ಶಿಳ್ಳೆಕ್ಯಾತರು

ಬದಲಾಯಿಸಿ

ಪ್ರವೇಶ

ಬದಲಾಯಿಸಿ

ಕರ್ನಾಟಕದ ಜನಪದ ಕಲಾ ಪರಂಪರೆಯಲ್ಲಿ ಒಂದು ವಿಶಿಷ್ಟ ಸ್ಥಾನ ಪಡೆದುಕೊಂಡಿರುವ ಈ ಬುಡಕಟ್ಟು ಸಮುದಾಯ ಕಿಲ್ಲಿಕ್ಯಾತ, ಕಿಳ್ಳಿಕೇತ, ಸಿಳ್ಳೆಕ್ಯಾತ, ಕಟುಬು, ಕಟಬರ್, ಬುಂಡೆಬೆಸ್ತರು, ಗೊಂಬೆರಾಮರು ಎಂಬ ಹೆಸರುಗಳಿಂದ ಚಿರಪರಿಚಿತವಾಗಿದೆ. ಶಿಳ್ಳೆಕ್ಯಾತ ಸಮುದಾಯದಲ್ಲಿ ಬಹುಸಂಖ್ಯಾತರಿಗೆ ಇಂದಿಗೂ ಹೇಳಿಕೊಳ್ಳಲು ಒಂದು ನಿರ್ದಿಷ್ಟ ನೆಲೆ ಇಲ್ಲ. ಇಂದು ಇಲ್ಲಿ, ನಾಳೆ ಅಲ್ಲಿ, ನಾಡಿದ್ದು ಇನ್ನೆಲ್ಲೋ ಎನ್ನುವ ಸ್ಥಿತಿಯಿದೆ. ಶಿಳ್ಳೆಕ್ಯಾತರ ಕುಟುಂಬಗಳು ಜೀವನೋಪಾಯಕ್ಕಾಗಿ ಇಂದಿಗೂ ಅಲೆದಾಡುತ್ತಲೇ ಇವೆ. ಇದರಿಂದಾಗಿ ಅವರಿಗೆ ಅವರದೇ ಆದ ನೆಲ ಮತ್ತು ನೆಲೆ ಎಂಬುದು ಇಲ್ಲ. ಶಿಳ್ಳೆಕ್ಯಾತ ಸಮುದಾಯಕ್ಕೆ ಒಂದು ನಿರ್ದಿಷ್ಟವಾದ ಹೆಸರೂ ಇಲ್ಲ. ಕರ್ನಾಟಕದಲ್ಲೇ ಶಿಳ್ಳೇಕ್ಯಾತ ಸಮುದಾಯಕ್ಕೆ ಹಲವಾರು ಹೆಸರುಗಳಿಂದ ಕರೆಯುವುದು ಕಂಡುಬರುತ್ತದೆ. ಇವರನ್ನು ಹಳೆ ಮೈಸೂರು ಪ್ರಾಂತದಲ್ಲಿ ಶಿಳ್ಳೇಕ್ಯಾತ, ಬುಂಡೆ ಬೇಸ್ತ, ಗೊಂಬೆರಾಮರೆAದು, ಹೈದ್ರಬಾದ್ ಕರ್ನಾಟಕ ಭಾಗದಲ್ಲಿ ಶಿಳ್ಳೀಕ್ಯಾತ, ಬೊಂಬೆಯಾಟದವರು ಮತ್ತು ಮೀನುಗಾರರು ಎಂದು ಕರೆಯಲ್ಪಡುತ್ತಾರೆ. ಮುಂಬೈ ಕರ್ನಾಟಕ ಭಾಗದಲ್ಲಿ ಇವರನ್ನು ಕಿಳ್ಳೀಕೇತ, ಸಿಳ್ಳಿಕ್ಯಾತರಂತಲೂ ಹಾಗೂ ಕಟಬು, ಕಟಬರ, ಕಟಿಬ್ಯಾ, ಛತ್ರೇರು ಎಂದು ಕರೆಯುತ್ತಾರೆ. ಹೀಗೆ ವಿವಿಧ ವೃತ್ತಿಗನುಸಾರವಾಗಿ ಇವರನ್ನು ಗುರುತಿಸಲಾಗುತ್ತಿದೆ. ಇವರೆಲ್ಲರಲ್ಲಿ ರಕ್ತಸಂಬAಧ ರ‍್ಪಡುವುದು. ಹಾಗೆಯೇ ಕರ್ನಾಟಕವನ್ನು ಬಿಟ್ಟು ಗಡಿ ಭಾಗಗಳಲ್ಲಿ ಸಂಚರಿಸುವಾಗ ಅಲ್ಲೆಲ್ಲ ಬೇರೆ ಬೇರೆ ಹೆಸರುಗಳಲ್ಲಿ ಇವರನ್ನು ಕರೆಯಲಾಗುತ್ತಿದೆ. ಹೀಗೆ ನಿರ್ದಿಷ್ಟ ಗುರುತಿಗೆ (ಐಡೆಂಟಿಟಿ) ಸಿಗದೆ ಬಹುನಾಮಗಳಿಗೆ ಒಳಗಾಗುವುದರಿಂದ ಆಗುವ ಅಪಾಯಗಳ ಅರಿವಿಲ್ಲದೆ ಈ ಸಮುದಾಯ ಬದುಕಿದೆ. ಇದರ ಜೊತೆಗೆ ಶಿಕ್ಷಣ ವಂಚಿತ ಮಕ್ಕಳು ಬದುಕಿನ ಮುಖ್ಯ ಪ್ರವಾಹದಲ್ಲಿ ಪಾಲ್ಗೊಳ್ಳದೆ ಹೋಗುವ ದುರ್ಗತಿ ಅವರ ನಿತ್ಯದ ನರಕವಾಗಿದೆ. ಇಂದಿಗೂ ಇವರು ಆರ್ಥಿಕ, ಶೈಕ್ಷಣಿಕ ಸೌಲಭ್ಯಗಳ ಜೊತೆಗೆ ಕನಿಷ್ಟ ಮೂಲಭೂತ ಸೌಲಭ್ಯಗಳನ್ನು ಪಡೆಯಲಾಗದಂತಹ ಗಂಭೀರವಾದ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.

ಜನಸಂಖ್ಯೆ

ಬದಲಾಯಿಸಿ

೨೦೧೧ರ ಜನಗಣತಿಯ ಪ್ರಕಾರ ಇವರÀ ಜನಸಂಖ್ಯೆಯು ಒಟ್ಟು ೩೫೧೯೭ಜನರಿದ್ದಾರೆ. ಇದರಲ್ಲಿ ಪುರುಷರು ೧೭೮೩೭ಜನ, ಮಹಿಳೆಯರು ೧೭೩೬೫ಜನ ಗಣತಿಯಲ್ಲಿ ದಾಖಲಾಗದಿರುವುದು ಕಂಡುಬರುತ್ತದೆ. ಇವರ ಸಾಕ್ಷರತೆಯು ಪುರುಷರು ೯,೮೧೫ಜನ ಹಾಗೂ ಮಹಿಳೆಯರು ೬,೫೭೫ಜನ ಸಾಕ್ಷರರಾಗಿರುವ ಕುರಿತು ದಾಖಲಾಗಿದೆ. ಹೊಟ್ಟೆಪಾಡಿಗಾಗಿ ಕಲೆಯನ್ನು ಪ್ರದರ್ಶಿಸಲು ಸದಾ ಊರಿಂದ ಊರಿಗೆ ಅಲೆದಾಡುವುದರಿಂದ ಇವರಿಗೆ ಮತ್ತು ಇವರ ಮಕ್ಕಳಿಗೆ ಲೌಕಿಕ ಶಿಕ್ಷಣದ ಸೌಲಭ್ಯ ದುರ್ಲಭವಾಗಿದೆ.

ಶಿಳ್ಳೆಕ್ಯಾತರು ಮೂಲತಃ ಮರಾಠಿ ಭಾಷಾ ಪ್ರದೇಶದಿಂದ ಬಂದವರಾಗಿದ್ದಾರೆ. ಇವರು ಮರಾಠಿ ಮಾತನಾಡುವಾಗ ಅದರಲ್ಲಿ ಕನ್ನಡ ಪದಗಳನ್ನು ಸೇರಿಸಿ ಉಚ್ಚರಿಸುವರು. ಕಾರಣ ವಲಸೆ ಬಂದು ನೆಲಸಿದ್ದರಿಂದ, ಮರಾಠಿ ಪ್ರಾಂತ್ಯದೊAದಿಗಿನ ಸಂಪರ್ಕ ತಪ್ಪಿದ್ದರಿಂದ ಮರಾಠಿ ಅನಿವಾರ್ಯವಾಗಿ ಅರೆಮರಾಠಿಯಾಗಿದೆ. ಅನ್ಯರೊಂದಿಗೆ ಅವರು ಸ್ಥಳೀಯ ಭಾಷೆಯಲ್ಲಿಯೇ ವ್ಯವಹರಿಸುವ ಜಾಣ್ಮೆ ತೋರುತ್ತಾರೆ.

ಖ್ಯಾತ ಜನಪದ ಕಲಾವಿದರು

ಬದಲಾಯಿಸಿ

ಈ ಸಮುದಾಯದ ಬೆಳಗಲ್ಲು ವೀರಣ್ಣ ಮತ್ತು ಯಡ್ರಮನಹಳ್ಳಿ ದೊಡ್ಡಬರಮಪ್ಪ ಶತಾಯುಷಿ ಮೊರನಾಳದ ಕಿಳ್ಳಿಕ್ಯಾತರ ಭೀಮವ್ವ ಇವರುಗಳು ತೊಗಲುಗೊಂಬೆಯಾಟದ ಕಲೆಯನ್ನು ದೇಶವಿದೇಶಗಳಲ್ಲಿ ಪ್ರದರ್ಶಿಸಿ ಅಂತರರಾಷ್ಟಿçÃಯ ಮಟ್ಟದ ಖ್ಯಾತಿಯನ್ನು ತಂದುಕೊಟ್ಟಿದ್ದಾರೆ. ಇವರಿಗೆ ನಾಡಿನ ಹಲವು ಪ್ರತಿಷ್ಠತ ಪ್ರಶಸ್ತಿಗಳು ಲಭಿಸಿವೆ. ತೊಗಲುಗೊಂಬೆಯಾಟ ಕೇಂದ್ರವಾಗಿಟ್ಟುಕೊAಡು ಇವರು ಗೊಂಬೆ ತಯಾರಿಸುವ ಕಲೆ, ನೂರಾರು ವರ್ಷಗಳ ಕಾಲ ಗೊಂಬೆಗಳನ್ನು ಸಂರಕ್ಷಿಸುವುದು, ಬಣ್ಣ ತಯಾರಿಕೆ, ತೊಗಲುಗೊಂಬೆಯ ಮೇಲೆ ಚಿತ್ರಬಿಡಿಸುವ ಕಲೆ, ಪೌರಾಣಿಕ ಕಥೆಗಳನ್ನು ನೆನಪಿನಲ್ಲಿಟ್ಟುಕೊಂಡು ಹಾಡುಗಳನ್ನು ಕಟ್ಟುವುದು, ಸಂಭಾಷಣೆ, ಸಂಗೀತ ಇವಗಳಿಗೆ ಸಂಬAಧಿಸಿದAತೆ ಇವರಲ್ಲಿರುವ ಪಾರಂಪರಿಕ ಜ್ಞಾನ ಅಗಾದವಾದದ್ದು. ಈ ಜ್ಞಾನಪರಂಪರೆ ನಶಿಸದಂತೆ ಕಾಪಾಡಬೇಕಾದದ್ದು ತುಂಬಾ ಜರೂರಿದೆ. ಪಾರಂಪರಿಕ ಕಲೆಯನ್ನು ಆಧುನಿಕ ಸಂದರ್ಭಕ್ಕೆ ಹೊಂದಿಕೆಯಾಗುವ ನಿಟ್ಟಿನಲ್ಲಿ ನಾಡೋಜ ಬೆಳಗಲ್ಲು ವೀರಣ್ಣ ಅವರು ಹೊಸಪ್ರಯೋಗ ಮಾಡುತಲಿದ್ದಾರೆ. ಆದರೆ ಆಧುನಿಕ ವಿದ್ಯುನ್ಮಾನ ಮಾಧ್ಯಮಗಳ ಭರಾಟೆಯಲ್ಲಿ ಈ ಕಲೆಗೆ ಕೇಳುವವರಿಲ್ಲದಂತಾಗಿದೆ. ಸರ್ಕಾರಗಳು ಸಂಘಸAಸ್ಥೆಗಳ ಪ್ರೋತ್ಸಾಹ ಕಡಿಮೆಯಾಗುತ್ತಿದೆ. ಪ್ರಾಯೋಜಕರು ಕಲೆ ಪ್ರದರ್ಶನಕ್ಕೆ ಅವಕಾಶ ಮಾಡಿಕೊಡಲು ಮುಂದೆ ಬರದಿರುವಂತಹ ಸ್ಥಿತಿ ಇದೆ.

ಆರ್ಥಿಕ ಜೀವನ

ಬದಲಾಯಿಸಿ

ಅಲೆಮಾರಿಗಳಾಗಿರುವ ಇವರ ಜೀವನ ಮಟ್ಟ ಬಡತನ ರೇಖೆಗಿಂತ ಕೇಳಗಿದೆ. ಕಲೆಗಾಗಿ ಕಲೆ ಎಂದು ಬದುಕಿದ ಯಾವ ಕಲಾವಿದರ ಆರ್ಥಿಕ ಬದುಕು ಉತ್ತಮವಾಗಿರುವುದಿಲ್ಲ. ಪರೋಪ ಜೀವಿಗಳಾದ ಗೊಂಬೆರಾಮರು ತಮ್ಮ ಆಹಾರದ ಬಹುಭಾಗವನ್ನು ಅನ್ಯರಿಂದಲೆ ಪಡೆಯುವದು ರೂಡಿs. ಹೀಗಾಗಿ ಗೊಂಬೆಯಾಡಿಸುವದೊAದನ್ನು ಬಿಟ್ಟರೆ ಅವರು ತಮ್ಮ ಹೊಟ್ಟೆ ಪಾಡಿಗಾಗಿ ಇಂಥದ್ದೇ ಕಸಬನ್ನು ಆಶ್ರಯಿಸಿದ್ದು ಕಡಿಮೆ. ತೊಗಲುಗೊಂಬೆಯಾಟ, ಮೀನುಗಾರಿಕೆ, ಕರಿಕಟ್ಟುವುದು ಹಲವು ಶಿಳ್ಳೇಕ್ಯಾತರ ಆದಾಯದ ಮೂಲ ಸೆಲೆಯಾಗಿರುವಂತಹದ್ದು, ಕೆಲವರು ಬಿಡುವಿನ ವೇಳೆಯಲ್ಲಿ ಬಲೆ ಹೆಣೆದು ಮಾರಿ, ಸಂಗೀತ ವಾದ್ಯಗಳನ್ನು ರಿಪೇರಿ ಮಾಡಿ, ಪ್ರಾಣಿ ಪಕ್ಷಿಗಳನ್ನು ಬೇಟೆಯಾಡಿ ಮಾರಿ, ಬಾಂಡೆ ಸಾಮಾನು ಮಾರಿ, ಇಚಲು ಚಾಪೆ ಹೆಣೆದು, ಕವದಿ ಹೊಲಿದು, ಹಚ್ಚೆ ಹಾಕಿ ಜೀವನ ನಿರ್ವಹಿಸುವರು. ಇತ್ತೀಚೆಗೆ ಕೆಲವರು ನಾಟಕ ಕಲಿಸುವ ಮಾಸ್ತರರಾಗಿ ಮತ್ತು ಕೀರ್ತನಾಕಾರರಾಗಿ, ನೆಲೆ ನಿಂತ ಕೆಲವರಲ್ಲಿ ಬೆರಳೆಣಿಕೆಯಷ್ಟು ಜನ ಪೋಲಿಸ್‌ರಾಗಿ. ಶಿಕ್ಷಕರಾಗಿ, ಕೆಲವರು ದನ, ಕುರಿ ಕೋಳಿಯನ್ನು ಸಾಕಿ ಹೊಟ್ಟೆ ಹೊರಿದುಕೊಳ್ಳುವರು.   alt=ಶಿಳ್ಳೇಕ್ಯಾತರು|thumb|ಪರಿಸಥಿತಿಯ ಕೈಗೊಂಬೆಯಾಗಿ ಅತಂತ್ರರಾದ ಗೊಂಬೆಯಾಡಿಸುವ ಶೀಳ್ಳೇಕ್ಯಾತರು ಶಿಳ್ಳೇಕ್ಯಾತರಲ್ಲಿಯ 'ಕಟಬು' ಕಟಬರ್, ಮತ್ತು 'ಕಿಲ್ಲಿಕ್ಯಾತ' ಪದಗಳನ್ನು ಕರ್ನಾಟಕ ರಾಜ್ಯದ ಪ್ರಸ್ತುತ ಹಿಂದುಳಿದ ವರ್ಗಗಳ ಮೀಸಲಾತಿಯಲ್ಲಿಯ ಪ್ರವರ್ಗ ೧ರಲ್ಲಿ ದಾಖಲಾಗಿರುವುದರಿಂದ ಶಿಳ್ಳೇಕ್ಯಾತಾಸ್ ಸಮುದಾಯವು ಪರಿಶಿಷ್ಟ ಜಾತಿ ಪಟ್ಟಿಯಲ್ಲಿದ್ದರೂ ಸಹ ಅಧಿಕಾರಿಗಳ ತಪ್ಪು ತಿಳುವಳಿಕೆಯಿಂದಾಗಿ ಅವರಿಗೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಪಡೆಯಲಾಗುತ್ತಿಲ್ಲ. ಇದರಿಂದಾಗಿ ಸರ್ಕಾರದ ಸೌಲಭ್ಯಗಳನ್ನು ಪಡೆಯಲಾಗುತ್ತಿಲ್ಲ.  ಕಿಳ್ಳೇಕ್ಯಾತ, ಕಟಬು ಮತ್ತು ಶಿಳ್ಳೇಕ್ಯಾತ ಬೇರೆಬೇರೆಯಾಗಿರದೇ ಅವು ಒಂದೇ ಸಮುದಾಯವನ್ನು ಪ್ರತಿನಿದಿsಸುವ ಪದಗಳಾಗಿವೆ. ಅಲೆಮಾರಿಗಳಾಗಿರುವ ಇವರು ಸಂವಿಧಾನ ಬದ್ಧವಾದ ಪರಿಶಿಷ್ಟರ ಮೀಸಲಾತಿಯ ಹಕ್ಕು ಪಡೆಯಲು ಅರ್ಹರಾಗಿರುವರು.