ಪಶ್ವಿಮ ಘಟ್ಟಗಳ ಸುಂದರ ಪ್ರದೇಶ ಮಲೆನಾಡು


ಆಗುಂಬೆ ಘಟ್ಟ ಪ್ರದೇಶಗಳಲ್ಲಿ ಅತೀ ಸುಂದರವಾದ ಮಳೆ ಕಾಡನ್ನು ಹೊಂದಿರುವ ಒಂದು ಹಳ್ಳಿ. ಆ ಮುಂಜಾವಿನ ಹಿಮ ಮುಸ್ಸಂಜೆಯ ಸೂರ್ಯಾಸ್ತಮ, ಎಲ್ಲವೂ ಈಘಟ್ಟದ ಸೌಂದರ್ಯವನ್ನು ಇನ್ನೂ ಹೆಚ್ಚಿಸಿವೆ. ಆಗುಂಬೆಯಿಂದ ತೀರ್ಥಹಳ್ಳಿಯೆಡೆಗೆ ಸಾಗುವ ದಾರಿಯಲ್ಲಿ ಸಿಗುವುದೇ ಕುಂದ್ರಾದಿ ಬೆಟ್ಟ. ಜೈನರ ಒಂದು ದೇವಾಲಯವನ್ನು ಹೊಂದಿರುವ ಬೆಟ್ಟ ನೋಡಲು ಎಷ್ಟು ಎತರ ಸುಂದರವೋ ಅಷ್ಟೇ ಭಯಾನಕವೂ ಕೂಡಾ. ಹತ್ತಿರಾಲ್ಲಿ ಮನೆಗಳ ಸುಳಿವು ಕೂಡಾ ಇಲ್ಲ. ಹಾಗೆ ತೀರ್ಥಹಳ್ಳಿಯಿಂದ ೩-೪ ಕಿ.ಮೀ. ದೂರದಲ್ಲಿ ಸಿಗುವುದೇ ಭೀಮನಕಟ್ಟೆಯ ತೂಗು ಸೇತುವೆ. ಭೀಮನಕಟ್ಟೆ ಎಂಬುವುದು ಮಹಾಭಾರತ ಕಾಲದ ಐತಿಹಾಸಿಕ ಸ್ಥಳ. ತೀರ್ಥಹಳ್ಳಿಯ ಹೃದಯ ಭಾಗದಲ್ಲಿ ಹರಿಯುತ್ತಿರುವ ನದಿ ತುಂಗಾನದಿ ಶೃಂಗೇರಿಯಲ್ಲಿ ಉಗಮಗೊಂಡ ತೀರ್ಥಹಳ್ಳಿ. ಶಿವಮೊಗ್ಗದ ಮೂಲಕ ಹರಿದು ಮುಂದೆ ಭದ್ರಾ ನದಿಯೊಂದಿಗೆ ಸಂಗಮವಾಗುತ್ತದೆ. ಪ್ರತಿ ವರ್ಷ ಎಳ್ಳಮವಾಸ್ಯೆಯ ದಿನ ಈ ನದಿಯಲ್ಲಿರುವ ಪರಶುರಾಮನ ಕೊಂಡದಲ್ಲಿ ಸಾವಿರಾರು ಭಕ್ತಾದಿಗಳು ತೀರ್ಥಸ್ನಾನ ಗೈಯುತ್ತಾರೆ. ಮತ್ತು ಮೂರು ದಿನಗಳ ಸಾಂಭ್ರಮಿಕ ಜಾತ್ರೆಯನ್ನು ನಡೆಸಲಾಗುತ್ತದೆ. ಭಕ್ತಾದಿಗಳು ತೀಥಸ್ನಾನಗೈಯುತ್ತಾರೆ ಮತ್ತು ಮೂರು ದಿನಗಳ ಸಾಂಭ್ರಮಿಕ ಜಾತ್ರೆಯನ್ನು ನಡೆಸಲಾಗುತ್ತದೆ. ಹಾಗೆಯೇ ಕವಲೇದುರ್ಗ, ಕುಪ್ಪಳ್ಳಿ ಮುಂತಾದ ಅನೇಕ ಪ್ರವಾಸಿ ತಾಣಗಳನ್ನು ತೀರ್ಥಹಳ್ಳಿ ಹೊಂದಿದೆ. ಕೇವಲ ಪ್ರವಾಸಿ ತಾಣಗಳನ್ನು ಮಾತ್ರ ಹೊಂದಿರದೆ ಶೈಕ್ಷಣಿಕ ಕ್ಷೇತ್ರದಲ್ಲಿ ಕೂಡಾ ಉತ್ತಮವಾಗಿದೆ. ಎರಡು ಪದವಿ ಕಾಲೇಜು, ಮೂರು ಪದವಿ ಪೂರ್ವ ಕಾಲೇಜುಗಳು, ಐ.ಟಿ.ಐ. ಮತ್ತು ಡಿಪ್ಲೋಮ ಕಾಲೇಜುಗಳು ಹಾಗೂ ಅನೇಕ ಪ್ರಸಿದ್ಧ ಶಾಲೆಗಳನ್ನು ತನ್ನ ಮಡಿಲಲ್ಲಿ ಇರಿಸಿಕೊಂಡಿದೆ. ಹೀಗೆ ತೀಥಹಳ್ಳಿ ತಾಲೂಕು ಒಂದು ಸುಂದರ, ಕೋಮಲ ಹಾಗೂ ಮನೋಹರ ತಾಣವಾಗಿದೆ.