ಸದಸ್ಯ:Chandanaa K S/ನನ್ನ ಪ್ರಯೋಗಪುಟ

ಶಾರದಾ ಕೆ. ಉಳುವೆ

ಜೀವನ ಬದಲಾಯಿಸಿ

೧೦/೧೦/೧೯೭೦ರಅಲ್ಲಿ ಜನಿಸಿದ ಶಾರದಾ ಕೆ. ಉಳುವೆ ಇವರು ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಉಳುವೆ ಎಂಬ ಊರಿನವರು. ಇವರ ತಂದೆ ಕೃಷ್ಣಮೂರ್ತಿ ಎಸ್ ಹಾಗೂ ತಾಯಿ ನಾಗರತ್ನ. ಕವನ, ಕತೆ ಮತ್ತು ಕಾದಂಬರಿ ಸಾಹಿತ್ಯಪ್ರಕಾರಗಳಲ್ಲಿ ಸಾಹಿತ್ಯ ರಚಿಸಿರುವ ಇವರು ಪತಿ ಪ್ರಶಾಂತ್ ಅವರೊಂದಿಗೆ ಪ್ರಸ್ತುತ ಶಿವಮೊಗ್ಗದಲ್ಲಿ ನೆಲೆಸಿದ್ದಾರೆ.

ಕೃತಿಗಳು ಬದಲಾಯಿಸಿ

ಕವನ ಸಂಕಲನ ಬದಲಾಯಿಸಿ

ನಿಸರ್ಗದ ಮಡಿಲು (೨೦೦೫)

ಕಥಾ ಸಂಕಲನ ಬದಲಾಯಿಸಿ

ನೆನಪಿನ ಕೋಲು (೨೦೦೧)

ಕಾದಂಬರಿಗಳು ಬದಲಾಯಿಸಿ

  • ಸುಪ್ರಭಾತ (೧೯೯೩)
  • ಬ್ರಹ್ಮಗಂಟು (೧೯೯೪)
  • ಹೊಸಹಾದಿಯಲ್ಲಿ (೧೯೯೬)
  • ಪ್ರಣಯ ಫಣಿ ಬಂಧನ (೧೯೯೭)
  • ಚಂದ್ರೋದಯ (೧೯೯೭)
  • ಮಾತೃಕನ್ಯೆ (೧೯೯೭)
  • ಝಣ ಝಣ ರುಪಾಯಿ (೧೯೯೮)
  • ನನಸಾದ ಕನಸು (೧೯೯೮)
  • ಮನಸು ಕೊಟ್ಟವಳು (೨೦೦೦)


ಪ್ರಶಸ್ತಿಗಳು ಬದಲಾಯಿಸಿ

  • ಅತ್ತಿಮಬ್ಬೆ ಪ್ರತಿಷ್ಠಾನ ದಿಂದ ಅತ್ತಿಮಬ್ಬೆ ಉದಯೋನ್ಮುಖ ಪ್ರಶಸ್ತಿ (೧೯೯೪)
  • ಕೃ. ನಾ ಮೂರ್ತಿ ಪ್ರಶಸ್ತಿ (೧೯೯೫)
  • ಲೇಖಕಿಯರ ಸಂಘ ಹಾಸನವು ರಾಜ್ಯ ಉದಯೋನ್ಮುಖ ಲೇಖಕಿಯೆಂದು ಗುರುತಿಸಿ ಗೌರವಿಸಿದೆ. (೧೯೯೫)
  • ಅಳಸಿಂಗ ಪ್ರಶಸ್ತಿ (೧೯೯೮)

ಉಲ್ಲೇಖ ಬದಲಾಯಿಸಿ

ಲೇಖಕಿಯರ ಮಾಹಿತಿ ಕೋಶ, (ಪ್ರಧಾನ ಸಂಪಾದಕರು) ಡಾ. ಕೆ ಆರ್ ಸಂಧ್ಯಾರೆಡ್ಡಿ, ಪ್ರಕಾಶಕರು: ಕರ್ನಾಟಕ ಲೇಖಕಿಯರ ಸಂಘ, # ೨೦೬, ೨ನೇ ಮಹಡಿ, ವಿಜಯ ಮ್ಯಾನ್ಶನ್, ೨ನೇ ತಿರುವು, ೨ನೇ ಮುಖ್ಯರಸ್ತೆ, ಚಾಮರಾಜಪೇಟೆ, ಬೆಂಗಳೂರು. ೫೬೦೦೧೮, ಪ್ರಕಟಣಾ ವರ್ಷ ೨೦೧೩, ಪುಟ ಸಂಖ್ಯೆ ೩೨೩.