ಸದಸ್ಯ:DIVYA FRANCIS D/ನನ್ನ ಪ್ರಯೋಗಪುಟ
ಅನ್ನಪ್ರಾಶನ ಒಂದು ಹಿಂದೂ ಸಂಸ್ಕಾರ ಮತ್ತು ಹಾಲನ್ನು ಹೊರತುಪಡಿಸಿ ಬೇರೆ ಆಹಾರದ ಶಿಶುವಿನ ಮೊದಲ ಸೇವನೆಯನ್ನು ಗುರುತಿಸುತ್ತದೆ. ಅನ್ನಪ್ರಾಶನ ಪದದ ಅರ್ಥ ಅಕ್ಷರಶಃ ಆಹಾರ ಉಣಿಸುವುದು ಅಥವಾ ಆಹಾರವನ್ನು ತಿನ್ನುವುದು. ಈ ಸಮಾರಂಭವನ್ನು ಸಾಮಾನ್ಯವಾಗಿ ಪುರೋಹಿತರನ್ನು ಸಮಾಲೋಚಿಸಿ ಯೋಜಿಸಲಾಗುತ್ತದೆ, ಅವರು ಸಮಾರಂಭವನ್ನು ನಡೆಸಲು ಒಂದು ಮಂಗಳಕರ ದಿನಾಂಕವನ್ನು ಏರ್ಪಾಡುಮಾಡುತ್ತಾರೆ. ವರ್ಗ: ಸಂಸ್ಕಾರಗಳು
ಪರಿಚಯ
ಬದಲಾಯಿಸಿಅನ್ನಪ್ರಾಶನದ ಕಾರ್ಯಕ್ರಮವನ್ನು ಮಗುವಿಗೆ ೬ - ೮ ತಿಂಗಳಲ್ಲಿ ಮಾಡಲಾಗುತ್ತದೆ . ಮಗುವು ದುರ್ಬಲವಾಗಿದ್ದರೆ ಅನ್ನರಪ್ರಾಶನದ ಕಾರ್ಯಕ್ರಮವನ್ನು ೮ ಅಥವಾ ೧೦ ತಿಂಗಳಿನಲ್ಲಿ ಮಾಡಲಾಗುತ್ತದೆ . ಅನ್ನಪ್ರಾಶನವು ಭಾರತದ ಇನ್ನಿತರ ಸಂಸ್ಕರದಲ್ಲಿ ಒಂದಾಗಿದೆ . ಈ ಕಾರ್ಯಕ್ರಮದ ತಯಾರಿಯನ್ನು ಪೂಜಾರಿಯು ಮಾಡುತ್ತಾರೆ . ಈ ಕಾರ್ಯಕ್ರಮವನ್ನು ಕುಟುಂಬದ ಎಲ್ಲಾ ಸದಸ್ಯರು ,ಗೆಳೆಯರು ,ನೆರೆಯವರು ಒಟ್ಟಾಗಿ ಕೂಡಿ ಆಚರಿಸುತ್ತಾರೆ . ಅನ್ನಪ್ರಾಶನವನ್ನು ಮಗುವು ನಾಲ್ಕು ತಿಂಗಳಿಗಿಂತ ಮುಂಚೆ ಮಾಡಬಾರದು , ಏಕೆಂದರೆ ಮಗುವು ಇನ್ನು ಚಿಕ್ಕದಾಗಿರುವ ಕಾರಣ ಅದು ಆಹಾರನವನ್ನು ಜೀರ್ಣ ಮಾಡಿಕೊಳ್ಳುವುದಕ್ಕೆ ಆಗುವುದಿಲ್ಲ.
ಹಿನ್ನಲೆ
ಬದಲಾಯಿಸಿಕೆಲವು ಜನರು ಮಗುವಿಗೆ ಜೀನು,ಮೊಸರು,ತುಪ್ಪ ಕೊಡಲು ಸೂಚಿಸುತ್ತಾರೆ. ಇನ್ನು ಕೆಲವರು ಮಾಂಸವನ್ನು ಆಹಾರದ ರೀತಿಯಲ್ಲಿ ಕೊಡಲು ಸೂಚನೆ ಕೊಡುತ್ತಾರೆ. ಮಗುವಿಗೆ ಅರಿಶಿಣ ಹಚ್ಚಿ , ಸಾಸಿವೆ ಎಣ್ಣೆಯನ್ನು ಸವರಿ ಸ್ನಾನ ಮಾಡಿಸಲಾಗುತ್ತದೆ. ಮಗುವಿಗೆ ಹೊಸ ಬಟ್ಟೆಯನ್ನು ಹಾಕಿರುತ್ತಾರೆ.ಈ ಸಂಸ್ಕಾರವನ್ನು ಮಗುವಿನ ದೈಹಿಕ ಬೆಳವಣಿಗೆಗೆ ಮತ್ತು ಶಕ್ತಿಗೆ ಮಾಡಲಾಗುತ್ತದೆ.ಅನ್ನಪ್ರಾಶನದ ಸಂಸ್ಕಾರವನ್ನು ಪೂಜಾರಿಯು ಕೊಟ್ಟ ಸರಿಯಾದ ಮುಹೂರ್ತದಲ್ಲಿ ಮಾಡಲಗುತ್ತದೆ. ಮಗುವಿಗೆ ಆಹಾರ ತಯಾರಿಸಿರುವಾಗ ವೈದಿಕ ಮಂತ್ರಗಳ ಪಟಣವನ್ನು ಮಾಡಲಾಗುತ್ತದೆ.ಮಗುವಿನ ತಂದೆಯು ಮೊದಲ ತುತ್ತನ್ನು ಮಗುವಿಗೆ ತಿನ್ನಿಸುತ್ತಾರೆ. ತಂದೆಯು ಮಗುವನ್ನು ಕುಶದ ಹುಲ್ಲಿನಲ್ಲಿ ಮಲಗಿಸಿ ಅಗ್ನಿಗೆ ಪೂಜೆಯನ್ನು ಸಲ್ಲಿಸುತ್ತಾರೆ
.
ಮುಕ್ತಾಯ
ಬದಲಾಯಿಸಿಅವರು ಮಗುವು ಶಕ್ತಿಶಾಲಿ ಮತ್ತು ಪಳಗಿದ ಮಗುವು ಆಗಲೆಂದು ಪ್ರಾರ್ತಿಸುತ್ತಾರೆ ಹಾಗೂ ಶಾಂತಿಯುತ ಜೀವನವನ್ನು ನಡೆಸಲಿ ಎಂದು ಪ್ರಾರ್ತಿಸುತ್ತಾರೆ.ಈ ಸಮಯದಲ್ಲಿ ಹಾಸ್ಯವದ ಆಚರಣೆಯನ್ನು ಮಾಡಲಾಗುತ್ತದೆ. ಮಗುವಿನ ಮುಂದೆ ೫ ವಸ್ತುಗಳನ್ನು ಇಟ್ಟಿರಲಾಗುತ್ತದೆ. ಈ ವಸ್ತು ಆಕಾಂಕ್ಶೆಗಳನ್ನು ಸಂಕೇತಿಸುತ್ತದೆ. ಬಂಧು ಬಳಗ ಎಲ್ಲರೂ ಬಂದು ಮಗುವನ್ನು ಎತ್ತಿಕೊಂಡು.ಅನ್ನಪ್ರಾಶನದ ಕಾರ್ಯಕ್ರಮವನ್ನು ಮುಗಿದಾಗ ಮಗುವಿನ ಕೈ ಮತ್ತು ಬಾಯಿಯನ್ನು ಚೆನ್ನಾಗಿ ತೊಳೆಯಲಾಗುತ್ತದೆ. ಮಗುವಿಗೆ ೧ ವರ್ಷ ಮುಗಿಯುವ ಮೊದಲೆ ಅನ್ನಪ್ರಾಶನದ ಕಾರ್ಯಕ್ರಮವನ್ನು ಮಾಡಿ ಮುಗಿಸಬೀಕು.
ಉಲ್ಲೇಖ
ಬದಲಾಯಿಸಿhttps://en.wikipedia.org/wiki/Annaprashana ttps://commons.wikimedia.org/wiki/File:AnnaPrashan_(Anna_Prashan)_-_Hindu_First_Rice_Eating_Ceremony.JPG