ಸದಸ್ಯ:Brindha mundiyolonda/sandbox
ನನ್ನ ಬಗ್ಗೆ ಹೇಳಬೇಕೆಂದರೆ ನನ್ನ ಹೆಸರು ಬೃಂದ ಬೋಜಮ್ಮ. ನನ್ನ ಮೊದಲ ಹೆಜ್ಜೆಯು ಈ ಜಗತ್ತಿಗೆ ೨೦.೦೧.೧೯೯೬ರಲ್ಲಿ ಆಯಿತು. ನನ್ನ ತಂದೆಯ ಹೆಸರು ಅಜಿತ್ ಮತ್ತು ತಾಯಿಯ ಹೆಸರು ಬೀನ. ನನ್ನ ಹುಟ್ಟೂರು ಮೂಲತ: ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನಲ್ಲಿ ಕೊಡಗು ಜಿಲ್ಲೆಯು ದಕ್ಷಿಣ ಭಾರತದ ಕಾಶ್ಮೀರ ಎಂದೇ ಪ್ರಸಿದ್ದವಾಗಿದೆ. ನಾನು ನನ್ನ ಪ್ರಾಥಮಿಕ ಶಿಕ್ಷಣವನ್ನು ವಿರಾಜಪೇಟೆಯಲ್ಲಿ ಮುಗಿಸಿದೆನು. ನನ್ನ ಪದವಿಪೂರ್ಣ ಶಿಕ್ಷಣವನ್ನು ಸಂತ ಅನ್ನಮ್ಮ ಕಾಲೇಜಿನಲ್ಲಿ ಮುಗಿಸಿದೆನು. ಈಗ ನನ್ನ ಪದವಿ ಶಿಕ್ಷಣವನ್ನು ಸಂತ ಅಲೋಶಿಯಸ್ ಕಾಲೇಜಿನಲ್ಲಿ ಮುಂದುವರಿಸಿದ್ದೇನೆ.
ನನ್ನ ಬಗ್ಗೆ ಹೇಳಿಕೊಳ್ಳ ಬೇಕೆಂದರೆ ನಾನು ಒಬ್ಬ ನರ್ತಕಿ ಮತ್ತು ಪುಸ್ತಕಗಳನ್ನು ಓದುವುದು, ಪರಿಸರದ ಚಿತ್ರಗಳನ್ನು ತೆಗೆಯುವುದು ನನ್ನ ಹವ್ಯಾಸಗಳಾಗಿವೆ ನನಗೆ ಪರಿಸರವೆಂದರೆ ತುಂಬಾ ಇಷ್ಟ, ಆದ್ದರಿಂದ ಪರಿಸರ ಸಂರಕ್ಷಣೆಯ ಬಗ್ಗೆ ಕಾಳಜಿ ವಹಿಸುತ್ತೇನೆ. ಒಬ್ಬ ರೈತನ ಮಗಳು ಎಂಬ ಹೆಮ್ಮೆಯು ಇದೆ. ಪ್ರಕೃತಿಯ ಮಡಿಲಲ್ಲಿ ಬೆಳೆದ ನನಗೆ ದು:ಖದ ಪರಿಯೇ ಗೊತ್ತಿಲ್ಲ. ಸದಾ ನಗು ಮುಖದವಳಾಗಿ ಇರಬಲ್ಲೆ. ಎಲ್ಲಾ ಸಂದರ್ಭಗಳಲ್ಲೂ ಆತ್ಮ ವಿಶ್ವಾಸಿಯಾಗಿ ಇರಬಲ್ಲೆ. ಪ್ರಾಣಿ-ಪಕ್ಷಿಗಳಲ್ಲಿ ಅನುಕಂಪ ಜಾಸ್ತಿ ನನಗೆ. ಒಂದು ಲೆಕ್ಕದಲ್ಲಿ ಹೇಳುವುದಾದರೆ ಪ್ರಕೃತಿ ಪ್ರಿಯೆ ನನಗೆ ಸ್ವಲ್ಪ ಸಿಡುಕು ಜಾಸ್ತಿ, ನನಗೆ ಕೋಪ ಬೇಗ ಬಂದು ಬಿಡುತ್ತದೆ. ಆದರೂ ಅದನ್ನು ಮುಟ್ಟುಗೋಲು ಹಾಕುವಲ್ಲಿ ಯಶಸ್ವಿಯಾಗುತ್ತೇನೆ.