ಸದಸ್ಯ:Devika Patel Gowda/sandbox
ವೇದದ ಪರಿಚಯ :
ವೇದ ಎಂದರೆ ಜ್ಞಾನ. ಜ್ಞಾನಬೋಧಕವಾದ ಶಬ್ದರಾಶಿಗೂ ವೇದವೆಂಬ ಹೆಸರು ಸಲ್ಲುತ್ತದೆ. ವೇದದಲ್ಲಿ ಗಮನಿಸಬೇಕಾದುದು ಗತಕಾಲದ ಚರಿತ್ರೆಯ ಅಂಶಗಳು ಮಾತ್ರ. ಭಾರತದೇಶದಲ್ಲಿ ಪ್ರಾಚೀನ ಋಷಿಗಳು ಕಂಡುಕೊಂಡ ಅಪಾರ ಜ್ಞಾನವು ಅಪ್ರಯತ್ನವಾಗಿ ಅವರ ಮುಖದಿಂದ ಶಬ್ದರೂಪವಾಗಿ ಪವಹಿಸಿತು. ಅದೇ ವೇದ. ಈ ದೇಶದ ಪರಂಪರೆ ವೇದಗಳನ್ನು ಯಾವ ಲೋಪವೂ ಉಂಟಾಗದಂತೆ ರಕಿಸಿಕೊಂಡು ಬಂದಿವೆ. ವಿಶ್ವದ ಸಾಹಿತ್ಯದಲ್ಲಿ ಅತ್ಯಂತ ಪ್ರಾಚೀನವಾದುದು ವೇದಸಾಹಿತ್ಯವೇ. ವೇದಗಳು ನಿತ್ಯ, ಅವು ಯಾರಿಂದಲೂ ರಚಿತವಾದುವಲ್ಲ. ಆದ್ದರಿಂದ ಅಪೌರುಷೇಯ ಎಂಬುದು ಸಂಪ್ರದಾಯಾಗತವಾದ ಸಿದ್ಧಾಂತ. ನಿತ್ಯವಾದ ವೇದಗಳು ಪ್ರತಿಯೊಂದು ಕಲ್ಪದಲ್ಲೂ ಪರಮಾತ್ಮನ ಸಂಕಲ್ಪದಂತೆ ೠಷಿಗಳಿಗೆ ಸ್ಫುರಿಸುತ್ತವೆ ಎಂಬುದು ಈ ದೇಶದ ನಂಬಿಕೆ.
ಮಾನವ ಕುಲದ ಅತ್ಯಂತ ಹಳೆಯ ದಾಖಲೆಗಳು ಇವು ಅಂದರೆ ವೇದಗಳು ಆದುದರಿಂದ ಜನಾಂಗಗಳ ಬೆಳವಣಿಗೆಯ ದೃಷ್ಠಿಯಿಂದ ಇವುಗಳನು ಅಭ್ಯಾಸ ಮಾಡಬೇಕು. ಭಾಷಾಶಾಸ್ತ್ರದ ದೃಷ್ಠಿಯಿಂದ ಇವುಗಳನ್ನು ಅಭ್ಯಸಿಸಿ, ಅಂದಿನ ಕಾಲದ ಭಾಷಾ ಸ್ವರೂಪ, ಅದರ ಸಾಮಾಜಿಕ ಇತ್ಯಾದಿ ಹಿನ್ನೆಲೆಗಳ ದಷ್ಠಿಯಿಂದ ಮಾಹಿತಿಗಳನ್ನು ಸಂಗ್ರಹಿಸತಕ್ಕದ್ದು. ವೇದಗಳು ಸರ್ವಜ್ಞನಾದ ಪರಮಾತ್ಮನ ವಾಣಿ, ಆದ್ದರಿಂದ ಅವು ಸರ್ವಕಾಲಗಳಲ್ಲೂ ಪ್ರಮಾಣ ಎಂಬುದಿನ್ನೊಂದು ದೃಷ್ಠಿ. ಆ ಪರಮಾತ್ಮನ ನಿಃಶ್ವಾಸರೂಪವಾಗಿ ನಾಲ್ಕು ವೇದಗಳೂ ಉದಯಿಸಿದುವೆಂದು ಅದರ ಅಭಿಪ್ರಾಯ. ವೇದಗಳೆಲ್ಲ ಒಟ್ಟಾಗಿ ಇದ್ದುವು. ದೀರ್ಘಕಾಲ ಕಳೆದ ಮೇಲೆ ಅಧ್ಯಯನದ ಅನುಕೂಲತೆಗಾಗಿ ಮತ್ತು ಅರ್ಥಮಾಡಿಕೊಳ್ಳುವ ಸೌಲಭ್ಯಕ್ಕಾಗಿ, ಯಜ್ಞಗಳಲ್ಲಿ ವಿನಿಯೋಗದ ಸುಕರತೆಗಾಗಿ ವ್ಯಾಸರು ಇದನ್ನು ವಿಂಗಡಿಸಿ ನಾಲ್ಕು ಭಾಗಗಳಾಗಿ ಮಾಡಿದರು. 'ವ್ಯಸ್ಯತಿ ವೇದಾನ್ ಇಲೆವ್ಯಾಸಃ' ಎಂಬ ವ್ಯತ್ವತ್ತಿಯೇ ವ್ಯಾಸ ಎಂಬ ಹೆಸರಿಗೆ ಈ ಅರ್ಥವನ್ನು ಕೊಡುತ್ತದೆ. ಇದರಿಂದ ಋಗ್ವೇದ, ಯಜುರ್ವೇದ, ಸಾಮವೇದ, ಅಥರ್ವವೇದ ಎಂಬ ನಾಲ್ಕು ವೇದಗಳೆಂಬ ಪ್ರಸಿದ್ಧಿ ಬಂದಿತು. ಇದನ್ನು ವಿಷ್ಣು ಪುರಾಣವೂ ಸಮರ್ಥಿಸುತ್ತದೆ.