ಪ್ರಾಕ್ಸಿಮ ಸೆಂಟುರಿ ಬಿ

ಪ್ರಾಕ್ಸಿಮ ಸೆಂಟುರಿ ಬಿ (ಪ್ರಾಕ್ಸಿಮ ಬಿ ಎಂದು ಸಹ ಕರೆಯಲಾಗುತ್ತದೆ) , ಸೂರ್ಯನ ಸಮೀಪವಿರುವ ಪ್ರಾಕ್ಸಿಮ ಸೆಂಟುರಿ ಎಂಬ ಕೆಂಪು ಕುಬ್ಜದ ವಾಸಯೋಗ್ಯ ವಲಯದಲ್ಲಿ ಪರಿಭ್ರಮಿಸುತ್ತಿರುವ ಸೌರಾತೀತ ಗ್ರಹ. ಇದು ಸೆಂಟೌರಸ್ ಎಂಬ ನಕ್ಷತ್ರಪುಂಜದಲ್ಲಿದೆ ಮತ್ತು ಭೂಮಿಯಿಂದ ೪.೨ ಜ್ಯೋತಿರ್ವರ್ಷಗಳ (ಸುಮಾರು ೩.೯೭೪x೧೦೧೩ ಕಿ.ಮಿ.) ದೂರದಲ್ಲಿದೆ. ಇದು ಸೌರಮಂಡಲಕ್ಕೆ ಸಮೀಪವಿರುವ ಸೌರಾತೀತ ಗ್ರಹವಾಗಿದೆ. ಈ ಗ್ರಹದಲ್ಲಿ ವಾಸಿಸುವುದು ಅಸಂಭವ, ಏಕೆಂದರೆ ಭೂಮಿಗೆ ಸೌರ ಮಾರುತದಿಂದ ಉಂಟಾಗುವ ಪ್ರಭಾವಕಿಂತ ೨೦೦೦ ಬಾರಿ ಹೆಚ್ಚು ಪ್ರಭಾವ ಈ ಗ್ರಹಕ್ಕೆ ನಾಕ್ಷತ್ರಿಕ ಮಾರುತಗಳಿಂದ ಉಂಟಾಗುತ್ತದೆ. ಆಗಸ್ಟ್ ೨೦೧೬ ರಲ್ಲಿ, ಯುರೋಪಿಯನ್ ಸದರ್ನ್ ಅಬ್ಸರ್ವೇಟರಿ (European Southern Observatory) ಪ್ರಾಕ್ಸಿಮ ಸೆಂಟುರಿ ಬಿ ಗ್ರಹ ಕಂಡುಹಿಡಿದರೆಂದು ಘೋಷಿಸಿದರು. ಸಂಶೋಧಕರು, ಈ ಸೌರಾತೀತ ಗ್ರಹ ಭೂಮಿಗೆ ಸಾಮೀಪವಿರುವುದರಿಂದ ಮುಂದಿನ ಶತಮಾನಗಳಲ್ಲಿ ಪರಿಶೋಧನೆಗೆ ಅವಕಾಶ ಒದಗಿಸುತ್ತದೆ ಎಂದು ಭಾವಿಸುತ್ತಾರೆ. ಪ್ರಾಕ್ಸಿಮ ಸೆಂಟುರಿ ಬಿ ಕಕ್ಷೆಯ ಓರೆ ಅಳತೆ ನಿಖರವಾಗಿ ತಿಳಿದಿಲ್ಲ. ಒಮ್ಮೆ ಅದರ ಕಕ್ಷೆಯ ಓರೆ ತಿಳಿದರೆ, ಈ ಸೌರಾತೀತ ಗ್ರಹದ ದ್ರವ್ಯರಾಶಿಯನ್ನು ನಿಖರವಾಗಿ ಲೆಕ್ಕಹಾಕಬಹುದು. ಪ್ರಾಕ್ಸಿಮ ಬಿ ಗ್ರಹದ ದ್ರವ್ಯರಾಶಿ ಕನಿಷ್ಠ ೧.೨೭M⊕ ಇರಬಹುದು. ಈ ಗ್ರಹದ ನಿಖರವಾದ ತ್ರಿಜ್ಯ ತಿಳಿದಿಲ್ಲ. ಈ ಗ್ರಹ ಬಂಡೆಗಳಿಂದ ಕೂಡಿದ್ದು ಮತ್ತು ಭೂಮಿಯ ಸಾಂದ್ರತೆ ಹೊಂದಿದ್ದರೆ, ಇದರ ತ್ರಿಜ್ಯ ಕನಿಷ್ಠ ೧.೧R⊕ ಇರಬಹುದು. ಈ ಗ್ರಹದ ಸಮತೋಲನ ತಾಪಮಾನವು ೨೩೪ ಕೆ.(-೩೯ ಸೆ., -೩೮ ಫ್ಯಾ.). ಈ ಗ್ರಹ ಪ್ರಾಕ್ಸಿಮ ಸೆಂಟುರಿ ಎಂಬ (ಎಂ-ಮಾದರಿ) ಕೆಂಪು ಕುಬ್ಜದ ಸುತ್ತ ಪರಿಭ್ರಮಿಸುತ್ತದೆ. ಈ ನಕ್ಷತ್ರದ ದ್ರವ್ಯರಾಶಿ ೦.೧೨M☉ ಮತ್ತು ತ್ರಿಜ್ಯ ೦.೬೪R☉. ಇದರ ಮೇಲ್ಮೈ ತಾಪಮಾನ ೩೦೪೨ಕೆ ಮತ್ತು ವಯಸ್ಸು ೪.೮೫ ಶತಕೋಟಿ ವರ್ಷಗಳು. ಇದನ್ನು ಸೂರ್ಯಕ್ಕೆ ಹೋಲಿಸಿದರೆ, ಸೂರ್ಯ ಕೇವಲ ೪.೬ ಲಕ್ಷ ಕೋಟಿ ವರ್ಷಗಳು ಮತ್ತು ಮೇಲ್ಮೈ ತಾಪಮಾನ ೫೭೭೮ಕೆ. ಪ್ರಾಕ್ಸಿಮ ಸೆಂಟುರಿ ಪ್ರತಿ ೮೩ ದಿನಗಳಿಗೆ ಒಮ್ಮೆ ಪರಿಭ್ರಮಿಸುತ್ತದೆ ಮತ್ತು ಇದರ ಪ್ರಕಾಶಮಾನತೆ ೦.೦೦೧೫ L☉. ಪ್ರಾಕ್ಸಿಮ ಸೆಂಟುರಿ ನಕ್ಷತ್ರದಲ್ಲಿರುವ ಲೋಹಗಳು ಸಾಮಾನ್ಯವಾಗಿ ಪ್ರಾಕ್ಸಿಮದಂತ ಕಡಿಮೆ ದ್ರವ್ಯರಾಶಿಯಿರುವ ನಕ್ಷತ್ರಗಳಲ್ಲಿ ಕಂಡುಬಂದಿಲ್ಲ. ಈ ನಕ್ಷತ್ರದಲ್ಲಿ ಜಲಜನಕ ಮತ್ತು ಕಬ್ಬಿಣದ ಅಂಶವಿದೆ ಮತ್ತು ಸೂರ್ಯನ ವಾತಾವರದಲ್ಲಿ ಕಂಡುಬಂದ ಪ್ರಮಾಣಕ್ಕಿಂತ ೧.೬೨ ಬಾರಿ ಹೆಚ್ಚು. ಪ್ರಾಕ್ಸಿಮ ಸೆಂಟುರಿ ನಕ್ಷತ್ರ ಭೂಮಿಗೆ ಸಮೀಪವಿದ್ದರು ಅದರ ಪ್ರಕಾಶಮಾನತೆ ಕಡಿಮೆಯಾದುದರಿಂದ, ಭೂಮಿಯಿಂದ ಬರಿ ಕಣ್ಣಲ್ಲಿ ನೋಡಲು ಸಾಧ್ಯವಿಲ್ಲ. ಈ ಸೌರಾತೀತ ಗ್ರಹ, ಮೇಲ್ಮೈ ವಿಕರಣ ಪ್ರಭಾವದ ಬಲವಾದಿಂದ ಅಯಸ್ಕಾಂತ ಕ್ಷೇತ್ರ ಅಥವಾ ಒಂದು ಸುರಕ್ಷಿತ ವಾತಾವರಣ ಹೊಂದಿಲ್ಲ. ಅರೆ-ಅಕ್ಷೆಯ ೦.೦೫ ಖಗೋಳ ಘಟಕಗಳ (೭,೦೦೦,೦೦೦ ಕಿ.ಮಿ.) ದೂರದಿಂದ ಪ್ರಾಕ್ಸಿಮ ಸೆಂಟುರಿ ಬಿ ೧೧,೧೮೬ ದಿನಗಳಿಗೊಮ್ಮೆ ಪ್ರಾಕ್ಸಿಮ ಸೆಂಟುರಿ ನಕ್ಷತ್ರವನ್ನು ಪರಿಭ್ರಮಿಸುತ್ತದೆ. ಅಂದರೆ, ಈ ಸೌರಾತೀತ ಗ್ರಹ ಮತ್ತು ಪ್ರಾಕ್ಸಿಮ ಸೆಂಟುರಿ ನಕ್ಷತ್ರದ ದೂರ ಸೂರ್ಯ ಭೂಮಿಯಿಂದ ಒಂದು ಇಪ್ಪತ್ತನೇಯ ದೂರದಷ್ಟು. ಭೂಮಿ ಸೂರ್ಯನಿಂದ ಪಡೆಯುವ ವಿಕಿರಣದ ಪ್ರಮಾಣದಲ್ಲಿ, ಪ್ರಾಕ್ಸಿಮ ಸೆಂಟುರಿ ಬಿ ಸುಮಾರು ೬೫% ವಿಕಿರಣದ ಪ್ರಮಾಣವನ್ನು ಪಡೆಯುತ್ತದೆ. ಪ್ರಾಕ್ಸಿಮ ಸೆಂಟುರಿಯಿಂದ ಹೊರಹೊಮ್ಮುವ ಹೆಚ್ಚು ವಿಕಿರಣ ಇನ್‌ಫ್ರಾ‌ರೆಡ್‌ ರೋಹಿತಕ್ಕೆ ಸೇರಿದೆ. ದೃಗ್ಗೋಚರ ರೋಹಿತದಿಂದ, ಭೂಮಿ ಪಡೆಯುವುದರಲ್ಲಿ ಕೆವಲ ೨% ಬೆಳಕನ್ನು ಈ ಸೌರಾತೀತ ಗ್ರಹ ಪಡೆಯುತ್ತದೆ. ಆದರೆ, ಪ್ರಾಕ್ಸಿಮ ಸೆಂಟುರಿ ಬಿ ಭೂಮಿಗಿಂತ ಸುಮಾರು ೪೦೦ ಪಟ್ಟು ಹೆಚ್ಚಿನ ಕ್ಷ-ಕಿರಣ ವಿಕಿರಣ ಪಡೆಯುತ್ತದೆ.ಈ ಗ್ರಹ ವಾಸಯೋಗ್ಯಕ್ಕೆ ಅಸಂಭವ, ಏಕೆಂದರೆ ಭೂಮಿಗೆ ಸೌರ ಮಾರುತದಿಂದ ಉಂಟಾಗುವ ಪ್ರಭಾವಕಿಂತ ೨೦೦೦ ಬಾರಿ ಹೆಚ್ಚು ಪ್ರಭಾವ ಈ ಗ್ರಹಕ್ಕೆ ನಕ್ಷತ್ರಿಕ ಮಾರುತಗಳಿಂದ ಉಂಟಾಗುತ್ತದೆ. ಈ ವಿಕಿರಣ ಮತ್ತು ನಕ್ಷತ್ರಿಕ ಮಾರುತಗಳು ಎಂತಹ ವಾಯುಮಂಡಲವನ್ನೂ ಸಹ ದೂರದವರೆಗೆ ಎಸೆದುಬಿಡುತ್ತದೆ ಮತ್ತು ಒಳಮೇಲ್ಮೈಯ ತಳಭಾಗವನ್ನು ಮಾತ್ರ ವಾಸಯೋಗ್ಯ ಸ್ಥಳವಾಗಿ ಬೀಡುತ್ತದೆ. ಆದುದರಿಂದ ಪ್ರಾಕ್ಸಿಮ ಸೆಂಟುರಿ ಬಿ ಗ್ರಹದಲ್ಲಿ ವಾಸಕ್ಕೆ ಬೇಕಾದ ಅರ್ಹತೆ ಸ್ಥಾಪಿಸಲಾಗಿಲ್ಲ. ಪ್ರಾಕ್ಸಿಮ ಸೆಂಟುರಿ ನಕ್ಷತ್ರದ ವಾಸಯೋಗ್ಯ ವಲಯದಲ್ಲಿ ಪರಿಭ್ರಮಿಸುವ ಈ ಸೌರಾತೀತ ಗ್ರಹದ ವಲಯದಲ್ಲಿ ಗ್ರಹಗಳಿಗೆ ಸರಿಯಾದ ಪರಿಸ್ಥಿತಿ ಮತ್ತು ಗುಣಮಟ್ಟವುಳ್ಳ ವಾತಾವರಣವಿದ್ದರೆ, ಗ್ರಹದ ಮೇಲ್ಮೈಯಲ್ಲಿ ದ್ರವದ ನೀರು ಇರಬಹುದು. ಸೂರ್ಯನ ದ್ರವ್ಯರಾಶಿಯಲ್ಲಿ ಎಂಟರಷ್ಟು ದ್ರವ್ಯರಾಶಿವುಳ್ಳ ಕೆಂಪು ಕುಬ್ಜ ~೦.೦೪೨೩-೦.೦೮೧೬ ಖ.ಮಾ. ನಡುವೆ ವಾಸಯೋಗ್ಯ ವಲಯವನ್ನು ಹೊಂದಿದೆ. ಪ್ರಾಕ್ಸಿಮ ಸೆಂಟುರಿ ಬಿ ಗ್ರಹ ವಾಸಯೋಗ್ಯ ವಲಯದಲ್ಲಿದ್ದರು ಸಹ, ಗ್ರಹದ ಹಲವಾರು ಅಪಾಯಕಾರಿ ಭೌತಿಕ ಪರಿಸ್ಥಿತಿಗಳಿಂದ ಅದರ ವಾಸಾರ್ಹತೆ ಪ್ರಶ್ನಾರ್ಹವಾಗಿದೆ. ಈ ಸೌರಾತೀತ ಗ್ರಹ ಅದರ ನಕ್ಷತ್ರಕ್ಕೆ ಸಾಕಷ್ಟು ಹತ್ತಿರವಿರುವುದರಿಂದ, ಇದಕ್ಕೆ ಉಬ್ಬರವಿಳಿತದ ಹಿಡಿತವಿರಬಹುದು. ಯುರೋಪಿಯನ್ ಸದರ್ನ್ ಅಬ್ಸರ್ವೇಟರಿಯ ಅಂದಾಜಿನ ಪ್ರಕಾರ ಗ್ರಹದಲ್ಲಿ ನೀರು ಮತ್ತು ವಾತಾವರಣವಿದ್ದರೆ, ಈ ರೀತಿಯ ಸಂರಚನೆ ಒಂದು ಶಾಂತ ವಾತಾವರಣವನ್ನು ಉಂಟು ಮಾಡಬಹುದು. ನಕ್ಷತ್ರಕ್ಕೆ ಅಭಿಮುಖವಾಗಿರುವ ಗ್ರಹದ ಭಾಗಕ್ಕೆ ಶಾಖವನ್ನು ವರ್ಗಾವಣೆ ಮಾಡಬಲ್ಲ ವಾಯುಮಂಡಲವಿದ್ದರೆ, ಗ್ರಹದ ಬಹಳ ಭಾಗ ವಾಸಕ್ಕೆ ಅನುಕೂಲವಾಗುತ್ತದೆ. ಈ ಗ್ರಹ ವಾಯುಮಂಡಲವನ್ನು ಹೊಂದಿದ್ದರೆ, ಗ್ರಹ ರಚನೆಯ ನಂತರದ ೧೦೦-೨೦೦ ದಶಲಕ್ಷ ವರ್ಷಗಳಲ್ಲಿ ಪ್ರದೀಪನ ಕಾರಣದಿಂದ, ಭೂಮಿ ಈ ಗ್ರಹ ರಚನೆಯ ನಂತರದ ಕಾಲದಲ್ಲಿ ಹೊಂದಿದ್ದ ನೀರಿನ ಪ್ರಮಾಣವನ್ನು ಈ ಗ್ರಹ ಕಳೆದುಕೊಂಡಿರಬಹುದು ಎಂದು ಸೂಚಿಸುತ್ತದೆ. ದ್ರವದ ನೀರು ಗ್ರಹದ ಬಿಸಿಲಿನ ಪ್ರದೇಶಗಳಲ್ಲಿ ಮತ್ತು ಮುಖ್ಯವಾಗಿ ನಕ್ಷತ್ರದ ಕಿರಣ ಬೀಳುವ ಗ್ರಹದ ಗೋಳಾರ್ಧ ಪ್ರದೇಶದಲ್ಲಿ ಅಥವ ಸಮಭಾಜಕ ಬೆಲ್ಟ್ (೩:೨ ಅನುರಣ ಸರದಿ)ನಲ್ಲಿ ಮಾತ್ರ ಇದ್ದಿರಬಹುದು. ಖಭೌತವಿಜ್ಞಾನಿಗಳು ಗ್ರಹದ ಪ್ರಸ್ತುತ ವಾಸಾರ್ಹತೆ ಮಾಪಿಸಲು, ಪ್ರಾಕ್ಸಿಮ ಸೆಂಟುರಿ ಬಿ ಗ್ರಹ ತನ್ನ ರಚನೆಯ ನೀರನ್ನು ಉಳಿಸಿಕೊಳ್ಳುವ ಸಾಮರ್ಥ್ಯವನ್ನು ನಿರ್ಣಾಯಕ ವಿಷಯವನ್ನಾಗಿ ಪರಿಗಣಿಸಿದ್ದಾರೆ. ಈ ಗ್ರಹದ ಸಂಯೋಜನೆಯನ್ನು ಮತ್ತು ವಾಯುಮಂಡಲದ ಹೆಚ್ಚು ಬಹಿರಂಗ ವಿಷಯಗಳನ್ನು ದೂರದರ್ಶಕಗಳಿಂದ ಮತ್ತು ತಂತ್ರಜ್ಞಾನದಿಂದ ತಿಳಿಯುವಷ್ಟು ಹತ್ತಿರದಲ್ಲಿ ಈ ಗ್ರಹವಿದೆ. ೨೦೧೩ರಲ್ಲಿ ಸೌರಾತೀತ ಗ್ರಹದ ಮೊದಲ ಸೂಚನೆಯನ್ನು ಹರ್ಟ್ಫೋರ್ಡ್ಶೈರ್ ವಿಶ್ವವಿದ್ಯಾಲಯದ(University of Hertfordshire) ಆರ್ಕೈವ್ ವೀಕ್ಷಣೆಯ ಅ೦ಕಿ ಸ೦ಖ್ಯೆ ಮಾಹಿತಿಯಿಂದ ಮಿಕ್ಕೊ ಟ್ಯೊಮಿ(Mikko Tuomi) ನೀಡಿದರು. ಈ ಆವಿಷ್ಕಾರ ದೃಢೀಕರಿಸಲು, ಜನವರಿ ೨೦೧೬ರಲ್ಲಿ ಯುರೋಪಿಯನ್ ಸದರ್ನ್ ಅಬ್ಸರ್ವೇಟರಿ, ಪೇಲ್ ರೆಡ್ ಡಾಟ್(Pale Red Dot) ಯೋಜನೆಯನ್ನು ಪ್ರಾರಂಭಿಸಿದರು. ಲಾ ಸಿಲ್ಲಾ ವೀಕ್ಷಣಾಲಯದಲ್ಲಿ ಇಎಸ್ಒ ೩.೬ ಮೀ ಟೆಲಿಸ್ಕೋಪ್ ಮೇಲೆ ಎಚ್‌ಎಅರ್‌ಪಿಎಸ್ ಮತ್ತು ೮ ಮೀಟರ್ ವೇರಿ ಲಾರ್ಜ ಟೆಲಿಸ್ಕೋಪ್ ಮೇಲೆ ಯುವಿಇಎಸ್, ಎರಡು ರೋಹಿತ ಬಳಸಿ ಮಾಪನ ಮಾಡಲಾಯಿತು. ೨೪ ಆಗಸ್ಟ್ ೨೦೧೬ರಂದು, ೩೧ ವಿಶ್ವದಾದ್ಯಂತ ವಿಜ್ಞಾನಿಗಳ ತಂಡ ಲಂಡನ್‌ನ ಕ್ಯೂನ್ ಮೇರಿ ವಿಶ್ವವಿದ್ಯಾಲಯದ(Queen Mary University of London) ಗುಯಿಲ್ಲೆಮ್ ಅಂಗ್‌ಲಾಡ ಎಸ್‌ಕುಡ್(Guillem Anglada-Escudé) ನೇತೃತ್ವದಲ್ಲಿ ಪ್ರಾಕ್ಸಿಮ ಸೆಂಟುರಿ ಬಿ ಗ್ರಹದ ಅಸ್ತಿತ್ವವನ್ನು ನ್ಯೆಚರ್(Nature) ಪ್ರಕಟಿಸಿದ ಲೇಖನದಲ್ಲಿ ದೃಢಪಡಿಸಿದರು.ಪ್ರಾಕ್ಸಿಮ ಸೆಂಟುರಿ ನಕ್ಷತ್ರದ ಕಕ್ಷೆಯನ್ನು ವೀಕ್ಷಣೆ ಮಾಡಿದಾಗ ಇನ್ನೂ ಹೆಚ್ಚು ದೊಡ್ಡ ಗ್ರಹಗಳಿರಬಹುದು ಎಂಬ ಯೋಚನೆಗೆ ದಾರಿಮಾಡಿದೆ. ನಕ್ಷತ್ರದ ಸುತ್ತ ಮತ್ತೊಂದು ಸೂಪರ್ ಅರ್ಥ್ ಗ್ರಹವಿದೆ ಎಂದು ಲೆಕ್ಕಾಚಾರಗಳು ತಿಳಿಸುತ್ತವೆ. ಇದನ್ನು ತಳ್ಳಿಹಾಕಲು ಸಾಧ್ಯವಿಲ್ಲ. ಬೇರೆ ಗ್ರಹದ ಅಸ್ತಿತ್ವ ಪ್ರಾಕ್ಸಿಮ ಸೆಂಟುರಿ ಬಿ ಕಕ್ಷೆಯನ್ನು ಅಸ್ಥಿರಗೊಳಿಸುವುದಿಲ್ಲ. ೬೦-೫೦೦ ದಿನಗಳ ವ್ಯಾಪ್ತಿಯಲ್ಲಿ ಎರಡನೇ ಸಂಕೇತ ಸಹ ಪತ್ತೆಯಾಗಿತ್ತು, ಆದರೆ ನಾಕ್ಷತ್ರಿಕ ಚಟುವಟಿಕೆಗಳಿಂದ ಅದರ ಸ್ವಭಾವ ಇನ್ನೂ ಅಸ್ಪಷ್ಟವಾಗಿದೆ. ವಿಎಲ್‌ಟಿ(VLT) ಮೇಲೆ ಎಸ್‌ಪಿ‌ಎಚ್‌ಇಅರ್‌ಇ(SPHERE) ಮತ್ತು ಇಎಸ್‌ಪಿಅರ್‌ಇಎಸ್‌ಎಸ್‌ಒ(ವ್) ಸೇರಿಸಿ ವಿಜ್ಞಾನಿಗಳ ತಂಡವೊಂದು ಪ್ರಾಕ್ಸಿಮ ಸೆಂಟುರಿ ಬಿ ಗ್ರಹದ ವಾಯುಮ೦ಡಲದಲ್ಲಿ ಆಮ್ಲಜನಕ, ನೀರಿನ ಹಬೆ ಮತ್ತು ಮೀಥೇನ್ ಚಿಹ್ನೆಗಳನ್ನು ಅದರ ಚಿತ್ರದಿಂದ ತನಿಖೆ ಮಾಡಲು ಆಲೋಚಿಸುತ್ತಿದ್ದಾರೆ. ಜೇಮ್ಸ್ ವೆಬ್ ಬಾಹ್ಯಾಕಾಶ ದೂರದರ್ಶಕದಿಂದ ಪ್ರಾಕ್ಸಿಮ ಸೆಂಟುರಿ ಬಿ ವಾಯುಮ೦ಡಲದ ವಿವರಗಳನ್ನು ನಿರೂಪಿಸಲು ಸಾಧ್ಯವಾಗಬಹುದು. ಈ ಗ್ರಹಕ್ಕೆ ದೂರದರ್ಶಕ ಮತ್ತು ಇತರ ತಂತ್ರಗಳ ಸಹಾಯದಿಂದ ತಲುಪಲು ಸಾಧ್ಯವಾಗಬಹುದು. ಆದರೂ ಪ್ರಸ್ತುತವಿರುವ ಯಾವುದೇ ತಂತ್ರಜ್ಞಾನ ಪ್ರಾಕ್ಸಿಮ ಬಿ ಗ್ರಹದ ವಿವರವಾದ ವೀಕ್ಷಣೆಗೆ ಅವಕಾಶ ನೀಡುವುದಿಲ್ಲ. ಮುಂಬರುವ ದೂರದರ್ಶಕಗಳು (ದ ಯುರೋಪಿ ಎಕ್ಸ್‌ಟ್ರಿಮ್‌ಳೀ ಲಾರ್ಜ್ ಟೆಲಿಸ್ಕೋಪ್ (the European Extremely Large Telescope), ದ ಜೈಂಟ್ ಮೆಗಲನ್ ಟೆಲಿಸ್ಕೋಪ್ ಮತ್ತು ದ ತರ್ಟಿ ಮೀಟರ್ ಟೆಲಿಸ್ಕೋಪ್ (the Thirty Meter Telescope) ಪ್ರಾಕ್ಸಿಮ ಸೆಂಟುರಿ ಬಿ ಗ್ರಹದ ವಿವರಗಳನ್ನು ನಿರೂಪಿಸುವ ಸಾಮರ್ಥ್ಯವಿರಬಹುದು.ಸಂಶೋಧನೆ ಮತ್ತು ಎಂಜಿನಿಯರಿಂಗ್ ಯೋಜನೆಯಾದ ಬ್ರೇಕ್ಥ್ರೂ ಸ್ಟಾರ್‍ಶಾಟ್‍ಗೆ ಪ್ರಾಕ್ಸಿಮ ಬಿ ಆವಿಷ್ಕಾರ ಗಮನಾರ್ಹವಾಯಿತು. ಆಲ್ಫಾ ಸೆಂಟುರಿ ಮಂಡಳಕ್ಕೆ ಚಿಕಣಿ ಶೋಧಕಗಳನ್ನು ಕಳುಹಿಸಭೇಕೆಂಬುದು ಬ್ರೇಕ್ಥ್ರೂ ಸ್ಟಾರ್‍ಶಾಟ್‍ನ ಇತ್ತೀಚಿನ ಯೋಜನೆಯ ಗುರಿಯಾಗಿದೆ. ರಷ್ಯಾದ ಉದ್ಯಮಿ ಯೂರಿ ಮಿಲ್ನರ್ ಅನುದಾನಿ ಮಾಡಿದ ಸಂಶೋಧನ ಕಂಪನಿ ಬ್ರೇಕ್ಥ್ರೂ ಇನಿಶಿಯೀಟಿವ್‌ಸ್(Breakthrough Initiatives) ಸ್ಟಾರ್‍‌ ಛಿಪ್ಸ್ (StarChips) ಎಂಬ ಮಾನವರಹಿತ ಚಿಕಣಿ ಶೋಧಕಗಳಾದ ಬಾಹ್ಯಾಕಾಶದ ಯೋಜನೆಯನ್ನು ಅಭಿವೃದ್ಧಿ ಮಾಡುವಲ್ಲಿ ಕೆಲಸ ನಿರ್ವಹಿಸುತಿದ್ದಾರೆ. ಈ ಸ್ಟಾರ್‍‌ ಛಿಪ್ಸ್ ೨೦% ಬೆಳಕಿನ ವೇಗದಲ್ಲಿ ಪ್ರಯಾಣಿನಿಸಿದರೆ,೨೦ ವರ್ಷಗಳಲ್ಲಿ ಮಂಡಲಕ್ಕೆ ಹೋಗಿ ನಾಲ್ಕು ವರ್ಷಗಳ ನಂತರ ಭಮಿಗೆ ಸೂಚನೆಗಳನ್ನು ಕಳುಹಿಸುವಲ್ಲಿ ಸಾಧ್ಯವಾಗುತ್ತದೆ.