ಸದಸ್ಯ:Chaithanya Bhat/ನನ್ನ ಪ್ರಯೋಗಪುಟ
ಡಾ. ಮಂತರ್ ಗೌಡ | |
---|---|
ವೈಯಕ್ತಿಕ ಮಾಹಿತಿ | |
ಜನನ | ಕರ್ನಾಟಕ ಹಾಸನ |
ರಾಜಕೀಯ ಪಕ್ಷ | ಕಾಂಗ್ರೆಸ್ |
ಸಂಗಾತಿ(ಗಳು) | ದಿವ್ಯಾ |
ಡಾ. ಮಂತರ್ ಗೌಡ ಮಡಿಕೇರಿಯ ವಿಧಾನಸಭಾ ಕ್ಷೇತ್ರದ ಶಾಸಕ. ವೃತ್ತಿಯಲ್ಲಿ ರೇಡಿಯೋಲಜಿಸ್ಟ್.[೧]
ವೈಯಕ್ತಿಕ ಜೀವನ
ಬದಲಾಯಿಸಿಮಂತರ್ ಗೌಡ ಅವರು ಮೂಲತಃ ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನವರು. ಇವರು ಮಾಜಿ ಸಚಿವ ಎ ಮಂಜು ಅವರ ಪುತ್ರ. ರೇಡಿಯೋಲಜಿ ವಿಷಯದಲ್ಲಿ ಎಂ.ಡಿ ಪದವಿ ಪಡೆದಿದ್ದಾರೆ. ಮಂತರ್ ಅವರ ಪತ್ನಿ ಮಾಡೆಯಂಡ ನರೇಂದ್ರ (ನರೇನ್) ಮತ್ತು ಕರ್ನಾಟಕ ಎಸ್‌ಎಸ್‌ಎಲ್‌ಸಿ ಮಂಡಳಿಯ ನಿವೃತ್ತ ನಿರ್ದೇಶಕಿ ಯಶೋದಾ ಬೋಪಣ್ಣ ಅವರ ಪುತ್ರಿ ದಿವ್ಯಾ.
ರಾಜಕೀಯ ಜೀವನ
ಬದಲಾಯಿಸಿ2021ರಲ್ಲಿ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ವಿಧಾನ ಪರಿಷತ್ತಿಗೆ ನಡೆದ ಚುನಾವಣೆಯಲ್ಲಿ ಕೊಡಗಿನಿಂದ ಕಾಂಗ್ರೆಸ್ ಟಿಕೆಟ್‌ನಲ್ಲಿ ಮಂತರ್ ಸ್ಪರ್ಧಿಸಿದ್ದರು. ಕೇವಲ 100 ಮತಗಳ ಅಂತರದಿಂದ ಸೋತಿದ್ದರು. ಕಾಂಗ್ರೆಸ್ ನಲ್ಲಿ ವೃತ್ತಿ ಜೀವನ ಆರಂಭಿಸಿದ ಅವರು ಹಾಸನ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾಗಿದ್ದರು.
ಉಲ್ಲೇಖ
ಬದಲಾಯಿಸಿ- ↑ "CONGRESS CANDIDATE DR MANTAR GOWDA IS 'SON-IN-LAW' OF KODAGU". Coorg News. 14 April 2023. Retrieved 8 June 2023.