಳಿ ನಿಂತ ಜ್ಞಾನದೇಗುಲದ ಶಿಲ್ಪಸುಧೆಯನ್ನು ಕಣ್ತುಂಬಿಸಿಕೊಳ್ಳುವ ಕ್ಷಣಗಳು ಬಂದೇ ಬಿಟ್ಟಿದೆ. ಅದೆಷ್ಟೋ ಶಿಲ್ಪಗಳು ಜೀವ ಪಡೆದುಕೊಂಡಿವೆಯೋ ಈ ಕಲಾವಿದರ ಕೈಗಳಲ್ಲಿ.! ಒಂದೊಂದು ಶಿಲ್ಪದ ಹಿಂದೆಯೂ ಒಬ್ಬ ಕಲಾವಿದನ ನಿಷ್ಠಾವಂತ ಶ್ರಮ ಅಡಗಿರುತ್ತದೆ. ಓರೆಕೋರೆಗಳನ್ನು ಸರಿಪಡಿಸಿ ತಾನು ಕೆತ್ತಿದ ಶಿಲ್ಪದೆದುರು ಕಲಾವಿದ ನಿಂತಾಗ ಆತನಿಗೇನೋ ಧನ್ಯತಾ ಭಾವ! ಇಲ್ಲಿರುವ ಸಾಲು ಸಾಲು ಶಿಲ್ಪಗಳೂ, ವಿದ್ಯಾಸಂಸ್ಥೆಯತ್ತ ಎಲ್ಲರನ್ನೂ ಕೈಬೀಸಿ ಕರೆಯುವಂತಿದೆ. ಸಿಮೆಂಟ್, ಇಟ್ಟಿಗೆ ತುಂಡು, ಮೋನೊಗ್ರಾಮ್ ಬಣ್ಣ, ಕಬ್ಬಿನದ ರಾಡ್ಗಳನ್ನು ಬಳಸಿಕೊಂಡು ಕೇವಲ ಏಳು ದಿನಗಳಲ್ಲಿ ಶಿಲ್ಪಕ್ಕೆ ಜೀವ ತುಂಬಿದ ಕಲಾವಿದರಿಗೆ ಕಲಾರಸಿಕ ಚಿರಋಣಿ. ತಂತ್ರಜ್ಞಾನ ಯುಗದಲ್ಲಿ ಬಳಕೆಯಾಗುತ್ತಿರುವ ಟ್ಯಾಬ್, ಮೂಲೆ ಸೇರುತ್ತಿರುವ ಪುಸ್ತಕಗಳು, `ಎ ಫೋರ್ ಆ್ಯಪಲ್' ಎನ್ನುವುದಕ್ಕಿಂತ ಗಾತ್ರದಲ್ಲಿ ಪರಿಣಾಮ ಬೀರುವ ಆ್ಯಪಲ್, ತಾಯಿ ಮಗುವಿನ ಸಂಬಂಧ, ಓದಿ ಓದಿ ಪ್ರಭುದ್ಧನಾಗುವ ಪರಿ, ಪುಸ್ತಕ ಜ್ಷಾನದಿಂದ ಜಗತ್ತನ್ನು ನೋಡುವ ರೀತಿ, ಕಂಬದಲ್ಲಿ ಅಡಗಿರೋ ಸಿಂಹ, ಶಿಕ್ಷಣದಿಂದ ಯಾವ ಕ್ಷೇತ್ರದಲ್ಲೂ ಸಫಲನಾಗಬಹುದು ಎನ್ನುವ ಶಿಲ್ಪ, `ಜ್ಞಾನ ದೇಗುಲವಿದು ಕೈ ಮುಗಿದು ಒಳಗೆ ಬಾ' ಎಂದು ಕೈಬೀಸಿ ಕಥೆ ಹೇಳುವ ಶಿಲ್ಪ. ಈ ರೀತಿಯಾಗಿ ಒಂದೊಂದು ಕಥೆಯನ್ನು ಬಿಚ್ಚಿಡುತ್ತಿದೆ. ಹೌದು ಮತ್ತೊಮ್ಮೆ ಮಗದೊಮ್ಮೆ ಕಂಡಷ್ಟು ಹೊಸ ಕಥೆಯನ್ನೇ ಬಿಚ್ಚಿಡುವ ವಿಶೇಷತೆಯೇ ಈ ಶಿಲ್ಪಗಳದ್ದು. ಕಪ್ಪು ಹಲಗೆ, ಬಣ್ಣ ಬಳಿದಿರುವ ನಾಲ್ಕು ಗೋಡೆಯೊಳಗಿನ ಶಿಕ್ಷಣ ಎಂದೂ ಒಬ್ಬ ಮನುಷ್ಯನನ್ನು ಪ್ರಬುದ್ಧನನ್ನಾಗಿಸದು ಎಂಬುವುದನ್ನು ಪರಿ ಪರಿಯಾಗಿ ಹೇಳುತ್ತಿವೆ ಈ ಶಿಲ್ಪಗಳು. ಕಲಾವಿದ, ಕಲಾಕಾರ ನಾವಲ್ಲದಿದ್ದರೂ, ಕಲೆಯನ್ನು ಪ್ರೀತಿಸಿ, ಪ್ರೋತ್ಸಾಹಿಸುವ ಗುಣ ನಮ್ಮೆಲ್ಲರದ್ದೂ ಆಗಬೇಕು. ಕನರ್ಾಟಕ:ಹೊಸತನದ ಹುಡುಕಾಟ ಎಂಬ ಪರಿಕಲ್ಪನೆಯೊಂದಿಗೆ ವಿಜೃಂಭಿಸುವ ಆಳ್ವಾಸ್ ನುಡಿಸಿರಿಯಲ್ಲಿ ಇಲ್ಲಿರುವ ಒಂದೊಂದು ಶಿಲ್ಪಗಳು ಏನೋ ಹೊಸತನವನ್ನು ಬಚ್ಚಿಟ್ಟಿವೆ. ಅದರ ಹುಡುಕಾಟವನ್ನು ನಾವೆಲ್ಲರೂ ಇಂದೇ ಮಾಡೋಣ ಅಲ್ವಾ..!


ಗೊರಗುದ್ದಿ ಡಿ.ಆರ್.

ಜಾಗನೂರ