ಮದರಂಗಿ(ಮೆಹೆಂದಿ): ಮದರಂಗಿ ಎಂದರೆ ಇದೊಂದು ಎಲ್ಲರಿಗೂ ಇಷ್ಟವಾಗುವ ನಿಸರ್ಗದ ಒಂದು ಗಿಡವಾಗಿದೆ. ಔಷಧೀಯ ಗುಣವುಳ್ಳ ಗಿಡವಾಗಿದ್ದು, ಇದರ ಸೊಪ್ಪನ್ನು ಔಷಧಕ್ಕೆ ಬಳಸುತ್ತಾರೆ. ಭಾರತೀಯ ಸಂಪ್ರದಾಯದಲ್ಲಿ ಕೈಗಳಿಗೆ ಬಣ್ಣವನ್ನು ಹಚ್ಚಿಕೊಳ್ಳುವ ರೂಢಿ ಇದೆ. ಮದರಂಗಿ ತಯಾರಿಕೆ : ಮದರಂಗಿಯನ್ನು ಕೈಗಳಿಗೆ ಹಚ್ಚಿಕೊಳ್ಳುವುದಾದರೆ, ಮದರಂಗಿಯ ಸೊಪ್ಪು, ನಿಂಬೆಹಣ್ಣಿನ ರಸವನ್ನು ಸೇರಿಸಿ ಚೆನ್ನಾಗಿ ಅರೆದು, ಕೈಗಳಿಗೆ ಹಚ್ಚಬೇಕು. ಹೀಗೆ ಹಚ್ಚಿದ ಮದರಂಗಿಯನ್ನು ತುಂಬಾ ರಂಗಾಗಿಸಲು, ಒಂದು ವಿಧಾನ : ಸ್ವಲ್ಪ ಏಲಕ್ಕಿಯನ್ನು ಹುರಿದು ಅದರ ಶಾಖ ಕೊಡಬೇಕು. ಎರಡನೇ ವಿಧಾನ : ನಿಂಬೆ ಹಣ್ಣಿನ ರಸವನ್ನು ಹಚ್ಚಬೇಕು. ಮೂರನೇ ವಿಧಾನ : ಸ್ವಲ್ಪ ಸಕ್ಕರೆಯನ್ನು ನೀರಿನಲ್ಲಿ ಕರಗಿಸಿ, ಆ ನೀರನ್ನು ಹಚ್ಚಬೇಕು.

ವಿಜ್ಞಾನ ಮುಂದುವರಿದ ಹಾಗೆ ಜನರು ಮದರಂಗಿಯನ್ನು ಬೇರೆ ವಿಧಾನದಲ್ಲಿ ಸುಲಭವಾಗಿ ತಯಾರಿಸಿಕೊಳ್ಳಲು ದಾರಿಯನ್ನು ಕಂಡುಕೊಂಡಿದ್ದಾರೆ. ಹೇಗೆಂದರೆ,ಮದರಂಗಿ ಸೊಪ್ಪನ್ನು ಒಣಗಿಸಿ ಪುಡಿಮಾಡಿ ಅದಕ್ಕೆ ನಿಂಬೆಹಣ್ಣಿನ ರಸವನ್ನು ಸೇರಿಸಿ ಕಲಸಿ ಹಚ್ಚುವ ವಿಧಾನವನ್ನು ಬಳಸಿದ್ದಾರೆ. ಹೀಗೆ ಮದರಂಗಿಯಲ್ಲಿ ಚಿತ್ರಗಳನ್ನು ಬಿಡಿಸಿಕೊಳ್ಳುವ ರೂಢಿಯನ್ನು ಮಾಡಿಕೊಂಡಿದ್ದಾರೆ. ಹೀಗೆ ಸಣ್ಣ ಸಣ್ಣ ಚಿತ್ರಗಳನ್ನು ಬರೆದು ಅದಕ್ಕೆ ಡಿಸೈನ್ ಎಂದು ಹೆಸರಿಸಿಕೊಂಡಿದ್ದಾರೆ. ಮದರಂಗಿಯ ಡಿಸೈನ್ ಗಳಿಗೆ ಕೆಲವು ಉದಹರಣೆ ಎಂದರೆ, ಇಂಡಿಯನ್ ಡಿಸೈನ್, ಅರೇಬಿಕ್ ಡಿಸೈನ್, ಶೈಲಿ ಅರೇಬಿಕ್ ಡಿಸೈನ್ ಇತ್ಯಾದಿ... ಈ ರೀತಿಯ ಡಿಸೈನ್ ಗಳ ಕೆಲವು ಚಿತ್ರಗಳನ್ನು ನಾವು ಕಾಣಬಹುದಾಗಿದೆ.

Latest Mehndi Design

ಜನಪದ ಹಾಡು : ಜನಪದ ಹಾಡು ಎಂದರೆ ಹಳ್ಳಿಯ ಜನರ ಸಂಗೀತ. ಹಳ್ಳಿಯ ಜನರು ತಮ್ಮ ದಿನ ನಿತ್ಯ ಕೆಲಸಗಳನ್ನು ಮಾಡುವಾಗ ಹಾಗೂ ತಮ್ಮ ಬಿಡುವಿನ ಸಂದರ್ಭದಲ್ಲಿ ತಮ್ಮದೇ ಪದಗಳಲ್ಲಿ ಹಾಡುಗಳನ್ನು ಕಟ್ಟಿ ಹಾಡುತ್ತಿದ್ದರು. ಒಬ್ಬ ಮನುಷ್ಯ ಹೀಗೆ ಕಟ್ಟಿ ಹೇಳಿದ ಹಾಡು ಮತ್ತೊಬ್ಬರು ಹೇಳಿಕೊಳ್ಳುತ್ತ ಹೀಗೆ ಎಲ್ಲ ಜನಪದರ ಬಾಯಿಂದ ಬಾಯಿಗೆ ಹಾಡುಗಳನ್ನು ಹಾಡುತ್ತಿದ್ದರು. ಉದಾಹರಣೆಗೆ : ಒಬ್ಬ ತಾಯಿ ತನ್ನ ಮಗು ಮನೆಯಲ್ಲಿ ಒಡಾಡುತ್ತಿದ್ದರೆ ಆಗುವ ಖುಷಿಯನ್ನು ಹಾಡಿನಲ್ಲಿ ಬಣ್ಣಿಸುವ ರೀತಿಯ ಜನಪದ ಹಾಡಿನ ನಾಲ್ಕು ಸಾಲುಗಳನ್ನು ನೋಡಬಹುದು. ಕೂಸು ಇದ್ದ ಮನೆಗೆ ಬೀಸಣಿಕೆ ಯಾತಕ... ಕೂಸು ಕಂದಯ್ಯ ಒಳ ಹೊರಗ.. ಕೂಸು ಕಂದಯ್ಯ ಒಳಹೊರಗ ಆಡಿದರ ಬೀಸಣಿಕೆ ಗಾಳಿ ಸುಳಿದಾವ.. ಹೀಗೆ ಜನಪದ ಹಾಡು ತನ್ತನ ತನವನ್ನು ಹಿಂದಿನಿಂದಲೂ ಉಳಿಸಿಕೊಳ್ಳುತ್ತಾ ಬಂದಿದೆ. ಹೀಗೆ ಜನಪದ ಹಾಡಿಗೆ ವಿಶೇಷ ಸ್ಥಾನವನ್ನು ಕೊಡಲಾಗಿದೆ. ಈ ಜನಪದ ಹಾಡು ಹಳ್ಳಿಯಿಂದ ಹಳ್ಳಿಗೆ, ನಗರದಿಂದ ನಗರಕ್ಕೆ, ಪಟ್ಟಣದಿಂದ ಪಟ್ಟಣಕ್ಕೆ ಜನಪದ ಹಾಡಿನ ಮಹತ್ವವನ್ನು ಜನಪದರು ಪರಿಚಯಿಸಿದ್ದಾರೆ. ಹೀಗೆ ಜನಪದ ಹಾಡುಗಳು ಎಲ್ಲಾ ಕಡೆ ಪರಿಚಯವಾಗಿಬಿಟ್ಟಿದೆ.

ಹಸೆ ಚಿತ್ತಾರ : ಹಸೆ ಚಿತ್ತಾರ ಎಂಬುದು ಜನಪದರು ರಚಿಸಿಕೊಂಡಿರುವ ಚಿತ್ತಾರವಾಗಿದೆ. ಈ ಚಿತ್ತಾರವನ್ನು ಹಿಂದಿನ ಜನಪದರು ತಮ್ಮ ಸಂಪ್ರದಾಯ ಕಾರ್ಯಕ್ರಮವಾದ ಮದುವೆ ಕಾರ್ಯಕ್ರಮದಲ್ಲಿ ಹಸೆಚಿತ್ತಾರವನ್ನು ಬಿಡಿಸುತ್ತಿದ್ದರು. ಹಸೆ ಚಿತ್ತಾರವನ್ನು ಬಿಡಿಸಲು ನೈಸರ್ಗಿಕವಾಗಿ ಸಿಗುವಂತಹ ವಸ್ತುಗಳನ್ನು ಬಳಸುತ್ತಿದ್ದರು.(ಕೆಮ್ಮಣ್ಣು, ಅಕ್ಕಿ ಹಿಟ್ಟು ಇತ್ಯಾದಿ.,)




ದಪ್ಪ ಅಕ್ಷರದಲ್ಲಿದೆ

ಓರೆ ಅಕ್ಷರದಲ್ಲಿದೆ

ದಪ್ಪ ಹಾಗೂ ಓರೆ ಅಕ್ಷರದಲ್ಲಿದೆ