ಸದಸ್ಯ:Chayaveera/sandbox2
ತೀ ನಂ ಶ್ರೀ
ಬದಲಾಯಿಸಿಪೀಠಿಕೆ
ಬದಲಾಯಿಸಿತೀರ್ಥಪುರದ ನಂಜುಂಡಯ್ಯ ಶ್ರೀಕಂಠಯ್ಯ ಎಂಬ ಹೆಸರಿನ ಇವರನ್ನು ತೀ.ನಂ.ಶ್ರೀ ಎಂದೇ ಕರೆಯುತ್ತಿದ್ದದು ರೂಢಿ. ಕನ್ನಡ ನವೋದಯದ ಕಾಲದಲ್ಲಿ ಶ್ರೀ ಎಂಬ ಸಂಕ್ಷೇಪದಿಂದ ಪ್ರಸಿದ್ದರಾಗಿದ್ದ ಮೂವರಲ್ಲಿ ತೀ.ನಂ.ಶ್ರೀ ಮೂರನೆಯವರು. ಪ್ರಸಿದ್ಧಿಯಲ್ಲಿ ಬಿ.ಎಂ.ಶ್ರೀ ಅವರಿಗೆ ಮಾತ್ರ ಎರಡನೆಯವರು. ಕನ್ನಡ ಸಾಹಿತ್ಯಕ್ಕೆ ಮಹಾ ಕವಿಯೊಬ್ಬರನ್ನು ಕೂಟ್ಟ ಕೀರ್ತಿ ಶಾನುಭೋಗರ ಕುಟುಂಬಕ್ಕೆ ಸಲ್ಲುತ್ತದೆ. ಹಾಗೆಯೇ ಹೊಸಗನ್ನಡದ ಸಾಹಿತ್ಯದ ಇತಿಹಾಸದ ವಿದ್ವತ್ತು, ವಾಗ್ಮಿತೆ, ಶಿಕ್ಷಕನಾಗಿ ಪಡೆದ ಜನಪ್ರಿಯತೆ ಮತ್ತು ಮಾನವೀಯವಾದ ನಡವಳಿಕೆಗೆ ಹೆಸರಾದ ತೀ.ನಂ.ಶ್ರೀ ಅವರನ್ನು ಕೊಟ್ಟ ಕೀರ್ತಿ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ತೀರ್ಥಪುರ ಎಂಬ ಹಳ್ಳಿಯ ಒಂದು ಸಾಧಾರಣ ಶಾನುಭೋಗರ ಕುಟುಂಬಕ್ಕೆ ಸಲ್ಲುತ್ತದೆ.
ಮೂಲ
ಬದಲಾಯಿಸಿಚಿಕ್ಕನಾಯಕನಹಳ್ಳಿ ವಿಜಯನಗರ ಸಾಮ್ರಾಜ್ಯ ಒಡೆದ ಮೇಲೆ ತಲೆ ಎತ್ತಿಕೂಂಡ ಪಾಳೆಯ ಪಟ್ಟುಗಳಲ್ಲಿ ಒಂದಾದ ಹಾಗಲವಾಡೆಯ ಚರಿತೆಯ ಮೂಲಕ ಪರಿಚಿತವಾಗಿದೆ. ಚಿಕ್ಕನಾಯಕನ ಹಳ್ಳಿಯ ಪೂರ್ವಕ್ಕೆ ಸುಮಾರು 17 ಮೈಲಿ ದೂರವಿದ್ದ ಹಾಗಲವಾಡಿ ಹಾಳಾಗಲು ಆ ಸಂಸ್ಥಾನದ ಮಂತ್ರಿಯಾಗಿದ್ದ ಬ್ರಾಹ್ಮಣ ಕುಟುಂಬದವರು ಬಂದು ತೀರ್ಥಪುರದಲ್ಲಿ ನೆಲಸಿದರಂತೆ. ಇವರೇ ತೀ.ನಂ ಶ್ರೀ ಅವರ ಪೂರ್ವಜರು.
ಬಾಲ್ಯ
ಬದಲಾಯಿಸಿಹಾಗಲವಾಡಿ ಬ್ರಾಹ್ಮಣ ಕುಟುಂಬದ ಹಿರಿಯರಾದ ಶಾನುಭೋಗ ನಂಜುಂಡಯ್ಯನವರು ತೀನಂಶ್ರೀ ಅವರ ತಂದೆ. ತಾಯಿ ಶ್ರೀಮತಿ ಭಾಗೀರಥಮ್ಮ. ತೀ.ನಂ ಶ್ರೀ ಜನಿಸಿದ್ದು 1906ರಲ್ಲಿ ಹುಟ್ಟಿದ ಒಂಭತ್ತು ವರ್ಷಕ್ಕೆ ಅವರ ತಾಯಿಯನ್ನು ಕಳೆದುಕೂಂಡರು. ಸೋದರಿ ಒಬ್ಬಳೂಡನೆ ಬೆಳೆದದ್ದು ವಿಧವೆಯಾದ ತಮ್ಮ ಸೋದರತ್ತೆಯ ಆರೈಕೆಯಲ್ಲಿ. ಮನೋವೈಫಲ್ಯಕ್ಕೆ ಗುರಿಯಾಗಿದ್ದ ಸೋದರಿಯನ್ನು ಅಕಾಲದಲ್ಲಿ ಕಳೆದುಕೂಂಡು, ಜೀವನದಲ್ಲಿ ಸುಖ ನೆಮ್ಮದಿಗಳ ಕಾಲ ಬರುವ ಮೊದಲೇ ಸೋದರತ್ತೆಯನ್ನೂ ಕಳೆದುಕೂಂಡು ಮುಂದೆ ಹನ್ನೆರಡು ವರ್ಷದವಳಾದ ತನ್ನ ಹಿರಿಯ ಮಗಳನ್ನು ಕಳೆದುಕೊಂಡರು. ತೀ.ನಂ ಶ್ರೀ ಹೆಣ್ಣು ಮಕ್ಕಳ ಬಗೆಗೆ ಮಮತೆಯನ್ನು, ಸ್ತ್ರೀಯರ ಬಗೆಗೆ ಗೌರವಾದರಗಳನ್ನು ತೋರಿಸುತ್ತಿದ್ದರು.
ವಿದ್ಯಾಭ್ಯಾಸ
ಬದಲಾಯಿಸಿ‘ಹೆಣ್ಣುಮಕ್ಕಳ ಪದಗಳು’ ಎಂದು ಹೆಸರಿನಲ್ಲಿ ಅವರು ಕನ್ನಡ ಜಾನಪದ ಕಾವ್ಯದ ಸಾರವೆನ್ನಬಹುದಾದ ಹಾಡುಗಳ ಪುಸ್ತಕ ಒಂದನ್ನು ಸಂಪಾದಿಸಿದುದೂ, ರನ್ನನ ‘ಅಜಿತ ಪುರಾಣ’ದ ಪ್ರಸ್ತಾವನೆಯಲ್ಲಿ ಬರುವ ಸಾಧ್ವಿ ಅತ್ತಿಮಬ್ಬೆಯನ್ನು ಕುರಿತ ಲೇಖನ, ‘ಕೆರೆಗೆ ಹಾರ’ ಎಂಬ ಅಪರೂಪದ ಜಾನಪದ ಕಥನ ಗೀತೆಯನ್ನು ಕುರಿತು ಬರೆದಿದ್ದಾರೆ ಹಾಗೂ ‘ಅಕ್ಕಮಹಾದೇವಿಯ ಕೆಲವು ವಚನಗಳು’ ಎಂಬ ಸಂಶೋಧನಾ ಲೇಖನದಲ್ಲಿ ಅವರು ಕನ್ನಡದ ನಾರೀರತ್ನ ಮಹಾದೇವಿಯಕ್ಕನ ಅತ್ಮಕಥೆಯ ಅಂಶಗಳ ಬಗೆಗೆ ತೂರಿಸುವ ಅನುಕಂಪ ಸ್ತ್ರೀಯರ ಬಗೆಗಿನ ಹೇಳಲಾಗಿದೆ. ತಾಯಿಯನ್ನು ಕಳೆದುಕೊಂಡಿದ್ದರಿಂದ ತೀ.ನಂ ಶ್ರೀ ತನ್ನ ಒಬ್ಬ ಅಣ್ಣ (ದೋಡ್ಡಪ್ಪ ಅವರ ಮಗ) ಮತ್ತು ಅತ್ತಿಗೆ ಅವರನ್ನು ಆಶ್ರಯಿಸಬೇಕಾಯಿತು. ತೀರ್ಥಪುರದಲ್ಲಿ ಪಾಠ ಶಾಲೆಯೊಂದು ಇದ್ದಿತಂಬುದೇ ಹೆಚ್ಚಿನ ವಿಷಯ. ತೀ.ನಂ ಶ್ರೀ ಈ ಹಳ್ಳಿಯ ಶಾಲೆಯಲ್ಲಿ ಕಲಿತು 1916ರಲ್ಲಿ ಕನ್ನಡ ಲೋಯರ್ ಸೆಕಂಡರಿ ಪರೀಕ್ಷೆಯಲ್ಲಿ ತೇರ್ಗಡೆಯಾದರು. ಮಾಧ್ಯಮಿಕ ಶಾಲೆಯ ವ್ಯಾಸಂಗಕ್ಕೆ ಚಿಕ್ಕನಾಯಕನ ಹಳ್ಳಿಗೆ ಹೋಗಬೇಕಾಯಿತು. ಅಲ್ಲಿ ದೊಡ್ಡಪ್ಪನವರ ಮನೆಯ ಆಶ್ರಯ ಸಿಕ್ಕಿತು. ಮುಂದೆ ಪ್ರೌಢಶಾಲಾ ವ್ಯಾಸಂಗಕ್ಕಾಗಿ 1991ರಲ್ಲಿ ತುಮಕೂರಿನ ಸರಕಾರಿ ಕೊಲಿಜಿಯೇಟ್ ಹೈಸ್ಕೂಲ್ ಸೇರಿದರು. ತೀ.ನಂ ಶ್ರೀ ಕನ್ನಡದ ಉಪನ್ಯಾಸಕರಾಗಿ ಬೆಂಗಳೂರಿನ ಇಂಟರ್ ಮೀಡಿಯೇಟ್ ಕಾಲೇಜಿಗೆ 1943ರಲ್ಲಿ ವರ್ಗವಾಗಿ ಬರುವ ತನಕ ಸೋದರತ್ತೆ ಲಕ್ಷ್ಮೀದೇವಮ್ಮನವರು ಅವರಿಗೆ ಪೋಷಗಿ ಎನ್ನವಂತಿದ್ದರು. ಚಿಕ್ಕನಾಯಕನ ಹಳ್ಳಿಯ ಮಾಧ್ಯಮಿಕ ಶಾಲೆಯಲ್ಲಿ ಓದುತ್ತಿದ್ದಾಗಗ ಇಂಗ್ಲೀಷ್ ಒಂದೇ ಪಠ್ಯವಿಷಯವಾದುದರಿಂದ ಪಠ್ಯೇತರ ವಿಷಯಗಳನ್ನು ಓದುದಕ್ಕೂ ಸಂಸ್ಕøತ ಭಾಷೆಯನ್ನು ಕಲಿಯುದಕ್ಕೂ ತೀ.ನಂ ಶ್ರೀ ಅವರಿಗೆ ಅವಕಾಶ ಸಿಕ್ಕಿತು. ಅಲ್ಲಿನ ಕೈಗಾರಿಕಾ ತರಬೇತಿ ಶಾಲೆಯ ಗುಮಾಸ್ತೆಯಾಗಿದ್ದ ಬೈರಪ್ಪಾ ಎಂಬ ಮಹಾಶಯರು ತಮ್ಮ ಮನೆಯಲ್ಲಿ ಸಣ್ಣದೊಂದು ಪುಸ್ತಕ ಭಂಡಾರವನ್ನು ಸ್ಥಾಪಿಸಿದರಂತೆ. ಅದರಲ್ಲಿ ಕೃಷ್ಣ ಸೂಕ್ತಿ, ಸದ್ಭೋದ ಚಂದ್ರಿಕೆ, ಮಧುರವಾಣಿ ಮೊದಲಾದ ಪತ್ರಿಕೆಗಳು ಸಿಗುತ್ತಿದ್ದವು. ಬಿಂಡಿಗನವಿಲೆ ವೆಂಕಟಚಾರ್ ಗಳಗನಾಥರು ಬರೆದಿದ್ದ ಅನುವಾದಿಕ ಕಾದಂಬರಿಗಳನ್ನು ಆಗಲೇ ತೀ.ನಂ ಶ್ರೀ ಒದಿದ್ದರೆಂದು. ಆಗಲೇ ಸಂಸ್ಕೃತ ತರಗತಿಗಳಿಗೆ ಸೇರಿ ಕಾಳಿದಾಸನ ಪ್ರಭುವಂಶದ ಅನೇಕ ಶ್ಲೋಕಗಳು ಕಂಠಸ್ಥವಾಗಿವಷ್ಟು ಅಭ್ಯಾಸ ಮಾಡಿದ್ದರು. ಅವರ ಸಾಹಿತ್ಯ ಪ್ರೇಮ ಮೊಳತದ್ದು ಇಲ್ಲಿ ಎಂದು ಭಾವಿಸಬಹುದು. ಪ್ರೌಢ ಶಾಲೆಯಲ್ಲಿ ಅವರು ಕನ್ನಡವನ್ನು ದ್ವಿತೀಯ ಭಾಷೆಯಾಗಿ ಆರಿಸಿಕೊಂಡದ್ದಕ್ಕೆ ಅವರ ತಂದೆ ಆಕ್ಷೇಪಿಸಿದ್ದರು. ಮುಂದೆ ತೀ.ನಂ ಶ್ರೀ ಸಂಸ್ಕೃತವನ್ನೂ, ಕನ್ನಡವನ್ನೂ ಒಟ್ಟಿಗೆ ಕಲಿತು ಎರಡಲ್ಲೂ ವಿದ್ವತ್ ಅನ್ನು ಗಳಿಸಿ ತಂದೆಯವರು ಆಕ್ಷೇಪಕ್ಕೆ ಸಮಜಾಯಿಸಿ ಕೊಟ್ಟರು ಎನ್ನಬಹುದು.
ಸಾಹಿತ್ಯ ಗೀಳು
ಬದಲಾಯಿಸಿತೀ.ನಂ ಶ್ರೀ ಅವರ ಬರೆಯುವ ಹವ್ಯಾಸ ಪ್ರಾರಂಭವಾದದ್ದು ತುಮಕೂರಿನ ಪ್ರೌಢ ಶಾಲೆಯಲ್ಲಿಯೇ. ಶಾಲೆಯ ಪತ್ರಿಕೆ ‘ಸ್ಕೂಲ್ ಫೋಕ್’ ನಲ್ಲಿ ಇವರು ಬರೆದ ‘ಮೈ ಬ್ರದರ್’ ಎಂಬ ಇಂಗ್ಲೀಷ್ ಲೇಖನ ಶಾಲೆಯ ಉಪಾಧ್ಯಾಯರುಗಳ ಮತ್ತು ಸಹಪಾಠಿಗಳ ಮೆಚ್ಚುಗೆಯನ್ನು ಪಡೆದಿತ್ತು. ಇದೇ ಸುಮಾರಿನಲ್ಲಿ ಅವರು ಪ್ಲೇಗ್ ನಿಂದ ತೀರಿಕೊಂಡ ಬಾಲ್ಯ ಮಿತ್ರನನ್ನು ‘ ಮಿತ್ರವಿಲಾಪಂ’ ಶೋಕ ಗೀತೆಯನ್ನು ಕಂದ ವೃತ್ತಗಳ ರೂಪದಲ್ಲಿ ಬರೆದರು. ಆಗ ಅವರಿಗೆ ಹದಿನಾರರ ವಯಸ್ಸು. ಈ ಪದ್ಯಗಳ ಭಾಷೆ ಪರಿಷ್ಕಾರವಾಗಿದ್ದು ಛಂದಸ್ಸು ಮತ್ತು ವ್ಯಾಕರಣಗಳ ಜಾಗ ಖಚಿತವಾಗಿರುವುದು ತಿಳಿದು ಬರುತ್ತದೆ. 1923 ರಲ್ಲಿ ಇವರು ಎಂಟ್ರೆನ್ಸ್ ಪರೀಕ್ಷೆಯನ್ನು ಮುಗಿಸಿ ಮೈಸೂರಿನ ಮಹಾರಾಜಾ ಕಾಲೇಜಿನಲ್ಲಿ ಬಿ.ಎ ಪದವಿಗೆ ಪ್ರವೇಶ ಪಡೆದರು. ಪದವಿಯಲ್ಲಿ ಪಠ್ಯ ವಿಷಯಗಳಾಗಿ ಕಡ್ಡಾಯ ಇಂಗ್ಲೀಷ ಭಾಷೆಯ ಜೊತೆಗೆ ಐಚ್ಛಿಕವಗಿ ಕನ್ನಡವನ್ನು, ಎರಡನೇಯ ಭಾಗದಲ್ಲಿ ಅರ್ಥಶಾಸ್ತ್ರ, ರಾಜ್ಯಶಾಸ್ತ್ರಗಳ ಜೊತೆಗೆ ಸಂಸ್ಕøತ ಭಾಷೆಗಳನ್ನು ಅಭ್ಯಸಿಸಿದರು. ಮುಂದೆ ಸಂಸ್ಕೃತ ಪ್ರಾಧ್ಯಾಪಕರಾಗಿ ನಿವೃತ್ತರಾದ ನಂಶಿವರಾಮ ಶಾಸ್ತ್ರೀ ಮತ್ತು ಕನ್ನಡ ಕವಿಯಾಗಿ ಪ್ರಸಿದ್ಧರಾದ ಪು.ತಿ ನರಸಿಂಹಾಚಾರ್ ಇವರುಗಳು ಬಿ.ಎ ತರಗತಿಗಳಲ್ಲಿ ತೀ.ನಂ.ಶ್ರೀ ಅವರ ಸಹಪಾಠಿಗಳು. ಕಾಲೇಜಿನ ಭೋಧಕ ವರ್ಗದಲ್ಲಿ ಅಂತರಾಷ್ಟ್ರೀಯ ಪ್ರೋ, ಎಂ ಹಿರಣ್ಣಯ್ಯ(ಸಂಸ್ಕೃತ), ಬಿಎಂಶ್ರೀ, ಟಿ.ಎಂ ವೆಂಕಣ್ಣಯ್ಯ ಮುಂತಾದವರು ಇದ್ದರು. ತೀ.ನಂ.ಶ್ರೀ ಕಾಲೇಜನ್ನು ಪ್ರವೇಶಿಸಿದಾಗ ಪ್ರಿನ್ಸಿಪಾಲರಾಗಿದ್ದವರು ಪ್ರೋ.ಎಂ.ಎಸ್ ಸುಬ್ಬರಾಯರು, ಆನಂತರ ಬಂದವರು ಆಂಗ್ಲ ಪ್ರಿನ್ಸಿಪಾಲ್ ಪ್ರೋ.ಜೆ.ಸಿ ರಾಲೋ. 1926 ರಲ್ಲಿ ತೀ.ನಂ.ಶ್ರೀ ಬಿ.ಎ ಪದವಿಯನ್ನು ಪ್ರಥಮ ಸ್ಥಾನದಲ್ಲಿ ಪಡೆದು ಪದವಿ ಪ್ರಧಾನ ಸಮಾರಂಭದಲ್ಲಿ ಆರು ಸ್ವರ್ಣ ಪದಕಗಳನ್ನು ಒಂದು ಬಹುಮಾನವನ್ನು ನಾಲ್ವಡಿ ಕೃಷ್ಣರಾಜರಿಂದ ಸ್ವಿಕರಿಸಿದರು. ಆಗಿನ್ನು ಮೈಸೂರು ವಿಶ್ವ ವಿದ್ಯಾಲಯದಲ್ಲಿ ಕನ್ನಡ ಎಂ.ಎ ಪದವಿ ವ್ಯಾಸಂಗದ ವ್ಯವಸ್ಥೆ ಆಗಿರಲಿಲ್ಲ. ಆದುದರಿಂದ ತೀ.ನಂ.ಶ್ರೀ ಇಂಗ್ಲೀಷ್ ಎಂ.ಎ ತರಗತಿಗೆ ಸೇರಿದರು. 1928 ರಲ್ಲಿ ಅವರು ಎಂಸಿಎಸ್ ಪರೀಕ್ಷೆಯನ್ನು ಕೂಡ ತೆಗೆದುಕೊಂಡಿದ್ದರಿಂದ ಎಂ.ಎ ಪರೀಕ್ಷೆಗೆ ಕುಳಿತುಕೊಳ್ಳಲಾಗಲಿಲ್ಲ.
ಉದ್ಯೋಗ
ಬದಲಾಯಿಸಿಸಾಹಿತ್ಯೋಪಾಸನೆಗೆ ತಮ್ಮನ್ನು ತೆತ್ತುಕೊಂಡಿದ್ದರಿಂದ ಸಿವಿಲ್ ಸರ್ವಿಸ್ ಪರೀಕ್ಷೆಯಲ್ಲಿ ಮೂರನೇಯ ಸ್ಥಾನ ಮಾತ್ರ ದೊರೆಯಿತಾದರೂ ಅದರಿಂದ ಕಂದಾಯ ಇಲಾಖೆಯ ಪೋಬೆಷ್‍ನಲ್ ಹುದ್ದೆ ಸಿಕ್ಕಿ ಶ್ರೀರಂಗಪಟ್ಟಣಕ್ಕೆ ನೌಕರಿಯ ಮೇಲೆ ಹೋಗಬೇಕಾಯಿತು. ಆದರೆ ಎರಡೇ ತಿಂಗಳಲ್ಲಿ ಅದನ್ನು ತ್ಯಜಿಸಿ ಮೈಸೂರಿನ ಇಂಟರ್‍ಮಿಡಿಯೇಟ್ ಕಾಲೇಜಿನಲ್ಲಿ ಅಧ್ಯಾಪಕರಾಗಿ ನೇಮಕಗೊಂಡು ಹಿಂದಕ್ಕೆ ಬಂದರು. 1929ರಲ್ಲಿ ಪರೀಕ್ಷೆಗೆ ಕುಳಿತು ಇಂಗ್ಲೀಷ್ ಎಂ.ಎ ಪದವಿಯನ್ನು ಪ್ರಥಮ ಸ್ಥಾನದಲ್ಲಿ ಪಡೆದರು, ಅಲ್ಲದೆ ತಮ್ಮ ಪ್ರೀತಿಯ ಮಾತೃ ಸಂಸ್ಥೆ ಮಹಾರಾಜ ಕಾಲೇಜಿಗೆ ವರ್ಗವೂ ಆಯಿತು. ಅದೇ ವರ್ಷ ತಮ್ಮ ತಂದೆಯನ್ನು ಕಳೆದುಕೊಂಡ ದೌರ್ಭಾಗ್ಯವೂ ಅವರದಾಯಿತು. ಅಷ್ಟರಲ್ಲಿ ಮಹಾರಾಜ ಕಾಲೇಜಿನಲ್ಲಿ ಕನ್ನಡ ಎಂ.ಎ ವ್ಯಾಸಂಗವೂ ಪ್ರಾರಂಭವಾದುದರಿಂದ ಅಧ್ಯಾಪಕ ವೃತ್ತಿಗೆ ಕನ್ನಡ ಎಂ.ಎ ಪರೀಕ್ಷೆಗೂ ವ್ಯಾಸಂಗ ಮಾಡಿ 1930ರಲ್ಲಿ ಪ್ರಥಮ ಸ್ಥಾನದಲ್ಲಿ ಉತ್ತೀರ್ಣರಾದರು. ಪದವಿ ಪ್ರದಾನ ಸಮಾರಂಭದಲ್ಲಿ ಮೂರು ಸುವರ್ಣ ಪದಕಗಳು ಬಂದವು. 1936ರಲ್ಲಿ ಬಿ.ಎ ಪರೀಕ್ಷೆ ಇನ್ನು ಒಂದು ತಿಂಗಳಿದೆ ಎನ್ನುವಾಗ ತೀ.ನಂ.ಶ್ರೀ ಯವರಿಗೆ ಜಯಲಕ್ಷಿ ಅವರೊಂದಿಗೆ ಮದುವೆ ಆಯಿತು. ವಧು ತಾಲೂಕು ಕೇಂದ್ರ ತುರುವೇಕೆರೆಯವರು. ಬಾಲ್ಯ ವಿವಾಹವೆಂದೇ ಎನ್ನಬಹುದಾದ ಇದರಿಂದ ಅವರ ಓದು ಸಾಹಿತ್ಯಾಭ್ಯಾಸಿಗಳಿಗೆ ದಕ್ಕೆಯೇನು ಆದಂತೆ ಕಾಣಲಿಲ್ಲ. ಅವರ ಹಿರಿಯ ಮಗಳು 1931ರಲ್ಲಿ ಹುಟ್ಟಿದಳು. 1932ರಲ್ಲಿ ಅವರ ಪೆತಮ ಕೃತಿ ‘ಓಲುಮೆ’ ಪ್ರಕಟವಾಯಿತು. 1936ರಲ್ಲಿ ಎರದನೇಯ ಮಗಳು ನಾಗರತ್ನನ, 1942ರಲ್ಲಿ ಮಗ ನಾಗಭೂಷಣ್ ಜನಿಸಿದರು. ಈ ಅವಧಿಯಲ್ಲೇ ಅವರಿಗೆ ಎರಡು ಗಂಡು ಮಕ್ಕಳು ಜನಿಸಿ ಶೈಶವದಲ್ಲಿ ತೀರಿಕೊಂಡಿದ್ದವು. ಇದ್ದ ಒಬ್ಬಳೆ ತಂಗಿ ಸಾವಿತ್ರಮ್ಮ ಗುಣ ಹೊಂದದೆ ಮಾನಸಿಕ ಅಸ್ವಸ್ಥತೆಯಿಂದ ನರಳುತಿದ್ದರು. 1943ರಲ್ಲಿ ತೀ.ನಂ.ಶ್ರೀ ಅವರಿಗೆ ಉಪ ಪ್ರಾಧ್ಯಾಪಕರಾಗಿ ಭಡ್ತಿ ದೊರೆತ ಸುದ್ದಿ ಪತ್ರಿಕೆಯಲ್ಲಿ ಪ್ರಕಟವಾದ ದಿನವೇ ಅವರ ಸೋದರತ್ತೆ ಲಕ್ಷೀದೇವಮ್ಮನವರು ತೀರಿಕೊಂಡರು. ಅನಂತರ ನಾಲ್ಕು ತಿಂಗಳಲ್ಲೆ ಹಿರಿಯ ಮಗಳು ವಿಶಾಲಾಕ್ಷಿ ತನ್ನ 12 ವಯಸ್ಸಿನಲ್ಲಿ ತೀರಿಕೊಂಡಳು ಹೀಗಾಗಿ ಅವರ ಬದುಕಿನ ತಕ್ಕಡಿ ಸುಖಕಿಂತಲೂ ದುಃಖದ ಕಡೆಗೆ ಹೆಚ್ಚು ತೂಗಿದಂತೆ ಕಾಣುತ್ತದೆ.
ವೃತ್ತಿ ಜೀವನ
ಬದಲಾಯಿಸಿತೀನಂಶ್ರೀ ಅವರು ಅಮಲ್ದಾರ್ ಹುದ್ದೆಯನ್ನು ಬಿಟ್ಟು ಅಧ್ಯಾಪಕ ವೃತ್ತಿಗೆ ಮರಳಿದುದ್ದಕ್ಕೆ ಕಾರಣವನ್ನು ಊಹಿಸುವುದು ಕಷ್ಟವಲ್ಲ. ತಾವು ಬಿಟ್ಟು ಬಂದ ಮಹಾರಾಜಾ ಕಾಲೇಜಿನಲ್ಲಿ ಪ್ರೋ.ರಾಲೋ, ಪ್ರೋ.ಮೆಂಕಿಟಾಶ್, ಪ್ರೋ.ರಾಧಾಕೃಷ್ಣನ್, ಪ್ರೋ.ವಾಡಿಯಾ, ಪ್ರೋ.ಎಂ ಹಿರಣ್ಣಯ್ಯ, ಪ್ರೋ.ಬಿಎಂಶ್ರೀ, ಪ್ರೋ.ಟಿ.ಎಸ್ ವೆಂಕಣ್ಣಯ್ಯ, ಮುಂತಾದ ವಿದ್ವತ್ಜನರು ಒಂದೆಡೆ ಇದ್ದು ಹದಗೊಳಿಸಿದ್ದು ಸಾಂಸ್ಕೃತಿಕ- ಸಾಹಿತ್ಯಿಕ ವಾತಾವರಣ ಅವರನ್ನು ಕೈಬೀಸಿ ಕರೆದಿರಬೇಕು. ತೀನಂಶ್ರೀ ಮಹಾರಾಜಾ ಕಾಲೇಜಿಗೆ ಬಂದಿದ್ದು ಈ ಅವಧಿಯಲ್ಲಿಯೇ. ಅವರು ರೆವೆನ್ಯೂ ಇಲಾಖೆಗೆ ಹೋಗದೇ ಇಂಗ್ಲೀಷ್ ಬೋಧಕರಾಗದೇ ಸಂಸ್ಕೃತ ಇಲಾಖೆಗೆ ಸರಿ ಹೋಗದೇ ಕನ್ನಡ ಅಧ್ಯಾಪಕರಾಗಿದ್ದಕ್ಕೆ ಅವರ ಕನ್ನಡ ಪ್ರೇಮ ಎಷ್ಟು ಕಾರಣವೋ ಬಿಎಂಶ್ರೀ ಮತ್ತು ಟಿ.ಎಸ್ ವೆಂಕಣ್ಣಯ್ಯನವರುಗಳು ಅಷ್ಟೇ ಕಾರಣ ಅಥವಾ ಅವೆರಡು ಬೇರೆ ಬೇರೆ ಕಾರಣಗಳಲ್ಲ. ಬಿಎಂಶ್ರೀ ಅವರಿಂದ ಆರಂಭವಾಗಿದ್ದ ಕನ್ನಡದ ಪ್ರಚಾರ, ಬರವಣಿಗೆಯ ಕಾರ್ಯ ಕನ್ನಡ ಅಧ್ಯಯನಕ್ಕೆ ಬೇಕಾದ ಭೂಶೋಧನೆ ಮತ್ತು ಅಸ್ಥಿ ಭಾರ ನಿರ್ಮಾಣ, ಈ ಎಲ್ಲ ಕಾರ್ಯಗಳಿಗೆ ದೀಕ್ಷೆಗೊಳ್ಳುವ ತರುಣ ವಿದ್ವಾಂಸರುಗಳ ಪಡೆಯನ್ನು ಕಟ್ಟುವ ಕೆಲಸ- ಇವು ಹೊಸಗನ್ನಡ ಸಾಹಿತ್ತಯದ ಇತಿಹಾಸದಲ್ಲಿ ನವೋದಯ ಯುಗವೆಂದು ಪ್ರಸಿದ್ಧವಾಗಿವೆ. ಅಧ್ಯಾಪಕರಾಗಿ ವೃತ್ತಿಯನ್ನು ಆರಂಭಿಸಿದ ತೀನಂಶ್ರೀಯಂತವರು ತಮ್ಮ ವೃತ್ತಿ ಧರ್ಮಕ್ಕೆ ಚ್ಯುತಿ ಭಾರದಂತೆ ನಿತ್ತದ ಅಧ್ಯಾಪನ ಅಧ್ಯಯನಗಳನ್ನು ನಿಷ್ಠೆಯಿಂದ ಮಾಡುತ್ತಾ ಬಿಡುವಿನ ಹೊತ್ತಿನಲ್ಲಿ ಶ್ರೀಯವರು ಆರಂಭಿಸಿದ್ದ ಕನ್ನಡದ ಕೈಂಕರ್ಯವನ್ನು ನೆರವೇರಿಸಬೇಕಿತ್ತು. 1943ರಲ್ಲಿ ಉಪಪ್ರಾಧ್ಯಾಪಕರಾಗಿ ದೊರೆತ ಬಡ್ತಿಯ ಜೊತೆಗೆ ಅವರಿಗೆ ಬೆಂಗಳೂರಿನ ಇಂಟರ್ ಮೀಡಿಯೇಟ್ ಕಾಲೇಜಿಗೆ ವರ್ಗವೂ ಆಯಿತು. ಮತ್ತೆ ಅವರು 1957ರ ವರೆಗೆ ಮೈಸೂರಿಗೆ ಹಿಂತಿರುಗುವುದಾಗಲಿಲ್ಲ. ಬೆಂಗಳೂರಿನಲ್ಲಿ ಪ್ರೋ. ಮೂರ್ತಿರಾವ್ ಮತ್ತು ಪೂ.ತಿ. ನರಸಿಂಹಾಚಾರ್ ಅವರುಗಳ ಜೊತೆ ಸಿಕ್ಕಿತು. ಮಾಸ್ತೀ ಅವರಂತಹ ಲೇಖಕರ ಹತ್ತಿರ ಸಂಪರ್ಕ, ಸ್ನೇಹಗಳು ದೊರೆತವು. ಕನ್ನಡ ಸಾಹಿತ್ಯ ಪರಿಷತ್ತಿನ ಚಟುವಟಿಕೆಗಳೇ ತಮ್ಮನ್ನು ತೊಡಗಿಸಿಕೊಳ್ಳುವ ಅವಕಾಶ ಉಂಟಾಯಿತು. ಈ ನಡುವೆ 1948ರ ನವೆಂಬರ್‍ನಿಂದ 1950ರ ಜನವರಿವರೆಗೆ ಮೈಸೂರು ಸಂವಿಧಾನ ಪರಿಷತ್ತಿನಲ್ಲಿ ಅವರು ಭಾಷಾಂತಕಾರರಾಗಿ ಕೆಲಸ ಮಾಡಿದರು. 1948 ಮತ್ತು 1950ರಲ್ಲಿ ಎರಡು ಸಲ ಕೆಲವೇ ತಿಂಗಳು ಕಾಲ ದಾವಣಗೆರೆಯ ಕಾಲೇಜಿನಲ್ಲಿ ಸೂಪರ್ ಇಂಟಿಂಡೆಮಟ್ ಆಗಿ ಕೆಲಸ ಮಾಡಿ ಬರಬೇಕಾಯಿತು. 1951ರಲ್ಲಿ ಕೆಲವು ತಿಂಗಳುಗಳ ಕಾಲ ಕೋಲಾರ ಕಾಲೇಜಿನ ಸೂಪರ್ ಇಂಟಿಂಡೆಮಟ್‍ಆಗಿ ಇದ್ದು ಬಂದರು. 1952ರಲ್ಲಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾನಿಲಯ ¸]ತೀನಂಶ್ರಿ ಅವರ ಸೇವೆಯನ್ನು ಎರವಲಾಗಿ ಪಡೆಯಿತು. ಕರ್ನಾಟಕ ವಿಶ್ವವಿದ್ಯಾನಿಲಯದ ಪಥಮ ಕನ್ನಡ ಪ್ರಾಧ್ಯಾಪಕರಾಗಿ ಅಲ್ಲಿಗೆ ಹೋದವರು ಕನ್ನಡ ಅಧ್ಯಯನಕ್ಕೆ ಬೇಕಾದ ತಳಹದಿಯನ್ನು ಹಾಕಿದರು. ಆಗ ಕನ್ನಡ ಎಂ.ಎ ಓದುವ ವಿದ್ಯಾರ್ಥಿಗಳ ಕೊರತೆ ಇದ್ದತಾದರು ಆ ಅವಧಿಯಲ್ಲಿ ಅವರ ಶಿಶ್ಯರಾಗಿದ್ದ ಕೆಲವರು ಈಗ ಭಾಷಾ ವಿಜ್ಞಾನಿಗಳಾಗಿದ್ದಾರೆ. ಪ್ರಸಿದ್ಧ ಲೇಖಕರೂ ಆಗಿದ್ದಾರೆ. ಧಾರವಾಡದ ಅವರ ಸೇವೆಯ ಅವಧಿ ಇನ್ನೂಂದು ಕಾರಣಕ್ಕೆ ಮುಖ್ಯವಾಯಿತು. ಪೂಣೆಯ ಡೆಕೆನ್ ಕಾಲೇಜಿನ ಭಾಷಾ ವಿಜ್ಞಾನ ಪೀಠದೊಂದಿಗೆ ಅಬರಿಗೆ ಸಂಪರ್ಕ ಬೆಳೆಯಿತು. ಆ ಸಂಸ್ಥೆ ನಡೆಯುತ್ತದ್ದ ಭಾಷಾ ಶಾಸ್ತ್ರದ ಬೇಸಿಗೆಯ ಶಾಲೆಯಲ್ಲಿ ಅಧ್ಯಾಪಕರಾಗಿ ಭಾಗವಹಿಸಿದರು. ಪ್ರಸಿದ್ಧರಾದ ಪ್ರಾಚ್ಯ ಮತ್ತು ಪಾಶ್ಚಾತ್ಯ ಭಾಷಾ ವಿಜ್ಞಾನಿಗಳಾದ ಡಾ. ಸುನೀತ್ ಕುಮಾರ್ ಚಟಾರ್ಜಿ, ಕ್ಯಾಲಿಫೂನಿಯಾ ವಿವಿ ನಿಲಯದ ಡಾ. ಎಂ.ಬಿ ಎಮೆನೊ ಮೊದಲಾದವರಪರಿಚಯ ಸ್ನೇಹಗಳು ಅಲ್ಲಿ ದೊರೆತವು.ಇದೇ ಸಂದರ್ಭದಲ್ಲಿ ಅಮೇರಿಕಾದ ರಾಟ್ ಫೆಲಾರ್ ಪ್ರತಿಷ್ಠಾಬದ ವೇತನದ ಮೇಲೆ ಅಧ್ಯಯನಕ್ಕಾಗಿ ವಿದೇಶಕ್ಕೆ ಹೋಗುವ ಅವಕಾಶ ದೊರೆಯಿತು. 1955-56ರಲ್ಲಿ 8 ತಿಂಗಳ ಕಾಲ ಆಮೇರಿಕಾದ ಮಿಶಿಗನ್ ಮತ್ತು ಪೆನ್ಸಿಲ್ವೇನಿಯ ವಿವಿ ನಿಲಯಗಳಲ್ಲಿ ಅಧ್ಯಾಯನ ಮಾಡಿ ಬಿಡುವಿನ ವೇಳೆಯಲ್ಲಿ ಆಮೇರಿಕಾದ ಕೆಲವು ಪ್ರೇಕ್ಷಣೀಯ ಸ್ಥಳಗಳನ್ನು ನೋಡಿದರು. ಒಂದು ತಿಂಗಳು ಇಂಗ್ಲೆಂಡಿನಲ್ಲಿ ಕಳೆದು, ಫ್ರಾನ್ಸ್, ಇಟಲಿ ಮೊದಲಾದ ಯುರೋಪಿನ ರಾಷ್ಟ್ರಗಳಲ್ಲಿ ಒಂದು ತಿಂಗಳು ಪ್ರವಾಸ ಮಾಡಿ ಸ್ವದೇಶಕ್ಕೆ ಮರಳಿದರು. ಧಾರವಾಡದಲ್ಲಿ ಅವರ ಸೇವೆಯ ಅವಧಿ ಮುಗಿದು 1957ರ ಜನವರಿಯಲ್ಲಿ ಶ್ರೀಕಂಠಯ್ಯ ನವರು ಮೈಸೂರಿನ ಮಹಾರಾಜ ಕಾಲೇಜಿಗೆ ಕನ್ನಡ ಪ್ರಾಧ್ಯಾಪಕರಾಗಿ ಹಿಂದಿರುಗಿದರು. ಅವರು ಮತ್ತೆ ಮಹಾರಾಜ ಕಾಲೇಜಿಗೆ ಬಂದಿದ್ದರಿಂದ ಅಲ್ಲಿನ ಅಧ್ಯಾಪಕರುಗಳು ಮತ್ತು ವಿದ್ಯಾರ್ಥಿಗಳ ಮೈಯಲ್ಲಿ ನವಚೈತನ್ಯ ಹರಿಯಿತು. ಆಗ ತಾನೆ ಡಾ. ಕೆ.ವಿ ಪುಟ್ಟಣ್ಣಪ್ಪನವರು ಮಹಾರಾಜ ಕಾಲೇಜಿನ ಪ್ರಿನ್ಸಿಪಾಲ್ ಹುದ್ದೆಯಿಂದ ಮೈಸೂರು ವಿವಿ ನಿಲಯದ ಉಪ ಕುಲಪತಿಯ ಸ್ಥಾನಕ್ಕೆರಿದರು. ಕನ್ನಡದ ಮುಖ್ಯಸ್ಥರ ಸ್ಥಾನ ಶ್ರೀಕಂಠಯ್ಯವನರಿಗೆ ತೆರವಾಗುತ್ತು. ತೀನಂಶ್ರೀ ಅವರು ವಿವಿ ನಿಲಯಕ್ಕೆ ಮರಳಿದುದರಿಂದ ಆದ ಸಂತೋಷವನ್ನು ಸ್ನೇಹಿತರು ಮತ್ತು ವಿದ್ಯಾರ್ಥಿಗಳು ಓಲಗದ ಸ್ವಾಗತದಲ್ಲಿ ವ್ಯಕ್ತಪಡಿಸಿದರು. ಕಾಲೇಜಿನಲ್ಲಿ ಪಾಠ ಹೇಳಿತ್ತಾ, ಬೆಂಗಳೂರಿನಲ್ಲಿ ನಡೆಯುತ್ತಿದ್ದ ಸಭೆಯಲ್ಲಿ ಭಾಗವಹಿಸುತ್ತಾ ಮೂರು ವರ್ಷಗಳು ಕಳೆದು ಕನ್ನಡ ನಿಘಂಟಿನ ಮೊದಲ ಪುಟಗಳ ಮಾದರಿ ಈ ಅವಧಿಯಲ್ಲಿ ಪ್ರಕಟವಾಯಿತು. ಅಷ್ಟರಲ್ಲಿ ಪದವಿ ತರಗತಿಗಳಿಂದ ಸ್ನಾತಕೊತ್ತರ ಅಧ್ಯಯನ ಸಂಶೋಧನ ವಿಭಾಗಗಳನ್ನು ಪ್ರತ್ಯೇಕಿಸುವ ಯೋಜನೆಯ ಅನ್ವಯ ಮಾನಸ ಗಂಗೋತ್ರಿ ಸ್ನಾತಕೋತ್ತರ ಕೇಂದ್ರದ ಮೊದಲ ಪ್ರಾಧ್ಯಾಪಕರಾಗಿ ತೀನಂಶ್ರೀ ಅವರು ಮಹಾರಾಜ ಕಾಲೇಜಿನಲ್ಲಿ ಇದ್ದ ಸ್ನಾತಕೋತ್ತರ ವಿಭಾಗವನ್ನು ಮಾನಸ ಗಂಗೋತ್ರಿಗೆ ಸಾಗಿಸಿಕೊಂಡು ಹೋದರು. ಅಲ್ಲಿ ಕನ್ನಡ ಅಧ್ಯಯನ ಕೇಂದ್ರದ ತಳಹದಿಯನ್ನು ಭದ್ರ ಮಾಡಿ 62ನೇ ಮಾರ್ಚ್ ತಿಂಗಳ ಅಂತ್ಯದಲ್ಲಿ, ಮೂವತ್ನಾಕು ವರ್ಷಗಳ ಸೇವೆಯ ನಂತರ ತೀನಂಶ್ರೀ ನಿವೃತ್ತರಾದರು. ಆದರೆ ಅವರಿಗೆ ಬಿಡುವು ಸಿಕ್ಕಲಿಲ್ಲ. ಯುಜಿಸಿ ಪ್ರಾಧ್ಯಾಪಕರಾಗಿ ಅಧ್ಯಯನ ಕೇಂದ್ರದಲ್ಲಿ ಕೆಲಸವನ್ನು ಮುದುವರೆಸುವುದರ ಜೊತೆಗೆ ಕನ್ನಡ ನಿಘಂಟಿನ ಕೆಲೆಸದಲ್ಲಿ ತಮ್ಮ ಬಹು ಮಟ್ಟಿನ ವೇಳೆಯನ್ನು ಕಳೆದರು. 1958ರಲ್ಲಿ ಅವರು ನಿಘಂಟು ಸಮಿತಿಯ ಅಧ್ಯಕ್ಷರೂ ಆಗಿದ್ದರು. 1962ರಲ್ಲಿ, ತಾವು ನಿವೃತ್ತಿ ಹೊಂದಿದ ವರ್ಷ ಮೈಸೂರಿನಲ್ಲಿ ಸಿಐಟಿಬಿ ಮೂಲಕ ಮನೆಯೊಂದನ್ನು ಕೊಂಡು ಕೊಂಡರು. ಶ್ರೀಂಕಠಯ್ಯನವರ ಬಳಗ, ಅವರ ಅತಿಥಿ ಸತ್ಕಾರ ಗುಣ, ಅವರಲ್ಲಿದ್ದ ಗ್ರಂಥರಾಶಿ ಇವುಗಳನ್ನು ಗಮನಿಸಿದಾಗ ಅವರು ನಿವೃತ್ತಿಯವರೆಗೂ ಒಂದು ಸ್ವಂತ ಮನೆ ಮಾಡಿಕೊಳ್ಳುವುದಕ್ಕೂ ಆಗದೆ ಹೋಗಿದ್ದುದು. ಹೆಚ್ಚು ಕಡಿಮೆ ಆ ಕಾಲಕ್ಕೆ ಲೇಖಕರು ಮತ್ತು ವಿದ್ವಂಸರಿಗಿದ್ದ ದುಸ್ತಿತಿಯನ್ನು ಸೂಚಿಸುತ್ತದೆ. 1966ರ ಆಗಸ್ಟ್ ತಿಂಗಳಿನಲ್ಲಿ ಶಿಕ್ಷಣ ಸಚಿವಾಲಯದ ವತಿಯಿಂದ ದೆಹಲಿಯಲ್ಲಿ ತಂತ್ರಜ್ಞಾನ ಪರಿಭಾಷೆಯ ತಜ್ಞರುಗಳ ಸಭೆ ಸೇರಲಿತ್ತು. ಅದಕ್ಕಾಗಿ ಶ್ರೀಕಂಠಯ್ಯನವರರಿಗೆ ದೆಹಲಿಗೆ ಹೋಗುವ ಅಗತ್ಯ ಒದಗಿತು. ಈಗಲಾದರೂತಮ್ಮ ಪತ್ನಿಗೆ ತಾಜ್‍ಮಹಲ್ ಮುಂತಾದುದನ್ನು ತೋರಿಸಬೇಕೆಂಬ ಬಯಕೆ ಅವರನ್ನು ಬಾಧಿಸಿತು. ತಮ್ಮ ಇಂಜಿನಿಯರ್ ಅಳಿಯ ಮತ್ತು ಮಗಳ ಸಂಸಾರ ಬಿಹಾರದ ರಾಂಚಿಯಲ್ಲಿದ್ದುದರಿಂದ ಹಾಗು ಒಬ್ಬನೇ ಮಗ ಕಲ್ಕತ್ತಾದಲ್ಲಿ ವ್ಯಾಸಾಂಗ ಮಾಡುತ್ತಿದ್ದುದರಿಂದ, ಪ್ರವಾಸದಿಂದ ಹಿಂದಕ್ಕೆ ಬರುವಾಗ ಅವರನೆಲ್ಲಾ ನೋಡಿಬರುವ ಅವಕಾಶವೂ ಉಂಟಾಗಿ ಶ್ರೀಕಂಠಯ್ಯನವರು ಪತ್ನಿ ಸಮೇತರಾಗಿ ಮೈಸೂರಿನಿಂದ ದೆಹಲಿಗೆ ಹೊರಟರು. ದೆಹಲಿ ಆಗ್ರಾಗಳ ಪ್ರವಾಸ ಮುಗಿಸಿ ರಾಂಚಿಗೆ ಬಂದರು. ಅಲ್ಲಿ ಮಗಳು ಮತ್ತು ಅಳಿಯ ಮತ್ತು ಮೊಮ್ಮಗಳ ಜೊತೆ ಒಂದು ವಾರ ಸುಖವಾಗಿ ಕಳೆಯಿತು. ತಮ್ಮ ಪತ್ನಿಗೆ ದೆಹಲಿ ತಾಜುಮಹಲುಗಳನ್ನು ತೋರಿಸಿಕೊಂಡು ಬಂದ ಬಗ್ಗೆ ಅವರಿಗೆ ಸಂತೋಷವಾಗಿತ್ತು. ‘ಮಧುಚಂದ್ರವೇನೋ ತುಂಬಾ ಚೆನ್ನಾಗಿ ನಡೆಯಿತು; ಕೇವಲ ನಲವತ್ತು ವರ್ಷ ತಡವಾಯಿತು ಅಷ್ಟೆ!’ ಎಂದು ಅವರು ಕಲ್ಕತ್ತಾಕ್ಕೆ ಬಂದಾಗ ಮಗನೊಡನೆ ವಿನೋದವಾಡಿದರು.
ಸಾಹಿತ್ಯ
ಬದಲಾಯಿಸಿಬಹುಭಾಗ ಮುಂದೆ ಬರಲಿರುವ ಇನ್ನೂ ಹೆಚ್ಚಿನ ಮಹತ್ವದ ಕೆಲಸವೊಂದಕ್ಕಾಗಿ ಮಾಡಿಕೊಳ್ಳುತ್ತಿದ್ದ ಸಿದ್ಧತೆ ಎಂಬಂತಿತ್ತು. ಅವರು ಬಿಟ್ಟು ಹೋಗಿರುವ ಕೃತಿಗಳಲ್ಲೂ ಬಹುಮಟ್ಟಿಗೆ ಅವರು ನಲ್ವತ್ತೈದು ವರ್ಷ ಪ್ರಾಯದವರಾಗಿರುವುದಕ್ಕೆ ಮುಂಚೆಯೇ ಬರೆದಂತವು. ಕಾವ್ಯ ಮೀಮಾಂಸೆ ಅಥವಾ ಭಾಷೆಯನ್ನು ಕುರಿತು ಅವರು ಬರೆಯಬಹುದಾಗಿದ್ದ ಇನ್ನೂ ಮಹತ್ವದ ಕೃತಿಗಳಿಗೆ ಬೇಕಾದ ಸಿದ್ದತೆ ಎಲ್ಲವೂ ಅವರು ಮಾಡಿಕೊಂಡಿದ್ದ ಟಿಪ್ಪಣಿಗಳ ಹಸ್ತ ಪ್ರತಿಯಲ್ಲಿ ಉಳಿದುಹೋಗುವುದು ಅನಿವಾರ್ಯವಾಯಿತು. ತೀನಂಶ್ರೀ ಅವರನ್ನು ನೆನೆಯುವವರಿಗೆ ಮೂರು ಕ್ಷೇತ್ರಗಳಲ್ಲಿ ಅವರು ಅದ್ವಿತೀಯವಾಗಿ ನಿಲ್ಲುತ್ತಾರೆ. ಮೊದಲನೆಯದು ಅವರು ಕನ್ನಡದಲ್ಲಿ ಬರೆದು ಬಿಟ್ಟು ಹೋದ 'ಬಾರತೀಯ ಕಾವ್ಯ ಮೀಮಾಂಸೆ’ ಎಂಬ ಉದ್ಧಾಮ ಕೃತಿಯಲ್ಲಿ ಆ ವಿಷಯದಲ್ಲಿ ಅದನ್ನು ಮೀರಿಸುವಂತದ್ದು ಮುಂದೆ ಬಂದಿತೋ ಹೇಳಲಾಗುವುದಿಲ್ಲ. ಎರಡನೆಯದು ಅವರು ಕನ್ನಡ ಅಧ್ಯಯನ ಕೇಂದ್ರಗಳಲ್ಲಿ ಭಾಷಾ ವಿಜ್ಞಾನದ ಅಭ್ಯಾಸಕ್ಕೆ ಮಾಡಿದ ಪೂರ್ವ ಸಿದ್ಧತೆ ಮತ್ತು ಕನ್ನಡ ನಿಘಂಟಿಗೆ ಅವರ ಪರಿಶ್ರಮದ ಕಾಣಿಕೆ. 1935ರ ಸುಮಾರಿನಿಂದ ಪ್ರಾರಂಭಿಸಿ ಅವರು ಅಲ್ಲಿ ಇಲ್ಲಿ ಬರೆದು ಮಂಡಿಸಿದ ಏಳೆಂಟು ಇಂಗ್ಲೀಷ್ ಲೇಖನಗಳು, ಎಂಟು ಹತ್ತು ಕನ್ನಡ ಲೇಖನಗಳು ಮತ್ತು ಗ್ರಂಥ ರೂಪದಲ್ಲಿ ಬಂದ’ ಕನ್ನಡ ಮಾಧ್ಯಮ ವ್ಯಾಕರಣ ಇವಿಷ್ಟರಿಂದಲೇ ಭಾಷಾಶಾಸ್ತ್ರದ ಅಭ್ಯಾಸಕ್ಕೆ ಅವರು ಒದಗಿಸಿದ ಪೂರ್ವ ಸಿದ್ಧತೆಯನ್ನು ನಿರ್ಣಯಿಸ ಬರುವುದಿಲ್ಲ. ಇದಲ್ಲದೇ ಭಾರತೀಯ ಭಾಷೆಗಳಿಗೆ ಶೀಘ್ರ ಲಿಪಿ, ತಾರೂ(ಟೆಲಿಗ್ರಾಫ್ ಯೋಜನೆ), ಏಕರೂಪದ ಲಿಪಿ ತತ್ವ ಇವುಗಳ ಆವಿಷ್ಕಾರಕ್ಕಾಗ ಭಾರತ ಸರ್ಕಾರದವರು ಹಾಕಿದ ಬೃಹತ್ ಯೋಜನೆಯ ಅಂಗವಾಗಿ ಕನ್ನಡದ ಧ್ವನಿಮಾ, ಆಕೃತಿಮಾಗಳ ಆಗಮನ ಸಂಖ್ಯಾ ಸಾಮರ್ಥ್ಯ ಯೋಜನೆಗೆ ಪುಣೆಯ ಡೆಕ್ಕನ್ ಕಾಲೇಜಿನ ಎಂ.ಆರ್ ರಂಗನಾಥ್ ಅವರನ್ನು ಒಪ್ಪಿಸಿ ಅದಕ್ಕೆ ಮಾರ್ಗದರ್ಶನವನ್ನು ಕೊಟ್ಟರು. ಎಂಟುನೂರು ಪುಟಗಳ ಒಂದು ಲಕ್ಷಕ್ಕೂ ಮಿಕ್ಕ ಪದಗಳಿಂದ ಕೂಡಿದ ಈ ಕೃತಿಪ್ರಕಟವಾದದಂದು ತೀನಂಶ್ರೀ ಅವರ ದೊಡ್ಡದೊಂದು ಕನಸು ನನಸಾಗಿ ಕನ್ನಡಿಗರಿಗೆ ದೊರೆಯಲಿದೆ. ಅವರು ಮೈಸೂರು ಸಂವಿಧಾನ ಪರಿಷತ್ತಿನಲ್ಲಿ ಭಾಷಾಂತರಕಾರರಾಗಿ ಕೆಲಸ ಮಾಡಿದಾಗ ಕನ್ನಡವನ್ನು ಆಡಳಿತ ಭಾಷೆಯಾಗಿ ಅಣಿಗೊಳಿಸುವ ಸಾಹಸಕ್ಕೆ ಸಾಕಷ್ಟು ಅಮೂಲ್ಯವಾದ ಕೊಡುಗೆಗಳನ್ನು ಕೊಟ್ಟಿರಬೇಕು.ತೀ.ನಂ.ಶ್ರೀ ಅವರ ಪ್ರತಿಭೆ, ವಿದ್ವತ್ತುಗಳು, ಅವರ ಆಸಕ್ತಿಯ ಪರಧೀಯೊಳಗೆ ಬರುವ ವಿಷಯಗಳು ಮತ್ತು ಜೀವಿತಾವಧಿಯಲ್ಲಿ ಅವರಿಗಿದ್ದ ಪ್ರಸಿದ್ಧಿಗಳನ್ನು ಪರಿಗಣಿಸಿದರೆ ಅವರು ಬರೆದ ಗ್ರಂಥಗಳ ಸಂಖ್ಯೆ ಕಡಿಮೆ ಎಂದೇ ಎಲ್ಲರ ಅಭಿಪ್ರಾಯ. ಅವರ ಹೆಸರಿನಲ್ಲಿ ಪ್ರಖಟವಾಗಿರುವ ಕೃತಿಗಳ ಸಂಖ್ಯೆ ಹದಿನಾಲ್ಕು ಮಾತ್ರ. ಅವುಗಳಲ್ಲಿ ಮೂರು ಅವರ ಮರಣ ನಂತರ ಪ್ರಕಟವಾದವು. ಇವಲ್ಲದೆ ಇಂಗ್ಲಿಷ್‍ನಲ್ಲಿ ಬರೆದ ಬಾಷೆ, ವ್ಯಾಕರಣ ಮತ್ತು ಸಾಹಿತ್ಯಗಳನ್ನು ಕುರಿತು ಬರೆದ ಸುಮಾರು ಹತ್ತೋಂಬತ್ತು ಲೇಖನಗಳು ಗ್ರಂಥ ರೂಪದಲ್ಲಿ ಬರೆದ ವಿವಿಧ ಕಡೆ ಚದುರಿಹೋಗಿವೆ. ಅಲ್ಲದೆ ಭಾಷಾಶಾತ್ರ ಕುರಿತ ಅವರ ಲೇಖನಗಳ ಸಂಗ್ರಹ ಅಚ್ಚೆಗೆ ಸಿದ್ದವಾಗಿದೆ ಎಂದು ತಿಳಿದುಬಂದಿದೆ. ಏಳೆಂಟು ಕನ್ನಡ ಲೇಖನಗಳು ಈಗ ಪ್ರಕಟವಾಗಿರುವ ಯಾವ ಸಂಗ್ರಹದಲ್ಲಿಯೂ ಸೇರದೆ ಉಳಿದುಕೊಂಡಿವೆ. ಗ್ರಂಥರೂಪದಲ್ಲಿ ಪ್ರಕಟವಾಗಿರುವ ಅವರ ಕೃತಿಗಳನ್ನು ಸ್ಥೂಲವಾಗಿ ಸೃಜನಾ, ಶಾಸ್ತ್ರ, ಸಂಪಾದನೆ ಮತ್ತು ವಿಮರ್ಶೆ ಎಂದು ನಾಲ್ಕು ವಿಧವಾಗಿ ಪರಿಶೀಲಿಸಬಹುದು. ಈ ವಿಭಾಗ ಕಾಲಾನುಕ್ರಮವಾಗಿ ಕಾಣದಿರಬಹುದು ಮತ್ತು ಶಾಸ್ತ್ರದೂಳಗೆ ವಿಮರ್ಶೆ, ವಿಮರ್ಶೆಯೊಳಗೆ ಶಾಸ್ರ್ತ ಬೆರೆಯಬಹುದು. ಸೃಜನ ‘ಒಲುಮೆ’ ಇದು ತೀ.ನಂ.ಶ್ರೀಯವರ ಮೊಟ್ಟ ಮೊದಲ ಕೃತಿ. ಪಾಶಾತ್ಯ ರಮ್ಯ ಸಾಂಪ್ರದಾಯದ ಕಾವ್ಯದಿಂದ, ಸಂಸೃತ ಸಾಹಿತ್ಯದಲ್ಲಿನ ಮುಕ್ತಗಳಿಂದ ಪ್ರಭಾವಿತರಾಗಿ ಶ್ರೀಯವರ ‘ಇಂಗ್ಲೀಷ್ ಗೀತೆಗಳು’ ರಚನೆಯಿಂದ ಸ್ಪೂರ್ತಿ ಹೊಂದಿ ತೀನಂಶ್ರೀ ಅವರು ತಾರುಣ್ಯದಲ್ಲಿ ಬರೆದ ಕವಿತೆಗಳ ಸಂಕಲನ ಇದು. ಗಾತ್ರದಲ್ಲಿ ಚಿಕ್ಕದಾದರೂ ಕೆ.ಎಸ್ ನರಸಿಂಹಸ್ವಾಮಿ ಅವರೇ ಮೊದಲಾಗಿ ಕನ್ನಡ ಅನೇಕ ಹೊಸ ಕವಿಗಳಿಗೆ ಸ್ಪೂರ್ತಿಯ ಬಾಗಿಲನ್ನು ತೆರೆದ ಪದ್ಯಗಳು ಇದರಲ್ಲಿವೆ. ಸಹಜ ಸ್ಪೂರ್ತಿಯಿಂದ ಬರೆದ ಪದ್ಯಗಳಾದರೂ ಗಾಂಭೀರ್ಯಕ್ಕೆ ಇನ್ನೂಂದು ಹೆಸರು ಎಂಬಂತ್ತಿದ್ದ ತೀ.ನಂ.ಶ್ರೀ ಅವರು ಇವುಗಳ ಪ್ರಕಟಣೆ, ಮರು ಪ್ರಕಟಣೆಗಳ ವಿಷಯದಲ್ಲಿ ಸಂಕೋಚ, ಮುಜುಗರಗಳನ್ನು ಅನುಭವಿಸಿದಂತೆ ಕಾಣುತ್ತದೆ. ಇವುಗಳನ್ನು ಕುರಿತು ಕನ್ನಡದ ಹಿರಿಯ ಲೇಖಕ ಮಾಸ್ತಿ ಅವರು “ಈ ಪದ್ಯಗಳು ನಮ್ಮ ಸಾಹಿತ್ಯ ಕ್ಷೇತ್ರದಲ್ಲಿ ಬಿಡಿವಾಗಿ ಬಿಟ್ಟಿದ್ದ ಸ್ಥಳವನ್ನು ಫಲವತ್ತಾಗಿ ಮಾಡಿವೆ. ಇಷ್ಟರಲ್ಲೆ ಅವರ ಕವನಗಳ ಇನ್ನೂಂದು ಪುಸ್ತಕ, ಇದಕ್ಕಿಂತ ಸ್ವಲ್ಪ ದಪ್ಪನಾಗಿರ ತಕ್ಕದ್ದು, ಬರಬೇಕೆಂದು ನಮಗೆಲ್ಲ ಆಸೆ” ಎಂದು ಬರೆದರು. ಆಸೆ, ಆದೇಶ ಎರಡೂ ಆಗಿದ್ದ ಈ ವಿಮರ್ಶೆ ಬಂದ ಮೇಲೂ ತೀನಂಶ್ರೀ ಅವರು ಇನ್ನೂಂದು ಸಂಕಲನವನ್ನು ಪ್ರಕಟಿಸಲಿಲ್ಲ. ಓದಿದವರೆಲ್ಲಾ ಇಂತಹ ಪದ್ಯಗಳು ಇನ್ನಷ್ಟು ಇರಬೇಕಾಗಿತ್ತು ಎಂದು ಆಸೆ ಪಡುವಂತೆ ಮಾಡಿದ ಅಪರೂಪದ ಪ್ರೇಮ ಗೀತೆಗಳ ಸಂಕಲ “ಓಲುವೆ”. ಇದು ಅವರ ತಡವಾಗಿ ಪ್ರಕಟವಾದ ಪ್ರಬಂಧಗಳ ಸಂಕಲನ. ತೀನಂಶ್ರೀ ಅವರು ‘ಪ್ರಬಂಧವೆಂಬುವುದು ಮಂದ ಶೃತಿಯ ಭಾವಗೀತ’ ಎಂದು ತಿಳಿದಿದ್ದರು. 1928ರಲ್ಲಿ ಭಾರತೀದಾಸ ಎಂಬ ಕಾವ್ಯನಾಮದಲ್ಲಿ ಬರೆದ ‘ನಂಟರು’ ಎಂಬುದು ಇದರಲ್ಲಿ ಸೇರಿದೆ. ಸಂಕಲನ ಪ್ರಕಟವಾದ ವರ್ಷ ಬರೆದ ಮೂರು ಪ್ರಬಂಧಗಳು ಕೊಡಿ ಇದರಲ್ಲಿ ಹದಿಮೂರು ಪ್ರಬಂಧಗಳು ಮಾತ್ರ ಇವೆ. ಇಷ್ಟೂಂದು ವಿರಳವಾಗಿ ಲಿಖಿತವಾದ ಈ ಪ್ರಬಂಧಗಳಲ್ಲೂ ಅವುಗಳ ಸಾರ್ವಕಾಲಿಕ ಮನೋಹರತೆಗಾಗಿ ಉಳಿಯುವ 4-5 ಪ್ರಬಂಧಗಳಿವೆ ‘ನೆಗಡಿ’, ‘ತಿಗಣೆ’, ‘ಪ್ರವಾಸಿಯ ಪೆಟ್ಟಿಗೆಗಳು’ ಇವು ಪ್ರಬಂಧಗಳು. ‘ತಾರೆಗಳು’ ಮುಂತಾದ ಮೂರು ಕಿರು ಪ್ರಬಂಧಗಳು ಭಾವಗೀತೆಗಳಂತೆ ಮುನುಗುವ ನುಡಿಚಿತ್ರಗಳೇ ಸರಿ. ‘ಬಿಡಿ ಮುತ್ತು’ ಅಮರ ಶತಕ ಮತ್ತು ಇತರ ಕೆಲವು ಪ್ರಸಿದ್ಧ ಸಂಸ್ಕøತ ಸುಭಾಷಿತ ಸಂಕಲಗಳಿಂದ ಆರಿಸಿದ 215 ಮುಕ್ತಗಳ ಕನ್ನಡ ಅನುವಾದ ಇದು. ತೀ.ನಂ.ಶ್ರೀ ಅವರು ಕಾಲ ಕಾಲಕ್ಕೆ ಸಂಗ್ರಹಿಸಿ ಅನುವಾದ ಮಾಡಿಟ್ಟುಕೊಂಡ ಪದ್ಯಗಳು ಇದರಲ್ಲಿವೆ. ಇವುಗಳಲ್ಲಿ ಕೆಲವು ಮಾತ್ರ ಅವರ ‘ಓಲುಮೆ’ಯ ಮೊದಲ ಆವೃತ್ತಿಯಲ್ಲಿ ಬೆಳಕುಕಂಡಿದ್ದವು. ಅವುಗಳೆಲ್ಲ ಒಟ್ಟಾಗಿ ಗ್ರಂಥ ರೂಪದಲ್ಲಿ ಪ್ರಕಟವಾದದ್ದು ತೀ.ನಂ.ಶ್ರೀ ಅವರ ಕಾಲಾವಾದ ನಾಲ್ಕು ವರ್ಷಕ್ಕೆ ಹೆಣ್ಣು, ಸಂತಾನ ಭಾಗ್ಯ, ಋತು ಸೌಂದರ್ಯ, ದಾರಿದ್ರ್ಯ, ಭಕ್ತಿ, ವಿದ್ವತ್ತು ಮುಂತಾದ ವಿಷಯ ವೈವಿಧ್ಯದಿಂದ ಕೊಡಿದ 42 ಶೀರ್ಷಿಕೆಗಳಡಿಯಲ್ಲಿ ಅಚ್ಚಾಗಿರುವ ಈ ಸುಂದರವಾದ ಸುಭಾಷಿತಗಳು ಕನ್ನಡಕ್ಕೆ ತೀನಂಶ್ರೀ ಅವರ ಒಂದು ವಿಶೇಷ ಕೊಡುಗೆ. ‘ರಾಕ್ಷಸನ ಮುದ್ರಿಕೆ’: ಇದು ವಿಷಾಕ ದತ್ತನ ಪ್ರಸಿದ್ಧವಾದ ಸಂಸ್ಕøತ ನಾಟಕ ‘ಮುದ್ರರಾಕ್ಷ’ದ ರೂಪಾಂತರ. ಮೂಲದ ಯಥಾವತ್ತಾದ ಅನುವಾದ ಹಿಂದೆ ಬಂದಿತ್ತಾದರೂ ಹೊಸ ರಂಗಯ ಮೇಲೆ ಪ್ರರ್ದಶಿಸುವುದಕ್ಕೆ ಯೋಗ್ಯವಾಗುವಂತೆ ಕನ್ನಡದಲ್ಲಿ ರೂಪಾಂತರಿಸಬೇಕೆಂದು ಪ್ರೋ.ವೆಂಕಣ್ಣಯ್ಯನವರು ಕೊಟ್ಟ ಸಲಹೆಯಂತೆ ತೀನಂಶ್ರೀ ಅವರು ಇದನ್ನು ಕನ್ನಡಕ್ಕೆ ತಂದರು. ‘ಮುದ್ರರಾಕ್ಷಸ’ ಸಂಸ್ಕøತ ಸಾಹಿತ್ಯದಲ್ಲಿ ಒಂದು ಗಂಡು ನಾಟಕ. ಕಥಾನಾಯಕಿಯ ಅಥವಾ ಶೃಂಗಾರ ರಸದ ನೆರವಿಲ್ಲದೆ ರಚಿತವಾದ ಎಕೈಕ ಪ್ರಸಿದ್ಧ ನಾಟಕ ಎನ್ನವುದರ ಜೊತೆಗೆ ಐತಿಹಾಸಿಕ ಎನ್ನಬಹುದಾದ ರಾಜಕೀಯ ವಿದ್ಯಮಾನಗಳನ್ನು ಅವಲಂಬಿಸಿ ಕಟ್ಟಿದ ಕಥೆ ಇದರ ವಸ್ತು. ರಾಜಕೀಯ ಕುಟಿಲತೆಯ ನಡುವೆಯು ಅಕುಟಿಲ ಸ್ನೇಹದ ಮೌಲ್ಯವನ್ನು ಎತ್ತಿ ಹಿಡಿಯುವ ಮೈತ್ರಿಯ ವಿಜಯ ಎನ್ನಬಹುದಾದ ಈ ಕೃತಿ ವಿಷೇಶ ರೀತಿಯ ವೀರ ರಸವನ್ನು ಪ್ರತಿಪಾದಿಸುತ್ತದೆ. ವಿಫುಲವಾದ ಸಂಸ್ಕøತ ನಾಟಕ ಸಾಹಿತ್ಯದಿಂದ ಶ್ರೀಕಂಠಯ್ಯನವರು ಅನುವಾದಕ್ಕೆ ಇದನ್ನೆ ಆಯ್ಕೆ ಮಾಡಿಕೊಂದ್ದರಲ್ಲಿ, ಅನುವಾದಿತ ಪದ್ಯ-ಗದ್ಯ ಭಾಗಗಳ ಸಹಜ ಮನೋಹರತೆಯಲ್ಲಿ ಅವರ ಸದಭಿರುಚಿಯನ್ನು ಕಾಣಬಹುದು.
ತೀನಂಶ್ರೀ ಕೊಡುಗೆಗಳು
ಬದಲಾಯಿಸಿ1940 ರಲ್ಲಿ ಭಾರತದ ಸಂವಿಧಾನ ಪರಿಷತ್ತಿನ ಅಧ್ಯಕ್ಷರು ಕರೆದಿದ್ದ ಭಾಷಾ ವಿಜ್ಞಾನಿಗಳ ಸಭೆಯ ಪ್ರತಿನಿಧಿಯಾಗಿ ಅವರು ಭಾರತ ದೇಶದ ಮುಖ್ಯಸ್ಥರಿಗೆ ಸೂಚಿಸಿದ ‘ರಾಷ್ಟ್ರಪತಿ' ಎಂಬ ಹೆಸರು ಅಂಗೀಕೃತವಾಯಿತು. 1957ರಲ್ಲಿ ದೆಹಲಿಯಲ್ಲಿ ನಡೆದ ಪ್ರಾಚ್ಯ ಸಮ್ಮೇಳನದ ದ್ರಾವಿಡ ಸಂಸ್ಕøತಿ ಗೋಷ್ಠಿಯ ಅಧ್ಯಕ್ಷರಾಗಿ, ಗದಗಿನಲ್ಲಿ ನಡೆದ ನಲ್ವತ್ಮೂರನೆಯ ಸಾಹಿತ್ಯ ಸಮ್ಮೇಳನದ ಭಾಷಾ ಬಾಂಧವ್ಯ ಗೋಷ್ಠಿಯ ಅಧ್ಯಕ್ಷರಾಗಿ, 1958 ರಲ್ಲಿ ಮೈಸೂರಿನಲ್ಲಿ ನಡೆದ ಭಾಷಾಶಾಸ್ತ್ರದ ಬೇಸಿಗೆ ಶಾಲೆಯ ಸ್ಥಳೀಯ ನಿರ್ದೇಶಕರಾಗಿ 1960ರಲ್ಲಿ ಅಖಿಲ ಭಾರತ ಭಾಷಾ ವಿಜ್ಞಾನಿಗಳ ಸಂಘದ ಅಧ್ಯಕ್ಷರಾಗಿದ್ದ ಅವರು ಭಾಷಾಶಾಸ್ತ್ರದ ಅಧ್ಯಯನ ಮತ್ತು ಬೆಳವಣಿಗೆಗೆ ಚಾಲನೆಯನ್ನು ಕೊಟ್ಟರು. 1965 ರಲ್ಲಿ ದೆಹಲಿ ವಿಶ್ವವಿದ್ಯಾನಿಲಯದ ಭಾಷಾಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಸ್ಥಾನಕ್ಕೆ ಅವರಿಗೆ ಬಂದ ಆಹ್ವಾನ ಅವರ ವಿದ್ವತ್ತಿಗೆ ಸಂದ ಪುರಸ್ಕಾರವಾದರೂ ಅವರು ಅದನ್ನು ನಿರಾಕರಿಸಿದದು ಕನ್ನಡಕ್ಕಾಗಿ ಅವರು ಮಾಡಬೇಕಾಗಿದ್ದ ಕೆಲಸಕ್ಕೆ ಕೊಟ್ಟ ಆದ್ಯತೆಯೇ ಸರಿ. ಭಾಷೆಗಾಗಿ ಭಾಷಾಶಾಸ್ತ್ರಕ್ಕಾಗಿ ಅವರು ಮಾಡಿದ ದುಡಿಮೆಯನ್ನು ಕನ್ನಡದ ನಿಘಂಟಿಗಾಗಿ ಅವರು ಪಟ್ಟ ಪರಿಶ್ರಮದಿಂದ ಪ್ರತ್ಯೇಕಿಸುವಂತಿಲ್ಲ. ತಮ್ಮ ಕೊನೆಯ ವರ್ಷಗಳ ಬಹು ಮಟ್ಟಿನ ಸಮಯವನ್ನು ವಿಘಂಟು ರಚನೆಯ ಸಿದ್ಧತೆಗಾಗಿ ಮೀಸಲಿರಿಸಿದರು. ಕನ್ನಡ ಭಾಷಾ ಶಾಸ್ತ್ರದ ಪರಿಭಾಷೆ, ನಿರೂಪಣಾ ವಿಧಾನಗಳಿಗೆ ಹೇಗೋ ಹಾಗೆಯೇ ನಿಘಂಟಿನ ರಚನಾ ವಿಧಾನ, ಅರ್ಥ ವಿವರಣೆ, ಚಿಹ್ನೆಗಳು ಇವುಗಳಿಗೆಲ್ಲಾ ತೀನಂಶ್ರೀ ಅವರ ವಿದ್ವತ್ತು ವಿಫಲವಾದ ಕೊಡುಗೆಯನ್ನು ಕೊಟ್ಟಿದೆ. ಮೂರನೆಯದು ಅವರು ಪ್ರಾಧ್ಯಾಪಕರಾಗಿ, ಭಾಷಣಕಾರರಾಗಿ ಸಂಪಾದಿಸಿದ್ದ ಜನಾನುರಾಗ, ಜನಪ್ರೀಯತೆಗೆ ಸುಲಭವಾಗಿ ಅಂಟುವ ಪೊಳ್ಳುತನಕ್ಕೆ ಅವಕಾಶ ಮಾಡಿ ಕೊಡದೇ ಖ್ಯಾತರಾಗಿದ್ದರು ಅವರು. ಮೈಸೂರು ವಿ.ವಿ ನಿಲಯದಲ್ಲಿ ಅವರು ಪ್ರಾಧ್ಯಾಪಕರಾಗಿದ್ದಾಗ ಛಂದಸ್ಸು, ಕಾವ್ಯಮೀಮಾಂಸೆ ಮತ್ತು ಭಾಷಾಶಾಸ್ತ್ರ ಮೂರನ್ನೂ ಅವರ ಬಾಯಲ್ಲಿಯೇ ಕೇಳಬೇಕು ಎಂದು ವಿದ್ಯಾರ್ಥಿಗಳು ಆಸೆ ಪಡುವಂತಹ ಸ್ಥಿತಿ ಇತ್ತು. ಮೂರು ವಿಷಯಗಳಲ್ಲೂ ಅವರ ವಿದ್ವತ್ತು ಅದ್ವಿತೀಯವಾಗಿತ್ತು. ಅವರ ಬೋಧನಾ ಕಲೆಯು ಇದಕ್ಕೆ ಕಾರಣವಾಗಿತ್ತು. ತೀನಂಶ್ರೀಯವರ ವಿದ್ವತ್ತು ಬಹುಶುತೃತ್ವಗಳನ್ನು ಬಲ್ಲವರೆಲ್ಲರೂ ಇವರು ಹೆಚ್ಚು ಬರೆಯದೇ ಇದ್ದುದಕ್ಕೆ ವಿಷಾದಿಸುವವರೇ. ಆಗಿನ ಅಧ್ಯಾಪಕರಲ್ಲಿ ಬಹುಜನರ ಪ್ರತಿಭೆ ಬರವಣೆಗೆಯಲ್ಲಿ ಹೊರಹೊಮ್ಮದೇ ಇದ್ದುದಕ್ಕೆ ಅಧೈರ್ಯ ಅಥವಾ ಆತ್ಮ ವಿಶ್ವಾಸದ ಅಭಾವ ಕಾರಣವಿರಬಹುದೇ ಎಂದು ಪ್ರೋ. ಮೂರ್ತಿರಾಯರು ಶಂಕೆ ಪಡುತ್ತಾರೆ. ತೀನಂಶ್ರೀಯವರಲ್ಲಿ ಕ್ರಮಶ್ರದ್ಧೆ, ಕರ್ಮಶ್ರದ್ಧೆಗಳ ಹೋರಾಟ ನಡೆದು ಕ್ರಮಶ್ರದ್ಧೆಯ ಕೈ ಸ್ವಲ್ಪ ಮೇಲಾಯಿತೆನೋ ಎಂದು ಅನುಮಾನ ಪಡುತ್ತಾರೆ. ‘ಕಂ ಪಾಂಡಿತ್ಯಂ ಪರಿಚ್ಚೇದಃ’ ಎಂಬ ಸಂಸ್ಕøತದ ಹೇಳಿಕೆಯನ್ನು ತೀನಂಶ್ರೀ ಮತ್ತೆ ಮತ್ತೆ ನೆನಪಿಸಿತ್ತಿದ್ದರು. ಪರಿಚ್ಛೇದ, ನಿಷ್ಕøಷ್ಠತೆಗಳ ಶೋಧನೆಯಲ್ಲಿ, ಸಂಶಯ ನಿವಾರಣೆಗಾಗಿ ಅವರು ಹಲವಿ ವರ್ಷಗಳ ವರೆಗೆ ಕಾಯ್ದದ್ದುಂಟು. ತರಗತಿಗಳಿಗೆ ಸಿದ್ಧತೆ ಇಲ್ಲದೇ ಅವರು ಸಾಮಾನ್ಯವಾಗಿ ಹೋಗುತ್ತಿರಲಿಲ್ಲ. ಸಾರ್ವಜನಿಕ ಭಾಷಣೆಗಳಿಗೆ ತಯಾರಾಗದೇ ಹೋಗುವುದು ಶೋತೃಗಳಿಗೆ ಮಾಡಿದ ಅವಮಾನ ಎಂಬ ನಿಷ್ಟುರತೆ ಅವರು. ಮನೆಯಲ್ಲಿದ್ದು ಇಲ್ಲ ಎನಿಸಿಕೊಳ್ಳುವ ಅಸೌಜನ್ಯ ಅಸಾಮಾಜಿಕ ನಡವಳಿಕೆ ಅವರಲ್ಲಿರಲಿಲ್ಲ. ನಿರಂತರ ಓದು. ಸಹೃದಯ ಗೋಷ್ಠಿ ನಡು ನಡುವೆ ಒಪ್ಪಿಕೊಳ್ಳುತ್ತಿದ್ದ ಉಪನ್ಯಾಸ ಕಾರ್ಯಕ್ರಮಗಳು ಅಧ್ಯಾಪಕ ವೃತ್ತಿಯಲ್ಲಿ ಅವರಿಗಿದ್ದ ಗೌರವಾದರ- ಇವೆಲ್ಲ ಸೇರಿ ಅವರು ಹೆಚ್ಚು ಬರೆಯದಂತಾಗಿರಬೇಕು. ಸಾರ್ವಜನಿಕ ಭಾಷಣ ಮತ್ತು ತರಗತಿಯ ಪಾಠಗಳಲ್ಲಿ ಅವರ ಅಭಿಪ್ರಾಯ, ಅಲೋಚನೆಗಳು ಅಭಿವ್ಯಕ್ತಿ ಪಡೆದು ಆ ಮೂಲಕವೂ ಅವರಿಗೆ ತೃಪ್ತಿ ಸಿಗುತ್ತಿರಬಹುದು ಎಂದು ಅವರ ಮಗ ಪ್ರೋ, ಪಿ.ಎಸ್ ನಾಗಭೂಷಣ ಭಾವಿಸುತ್ತಾರೆ. ಬರೆಯಲಾಗದೇ ಇದ್ದುದಕ್ಕೆ ಅವರಲ್ಲಿ ಕೊರಗು ಇದ್ದಿತು.
ನಿಧನ
ಬದಲಾಯಿಸಿಕಲ್ಕತ್ತಾದಲ್ಲಿ ತಮ್ಮ ಸ್ನೇಹಿತರ ಮನೆಯಲ್ಲಿ ಉಳಿದಿದ್ದಾಗ ಸೆಪ್ಟೆಂಬರ್ ಏಳನೆಯ ತಾರೀಖು ಬೆಳಗಿನ ಎಂಟು ಗಂಟೆಯ ಸಮಯದಲ್ಲಿ ಅನಿರೀಕ್ಷಿತವಾಗಿ ಬಂದ ಹೃದಯಘಾತ ಅವರನ್ನು ಎಲ್ಲರಿಂದ ಅಗಲಿಸಿತು. ಕರ್ನಾಟಕಕ್ಕೆ ಬಂದದ್ದು ಅವರ ಸಾವಿನ ಸುದ್ದಿ ಮಾತ್ರ ಅವರ ಅಂತ್ಯ ಸಂಸ್ಕಾರ ಕಲ್ಕತ್ತಾದ ವಿದ್ಯುತ್ ಚಿತಾಗಾರದಲ್ಲಿ ನಡೆಯಿತು. ಅವರ ಮಿತ್ರರು, ಬಂಧುಗಳು ಅಭಿಮಾನಿಗಳು ಶಿಷ್ಯರು ಎಲ್ಲರಿಗೂ ಈ ಸುದ್ದಿ ನಂಬಲಾರದಷ್ಟು ಕ್ಷಿಪ್ರವಾಗಿತ್ತು. ಎಲ್ಲರೂ ದಿಗ್ಬ್ರಾಂತರಾದರು. ಬಿಎಂಶ್ರೀ ಅವರಂತೆಯೇ ತೀನಂಶ್ರೀ. ಅವರ ದೊಡ್ಡತನವು ಅವರ ಕೃತಿಗಳಿಗಿಂತ ಅವರ ವ್ಯಕ್ತಿತ್ವದಲ್ಲಿಯೇ ಉಳಿದು ಹೋಗುವಂತಾಗಿತ್ತು. ಒಂದರ್ಥದಲ್ಲಿ ಅವರ ಬದುಕು ಒಂದು ಈಡೇರದ ಮಹದಾಸೆ.