ಸದಸ್ಯ:Dhruva.L/sandbox
ಕಿಮ್ ಜೋಂಗ್ ಅನ್
ಬದಲಾಯಿಸಿಕಿಮ್ ಜೋಂಗ್ ಅನ್ರವರು ೮ ಜನವರಿ ೧೯೮೩ ರಂದು ಜನಿಸಿದರು. ಅವರು ಕೊರಿಯಾದ ಡೆಮೊಕ್ರೆಟಿಕ್ ಪೀಪಲ್ಸ್ ರಿಪಬ್ಲಿಕ್ ಸರ್ವೋಚ್ಚ ನಾಯಕರಾಗಿದ್ದಾರೆ. ಅವರು ಕೊರಿಯಾದ ವರ್ಕರ್ಸ್ ಪಾರ್ಟಿಯ ಮೊದಲ ಸೆಕ್ರೆಟರಿ ಆಗಿದ್ದರು, ಕೇಂದ್ರೀಯ ಸೇನಾ ಆಯೋಗದ ಅಧ್ಯಕ್ಷ, ರಾಷ್ಟ್ರೀಯ ರಕ್ಷಣಾ ಆಯೋಗದ ಅಧ್ಯಕ್ಷ, ಕೊರಿಯನ್ ಪೀಪಲ್ಸ್ ಆರ್ಮಿ ಪರಮೋಚ್ಚ ದಳಪತಿ ಮತ್ತು ವರ್ಕರ್ಸ್ ಪಾಲಿಟ್ಬ್ಯೂರೋ ಕಮ್ಯುನಿಸ್ಟ್ ಸಂಘಟನೆಗಳಲ್ಲಿನ ಉನ್ನತಾಧಿಕಾರದ ಸ್ಥಾಯೀ ಸಮಿತಿಗಳ ಸದಸ್ಯರಾಗಿದ್ದಾರೆ. ೨೮ ಡಿಸೆಂಬರ್ ೨೦೧೧ರಂದು ಅವರ ತಂದೆಯ ಅಂತ್ಯಕ್ರಿಯೆಯ ನಂತರ ರಾಜ್ಯವು ಅಧಿಕೃತವಾಗಿ ಅವರನ್ನು ಸರ್ವೋಚ್ಛ ನಾಯಕನನ್ನಾಗಿ ಘೋಷಿಸಲಾಯಿತು.
ಅವರು ೧೮ ಜುಲೈ ೨೦೧೩ರಂದು ಕೊರಿಯನ್ ಪೀಪಲ್ಸ್ ಆರ್ಮಿ ಉತ್ತರ ಕೊರಿಯಾದ ಮಾರ್ಷಲ್ ದರ್ಜೆಗೆ ಬಡ್ತಿಯಾದರು. ಅವರು ಕಿಮ್ ಇಲ್-ಸಂಗ್ ಮಿಲಿಟರಿ ವಿಶ್ವವಿದ್ಯಾಲಯದಲ್ಲಿ ಸೈನ್ಯ ಅಧಿಕಾರಿಯಾಗಿ ಮತ್ತು ಭೌತಶಾಸ್ತ್ರದಲ್ಲಿ ಡಿಗ್ರಿ ಪಡೆದಿದ್ದರು. ೩೨ನೇ ವಯಸ್ಸಿನಲ್ಲಿ ಉತ್ತರ ಕೊರಿಯಾದ ಸ್ಥಾಪನೆಯ ನಂತರ ಅವರು ದೇಶದ ಮೊದಲ ನಾಯಕನಾದರು ಮತ್ತು ವಿಶ್ವದ ಅತೀ ಕಿರಿಯ ನಾಯಕ ಎನಿಸಿಕೊಂಡರು. ೨೦೧೩ರಲ್ಲಿ ಕಿಮ್ರನ್ನು ವಿಶ್ವದ ೪೬ನೇ ಅತ್ಯಂತ ಶಕ್ತಿಯುತ ವ್ಯಕ್ತಿ ಎಂದು ಫೋರ್ಬ್ಸ್ ಪಟ್ಟಿಯಲ್ಲಿ ಹೆಸರಿಸಲಾಯಿತು.
ಆರಂಭಿಕ ಜೀವನ ಮತ್ತು ಶಿಕ್ಷಣ
ಬದಲಾಯಿಸಿಕಿಮ್ ಜೊಂಗ್-ಅನ್ ರವರ ಯಾವುದೇ ಸಮಗ್ರ ಜೀವನಚರಿತ್ರೆ ಅಧಿಕೃತವಾಗಿ ಇನ್ನೂ ಬಿಡುಗಡೆಯಾಗಿಲ್ಲ. ಆದ್ದರಿಂದ, ಅವರ ಆರಂಭಿಕ ಜೀವನದ ಬಗ್ಗೆ ಕೇವಲ ಕೆಲವು ವಿಷಯಗಳು ಪಕ್ಷಾಂತರಿಗಳಿಂದ ತಿಳಿದು ಬಂದಿದೆ. ಅವರು ಸ್ವಿಜರ್ಲ್ಯಾಂಡ್ ನಲ್ಲಿ ವಿದ್ಯಾಭ್ಯಾಸ ಮಾಡಿರುವುದಾಗಿ ಕೆಲವು ಹೊರ ಜನರ ವಾದವಾಗಿದೆ. ಉತ್ತರ ಕೊರಿಯಾದ ಅಧಿಕಾರಿಗಳು ತಮ್ಮ ನಾಯಕನ ಜನ್ಮದಿನಾಂಕ ೮ ಜನವರಿ ೧೯೮೨ ಎಂದು ಹೇಳುತ್ತಾರೆ, ಆದರೆ ದಕ್ಷಿಣ ಕೊರಿಯಾದ ಗುಪ್ತಚರ ಅಧಿಕಾರಿಗಳ ಪ್ರಾಕಾರ ಕಿಮ್ ರವರ ಜನ್ಮದಿನ ನಿಜವಾದ ದಿನಾಂಕದಿಂದ ಒಂದು ವರ್ಷ ಜಾಸ್ತಿ ಎಂಬುದು ಅವರ ವಾದವಾಗಿದೆ. ಡೆನ್ನಿಸ್ ರಾಡ್ಮನ್ ಸೆಪ್ಟೆಂಬರ್ ೨೦೧೩ರಲ್ಲಿ ಕಿಮ್ ರನ್ನು ಭೇಟಿಯಾದ ನಂತರ ಅವರ ಜನ್ಮದಿನಾಂಕವು ೮ ಜನವರಿ ೧೯೮೩ ಎಂದು ಹೇಳಿದರು. ಕಿಮ್-ಜಂಗ್-ಇಲ್ ನ ಮೂವರು ಮಕ್ಕಳಲ್ಲಿ ಕಿಮ್-ಜೋಂಗ್-ಅನ್ ಎರಡನೆಯ ಮಗ.
ಜಪಾನಿನ ಮೊದಲ ವೃತ್ತ ಪತ್ರಿಕೆಯಲ್ಲಿ ಪ್ರಕಟಗೊಂಡ ವರದಿಗಳ ಪ್ರಕಾರ ಸ್ವಿಜರ್ಲ್ಯಾಂಡ್ ನಲ್ಲಿ ಇರುವ ಬರ್ನ್ ಸಮೀಪದ ಶಾಲೆಯಲ್ಲಿ ಕಿಮ್ ಓದಿದ್ದಾರೆ. ಬರ್ನ್ ಸಮೀಪ ಇದ್ದ ಖಾಸಗಿ ಅಂತಾರಾಷ್ಟ್ರೀಯ ಇಂಗ್ಲಿಷ್ ಶಾಲೆಗೆ ಚೋಲ್ ಪಾಕ್ ಅಥವಾ ಪಾಕ್ ಚೋಲ್ ಎಂಬ ಹೆಸರಿನಲ್ಲಿ ೧೯೯೩ ರಿಂದ ೧೯೯೮ ರವರೆಗೆ ಹಾಜರಾಗಿದ್ದಾರೆ ಎಂದು ಪ್ರಾಥಮಿಕ ವರದಿಯಲ್ಲಿ ಆರೋಪಿಸಲಾಗಿದೆ. ನಾಚಿಕೆ ಸ್ವಭಾವ ಮತ್ತು ಒಳ್ಳೆಯ ಹುಡುಗನಾಗಿದ್ದ ಈತ ತನ್ನ ಸಹಪಾಠಿಗಳೊಂದಿಗೆ ಉತ್ತಮ ಸ್ನೇಹವಿಟ್ಟುಕೊಂಡಿದ್ದು,ಬಾಸ್ಕೆಟ್ ಬಾಲ್ ಪ್ರೇಮಿಯು ಆಗಿದ್ದರು ಎಂದು ವಿವರಿಸಲಾಗಿದೆ.
ನಂತರ, ೧೯೯೮ ರಿಂದ ೨೦೦೦ ವರೆಗೆ ಬರ್ನ್ ಸಮೀಪದ ಕೋನಿಜ್ ನಲ್ಲಿರುವ ಲಿಬೆಫೆಡ್ ಸ್ಟೀನ್ಹೋಜ್ಲಿ ನಲ್ಲಿ ಉತ್ತರ ಕೊರಿಯಾದ ರಾಯಭಾರಿ ಕಚೇರಿಯ ಉದ್ಯೋಗಿಯ ಮಗನಾಗಿ ಪಾಕ್ ಉನ್ ಅಥವಾ ಉನ್ ಪಾಕ್ ಹೆಸರಿನಲ್ಲಿ ಓದಿದ್ದಾರೆಂದು ವರದಿಯಲ್ಲಿ ಹೇಳಲಾಗಿದೆ. ಉತ್ತರ ಕೊರಿಯಾದ ವಿದ್ಯಾರ್ಥಿಯೊಬ್ಬ ತಾನು ರಾಯಭಾರಿ ಕಚೇರಿಯ ಸದಸ್ಯನ ಮಗನೆಂದು ದಾಖಲೆಯಲ್ಲಿ ನಮೂದಿಸಿ, ೧೯೯೮ರ ಆಗಸ್ಟ್ ನಿಂದ ೨೦೦೦ ವರೆಗೆ ಶಾಲಾ ತರಗತಿಯಲ್ಲಿ ಹಾಜರಾಗಿರುವ ಬಗ್ಗೆ ಕೋನಿಜ್ ಅಧಿಕೃತ ಮೂಲಗಳು ಖಚಿತಪಡಿಸಿವೆ. ಪಾಕ್ ಉನ್ ಮೊದಲು ವಿದೇಶಿ ಭಾಷೆಯ ಮಕ್ಕಳ ವಿಶೇಷ ತರಗತಿಗೆ ಹಾಜರಾಗಿ ನಂತರ ೬,೭,೮ ನೇ ತರಗತಿಯ ಪಾಠಗಳನ್ನು ಕೇಳಲು ಹಾಜರಾಗುತ್ತಿದ್ದರು ಎಂದು ವರದಿಯಲ್ಲಿ ಹೇಳಲಾಗಿದೆ. ೨೦೦೦ ಇಸವಿಯಲ್ಲಿ ಚಳಿಗಾಲದ ಸಂದರ್ಭದಲ್ಲಿ ೯ನೇ ತರಗತಿಯಲ್ಲಿದ್ದ ಅವರು ಶಾಲೆಗೆ ಸರಿಯಾಗಿ ಬರಲಿಲ್ಲ ಎಂದು ದಾಖಲೆಗಳು ಹೇಳಿವೆ. ತರಗತಿಯ ಹಾಜರಾತಿ ಸಂಖ್ಯೆ ಮತ್ತು ಪಡೆದ ಅಂಕಗಳು ಕಡಿಮೆಯಾಗಿದ್ದರೂ ಬಾಸ್ಕೆಟ್ ಬಾಲ್ ಆಟ ಆಡಲು ಇಚ್ಚಿಸುವ ಹುಡುಗರೊಂದಿಗೆ ಹೆಚ್ಚು ಸ್ನೇಹದಿಂದ ಇರಲು ಬಯಸಿದ್ದರು ಎಂದು ಉಲ್ಲೇಖಿಸಲಾಗಿದೆ. ಸ್ವಿಟ್ಜರ್ ಲ್ಯಾಂಡ್ ನಲ್ಲಿದ್ದ ಉತ್ತರ ಕೊರಿಯಾದ ರಾಯಭಾರಿ ರಿ ಚೆಯುಲ್ ಕಿಮ್ ಜಂಗ್ ಜೊತೆ ಉತ್ತಮ ಸಂಬಂಧವನ್ನು ಇಟ್ಟುಕೊಂಡು ಮಾರ್ಗದರ್ಶಿಯಾಗಿದ್ದರು. ಕಿಮ್ ಜಂಗ್ ಸಹಪಾಠಿಯೊಬ್ಬರು ತನಗೆ ಆತ ಉತ್ತರ ಕೊರಿಯಾದ ನಾಯಕನ ಮಗ ಎಂಬ ಸಂಗತಿಯನ್ನು ತಿಳಿಸಿದ್ದನೆಂದು ಆ ವರದಿಗಾರ ಹೇಳಿಕೊಂಡಿದ್ದಾರೆ.
ಪಾಕ್ ಉನ್ ೧೯೯೯ರಲ್ಲಿ ಲೆಬೆಫೆಡ್ ಶಾಲೆಯಲ್ಲಿ ಓದುತ್ತಿದ್ದಾಗಿನ ಫೋಟೋ ಮತ್ತು ೨೦೧೨ರಲ್ಲಿ ತೆಗೆದ ಕಿಮ್ ಜಾಂಗ್ ಅನ್ ಫೋಟೋವನ್ನು ಫ್ರಾನ್ಸ್ ನ ಲಿಯಾನ್ ವಿಶ್ವವಿದ್ಯಾಯಲಯದಲ್ಲಿ ಅನಾಟಮಿಕ್ ಅಂಥ್ರಾಪಾಲಜಿ ಪ್ರಯೋಗಾಲಯದಲ್ಲಿ ಪರೀಕ್ಷೆಗೊಳಪಡಿಸಿದಾಗ ಶೇ. ೯೫ ರಷ್ಟು ಸಾಮ್ಯತೆ ಕಂಡುಬಂದಿದೆ.
೨೦೧೩ರಲ್ಲಿ ಕಿಮ್ ಜಾಂಗ್ ಅನ್ ರಿಗೆ ಮಲೇಷಿಯಾದ ಖಾಸಗಿ ವಿಶ್ವವಿದ್ಯಾಲಯವಾದ ಎಚ್ ಇ ಎಲ್ ಪಿ ಯೂನಿವರ್ಸಿಟಿಯಿಂದ ಅರ್ಥಶಾಸ್ತ್ರದಲ್ಲಿ ಗೌರವ ಡಾಕ್ಟರೇಟ್ ಪದವಿಯನ್ನು ನೀಡಲಾಯಿತು.
ಆರ್ಥಿಕ ನೀತಿಗಳು
ಬದಲಾಯಿಸಿ೨೦೧೨ರ ಆಗಸ್ಟ್ ನಲ್ಲಿ ಚೀನಾ ಆರ್ಥಿಕ ನೀತಿಯನ್ನು ಹೋಲುವ ಆರ್ಥಿಕ ಸುಧಾರಣಾ ನೀತಿಯನ್ನು ಪ್ರಕಟಿಸಿದರು. ೨೦೧೩ರಲ್ಲಿ ಸಮಗ್ರ ಆರ್ಥಿಕ ಚಟುವಟಿಕೆಗಳ ಸಮಾಜವಾದಿ ಕಾರ್ಪೊರೇಟ್ ಜವಾಬ್ದಾರಿಯುತ ನಿರ್ವಹಣಾ ವ್ಯವಸ್ಥೆಯನ್ನು ಪರಿಚಯಿಸಲಾಯಿತು. ಉದ್ಯಮಗಳ ಸ್ವಾಯತ್ತತೆ ಹೆಚ್ಚಿಸಲು, ಕಾರ್ಮಿಕರ ಇಚ್ಛೆಯನ್ನು ಪೂರೈಸಲು, ಸ್ವತಂತ್ರವಾಗಿ ವ್ಯಾಪಾರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಮತ್ತು ಸೂಕ್ತವಾಗಿ ಸಮಾಜವಾದಿ ವಿತರಣೆ ವ್ಯವಸ್ಥೆಯನ್ನು ಕಾರ್ಯಗತ ಮಾಡುವ ಹಕ್ಕುಗಳನ್ನು ನೀಡಲಾಯಿತು.
ಪರಮಾಣು ಬೆದರಿಕೆಗಳು
ಬದಲಾಯಿಸಿ೭ ಮಾರ್ಚ್ ೨೦೧೩ರಂದು ಉತ್ತರ ಕೊರಿಯಾದ ಯುನೈಟೆಡ್ ಸ್ಟೇಟ್ಸ್ ಗೆ ಒಂದು ಪೂರ್ವಭಾವಿ ಪರಮಾಣು ದಾಳಿಯ ಬೆದರಿಕೆ ಹಾಕಿತ್ತು ಮತ್ತು ಕಿಮ್ ಜೊಂಗ್-ಅನ್ ಬೇಂಗ್ನಿಯೊಂಗ್(Baengnyeong) ದ್ವೀಪವನ್ನು ಸಂಪೂರ್ಣವಾಗಿ ಅಳಿಸಿಹಾಕುವುದಾಗಿ ಬೆದರಿಸಿತ್ತು. ಉತ್ತರ ಕೊರಿಯಾದ ಲಾಸ್ ಏಂಜಲೀಸ್ ಮತ್ತು ವಾಷಿಂಗ್ಟನ್ ಡಿ.ಸಿ ಸೇರಿದಂತೆ ಅಮೇರಿಕಾದ ನಗರಗಳ ಮೇಲೆ ಪರಮಾಣು ಮುಷ್ಕರ ನಡೆಸುವ ಯೋಜನೆಗಳನ್ನು ಬಹಿರಂಗಪಡಿಸಿದರು.
ಕುಟುಂಬ
ಬದಲಾಯಿಸಿ೨೫ ಜುಲೈ ೨೦೧೨ರಂದು ಉತ್ತರ ಕೊರಿಯಾ ರಾಜ್ಯದ ಮಾಧ್ಯಮಗಳು ಕಿಮ್ ಜೊಂಗ್- ಅನ್, ರಿ ಸೋಲ್-ಜು ರನ್ನು ಮದುವೆಯಾಗಿದ್ದಾರೆ ಎಂದು ಮೊದಲ ಬಾರಿಗೆ ವರದಿಗಳ ಮೂಲಕ ತಿಳಿಸಿದರು.ರಿ ಸೋಲ್-ಜು ೨೦ನೇ ವಯಸ್ಸಿನ ಯುವತಿಯಾಗಿದ್ದಳು ಎಂದು ಮಾಧ್ಯಮಗಳು ತಿಳಿಸಿದರು. ಪ್ರಕಟಣೆಯ ಮೊದಲು ಹಲವಾರು ವಾರಗಳ ಕಾಲ ಸಾರ್ವಜನಿಕ ಪ್ರದೇಶಗಳಲ್ಲಿ ಕಿಮ್ ಜೊಂಗ್- ಅನ್ ಜೊತೆಗೆ ಕಾಣಿಸಿಕೊಂಡಿದ್ದರು.
ಉಲ್ಲೇಖಗಳು
ಬದಲಾಯಿಸಿhttps://en.wikipedia.org/wiki/Kim_Jong-un http://www.biography.com/people/kim-jong-un-21125351