ಕ್ರಿಸ್ಟನ್ ಜೇಮ್ಸ್ ಸ್ಟೀವರ್ಟ್ ೨೬ರ ಅಮೆರಿಕಾದ ನಟಿ. ಸ್ಟೀವರ್ಟ್ ಲಾಸ್ ಏಂಜಲೀಸ್ ನಲ್ಲಿ ಪ್ರದರ್ಶನದ ವ್ಯಾಪಾರ ಮಾಡುವವರ ಮಗಳಾಗಿ ಜನಿಸಿ;ಆಕೆ ೧೯೯೯ರಲ್ಲಿ ನಟನಾ ವೃತ್ತಿಯನ್ನು ಆರಿಸಿಕೊಂಡರು. ಆಕೆಯ ಯಶಸ್ವೀ ಚಿತ್ರ "ಥ್ರಿಲ್ಲರ್ ಪ್ಯಾನಿಕ್ ರೂಮ್" ಚಿತ್ರದಲ್ಲಿ ಜೂಡಿ ಫಾಸ್ಟರ್ ರ ಮಗಳಾಗಿ ನಟಿಸುವುದಕ್ಕಿಂತ ಮುನ್ನ ಹಲವಾರು ಚಿತ್ರಗಳ ಸಣ್ಣ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಳು, ಆದರೆ ಈ ಚಿತ್ರದ ಅವರ ನಟನೆಗೆ ಬೆಸ್ಟ್ ಆಕ್ಟ್ರಸ್ ಪ್ರಶಸ್ತಿ ಲಭಿಸಿತು. ಅವರ ಸ್ಪೀಕ್(೨೦೦೪), ಕ್ಯಾಚ್ ದಟ್ ಕಿಡ್(೨೦೦೪), ಜ಼ತುರ(೨೦೦೫), ಇಂಟು ದ ವೈಲ್ಡ್(೨೦೦೭) ನಟನೆ ಅವರಿಗೆ ಸ್ಟಾರ್ ಪಟ್ಟದ ಜೊತೆಗೆ ಸ್ಕ್ರೀನ್ ಆಕ್ಟರ್ಸ್ ಗಿಲ್ಡ್ ಪ್ರಶಸ್ತಿಯನ್ನು ಕೊಟ್ಟಿತು. ೨೦೦೮ರಲ್ಲಿ 'ಟ್ವಿಲೈಟ್ ಸಾಗಾ' ಚಿತ್ರ ಸರಣಿ (೨೦೦೮-೧೨)ಯಲ್ಲಿ ನಾಯಕಿ ಬೆಲ್ಲಾ ಸ್ವಾನ್ ಪಾತ್ರದಲ್ಲಿ ನಟಿಸಿದ ನಂತರ ಪ್ರಪಂಚದಾದ್ಯಂತ ಪ್ರಖ್ಯಾತರಾದರು;ಈ ಸರಣಿ ವಿಶ್ವಾದ್ಯಂತ ೩.೩ ಶತಕೋಟಿ ಡಾಲರ್ ಗಳಿಸಿತು . ಟ್ವಿಲೈಟ್ ಸರಣಿಯನ್ನು ಹೊರತುಪಡಿಸಿ ಅಡ್ವೆಂಚರ್ ಲ್ಯಾಂಡ್ (೨೦೦೯), ದ ರನ್ ಅವೇಸ್(೨೦೧೦), ಸ್ನೋ ವೈಟ್ ಮತ್ತು ಹಂಟ್ಸ್ಮನ್ (೨೦೧೨), ಆನ್ ದ ರೋಡ್(೨೦೧೨), ಕ್ಯಾಂಪ್ ಎಕ್ಸ್ ರೇ (೨೦೧೪), ಸ್ಟಿಲ್ ಅಲೀಸ್(೨೦೧೪) ಮತ್ತು ಈಕ್ವಲ್ಸ್(೨೦೧೫) ಚಿತ್ರಗಳಲ್ಲಿ ನಟಿಸಿದ್ದಾರೆ. ೨೦೧೦ರಲ್ಲಿ ಅವರು ಬಿ.ಎ.ಎಫ್.ಟಿ.ಎ ರೈಸಿಂಗ್ ಸ್ಟಾರ್ ಪ್ರಶಸ್ತಿಗಳಿಸಿದರು ಮತ್ತು ವೆಲ್ಕಮ್ ತೊ ದ ರಿಲೇಸ್(೨೦೧೦) ಚಿತ್ರದ ನಟನೆಗೆ ೨೦೧೧ರಲ್ಲಿ ಅತ್ಯುತ್ತಮ ನಟಿ ಎಂದು ಮಿಲನ್ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಪ್ರಶಸ್ತಿಯನ್ನು ನೀಡಲಾಯಿತು.೨೦೧೫ರಲ್ಲಿ ಸೀಜರ್ ಅವಾರ್ಡ್ ಸಹ ಪಡೆದು, ಸೀಸರ್ ಪ್ರಶಸ್ತಿ ಗೆದ್ದ ಮೊದಲ ಅಮೆರಿಕನ್ ನಟಿ ಎನಿಸಿಕೊಂಡರು. ಸ್ಟೀವರ್ಟ್ ೨೮.೫ ದಶಲಕ್ಷ ಡಾಲರ್ ಗಳಿಸುವ ಮೂಲಕ " ಹಾಲಿವುಡ್ ಟಾಪ್ ಅರ್ನರ್ಸ್ ಪಟ್ಟಿ ೨೦೧೦"ಗೆ ಸೇರ್ಪಡೆಗೊಂಡರು. ಫೋರ್ಬ್ಸ್ ನಿಯತಕಾಲಿಕೆಯ "ಹಾಲಿವುಡ್ಸ್ ಬೆಸ್ಟ್ ಆಕ್ಟರ್ಸ್ ಫಾರ ದ ಬಕ್" ಪಟ್ಟಿಯಲ್ಲಿ ಇವರಿಗೆ ಮೊದಲ ಸ್ಥಾನ ದೊರಕಿತು.ಇವರು ೩೪.೫ ಮಿಲಿಯನ್ ಡಾಲರ್ ಆದಾಯ ಗಳಿಸಿದಾಗ ಫೋರ್ಬ್ಸ್ ನಿಯತಕಾಲಿಕೆ ೨೦೧೨ರ ಅತೀ ಹೆಚ್ಚು ಸಂಭಾವನೆ ಪಡೆದ ನಟಿ ಎಂದು ಗುರುತಿಸಿದರು.ಅವರು ಶನೆಲ್ ಮತ್ತು ಬಾಲೆನ್ಸಿಯಾಗ ಫ್ಯಾಷನ್ ಜಾಹೀರಾತುಗಳಲ್ಲಿ ಕಾಣಿಸಿಕೊಂಡರು. ಸ್ಟೀವರ್ಟ್ ಕ್ಯಾಲಿಫೋರ್ನಿಯಾದ ಲಾಸ್ ಏಂಜಲೀಸ್ ನಲ್ಲಿ ಜಾನ್ ಸ್ಟೀವರ್ಟ್ ಹಾಗೂ ಜೂಲ್ಸ್ ಮನ್ ಸ್ಟೀವರ್ಟ್ ರ ಮಗಳಾಗಿ ಜನಿಸಿದಳು.ಅಲರು ಏಳನೇ ತರಗತಿಯವರೆಗೆ ಸ್ಥಳೀಯ ಶಾಲೆಗಳಲ್ಲಿ ಕಲಿತಿದ್ದರು. ಅವಳು ನಟನೆಯಲ್ಲಿ ತೊಡಗಿಸಿಕೊಂಡ ನಂತರ ಪ್ರೌಢಶಾಲಾ ಶಿಕ್ಷಣ ಮುಗಿಯುವವರೆಗೆ ಪತ್ರವ್ಯವಹಾರದ ಮೂಲಕ ಶಿಕ್ಷಣ ಮುಂದುವರೆಸಿದರು.ಸ್ಟೀವರ್ಟ್ ಲಾಸ್ ಏಂಜಲೀಸ್ ವಾಸಿಸುತ್ತಾರೆ.೨೦೦೮ರ ನವೆಂಬರ್ ವ್ಯಾನಿಟಿ ಫೇರ್ ಸಂದರ್ಶನದಲ್ಲಿ, ಸ್ಟೀವರ್ಟ್ ಅವರು ಮೈಕೆಲ್ ಆಂಗರ್ಯಾನೊ ಜೊತೆ ಸಂಬಂಧ ಹೊಂದಿರುವುದಾಗಿ ಹೇಳಿದರು. ೨೦೦೮ರಲ್ಲಿ ಟ್ವಿಲೈಟ್ ಸೆಟ್ನಲ್ಲಿ ಭೇಟಿಯಾದ ನಂತರ, ಸ್ಟೀವರ್ಟ್ ಸಹನಟ ರಾಬರ್ಟ್ ಪ್ಯಾಟಿನ್ಸನ್ ಜೊತೆ ಸಂಬಂಧ ಹೊಂದಿದ್ದರು; ಅದಾಗ್ಯೂ ದೀರ್ಘಕಾಲ ಈ ಇಬ್ಬರು ಸ್ಪಷ್ಟವಾಗಿ ಸಂಬಂಧವನ್ನು ಒಪ್ಪಿಕೊಳ್ಳಲಿಲ್ಲ.ಆದರೆ ಪಾಪರಾಜಿ ಛಾಯಾಚಿತ್ರಗಳು ಮತ್ತು ಪ್ರತ್ಯಕ್ಷದರ್ಶಿ ದಾಖಲೆಗಳು ಹೊರಬಂದಾಗ ಮಾಧ್ಯಮ ಮತ್ತು ಅಭಿಮಾನಿಗಳ ಗಮನ ತಮ್ಮತ್ತ ಸೆಳೆದರು.ಸ್ಟೀವರ್ಟ್ ತನ್ನ ಸ್ನೋ ವೈಟ್ ಮತ್ತು ಹಂಟ್ಸ್ಮನ್ ನಿರ್ದೇಶಕ ರೂಪರ್ಟ್ ಸ್ಯಾಂಡರ್ಸ್ ಜೊತೆ ಪ್ರೀತಿ ತೋರಿಸುತ್ತಿರುವ ಫೋಟೋಗಳು ಯು.ಎಸ್. ವೀಕ್ಲಿ ವಾರಪತ್ರಿಕೆಯಲ್ಲಿ ಪ್ರಕಟಗೊಂಡಾಗ ಮೊದಲ ಬಾರಿಗೆ ಜುಲೈ ೨೦೧೨ರಂದು ಅಧಿಕೃತವಾಗಿ ಪ್ಯಾಟಿನ್ಸನ್ ಜೊತೆ ತನ್ನ ಸಂಬಂಧವನ್ನು ಬಹಿರಂಗಪಡಿಸಿದರು.೨೦೧೪ರ ಸಂದರ್ಶನವೊಂದರಲ್ಲಿ ಪ್ಯಾಟಿನ್ಸನ್ ಹಾಗೂ ಸ್ಟೀವರ್ಟ್ ಬೇರೆಯಾಗಿರುವುದನ್ನು ಧೃಡಪಡಿಸಿದರು. ೨೦೧೬ರ ಮಾರ್ಚ್ ನಲ್ಲಿ, ಫ್ರೆಂಚ್ ಸಂಗೀತಗಾರ ಮತ್ತು ನಟ ಸೊಕೊ ಡಬ್ಲ್ಯೂ ಜೊತೆಗಿನ ಸಂದರ್ಶನದಲ್ಲಿ ಸ್ಟೀವರ್ಟ್ ಜೊತೆಯ ಸಂಬಂಧವನ್ನು ದೃಢಪಡಿಸಿದರು. ೨೦೧೬ರ ಮೇ ೫ರಂದು ಸ್ಟೀವರ್ಟ್ ಮತ್ತು ಸೊಕೊ ಡೇಟಿಂಗ್ ಮಾಡಿ ಕೆಲವು ತಿಂಗಳ ನಂತರ ಬೇರೆಯಾಗಿದ್ದಾರೆ ಎಂದು ಯುಎಸ್ ವೀಕ್ಲಿ ದೃಢಪಡಿಸಿತು. ಪ್ರಶಸ್ತಿಗಳು ಸೀಜ಼ರ್ ಅವಾರ್ಡ್ ಮಿಲಾನೊ ಫಿಲ್ಮ್ ಫೆಸ್ಟಿವಲ್ ಅವಾರ್ಡ್ ಯಂಗ್ ಆರ್ಟಿಸ್ಟ್ ಅವಾರ್ಡ್ ಬಿ.ಎ.ಎಫ್.ಟಿ.ಎ ರೈಸಿಂಗ್ ಸ್ಟಾರ್ ಅವಾರ್ಡ್ ನ್ಯಾಷನಲ್ ಸೊಸೈಟಿ ಆಫ್ ಫಿಲ್ಮ್ ಕ್ರಿಟಿಕ್ಸ್ ಅವಾರ್ಡ್ ನ್ಯೂ ಯಾರ್ಕ್ ಫಿಲ್ಮ್ ಕ್ರಿಟಿಕ್ಸ್ ಅವಾರ್ಡ್ ಬೋಸ್ಟನ್ ಸೊಸೈಟಿ ಆಫ್ ಫಿಲ್ಮ್ ಕ್ರಿಟಿಕ್ಸ್ ಅವಾರ್ಡ್