ಚೇತನ್.ಬಿ
Born
ಚೇತನ್.ಬಿ

ಬೆಂಗಳೂರು
Nationalityಭಾರತ
Educationಬಿಕಾಂ
Occupationವಿದ್ಯಭ್ಯಾಸ

ಹೆಸರು ಬದಲಾಯಿಸಿ

ನನ್ನ ಹೆಸರು ಚೇತನ್.ಬಿ ನನ್ನ ತಂದೆ ನಿತ್ಯನಂದ ತಾಯಿ ಜಯ ಲಕ್ಷ್ಮಿ

ಜನನ ಬದಲಾಯಿಸಿ

ನಾನು ಹುಟ್ಟಿದು ಬೆಂಗಳೂರಿನಲ್ಲಿ ನಮ್ಮ ಊರು ಕೊಡಗು ಜಿಲ್ಲೆ ವಿರಾಜ್ ಪೆಟ್ ತಾಲೂಕ ಬಲಮುರಿ

ವಿದ್ಯಭ್ಯಾಸ ಬದಲಾಯಿಸಿ

ನಾನು ಆಳ್ವಾಸ್ ಪಿಯು ಕಾಲೇಜಿನಿಂದ ಬಂದಿದ್ದೇನೆ. ನಾನು ಈಗ ಕ್ರೈಸ್ಟ್ ಯೂನಿರ್ವಸಿಟಿನಲ್ಲಿ ೨ನೇ ಬಿಕಾಂನಲ್ಲಿ ಓದುತ್ತಿದ್ದೇನೆ. ಆಳ್ವಾಸ್ ಪಿಯು ಕಾಲೇಜಿನಲ್ಲಿ ತುಂಬಾ ಕಟ್ಟುನಿಟ್ಟಿನ ನಿಯಮಗಳಿವೆ. ಆದರೆ ಆಳ್ವಾಸ್ ಕಾಲೇಜಿಗೆ ಹೋಲಿಕೆ ಮಾಡಿದರೆ ಕ್ರೈಸ್ಟ್ ಯೂನಿರ್ವಸಿಟಿನಲ್ಲಿ ತುಂಬಾ ಸ್ವತಂತ್ರವಿದೆ. ನನಗೆ ಈ ಕ್ರೈಸ್ಟ್ ಯೂನಿರ್ವಸಿಟಿನಲ್ಲಿ ಓದುವುದು ತುಂಬಾ ಸುಲಭವೆನಿಸುತ್ತದೆ. ಕಾರಣ ನಾನು ಆಳ್ವಾಸ್ ಕಾಲೇಜಿನಲ್ಲಿ ಓದಿರುವುದು. ನಮ್ಮ ಆಳ್ವಾಸ್ ಕಾಲೇಜ್ ಕ್ರೀಡೆಗೆ ಹೆಸರುವಾಸಿಯಾದ ಕಾಲೇಜ್ ಕಾರಣ ನಮ್ಮ ಆಳ್ವಾಸ್ ಪಿಯು ಕಾಲೇಜಿನಲ್ಲಿ ಕ್ರೀಡೆಗೆ ಹೆಚ್ಛು ಮಹತ್ವವನ್ನು ನೀಡುತ್ತಿದ್ದರು.ನಮ್ಮ ಕಾಲೇಜಿನಿಂದ ಪ್ರತಿ ವರ್ಷ ರಾಷ್ಟ್ರಮಟ್ಟದ ಕ್ರೀಡೆನಲ್ಲಿ ಭಾಗವಹಿಸುತ್ತಿದ್ದರು. ನಮ್ಮ ಆಳ್ವಾಸ್ ಕಾಲೇಜಿನಲ್ಲಿ ಎಲ್ಲಾ ಕ್ರೀಡೆಗೂ ಮಹತ್ವ ನೀಡುತ್ತಿದ್ದರು ಹಾಗೂ ಪ್ರೋತ್ಸಾಹಿಸುತ್ತಿದ್ದರು. ನಾನು ಕಬಡ್ಡಿ ಕ್ರೀಡೆನಲ್ಲಿ ಭಾಗವಹಿಸುತ್ತಿದ್ದೆನು. ಆದರೆ ಕ್ರೈಸ್ಟ್ ಯೂನಿರ್ವಸಿಟಿನಲ್ಲಿ ಕಬಡ್ಡಿ ಎಂಬ ಕ್ರೀಡೆಯೇ ಇಲ್ಲ ಆದ್ದರಿಂದ ನಾನು ಕ್ರೈಸ್ಟ್ ಯೂನಿರ್ವಸಿಟಿನಲ್ಲಿ ಕ್ರೀಡೆನಲ್ಲಿ ಭಾಗವಹಿಸಿಲ್ಲ. ನಿಮಗೆ ಗೊತ್ತಾ? ಕ್ರೈಸ್ಟ್ ಯೂನಿರ್ವಸಿಟಿನಲ್ಲಿ ರಾಷ್ಟ್ರಮಟ್ಟದ ಕಬಡ್ಡಿ ಆಟಗಾರರಿದ್ದಾರೆ. ಆದರೆ ಈ ಯೂನಿರ್ವಸಿಟಿನಲ್ಲಿ ಕಬಡ್ಡಿ ಕ್ರೀಡೆಯೇ ಇಲ್ಲ. ಕ್ರೈಸ್ಟ್ ಯೂನಿರ್ವಸಿಟಿನಲ್ಲಿ ಕಬಡ್ಡಿ ಕ್ರೀಡೆಯನ್ನು ಜಾರಿಗೆ ತಂದರೆ ತುಂಬಾ ವಿದ್ಯಾರ್ಥಿಗಳಿಗೆ ಸಹಾಯವಾಗುತ್ತದೆ. ಆದ್ದರಿಂದ ನಾನು ಈ ಮನವಿ ಮಾಡಿಕೊಳ್ಳುವುದೇನೆಂದರೆ ಕಬಡ್ಡಿ ಕ್ರೀಡೆಯನ್ನು ಜಾರಿಗೆ ತನ್ನಿ. ನನಗೆ ಈ ಕಾಲೇಜ್ ತುಂಬಾ ಇಷ್ಟ ಆಯ್ತು ಏಕೆಂದರೆ ನನಗೆ ಒಳ್ಳೆಯ ಶಿಕ್ಷಕರು ಸಿಕ್ಕಿದ್ದಾರೆ ಹಾಗೂ ತುಂಬಾ ಒಳ್ಳೆಯ ಸ್ನೇಹಿತರು ಸಹ ಸಿಕ್ಕಿದ್ದಾರೆ. ನನಗೆ ಕನ್ನಡದವರೆಂದರೆ ತುಂಬಾ ಪ್ರೀತಿ ಕಾರಣ ಕನ್ನಡದವರ ಮನಸ್ಸು ತುಂಬಾ ಮೃದು. ಎಲ್ಲದರಲ್ಲೂ ಭಾಗಿಯಾಗುತ್ತಾರೆ ಹಾಗೂ ನಮ್ಮ ಕಷ್ಟಸುಖಗಳನ್ನು ಹಂಚಿಕೊಳ್ಳುತ್ತಾರೆ. ಕ್ರೈಸ್ಟ್ ಯೂನಿರ್ವಸಿಟಿಯ ಬಗ್ಗೆ ಹೇಳಬೇಕಂದರೆ ಒಬ್ಬ ವ್ಯಕ್ತಿ ಉತ್ತಮವಾಗಿ ಬೆಳೆಯಲು ಬೇಕಾದ ಎಲ್ಲಾ ಗುಣಗಳು ಈ ಯೂನಿರ್ವಸಿಟಿನಲ್ಲಿವೆ. ನಾನು ಪಿಯುಸಿ ನಂತರ ಕ್ರೈಸ್ಟ್ ಯೂನಿರ್ವಸಿಟಿಗೆ ಸೇರಬೇಕೆಂಬ ಆಸೆ ಇತ್ತು ನನ್ನ ಆಸೆಯಂತೆ ನಾನು ಕ್ರೈಸ್ಟ್ ಯೂನಿರ್ವಸಿಟಿನಲ್ಲಿ ಓದುತ್ತಿದ್ದೇನೆ ಇದರಿಂದ ನನಗೆ ತುಂಬಾ ಸಂತೋಷವಾಗಿದೆ.

ಕಥೆ ಬದಲಾಯಿಸಿ

ನಿಮಗೆ ನಮ್ಮ ಊರಿನಲ್ಲಿ ನಡೆದ ಒಂದು ಘಟನೆಯನ್ನು ನಿಮ್ಮ ಮುಂದೆ ಹೇಳಲು ಬಯಸುತ್ತೇನೆ. ಒಂದು ಮನೆನಲ್ಲಿ ಹೊಸದಾಗಿ ಮದುವೆಯಾದ ದಂಪತಿಗಳು ವಾಸಿಸುತ್ತಿರುತ್ತಾರೆ. ಇವರಿಗೆ ಒಂದು ಚಿಕ್ಕ ಮಗು ಇರುತ್ತದೆ. ಕೆಲವು ದಿನಗಳ ಬಳಿಕ ಗಂಡ ತೀರಿಕೊಳ್ಳುತ್ತಾನೆ. ಗಂಡ ತೀರಿಕೊಂಡ ನಂತರ ಮಗುವನ್ನು ತಾಯಿ ಒಬ್ಬಳೇ ಪ್ರೀತಿಯಿಂದ ಸಾಕುತ್ತಾಳೆ. ತಾಯಿಗೆ ಮಗುವೆಂದರೆ ಪಂಚಪ್ರಾಣ ಅದೇ ರೀತಿ ಮಗುವಿಗು ತಾಯಿ ಕಂಡರೆ ತುಂಬಾ ಪ್ರೀತಿ. ತಾಯಿ ಮಗು ಇಬ್ಬರು ಒಬ್ಬರನ್ನು ಬಿಟ್ಟು ಒಬ್ಬರು ಇರುತ್ತಿರಲಿಲ್ಲ. ತಾಯಿ ತನ್ನ ಮಗುವನ್ನು ಶಾಲೆಗೆ ಸೇರಿಸುತ್ತಾಳೆ. ತಾಯಿ ಶಾಲೆಯಿಂದ ಮಗ ಮನೆಗೆ ಬರುವವರೆಗೆ ಮನೆಯ ಬಾಗಿಲಿನಲ್ಲೆ ಕಾಯುತ್ತಿರುತ್ತಿದ್ದಳು. ಮಗುವು ಸಹ ಶಾಲೆ ಯಾವಾಗ ಬಿಡುತ್ತದೆ ನಾನು ತಾಯಿಯನ್ನು ಯಾವಾಗ ನೋಡುತ್ತೇನೆ ಎಂದು ತವಕ ಪಡುತ್ತಿತ್ತು. ಶಾಲೆ ಬಿಟ್ಟ ತಕ್ಷಣ ಮಗು ಮನೆಗೆ ಹೋಡಿ ಬಂದು ತನ್ನ ತಾಯಿಯನ್ನು ತಬ್ಬಿಕೊಳ್ಳುತ್ತಿದ್ದನು. ಮಗನು ಶಾಲೆಯ ವಿದ್ಯಾಭ್ಯಾಸ ಮುಗಿದ ನಂತರ ಕಾಲೇಜಿಗೆ ಸೇರುತ್ತಾನೆ. ಕಾಲೇಜಿನಲ್ಲಿ ಕೆಲವು ವಿದ್ಯಾರ್ಥಿಗಳು ಕೆಟ್ಟ ಚಟಗಳನ್ನು ಕಲಿತ್ತಿದ್ದರು. ಅಂದರೆ ಧೂಮಪಾನ ಮಾಡುವುದು, ಕುಡಿಯುವುದನ್ನು ಕಲಿತ್ತಿದ್ದರು. ಇವನು ಸಹ ಅವರ ಗೆಳೆತನವನ್ನು ಮಾಡುತ್ತಾನೆ ಹಾಗೂ ಅವರ ಜೊತೆ ಎಲ್ಲಾ ಕೆಟ್ಟ ಚಟಗಳನ್ನು ಕಳಿಯುತ್ತಾನೆ. ಈಗಿದ್ದಾಗ ತಾಯಿಯ ಮೇಲಿನ ಪ್ರೀತಿ ಕಡಿಮೆಯಾಗಿ ಮನೆಗೆ ತಡವಾಗಿ ಬರುತ್ತಾನೆ. ಆದರೆ ತಾಯಿಗೆ ಗೊತ್ತಿರುವುದ್ದಿಲ್ಲ ಮಗ ಯಾಕೆ ತಡವಾಗಿ ಬರುತ್ತಿದ್ದಾನೆ ಅಂತ. ತಾಯಿ ತಿಳಿದುಕೊಂಡಿರುತ್ತಾಳೆ ಮಗನಿಗೆ ಕಾಲೇಜಿನಲ್ಲಿ ತುಂಬಾ ಕೆಲಸ ಇರಬೇಕು ಅಂತ. ಹೀಗೆ ಒಂದು ದಿವಸ ಮಗ ಹಾಗೂ ಅವನ ಸೇಹಿತರು ತುಂಬಾ ಕುಡಿದು ಮನೆಗೆ ತಡವಾಗಿ ಬರುತ್ತಾನೆ. ತಾಯಿ ಗಾಬರಿಗೊಂಡು ಮಗನ ಹತ್ತಿರ ಬಂದು ಕೇಳುತ್ತಾಳೆ ಯಾಕೆ ಮಗ ಇಷ್ಟು ತಡವಾಗಿ ಬರುತ್ತಿದ್ದಿರಿ ಅಂತ. ತಾಯಿಗೆ ಮಗನ ಬಾಯಿಯಿಂದ ಸಾರಾಯಿ ವಾಸನೆ ಬರುತ್ತದೆ. ಆಗ ತಾಯಿ ಮಗ ಕುಡಿದು ಬಂದಿದ್ದೀಯಾ? ಅಂತ. ಆಗ ತಾಯಿ ಮಗನಿಗೆ ಹೇಳುತ್ತಾಳೆ ಈ ನಿನ್ನ ಕೆಟ್ಟ ಸ್ನೇಹಿತರೊಂದಿಗೆ ಗೆಳೆತನ ಮಾಡಬೇಡ ಸರಿಯಿಲ್ಲ ಅವರು. ನೀನು ಅವರ ಜೊತೆ ಗೆಳೆತನ ಮಾಡಿದರೆ ನೀನು ಸಹ ಕೆಟ್ಟು ಹೋಗುತ್ತೀಯಾ ಎಂದು ತಾಯಿ ಹೇಳಿದಳು. ಈ ಮಾತನ್ನು ಕೇಳಿದ ಮಗನ ಸ್ನೇಹಿತರಿಗೆ ತುಂಬಾ ಕೋಪ ಬಂತು. ಆಗ ಸ್ನೇಹಿತರೆಲ್ಲಾ ಅವನಿಗೆ ಹೇಳುತ್ತಾರೆ, ಏನೋ ಮಗ ನಿಮ್ಮ ತಾಯಿ ನಮಗೆ ಕೆಟ್ಟವರು ಅಂತ ಬೈಯುತ್ತಿದ್ದಾಳೆ. ನಾವು ಇನ್ನು ಒಂದು ಕ್ಷಣ ಕೂಡ ಇರುವುದಿಲ್ಲ ನಾವು ಹೋಗುತ್ತೇವೆ ಎಂದು ಹೇಳುತ್ತಾರೆ. ಸ್ನೇಹಿತರ ಮಾತನ್ನು ಕೇಳಿದ ಇವನಿಗೆ ತಾಯಿಯ ಮೇಲೆ ತುಂಬಾ ಕೋಪ ಬರುತ್ತದೆ. ಆಗ ತುಂಬಾ ಕೋಪ ಮಾಡಿಕೊಂಡು ಮನೆ ಒಳಗಡೆ ಇದ್ದ ಮಚ್ಚನ್ನು ತಂದು ತಾಯಿಯ ಹೊಟ್ಟೆಯನ್ನು ಬಗೆದು ಕರುಳನ್ನು ಕಿತ್ತಿ ಮರಕ್ಕೆ ಎಸೆಯುತ್ತಾನೆ. ತಾಯಿ ತನ್ನ ಪ್ರಾಣವನ್ನು ಬಿಡುತ್ತಾಳೆ. ಆದರೆ ಮರಕ್ಕೆ ಸಿಕ್ಕಿಕೊಂಡಿದ್ದ ತಾಯಿಯ ಕರುಳು ಕಂದ ಕಂದ ಎಂದು ಬಡಿದುಕೊಳ್ಳುತ್ತಾ ಇರುತ್ತದೆ. ಇದರಿಂದ ನಾವು ತಿಳಿದುಕೊಳ್ಳಬಹುದು ತಾಯಿಯ ಮಮತೆ ಎಂತದ್ದು ಹಾಗೂ ಈ ಪ್ರಪಂಚದಲ್ಲಿ ಮಗನು ಕೆಟ್ಟವನಾಗಿರಬಹುದು ಆದರೆ ತಾಯಿ ಕೆಟ್ಟವಳಾಗಿರಲು ಸಾದ್ಯವಿಲ್ಲ. ನನಗೆ ಇಷ್ಟವಾದ "ನಗೆಹನಿ"ಯೊಂದನ್ನು ನಿಮಗೆ ಹೇಳಲು ಬಯಸುತ್ತೇನೆ. ಒಂದು ಮನೆನಲ್ಲಿ ರಾಮಣ್ಣ ಹಾಗೂ ರಾಮಣ್ಣನ ಹೆಂಡತಿ ವಾಸವಾಗಿರುತ್ತಾರೆ. ಕೆಲವು ದಿನಗಳ ಬಳಿಕ ರಾಮಣ್ಣನ ಹೆಂಡತಿ ತೀರಿಕೊಳ್ಳುತ್ತಾಳೆ. ಹೆಂಡತಿ ಸತ್ತಾಗ ರಾಮಣ್ಣ ಹೆಣದ ಮುಂದೆ ಕುಳಿತು ಬಟ್ಟೆ ಅರಿದುಕೊಂಡು ಒದ್ದಾಡಿ, ಉರುಳಾಡಿ ಜೋರಾಗಿ ಅಳುತ್ತಿರುತ್ತಾನೆ. ಆಗ ಊರ ಜನರು ಹಾಗೂ ಊರಿನ ಗೌಡ ಬಂದಿರುತ್ತಾನೆ. ಗೌಡ ರಾಮಣ್ಣ ಜೋರಾಗಿ ಅಳುವುದನ್ನು ನೋಡಿ ಅವನ ಬಳಿ ಬಂದು ಕೆನ್ನೆಗೆ ಒಡೆದು ಕೇಳುತ್ತಾನೆ, ರಾಮಣ್ಣ ನಿನ್ನ ತಂದೆ ತಾಯಿ ಸತ್ತಾಗ ಇಷ್ಟೊಂದು ಅಳಲಿಲ್ಲ ಈಗ ಹೆಂಡತಿ ಸತ್ತಾಗ ಅಳುತ್ತಿದ್ದಿಯಾ ಎಂದು ಕೇಳುತ್ತಾನೆ. ಆಗ ರಾಮಣ್ಣ ಕೋಪದಿಂದ ಗೌಡನಿಗೆ ಹೇಳುತ್ತಾನೆ ಇದರಲ್ಲಿ ನಿಮ್ಮ ತಪ್ಪು ಹಾಗೂ ಊರಿನ ಜನರ ತಪ್ಪಿದೆ ಎಂದು ಹೇಳುತ್ತಾನೆ. ಆಗ ಊರಿನ ಗೌಡ ಹಾಗಾದ್ರೆ ಆ ತಪ್ಪೇನು ಅಂತ ಹೇಳು ಎಂದು ಕೇಳುತ್ತಾನೆ. ಆಗ ರಾಮಣ್ಣ ಹೇಳುತ್ತಾನೆ ೬ ತಿಂಗಳ ಹಿಂದೆ ನನ್ನ ತಂದೆ ತೀರಿಕೊಂಡರು ಆಗ ನನಗೆ ನೋವಾಗಲಿಲ್ಲ ಏಕೆಂದರೆ ಊರಿನ ಗಂಡಸರೆಲ್ಲಾ ಬಂದು ನನ್ನೆ ನಿನ್ನ ತಂದೆ ಎಂದು ತಿಳಿದುಕೊ ಅಂತ ಹೇಳಿದರು. ನನ್ನ ತಂದೆ ತೀರಿಕೊಂಡ ಚಿಂತೆಯಲ್ಲಿ ನನ್ನ ತಾಯಿ ತೀರಿ ಕೊಂಡಳು, ಆಗಲೂ ಸಹ ನನಗೆ ನೋವಾಗಲಿಲ್ಲ ಕಾರಣ ಊರಿನ ಹೆಂಗಸರೆಲ್ಲಾ ಬಂದು ನನ್ನೆ ತಾಯಿ ಎಂದು ತಿಳಿದುಕೊ ಅಂತ ಹೇಳಿದರು. ಆದರೆ ಈಗ ನನ್ನ ಹೆಂಡತಿ ತೀರಿಕೊಂಡಿದ್ದಾಳೆ ಯಾರೂ ಸಹ ಮುಂದೆ ಬರುತಿಲ್ಲ. ಈ ನಗೆಹನಿ ನಿಮಗೆ ನಗು ತಂದಿರಬೇಕೆಂದು ನಾನು ಭಾವಿಸಿದ್ದೇನೆ. ನಿಮಗೆ ಅಮ್ಮನ ಬಗ್ಗೆ ಒಂದು ಕವನವನ್ನು ಹೇಳುತ್ತೇನೆ. ನೋವು ತಿಂದು ಹೆತ್ತು. ಜೀವ ತೇದು ಹಾಕುವಳು ತುತ್ತು. ಪ್ರೀತಿಯಿಂದ ಕೊಟ್ಟ ಮುತ್ತು. ನಮಗೆ ಏನಾದರೂ ಬಂದರೆ ಕುತ್ತು. ಕೊರಗುವಳು ಅತ್ತು ಅತ್ತು. ಅವಳು ಬೇಕೆ ಬೇಕು ಯಾವತ್ತು. ಮನುಜ ತಿಳಿದುಕೊ ಇದೊಂದು ಮಾತು. ಹತ್ತು ದೇವರನ್ನು ಪೂಜಿಸುವ ಮುನ್ನ ಹೆತ್ತ ತಾಯಿಯನ್ನು ಪೂಜಿಸೊ ಚಿನ್ನ. ಹುಟ್ಟಿದ ಊರು ಮರೆಯಕ್ಕಾಗಲ್ಲ. ತಾಯಿಯ ಋಣ ತೀರಿಸುವುದಕ್ಕಾಗಲ್ಲ. ಬಯಸದೆ ಬಂದ ಪ್ರೀತಿಯನ್ನು ಬಿಡಕ್ಕಾಗಲ್ಲ. ಜೀವಕ್ಕೆ ಜೀವ ಆಗಿರೋ ನಿಮ್ಮ ಸ್ನೇಹವನ್ನು ಖಂಡಿತ ಮಿಸ್ ಮಾಡಕ್ಕಾಗಲ್ಲ.

 This user is a member of WikiProject Education in India
 This user is a member of WikiProject Education in India



ಉಪಪುಟಗಳು ಬದಲಾಯಿಸಿ

In this ಸದಸ್ಯspace:

ಸದಸ್ಯರ ಚರ್ಚೆಪುಟ:
Chethan bakilana



ಉಪಪುಟಗಳು ಬದಲಾಯಿಸಿ

In this ಸದಸ್ಯspace:

ಸದಸ್ಯರ ಚರ್ಚೆಪುಟ:
Chethan bakilana