ಸದಸ್ಯ:Disha Bhat1940321/ನನ್ನ ಪ್ರಯೋಗಪುಟ

ನನ್ನ ಪರಿಚಯ ಬದಲಾಯಿಸಿ

 
ಕ್ರೈಸ್ಟ್ ಯುನಿವರ್ಸಿಟಿ

ನನ್ನ ಹೆಸರು ದಿಶಾ ಭಟ್. ನಾನು ಕ್ರೈಸ್ಟ್ ಯುನಿವೆರ್ಸಿಟಿಯಲ್ಲಿ ಓದುತ್ತಿದ್ದೇನೆ[೧]. ನಾನು ಪದವಿ ವಿಜ್ಞಾನದಲ್ಲಿ ಭೌತಶಸ್ತ್ರ, ಗಣಿತ ಮತ್ತು ವಿದ್ಯುನ್ಮಾನ ಶಾಸ್ತ್ರ ಕಲಿಯುತ್ತಿದ್ದೇನೆ. ನನಗೆ ಚಿಕ್ಕಂದಿನಿಂದಲೂ ವಿಜ್ಞಾನದಲ್ಲಿ ಬಹಳ ಆಸಕ್ತಿ. ಹೀಗಾಗಿ ನಾನು ಬಿ.ಎಸ್.ಸಿ.ಯನ್ನೇ ಓದಬೇಕು ಎಂದುಕೊಂಡಿದ್ದೆ. ನನಗೆ ನನ್ನ ತಂದೆ- ತಾಯಿ ಓದಲು ಬಹಳ ಪ್ರೋತ್ಸಾಹ ನೀಡುತ್ತಾರೆ. ಅವರು ಸದಾ ನನ್ನ ಯಶಸ್ಸನ್ನು ಬಯಸುತ್ತಾರೆ. ನಾನು ಓದಿದ ಶಾಲೆ ಸಂತ ಫ್ರಾನ್ಸಿಸ್ ಡೀ ಸಲೀಸ್ ಪಬ್ಲಿಕ್ ಸ್ಕೂಲ್[೨]. ಇಂತಹ ತಂದೆ-ತಯಿಯರ ಪಡೆದ ನಾನು ಧನ್ಯಳು. ನನ್ನ ತಂದೆಯ ಹೆಸರು ದಿವಸ್ಪತಿ ಭಟ್. ನನ್ನ ತಾಯಿ ಸಂಧ್ಯಾ ಬಾಯಿ ಭಟ್. ನನ್ನ ತಂದೆ ಒಂದು ಖಾಸಗಿ ಸಂಸ್ಥೆಯಲ್ಲಿ ವ್ಯವಸ್ಥಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ನನ್ನ ತಾಯಿ ಶಿಕ್ಷಕಿ. ಅವರು ವೀರಸಂದ್ರದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಜನನ ಬದಲಾಯಿಸಿ

 
ಅಪ್ಸರಕೊಂಡ

ನಾನು ಹುಟ್ಟಿದ್ದು ನನ್ನ ತಾಯಿಯ ತವರಾದ ಉತ್ತರ ಕನ್ನಡ ಜಿಲ್ಲೆಯಲ್ಲಿ. ನಾನು ೧೭-೦೧-೨೦೦೧ರಂದು ಕುಮಟಾದಲ್ಲಿ ಜನಿಸಿದೆ. ನಾನು ಹುಟ್ಟಿದ್ದು ಅಲ್ಲಿಯಾಗಿದ್ದರೂ, ಓದಿದ್ದು, ಬೆಳೆದಿದ್ದು ಎಲ್ಲಾ ಬೆಂಗಳೂರಿನಲ್ಲಿ. ನಾನು ಎಲೆಕ್ಟ್ರಾನಿಕ್ ಸಿಟಿಯಲ್ಲಿ ವಾಸ ಮಾದುತ್ತಿದ್ದೇನೆ.ನನ್ನ ತಂದೆ ತಾಯಿ ನನ್ನನ್ನು ಬಹಳ ಪ್ರೀತಿಯಿಂದ ಬೆಳೆಸಿದ್ದಾರೆ. ಅವರು ಕೇವಲ ನನ್ನ ಓದಿಗೆ ಮಾತ್ರವಲ್ಲದೆ ತರತರದ ಸ್ಪರ್ಧೆಗಳಲ್ಲಿಯೂ ಸಹ ಭಾಗವಹಿಸಲು ಪ್ರೋತ್ಸಾಹ ಕೊಡುತ್ತಾರೆ. ನನಗೆ ಸ್ವಲ್ಪ ಪೆಟ್ಟಾದರೂ ಬಹಳ ನೊಂದುಕೊಳ್ಳುತ್ತಾರೆ.

 
ಉತ್ತರ ಕನ್ನಡ ಜಿಲ್ಲೆ


 
ಬೆಂಗಳೂರು ಅರಮನೆ

ನಾನು ಅವರ ಒಬ್ಬಳೇ ಮಗಳಾದ್ದರಿಂದ ನಾನು ಕೇಳುವ ಮೊದಲೇ ನನಗೆ ಬೇಕಾದ ವಸ್ತುಗಳನ್ನೆಲ್ಲಾ ಕೊಡಿಸುತ್ತಾರೆ. ನನಗೆ ಕಥೆ ಪುಸ್ತಕಗಳು ಹಾಗೂ ಕಾದಂಬರಿಗಳನ್ನು ಓದುವುದು ಭಳ ಇಷ್ಟ. ಅದರಲ್ಲೂ ನಿಗೂಢ ರಹಸ್ಯಗಳುಳ್ಳ ಕಥೆ ಪುಸ್ತಕಗಳೆಂದರೆ ನಾನು ಅವುಗಳನ್ನು ಬಹಳ ಕುತೂಹಲದಿಂದ ಓದುತ್ತೇನೆ. ನನಗೆ ಬಹಳ ಬೇಸರವಾದಾಗ ನಾನು ಹಾಸ್ಯ ಪುಸ್ತಕಗಳನ್ನು ಓದುತ್ತೇನೆ, ಅಥವಾ ಹಾಸ್ಯ ಪ್ರದಾನ ಕರ್ಯಕ್ರಮಗಳನ್ನು ವೀಕ್ಷಿಸುತ್ತೇನೆ. ಆಗ ನನ್ನ ಮನಸ್ಸು ಶಾಂತವಾಗುತ್ತದೆ. ನಾನು ಪ್ರತಿದಿನ ವಾರ್ತೆಯನ್ನು ಕೇಳುತ್ತೇನೆ.


ಇಚ್ಛೆಗಳು ಬದಲಾಯಿಸಿ

ನನಗೆ ಸಂಗೀತವೆಂದರೆ ಬಹಳ ಆಸಕ್ತಿ. ಅದರಲ್ಲೂ ಭಾವಗೀತೆಗಳು ಹಾಗೂ ಜಾನಪದ ಗೀತೆಗಳು ಎಂದರೆ ಅಚ್ಚುಮೆಚ್ಚು ಏಕೆಂದರೆ ಅದರಲ್ಲಿ ಬಹಳಷ್ಟು ಅರ್ಥವಿರುತ್ತದೆ. ಇಂತಹ ಅರ್ಥಬದ್ಧವಾದ ಸಾಹಿತ್ಯಗಳನ್ನು ಇಂದಿನ ಸಿನಿಮಾ ಹಾಡುಗಳಲ್ಲಿ ಕಾಣುವುದು ವಿರಳ. ನಾನು ಮತ್ತು ನನ್ನ ತಂದೆ ತಾಯಿ ಒಟ್ಟಿಗೆ ಕೂತು ನೋಡುವ ಏಕೈಕ ಕರ್ಯಕ್ರಮ ಎಂದರೆ ಅದು ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ "ಸರಿಗಮಪ". ಅಲ್ಲಿ ಹಡುವ ಪ್ರತಿಯೊಬ್ಬ ಸ್ಪರ್ಧಿಯೂ ತಮ್ಮ ತಮ್ಮ ಹಾಡುಗಳ ಮೂಲಕ ಪ್ರೇಕ್ಷಕರನ್ನು ಮೂಕವಿಸ್ಮಿತರನ್ನಾಗಿ ಮಾಡುತ್ತಾರೆ. ಆ ಒಂದೊಂದು ಹಾಡಿನ ಆಲಾಪವನ್ನು ಕೇಳಬೇಕು, ಆಹಾ! ಅದೇ ಸ್ವರ್ಗಸುಖ. ನಾನು ಕಲೆಯನ್ನು ಕಲಾವಿದರನ್ನು ಬಹಳ ಗೌರವಿಸುತ್ತೇನೆ, ಹಾಗೆಯೇ ಕಲಿಯಲೂ ಆಸೆ ಪಡುತ್ತೇನೆ. ನನ್ನ ಕನ್ನಡ ಶಿಕ್ಷಕರಾದ ರಾಜೇಶ್ ಸರ್ ಸಹ ಒಬ್ಬ ಗಾಯಕರು. ಅವರು ಕೆಲವೊಮ್ಮೆ ಪಾಠ ಮಡುವಾಗ ಸಂದರ್ಭಾನುಸಾರವಾಗಿ ಹಾಡುತ್ತಾರೆ.

 
ಚದುರಂಗ
 
ಬ್ಯಾಡ್ ಮಿಂಟನ್

ನನಗೆ ಕ್ರೀಡೆಯಲ್ಲಿಯೂ ಸಹ ಆಸಕ್ತಿ ಇದೆ. ನಾನು ನನ್ನ ಶಾಲೆಯ ಥ್ರೋ ಬಾಲ್ ತಂಡದಲ್ಲಿದ್ದೆ, ಬಹಳ ಚೆನ್ನಗಿ ಆಟವಾಡುತ್ತಿದ್ದೆ. ಎಲ್ಲಾ ಪಂಧ್ಯಗಳಲ್ಲೂ ನಾವೇ ಗೆಲ್ಲುತ್ತಿದ್ದೆವು. ನಮ್ಮ ತಂಡವನ್ನು ಯಾರಿಂದಲೂ ಸೋಲಿಸಸಲು ಸಾಧ್ಯವಗುತ್ತಿರಲಿಲ್ಲ. ನಾನು ಬ್ಯಾಡ್ ಮಿಂಟನ್ ಸಹ ಆಡುತ್ತಿದ್ದೆ. ಈಗಲೂ ಸಹ ನಾನು ನನ್ನ ಗೆಳೆಯರೊಂದಿಗೆ ಈ ಆಟವನ್ನು ಆಡುತ್ತೇನೆ. ಹಾಗೆ ಮಾಡಿದಾಗ ಮನಸ್ಸಿಗೆ ಒಂದು ತರಹ ಶಾಂತಿ, ನೆಮ್ಮದಿ ಸಿಗುತ್ತದೆ. ನಾನು ಮತ್ತು ನನ್ನ ತಂದೆ ಪ್ರತಿ ಭಾನುವಾರ ಕೇರಂ ಆಡುತ್ತೇವೆ. ಕೆಲವೊಮ್ಮೆ ಅಕ್ಕ ಪಕ್ಕದ ಮನೆಯವರನ್ನೆಲ್ಲಾ ನಮ್ಮ ಆಟಕ್ಕೆ ಸೇರಿಸಿಕೊಳ್ಳುತ್ತೇವೆ. ಎಲ್ಲರ ಜೊತೆ ಕೂಡಿ ಆಡಿದಾಗ ಮತ್ತೂ ಸಂತೋಷ ಸಿಗುತ್ತದೆ. ನಾನು ನನ್ನ ಶಾಲೆಯಲ್ಲಿ ಚದುರಂಗವನ್ನೂ ಆಡುತ್ತಿದ್ದೆ. ಹಲವಾರು ಬಾರಿ ಗೆದ್ದು ಪ್ರಶಸ್ತಿಳನ್ನೂ ಗಳಿಸಿದ್ದೇನೆ. ಈ ಆಟದ ತವರು ಭಾರತ. ಈ ಆಟವನ್ನು ಚಾಣಕ್ಯನು ತನ್ನ ಶಿಶ್ಯನಾದ ಚಂದ್ರಗುಪ್ತ ಮೌರ್ಯನ ಕೈಯಲ್ಲಿ ಆಡಿಸುತ್ತಿದ್ದನಂತೆ. ಈ ಆಟವು ಮನಸ್ಸನ್ನು ಯುದ್ಧಕ್ಕೆ ಸಿದ್ಧ ಪಡಿಸುತ್ತದೆ.ಇದು ಈ ಆಟದ ಇತಿಹಾಸ.

 
ವಾದ್ಯಗಳು

ನನಗೆ ಬಹಳ ವರ್ಷಗಳಿಂದ ಯವುದಾದರೂ ವಾದ್ಯವನ್ನು ನುಡಿಸಲು ಕಲಿಯಬೇಕು ಎಂಬ ಆಸೆಯಿತ್ತು. ಆದರೆ ಈ ವಿಷಯವನ್ನು ಯಾರೊಂದಿಗೂ ಹಂಚಿಕೊಂಡಿರಲಿಲ್ಲ. ಆದರೆ ಈಗ ನನಗೆ ಆ ಅವಕಾಶ ಒದಗಿ ಬಂದಿದೆ. ಇದು ನನ್ನ ಹಲವು ವರ್ಷಗಳ ಕನಸು. ಈ ಅವಕಾಶವು ನನಗೆ ನಾನು ಓದುತ್ತಿರುವ ಕ್ರೈಸ್ಟ್ ಕಾಲೇಜಿನಲ್ಲಿ ಸಿಗುತ್ತಿರುವುದು ಬಹಳ ಖುಷಿ ತಂದಿರುವ ವಿಚಾರ. ನನಗೆ ಒಂದು ಕೊರಗಿದೆ. ನನಗೆ ಈಜಲು ಬರುವುದಿಲ್ಲ. ನಾನು ಈಜುವುದುದನ್ನು ಕಲಿಯಲು ಆಗಲೇ ಇಲ್ಲ. ಇನ್ನಾದರೂ ಕಲಿಯಬೇಕು ಎಂಬ ಆಸೆ ಇದ್ದೇ ಇದೆ. ನನಗೆ ಮತ್ತೂ ಕಲಿಯಬೇಕೆಂಬ ಧ್ಯೇಯ ದಿನೇ ದಿನೇ ಹೆಚ್ಚುತ್ತಲೇ ಇದೆ. ನಾನು ಸಾಕಷ್ಟು ಬಾರಿ ಮನಸ್ಸಿನಲ್ಲೆ ಅಂದುಕೊಳ್ಳುತ್ತೇನೆ ಮನುಷ್ಯರಿಗಿಂತ ಪ್ರಾಣಿಗಳೇ ಎಷ್ಟೋ ಮೇಲು ಎಂದು. ಪ್ರಾಣಿಗಳು ಹುಟ್ಟಿದ ಕೆಲವೇ ಗಂಟೆಗಳಲ್ಲಿ ಅಥವಾ ಕೆಲವೇ ದಿನಗಳಲ್ಲಿ ಓಡಾಡಲು ಶುರು ಮಾಡುತ್ತವೆ. ಆದರೆ ಮನುಷ್ಯನಿಗೆ ಸರಿಯಗಿ ನಡೆಯಲು ವರ್ಷವೇ ಬೇಕಾಗುತ್ತದೆ.

ಎ.ಪಿ.ಜೆ. ಅಬ್ದುಲ್ ಕಲಾಂ

ನಾನು ಭೌತಶಾಸ್ತ್ರದಲ್ಲಿ ಪಿ.ಎಹ್.ಡಿ. ಮಾಡಬೇಕು ಎಂದುಕೊಂಡಿದ್ದೇನೆ. ಹಾಗೆಯೇ ಮುಂದೆ ವಿಜ್ಞಾನಿಯಾಗಬೇಕು ಎಂದುಕೊಂಡಿದ್ದೇನೆ. ಎ.ಪಿ.ಜೆ. ಅಬ್ದುಲ್ ಕಲಾಂ ಅವರು ನನಗೆ ಸ್ಪೂರ್ತಿ. ಅವರು ನುಡಿದ ಒಂದೊಂದು ಮಾತೂ ಅಕ್ಷರಶಹ ಸತ್ಯ. ಅವರು "ಕನಸು ನನಸಾಗಲು ಮೊದಲು ಕನಸು ಕಾಣಬೇಕು" ಎಂದು ಹೇಳಿದ್ದಾರೆ. ಎಂತಹ ಅದ್ಭುತವಾದ ಮಾತು ಅವರದ್ದು. ಅವರೇ ಇನ್ನೊಂದು ಮಾತನ್ನೂ ಹೇಳಿದ್ದಾರೆ, "ಚಿಕ್ಕ ಕನಸು ಕಾಣುವುದು ಅಪರಾಧ, ನಾವು ಎಂದೂ ದೊಡ್ಡ ದೊಡ್ಡ ಕನಸುಗಳನ್ನೇ ಕಾಣಬೇಕು" ಎಂದು. ಅವರು ಇಂತಹ ಚಿನ್ನದಂತಹ ಮಾತುಗಳನ್ನು ನಮ್ಮಂತಹ ವಿದ್ಯಾರ್ಥಿಗಳಿಗಾಗಿಯೇ ನುಡಿದಿದ್ದಾರೆ. ಅವರಿಗೆ ಈ ದೇಶದ ಮೇಲೆ, ದೇಶದ ಭವಿಷ್ಯದ ಮೆಲೆ ಎಷ್ಟು ವಿಶ್ವಾಸ,ಕಾಳಜಿ ಇತ್ತು ಎಂದು ಇದರಿಂದ ತಿಳಿಯುತ್ತದೆ. ನಾನು ಅವರ ತತ್ವಗಳನ್ನು ಪಾಲಿಸಬೇಕು ಎಂದುಕೊಂಡಿದ್ದೇನೆ, ಹಾಗೆಯೇ ಮಾಡುತ್ತೇನೆ ಕೂಡ.

ಇದು ನನ್ನ ಬಗ್ಗೆ ಒಂದು ಸಂಕ್ಷಿಪ್ತ ವಿವರ.