ಸದಸ್ಯ:Charanraj Yadady/ನನ್ನ ಪ್ರಯೋಗಪುಟ3

ಶ್ರೀನಿವಾಸ ಗೌಡ

ಬದಲಾಯಿಸಿ

ಶ್ರೀನಿವಾಸ ಗೌಡ ಅವರು ಕರ್ನಾಟಕದ ಮೂಡಬಿದ್ರಿಯ ಭಾರತೀಯ ಕಂಬಳ ಪಟು. ಅವರನ್ನು ಭಾರತೀಯ ಉಸೇನ್ ಬೋಲ್ಟ್ ಎಂದೂ ಕರೆಯುತ್ತಾರೆ, ಗೌಡ ಅವರ ಕಂಬಳದ ನೂರು ಮೀಟರ್‌ ಓಟಗಳಲ್ಲಿ ಉಸೇನ್ ಬೋಲ್ಟ್ ಅವರ ವಿಶ್ವ ದಾಖಲೆಯನ್ನು ಮುರಿದ ನಂತರ ಬೆಳಕಿಗೆ ಬಂದರು. ಗೌಡ ಅವರು ತಮ್ಮ ಓಟದ ಕೋಣದ ಜೋಡಿಯೊಂದಿಗೆ 13.62 ಸೆಕೆಂಡುಗಳಲ್ಲಿ 142.5 ಮೀಟರ್‌ಗಳನ್ನು ಓಡಿದರು.

ಗುರುತು

ಬದಲಾಯಿಸಿ

ಕ್ರೀಡಾ ಸಚಿವ ಕಿರಣ್ ರಿಜಿಜು ಅವರು ಭಾರತೀಯ ಕ್ರೀಡಾ ಪ್ರಾಧಿಕಾರದ ಪರವಾಗಿ ಗೌಡರಿಗೆ ತರಬೇತಿ ವ್ಯವಸ್ಥೆ ಮಾಡಲು ಮುಂದಾದರು.ಎಸ್.ಎ.ಐ ತರಬೇತುದಾರರಿಂದ ಗೌಡರಿಗೆ ತರಬೇತಿಯನ್ನು ಏರ್ಪಡಿಸುವುದಾಗಿ ಸಚಿವರು ಭರವಸೆ ನೀಡಿದರು. ಅವರಿಗೆ ಕರ್ನಾಟಕ ಮುಖ್ಯಮಂತ್ರಿಗಳು 3 ಲಕ್ಷ ರೂಪಾಯಿ ಚೆಕ್ ನೀಡಿದರು. ಕಂಬಳವು ಬೇರೆಲ್ಲ ಕ್ರೀಡಾಕೂಟಗಳಿಗಿಂತ ಸಂಪೂರ್ಣವಾಗಿವಿಭಿನ್ನವಾದ ಕ್ರೀಡೆಯಾಗಿದ್ದರಿಂದ ಗೌಡರು ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ ಟ್ರಯಲ್ಸ್‌ಗೆ ಹೋಗಲು ನಿರಾಕರಿಸಿದರು.

ಪರಿಣಾಮ

ಬದಲಾಯಿಸಿ

ಕಂಬಳ ಸಮಯ ಮುಗಿದ ನಂತರವೇ ಎಸ್.ಎ.ಐಯಲ್ಲಿ ತರಬೇತಿ ಆರಂಭಿಸುವುದಾಗಿ ಗೌಡರು ತಿಳಿಸಿದ್ದಾರೆ.