ಸದಸ್ಯ:Chirag suvarna10/sandbox
ಏರ್ ಇಂಡಿಯಾ ಅಲ್ಲ ವಿಮೆನ್ ಇಂಡಿಯಾ
ದೇಶದ ರಾಜಧಾನಿ ದಿಲ್ಲಿಯಿಂದ ಸ್ಯಾನ್ ಫ್ರಾನ್ಸಿಸ್ಕೋಗೆ ಮಹಿಳೆಯರೇ ನಡೆಸುವ ಹಾಗೂ ಬೆಂಬಲಿಸುವ ವಿಶ್ವದ ಅತಿ ದೀರ್ಘ ಅಂತರದ ವಿಮಾನವನ್ನು ತಾನು ಹಾರಿಸಿದ್ದೇನೆಂದು ರಾಷ್ಟ್ರೀಯ ವಿಮಾನ ಸಂಸ್ಥೆ ಏರ್ ಇಂಡಿಯಾ ಸೋಮವಾರ ಹೇಳಿದೆ. ಸುಮಾರು ೧೭ ತಾಸುಗಳಲ್ಲಿ ೧೪,೫೦೦ ಕೀ.ಮೀ. ದೂರ ಸಂಚರಿಸಿರುವ ಈ ವಿಮಾನವು ಅಂತರಾಷ್ಟ್ರಿಯ ಮಹಿಳಾ ದಿನ ಸಮಾರಂಭಗಳ ಅಂಗವಾಗಿ ಕಾರ್ಯಚರಿಸಿದೆ. ತಡೆ ರಹಿತ ವಿಮಾನವು ಮಾ .೬ ರಂದು ಹೊಸದಿಲ್ಲಿಯಿಂದ ಸ್ಯಾನ್ ಫ್ರಾನ್ಸಿಸ್ಕೊಗೆ ಪ್ರಯಾಣಿಸಿದೆ. ಮೊದಲ ಬಾರಿಗೆ ಈ ವರ್ಷ, ವಿಶ್ವದ ಅತಿ ಉದ್ದದ ವಿಮಾನದಲ್ಲಿ ಕಾಕ್ ಪೀಟ್ ಸಿಬ್ಬಂದಿ, ವಿಮಾನ ಸಂಚಾರ ನಿಯಂತ್ರಣ (ಎಟಿಸಿ) ಹಾಗೂ ಇಡೀ ನಿಲ್ದಾಣ ನಿಭಾವಣೆ ಸಿಬ್ಬಂದಿ ಸಂಪೂರ್ಣ ಮಹಿಳೆಯರಾಗಿದ್ದಾರು.