ಸದಸ್ಯ:C.p.prathika/ನನ್ನ ಪ್ರಯೋಗಪುಟ
[೨],
೧೯೫೯ ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರವಿದು. ಕನ್ನಡ ಚಲನಚಿತ್ರರಂಗದಲ್ಲಿ ಬಂದಿರುವ ಅತ್ಯುತ್ತಮ ಚಲನಚಿತ್ರಗಳಲ್ಲಿ ಇದೊಂದಾಗಿದೆ. ಈ ಚಲನಚಿತ್ರವನ್ನು ನಿರ್ದೇಶಿಸಿದವರು ಟಿ.ವಿ.ಸಿಂಗ್ ಠಾಕೂರ್. ನಿರ್ಮಾಪಕರು ಜಿ.ಎಸ್.ಎಸ್.ಮೂರ್ತಿಯವರು. ಈ ಚಿತ್ರದಲ್ಲಿ ಹೊನ್ನಪ್ಪ ಭಾಗವರವರು, ಡಾ.ರಾಜಕುಮಾರ್ ರವರು, ಕೆ.ಎಸ್.ಅಶ್ವತ್ ರವರು, ಸರೊಜದೇವಿಯವರು, ನರಸಿಂಹರಾಜು ಮತ್ತು ಬಾಲಕೃಷ್ಣರವರನ್ನು ಪ್ರಮುಖ ಪಾತ್ರಗಳಲ್ಲಿ ನೋಡಬಹುದು. ಇಂತಹ ನಟ-ನಟಿಯರನ್ನು ಒಳಗೊಂಡ ಈ ಚಿತ್ರವು, ೩೦ ಮಾರ್ಚ್,೧೯೫೯ ರಂದು ಬಿಡುಗಡೆಗೊಂಡಿತು.
ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಹೊನ್ನಪ್ಪ ಭಾಗವತರ್ ರವರು ೧೨ನೇ ಶತಮಾನದ ಭಕ್ತಿ ಪಂಥದ ಪ್ರಮುಖರಲ್ಲಿ ಒಬ್ಬರಾಗಿದ್ದ ಬಸವಣ್ಣನ ಪಾತ್ರದಲ್ಲಿ ನೋಡಬಹುದು. ಡಾ.ರಾಜಕುಮಾರವರು ಬಿಜ್ಜಳ ರಾಜನ ಪಾತ್ರದಲ್ಲಿ ಕಾಣಬಹುದು. ವೀರಭದ್ರನ ಪಾತ್ರವನ್ನು ಟಿ.ಆರ್.ನರಸಿಂಹರಾಜುರವರು ಅದ್ಭುತವಾಗಿ ಹೊರತಂದಿದ್ದಾರೆ. ೧೨ನೇ ಶತಮಾನದ ತತ್ವಜ್ಜಾನಿ ಮತ್ತು ಸಾಮಾಜಿಕ ಸುಧಾರಕನಾಗಿದ್ದ ಬಸವಣ್ಣನ ಜೀವನವನ್ನು ಆಧರಿಸಿ ನಿರ್ದೇಶಿಸಿದ ಚಿತ್ರವಿದು. ಬಸವಣ್ಣ ತನ್ನ ಜೀವನ ಮೌಲ್ಯಗಳನ್ನು ಆಧರಿಸಿ ಬದುಕುತ್ತಿದ್ದ ತತ್ವಜ್ಜಾನಿಯಾಗಿದ್ದನು. ಸಮಾಜದ ಜನರಿಗೆ ವಚನಗಳ ಮಾಲಕ ಸಮಾನತೆ, ಭ್ರಾತ್ರತ್ವದ, ಮುಂತಾದ ಮೌಲ್ಯಗಳನ್ನು ಜನರಿಗೆ ಬೋಧಿಸುತ್ತಿದ್ದನು. ಇಂತಹ ಒಬ್ಬ ತತ್ವಜ್ಜಾನಿಯಾಗಿದ್ದ ಬಸವಣ್ಣನವರ ಜೀವನ ಚರಿತೆಯನ್ನು ಆಧರಿಸಿ ನಿರ್ದೇಶಿಸಿದ ಚಿತ್ರ ಇದಾಗಿದೆ. ಚಲನಚಿತ್ರ ವಿಮರ್ಶಕರಿಂದ ಬಹಳಷ್ಟು ಪ್ರಶಂಸೆಯನ್ನು ಈ ಚಿತ್ರವು ಪಡೆಯಿತು.ಬಹಳಷ್ಟು ಪ್ರಶಸ್ತಿಗಳನ್ನು ಗಳಿಸಿಕೊಂಡ ಚಿತ್ರವು ಇದಾಗಿದೆ. ೧೯೫೯ರಲ್ಲಿ ಈ ಚಿತ್ರಕ್ಕೆ ಕನ್ನಡದ ಅತ್ಯುತ್ತಮ ಸಾಕ್ಶ ಚಿತ್ರಕ್ಕಾಗಿ ರಾಷ್ಟಿಯ ಚಲನಚಿತ್ರ ಪ್ರಶಸ್ತಿ ಲಭಿಸಿತು. ಈ ಚಲನಚಿತ್ರದಲ್ಲಿ ಜಗವ ಸುತಿಪ್ಪುದು ಎಂಬ ಹಾಡು ತುಂಬ ಹೆಸರು ಪಡೆದಿದೆ.ಬಸವಣ್ಣನವರ ಜೀವನವನು ಹಾಗು ಅನೇಕ ಘಟನೆಗಳನ್ನು ಚಿತ್ರಿಸಿದ್ದಾರೆ. ಅವರ ಜೀವನದಲ್ಲಿ ನಿಜವಾಗಿಯು ಆದುದ್ದಕೆ ಇನ್ನು ಸೇರಿಸಿ ಈ ಚಲನಚಿತ್ರವನ್ನು ಮಾಡಿದ್ದಾರೆ. ಡಾ.ರಾಜಕುಮಾರ್ ರವರು ತುಂಬ ಅದ್ಭುತವಾಗಿ ನಟಿಸಿದ್ದಾರೆ.ಕಳ್ಳತನ ಮಾಡಬಾರದು,ಸುಳ್ಳನ್ನು ನುಡಿಯಬಾರದು ಎಂದು ಬಸವೇಶ್ವರವರು ಹೇಳಿದು, ಈ ಚಲನಚಿತ್ರದಲ್ಲಿ ಕಂಡುಬರುತ್ತದೆ. ಬಸವೇಶ್ವರವರ ಬದುಕಿನಲ್ಲಿ ಆದುದ್ದೆಲ್ಲ ಈ ಚಲನಚಿತ್ರದಲ್ಲಿ ಕಂಡುಬರುತ್ತದೆ. ಈ ಚಲನಚಿತ್ರವನ್ನು ನೋಡದೆ ಇರುವವರು ಇದನು ಒಂದು ಸಲ ನೋಡಲೆಬೇಕು. ಬೇರೆ ಚಲನಚಿತ್ರಗಳಿಗಿಂತ ತುಂಬ ವಿಭಿನವಾಗಿದೆ. ಈಗಿನ ಮಕ್ಕಳಿಗೆ ಇಷ್ಟವಾಗದಿದ್ದರೂ ಒಮ್ಮೆ ನೋಡಲೆಬೇಕು. ಬಸವೇಶ್ವರವರ ಕಥೆಯನ್ನು ತಿಳಿಬೇಕು ಅವರು. ನಟ-ನಟಿಯರು ಕೂಡ ಅದ್ಭುತವಾಗಿ ಮಾಡಿದ್ದಾರೆ.
- ↑ www.imdb.com/title/tt0843533/
- ↑ https://www.youtube.com/watch?v=B6wHMFAKe8k