ಸದಸ್ಯ:Chandra Mutalik/ನನ್ನ ಪ್ರಯೋಗಪುಟ

ಮರಾಠಿ ಸಂತ ಸಾಹಿತ್ಯ ಮಹಾರಾಷ್ಟ್ರದ ಭಕ್ತಿ ಸಾಹಿತ್ಯವು ಸಂತ ಸಂಪ್ರದಾಯಗಳ ಸಂತರು ರಚಿಸಿದ ಸಾಹಿತ್ಯದಿಂದ ಕೂಡಿದೆ. ಮಹಾನುಭಾವ ಪಂಥ, ದತ್ತ ಪಂಥ, ನಾಥ ಪಂಥ , ವಾರಕರಿ ಪಂಥ ಪಂಥ ಇವು ಮಹಾರಾಷ್ಟ್ರದ ಪ್ರಮುಖ ಸಂಪ್ರದಾಯಗಳು. ಪ್ರಮುಖವಾಗಿ ವಾರಕರಿ ಪಂಥದ ಸಂತ ಜ್ಞಾನೇಶ್ವರರು ಜ್ಞಾನೇಶ್ವರಿ ಹಾಗೂ ಭಾವಾರ್ಥ ದೀಪಿಕಾಗ್ರಂಥ ರಚಿಸಿದರು.

ಮರಾಠಿ ಸಂತ ಕವಯಿತ್ರಿಯರು ಮಹಾನುಭಾವ ಪಂಥದ ಸಂತ ಕವಯಿತ್ರಿ ಮಹದಂಬೆಯು ಮರಾಠಿ ಸಾಹಿತ್ಯದ ಆದ್ಯ ಕವಯಿತ್ರಿ. ಇವಳು ಧವಳೆ ಎಂಬ ವಿಶಿಷ್ಟ ಪದಗಳನ್ನು ರಚಿಸಿದಳು. ಧವಳೆ ಇದು ಮದುವೆಯ ಸಮಯದಲ್ಲಿ ಹಾಡುವ ಭಕ್ತಿ ಪ್ರಧಾನ ರಚನೆಗಳು. ಇದು ಕೃಷ್ನ ರುಕ್ಮಿಣಿಯರ ಮದುವೆಯ ಸಂದರ್ಭವನ್ನು ವಿವರಿಸುತ್ತದೆ. ವಾರಕರಿ ಪಂಥದಲ್ಲಿ ಸಂತ ಜನಾಬಾಯಿ, ಸಂತ ಸಕ್ಕೂಬಾಯಿ, ಸಂತ ಬಹೆಣಾಬಾಯಿ ಪ್ರಮುಖ ಸಂತ ಕವಯಿತ್ರಿಯರು.[೧]

ಮರಾಠಿ ಸಾಹಿತ್ಯದ ಪ್ರಥಮ ದಲಿತ ಸಂತ ಕವಿ ವಾರಕರಿ ಪರಂಪರೆಯ ಸಂತ ಜ್ಞಾನೇಶ್ವರ, ಸಂತ ನಾಮದೇವರ ಸಮಕಾಲೀನನಾದ ಸಂತ ಚೋಖಾಮೇಳಾರು ಮರಾಠಿಯ ಪ್ರಥಮ ದಲಿತ ಸಂತ ಕವಿ. ಇವರು ಮಂಗಳವೇಡೆಯವರು.

=ಗ್ರಂಥಗಳು=[೨]

  • ಜ್ಞಾನೇಶ್ವರ
  • ಭಾವಾರ್ಥ ದೀಪಿಕೆ
  • ಭಾವಾರ್ಥ ರಾಮಾಯಣ
  • ಅಭಂಗಗಳು

ಮರಾಠಿ ಸಂತರು ಬದಲಾಯಿಸಿ

  1. ಸಂತ ಜ್ಞಾನೇಶ್ವರ
  2. ಸಂತ ನಾಮದೇವ
  3. ಸಂತ ಚೋಖಾಮೇಳಾ
  4. ಸಂತ ತುಕಾರಾಮ

ಮರಾಠಿ ಸಂತ ಮಹಿಳೆಯರು ಬದಲಾಯಿಸಿ

  • ಸಂತ ಬಹೆಣಾಬಾಯಿ
  • ಸಂತ ಸಕ್ಕೂಬಾಯಿ
  • ಸಂತ ಜನಾಬಾಯಿ
  • ಸಂತ ಮುಕ್ತಾಬಾಯಿ

ಮಹಾನುಭಾವ ಪಂಥ ಬದಲಾಯಿಸಿ

  • ಮಹದಂಬೆ

ಉಲ್ಲೇಖಗಳು ಬದಲಾಯಿಸಿ

  1. https://www.marathimati.com/search/label/%E0%A4%B5%E0%A4%BF%E0%A4%B6%E0%A5%87%E0%A4%B7
  2. https://estudantedavedanta.net/Jnaneshwari.pdf