ಅಪ್ಪ-ಅಮ್ಮ

"ಮಾತ್ರು ದೇವೋಭವ, ಪಿತ್ರುದೇವೋಭವ" ಎಂಬ ವಾಕ್ಯದ ಅರ್ಥವನ್ನು ಸಂಪೂರ್ಣವಾಗಿ ಮನನ ಮಾಡಿಕೊಳ್ಳಲು ಸಾಧ್ಯವಾಗದಿದ್ದರೂ, ನಾ ಕಂಡಂತೆ ತಂದೆ- ತಾಯಿ ಜಗತ್ತಿನ ಯಾವುದೇ ವಸ್ತುವಿಗೂ ಹೋಲಿಸಲಾಗದ, ಬೆಲೆಕಟ್ಟಲಾಗದ ಅತ್ಯಮೂಲ್ಯವಾದ ಜಗತ್ತಿನ ಶ್ರೇಷ್ಠ ಸಂಗತಿಗೂ ಮಿಗಿಲಾದವರಾಗಿದ್ದಾರೆ.

ಗೊತ್ತಿರುವ ಕಂಡಿರದ ಎಲ್ಲೋ ಕೇಳಿದ ವಿಚಾರವನ್ನು ಕುರಿತು ಪುಟಗಟ್ಟಲೆ ಬರೆಯುವುದಕ್ಕಿಂತ ಸದಾ ನನ್ನ ಒಳಿತಿಗಾಗಿ ಜೀವನವನ್ನೇ ಮುಡಿಪಾಗಿಟ್ಟಿರುವ ನನ್ನಪ್ಪ- ನನ್ನಮ್ಮನ ಬಗ್ಗೆ ಬರೆಯುವುದೇ ಸೂಕ್ತವಾದ ನನ್ನ ಅನಿಸಿಕೆ. ಇವರು ನನ್ನ ಪಾಲಿಗೆ ದೇವರಿಗಿಂತ ಮಿಗಿಲು ಉತ್ತಮ ಸ್ನೇಹಿತನಾಗಿ ಮಾರ್ಗದರ್ಶಕನಾಗಿ, ಸಲಹೆಗಾರನಾಗಿ ನನ್ನೊಡನಿರುವ ನನ್ನಪ್ಪ ನನ್ನ ಬಗ್ಗೆ ಕಟ್ಟಿದ ಕನಸುಗಳಷ್ಟೋ? ಮಮಯತೆಯ ಮಾತೆಯಾಗಿ, ಅಕ್ಕರೆಯ ಅಕ್ಕನಂತೆ ಸಲಹುವ ನನ್ನಮ್ಮನ ಆಸೆ ಅದಿನ್ನೆಷ್ಟೋ? ಹೌದು, ನನ್ನಪ್ಪ- ನನ್ನಮ್ಮನ ಬಗ್ಗೆ ಬರೆಯಲು ಕುಳಿತಾಗಲೇ ನನ್ನ ಮೇಲೆ ಎಂತಹ ಜವಾಬ್ದಾರಿ ಕಾಣದಂತೆ ನನ್ನ ಮೆಚ್ಛಿನ ಆ ಇಬ್ಬರ ಸ್ನೇಹಿತರು ಹೊರಿಸಿದ್ದಾರೆ ಎಂದು ಅರಿವಾದದ್ದು, ಸಮಾಜದಲ್ಲಿ ಗುರುತರವಾದ ರೀತಿಯಲ್ಲಿ ನಾನು ಕಾಣಿಸಿಕೊಳ್ಳಬೇಕೇಂಬುದು ನನ್ನಿಬ್ಬರ ಹಿತಚಿಂತಕರ ಮಹದಾಶಯ. ಅದೇನು ಸಣ್ಣ ಆಸೆಯೇ? ಇಡೀ ಜೀವನವನ್ನೇ ನಮಗಾಗಿ ಸವೆಸುವ ಆ ದೈವಸ್ವರೂಪಿಗಳ ಆಸೆ ಈಡೇರಿಸುವುದು ನನ್ನ ಆದ್ಯ ಕರ್ತವ್ಯವೇಂದೇ ನನ್ನ ಭಾವನೆ ಪ್ರಾರಂಭಿಕವಾಗಿ ನಾನವಿರಿಗೆ ಹೇಗೆ ತಿಳಿಸಲಿ, ನಿಮ್ಮ ಕನಸು- ನನಸು ಮಾಡುವ ಶಕ್ತಿ ನನಗಿದೆ ಎಂದು.